ಜನವಾಸ ಕೇಂದ್ರಕ್ಕೆ ಬಂದ ಕಾಡಾನೆ ದಾಳಿಗೆ ಓರ್ವ ಬಲಿ

ಮಾನಂತವಾಡಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆಯೊಂದು ಊರಿಗೆ   ಏಕಾಏಕಿಯಾಗಿ ನುಗ್ಗಿ ಬಂದು ಟ್ರಾಕ್ಟರ್ ಚಾಲಕನೋರ್ವನ ಮೇಲೆ ದಾಳಿ ನಡೆಸಿ ಕೊಂದ ಭಯಾನಕ ಘಟನೆ ಮಾನಂತವಾಡಿಯಲ್ಲಿ ಇಂದು ಬೆಳಿಗ್ಗೆ ೭.೩೦ಕ್ಕೆ ನಡೆದಿದೆ.

ಟ್ರಾಕ್ಟರ್ ಚಾಲಕ ಮಾನಂತವಾಡಿ ಪಡಮಲ ಚಾಲಿಗದ್ದ ಪನಚ್ಚಿಲ್ ಅಜೀಶ್ ಯಾನೆ ಅಜಿ (೪೭) ಎಂಬವರು ಕಾಡಾನೆಯ ದಾಳಿಗೆ ಬಲಿಯಾದ ದುರ್ದೈವಿ.

ಅಜಿ ಇಂದು ಬೆಳಿಗ್ಗೆ ೭.೩೦ಕ್ಕೆ ತಮ್ಮ ಮನೆ ಪಕ್ಕದ ಹಿತ್ತಿಲಿನಿಂದ ಹುಲ್ಲು ತರಲೆಂದು ಹೋದ ವೇಳೆ ಅಲ್ಲಿಗೆ ಕಾಡಾನೆ ನುಗ್ಗಿ ಬಂದಿದೆ. ಆನೆಯನ್ನು ಕಂಡ ಹೆದರಿ ಅಜಿ ಅಲ್ಲೇ ಪಕ್ಕದ ಮನೆಯೊಂದಕ್ಕೆ ನುಗ್ಗಲೆತ್ನಿಸಿದಾಗ ಕಾಡಾನೆ ಅವರನ್ನು ಬೆನ್ನಟ್ಟಿಕೊಂಡು ಬಂದು ಅವರ ಮೇಲೆ ದಾಳಿ ನಡೆಸಿದೆ. ಅಜಿ ಘಟನೆ ನಡೆದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹವನ್ನು ಬಳಿಕ ಮಾನಂತವಾಡಿ ವೈಧ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.

ಅಜಿಯವರ ಸಾವಿಗೆ ಅರಣ್ಯ ಪಾಲಕರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ದೂರಿ, ಊರವರು ಭಾರೀ ಪ್ರತಿ ಭಟನೆಯೊಂದಿಗೆ ಇದೇ ಸಂದರ್ಭದಲ್ಲಿ ರಂಗಕ್ಕಿಳಿದಿದ್ದಾರೆ. ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿ ರುವಂತೆಯೇ ಪ್ರದೇ ಶದಲ್ಲಿ ಪೊಲೀಸರು ಸೆಕ್ಷನ್ ೧೪೪ರ ನ್ವಯ ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ.

ಚಾಲಕ ಅಜಿಯನ್ನು ಕೊಂದ ಕಾಡಾನೆ ಕರ್ನಾಟಕದ ಬಂಡೀಪುರ ದಿಂದ ವಯನಾಡಿಗೆ ಕೆಲವು ದಿನಗಳ ಹಿಂದೆಯೇ ಬಂದಿತ್ತು. ಅದರ ಕುತ್ತಿಗೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅಳವಡಿಸಿದ ರೇಡಿಯೋ ಕಾಲರ್ ಕೂಡಾ ಇತ್ತು. ಆ ಆನೆ ಬಳಿಕ ಮಾನಂತವಾಡಿ ಅರಣ್ಯಕ್ಕೆ ಆಗಮಿಸಿದ ಬಗ್ಗೆ ಕೇರಳ ಅರಣ್ಯ ಪಾಲಕರಿಗೂ ಸ್ಪಷ್ಟ ಮಾಹಿತಿ ಲಭಿಸಿತ್ತು. ಆನೆಯ ಸಿಸಿಟಿವಿ ದೃಶ್ಯಗಳೂ ಅರಣ್ಯ ಇಲಾಖೆಗೆ ಲಭಿಸಿತ್ತು. ಆದರೆ ಆ ಬಗ್ಗೆ ಅರಣ್ಯ ಪಾಲಕರು ಜನರಿಗೆ ಯಾವುದೇ ರೀತಿಯ ಮುನ್ಸೂಚನೆಯನ್ನೂ ನೀಡಿರಲಿಲ್ಲ. ಆದ್ದರಿಂದ ಅರಣ್ಯಪಾಲಕರ ನಿರ್ಲಕ್ಷ್ಯದಿಂದಲೇ ಓರ್ವ ಅಮಾಯಕ ಕಾಡಾನೆಯ ದಾಳಿಗೆ ಬಲಿಯಾಗಲು ಕಾರಣವಾಯಿತೆಂದು ಊರವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page