ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ: ನೀಲೇಶ್ವರದಲ್ಲಿ ಗಂಟೆಗಳ ಕಾಲ ಉಳಿದ ರೈಲು

ಕಾಸರಗೋಡು: ನಿಜಾಮುದ್ದೀನ್- ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅರ್ಧಗಂಟೆ ಕಾಲ ನೀಲೇಶ್ವರದಲ್ಲಿ ರೈಲನ್ನು ನಿಲುಗಡೆಗೊಳಿ ಸಲಾಗಿದೆ. ಇಂದು ಬೆಳಿಗ್ಗೆ ೮ ಗಂಟೆಗೆ ಘಟನೆ ಸಂಭವಿಸಿದೆ. ರೈಲಿನ ಎಸ್ ೫ನೇ ಬೋಗಿಯ ಅಡಿಭಾಗದಲ್ಲಿ ಬೆಂಕಿ ಕಾಣಿಸಿ ಬಳಿಕ ಹೊಗೆ ಕಂಡುಬಂದಿದೆ. ನಿಲ್ದಾಣದಲ್ಲಿದ್ದ ಪ್ರಯಾಣಿಕೆ ಓರ್ವೆ ರೈಲ್ವೇ ಸ್ಟೇಶನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದು, ಕೂಡಲೇ ಲೋಕೋ ಪೈಲೆಟ್‌ಗೆ ಮಾಹಿತಿ ನೀಡಲಾಗಿದೆ. ಬಳಿಕ ಬೆಂಕಿ ನಂದಿಸಿ   ರೈಲುಸಂಚಾರ ಮುಂದುವರಿಸಿದೆ. ರೈಲಿನ ಬ್ರೇಕ್‌ನಿಂದ ಹೊಗೆ ಉಂಟಾಗಿದೆ ಎನ್ನಲಾಗಿದೆ.

ಪಿ.ಸಿ. ಜೋರ್ಜ್ ಸಹಿತ ಜನಪಕ್ಷಂ ನೇತಾರರು ಇಂದು ಬಿಜೆಪಿ ಸೇರ್ಪಡೆ

ಹೊಸದಿಲ್ಲಿ: ಪಿ.ಸಿ. ಜೋರ್ಜ್ ಹಾಗೂ ಪುತ್ರ ಶೋನ್ ಜೋರ್ಜ್ ಸಹಿತ ಜನಪಕ್ಷಂ ಪಾರ್ಟಿ ನೇತಾರರು ಇಂದು ಬಿಜೆಪಿ ಸದಸ್ಯತ್ವ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ. ಕೇರಳದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಯಲ್ಲಿ ಜನಪಕ್ಷಂ ನೇತಾರರು ಸದಸ್ಯತ್ವ ಸ್ವೀಕರಿಸುವರೆಂದು ಸೂಚನೆಯಿದೆ. ಪಿ.ಸಿ. ಜೋರ್ಜ್ ಹಾಗೂ ಶೋನ್ ಜೋರ್ಜ್ ನಿನ್ನೆ ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರೊಂದಿಗೆ  ಸಮಾಲೋಚನೆ ನಡೆಸಿದ್ದಾರೆ. ಚರ್ಚೆ ಇಂದೂ ನಡೆಯಲಿದೆ. ಇಂದು ಸಂಜೆ ವೇಳೆ ನಿರ್ಧಾರ ತಿಳಿಸುವುದಾಗಿ ಪಿ.ಸಿ. ಜೋರ್ಜ್ …

ಸಾಮಗ್ರಿ ಮಾರಾಟ ಮಾಡಿ ಲಭಿಸಿದ ೩೨ ಲಕ್ಷ ರೂ.  ಸೇಲ್ಸ್ ಎಕ್ಸಿಕ್ಯೂಟಿವ್ ವಂಚಿಸಿರುವುದಾಗಿ ದೂರು: ಪೊಲೀಸರಿಂದ ತನಿಖೆ ಆರಂಭ

ಕುಂಬಳೆ:   ಸಾಮಗ್ರಿಗಳನ್ನು ವಿತ ರಣೆ ನಡೆಸಿದ ೩೨ ಲಕ್ಷ ರೂ.ವನ್ನು ಸೇಲ್ಸ್ ಎಕ್ಸಿಕ್ಯೂಟಿವ್ ಸ್ವಂತ ಖಾತೆಗೆ  ವರ್ಗಾಯಿಸಿರುವುದಾಗಿಯೂ,  ಆ ಬಳಿಕ ಅದೇ ಸಂಸ್ಥೆಯ ೧೦೦ ಮೀ ಟರ್ ದೂರದಲ್ಲಿ ಇದೇ ರೀತಿಯ ಇನ್ನೊಂದು ಸಂಸ್ಥೆಯನ್ನು ಆರಂಭಿಸಿರು ವುದಾಗಿಯೂ ಕುಂಬಳೆ ಶಾಂತಿಪಳ್ಳ ಬದ್ರಿಯ ನಗರದ ಗಬ್ಬಾನ ಮ್ಯಾಟ್ರಸ್ ಸಂಸ್ಥೆಯ ಮಾಲಕ ಪ್ರದೀಪ್ ಕುಮಾರ್ ಶರ್ಮ ನ್ಯಾಯಾಲಯಕ್ಕೆ ದೂರು ನೀಡಿದರು. ದೂರಿನ ಬಗ್ಗೆ ತನಿಖೆ ನಡೆಸಿ ಕೇಸು ದಾಖಲಿಸಲು ನ್ಯಾಯಾಲಯ   ಕುಂಬಳೆ ಪೊಲೀ ಸರಿಗೆ ಸೂಚಿಸಿದೆ. ಯುಪಿ ನಿವಾಸಿ ಯಾದ …

ವಿದ್ಯುತ್ ಹೈಟೆನ್ಶನ್ ತಂತಿ ಮೇಲೆ ವಾಲಿ ನಿಂತಿರುವ ಮಾವಿನ ಮರ: ಅಪಾಯ ಭೀತಿ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯಲ್ಲಿ ಮಾವಿನ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯೆಂದು ಸ್ಥಳೀಯರು ತಿಳಿಸಿದ್ದಾರೆ.  ಈ ಮರ ವಿದ್ಯುತ್ ತಂತಿಯ ಭಾಗಕ್ಕೆ ವಾಲಿ ನಿಂತಿದೆ.  ಶಾಲಾ ವಿದ್ಯಾರ್ಥಿಗಳು, ನಾಗರಿಕರು ತುಂಬಿರುವ ಸ್ಥಳವಾಗಿರುವುದರಿಂದ ತಕ್ಷಣವೇ  ಪರಿಹಾರವುಂಟಾಗಬೇಕಾಗಿದೆ. ಮರ ವಿರುವ ಸ್ಥಳದ ಕೆಳಭಾಗದಲ್ಲಿ ಲಾಲ್‌ಬಾಗ್‌ಗೆ ಸಂಚರಿಸುವ ಪ್ರಧಾನ ರಸ್ತೆ ಇದ್ದು, ಬಸ್ ಸಹಿತ ಹಲವಾರು ವಾಹನಗಳು ಈ ಮೂಲಕ ಪ್ರತಿನಿತ್ಯ ಸಂಚರಿಸುತ್ತದೆ. ಹಲವು ತಿಂಗಳ ಹಿಂದೆ ಸ್ಥಳೀಯರ …

ಕಾಸರಗೋಡು ಕ್ಷೇತ್ರಕ್ಕಾಗಿ ಲೀಗ್‌ನಿಂದ ಒತ್ತಡ: ಉಭಯ ಪಕ್ಷಗಳ ಸಭೆ ಇಂದು

ತಿರುವನಂತಪುರ: ಕಾಸರಗೋಡು ಲೋಕಸಭಾ  ಕ್ಷೇತ್ರ ಲಭಿಸಬೇಕೆಂಬ ಬೇಡಿಕೆ ಮುಸ್ಲಿಂ ಲೀಗ್ ತೀವ್ರಗೊಳಿಸು ತ್ತಿದೆ. ಇಂದು ನಡೆಯುವ ಕಾಂಗ್ರೆಸ್ ಲೀಗ್ ನಾಯಕತ್ವ ಮಟ್ಟದ ಉಭಯ ಪಕ್ಷಗಳ ಚರ್ಚೆಯಲ್ಲಿ ಈ ಬೇಡಿಕೆ ಯನ್ನು ಮುಂದಿ ರಿಸಬಹುದೆಂಬ ಸೂಚನೆ ಯಿದೆ.  ಮೊನ್ನೆ ನಡೆಯಬೇಕಾಗಿದ್ದ ಚರ್ಚೆ  ರಮೇಶ್ ಚೆನ್ನಿತ್ತಲರಿಗೆ ತುರ್ತಾ ಗಿ ಮಹಾರಾಷ್ಟ್ರಕ್ಕೆ ತೆರಳಬೇಕಾದ ಹಿನ್ನೆಲೆಯಲ್ಲಿ ಇಂದಿಗೆ ಬದಲಿಸಲಾಗಿದೆ. ಹಲವು ವರ್ಷಗಳಿಂದ ಸಿಪಿಎಂ ವಶವಿರಿಸಿಕೊಂಡಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರ ಕಳೆದ ಬಾರಿ ಐಕ್ಯರಂಗ ವಶಪಡಿಸಿತ್ತು.  ಕಳೆದ ಬಾರಿ ಗೆಲುವು ಪಡೆದ ಮಂಡಲವನ್ನು ಉಳಿಸಿಕೊಳ್ಳಬೇಕೆಂಬ …

ಕಿಳಿಂಗಾರು ಸಾಯಿರಾಂ ಭಟ್ ಪುಣ್ಯತಿಥಿಯಂದು ಹೊಲಿಗೆ ಯಂತ್ರ ವಿತರಣೆ

ಬದಿಯಡ್ಕ: ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪ್ರಥಮಪುಣ್ಯ ತಿಥಿಯ ಸಂದರ್ಭದಲ್ಲಿ ನಿನ್ನೆ ಅವರ ಪುತ್ರ ಸಾಯಿರಾಂ ಕೃಷ್ಣ ಭಟ್ ಅವರು ಬಡಜನತೆಗೆ ನೆರವಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸಲು ಮುಂದಾದರೆ ಆ ಕುಟುಂಬವು ಬೆಳಗಬಲ್ಲದು. ಮಕ್ಕಳ ವಿದ್ಯಾಭ್ಯಾಸ, ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಮನೆಯ ಯಜಮಾನನೊಂದಿಗೆ ಸಹಕರಿಸಿದಾಗ ಆರ್ಥಿಕ ಹೊರೆಯನ್ನು ತಗ್ಗಿಸಲು ಸಾಧ್ಯವಿದೆ ಎಂದರು. ಹಿರಿಯ ವೈದಿಕ ವಿದ್ವಾಂಸ ವೇದಮೂರ್ತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ …

ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ವಾರ್ಷಿಕ ಸಂಗಮ ನಾಳೆಯಿಂದ

ಕುಂಬಳೆ:ಇಮಾಂಶಾಫಿ ಇಸ್ಲಾ ಮಿಕ್ ಅಕಾಡೆಮಿ, ವಾರ್ಷಿಕ ಸಂಗಮ ನಾಳೆಯಿಂದ ೩ರವರೆಗೆ ಕುಂಬಳೆ ಬದ್ರಿಯ ನಗರ ಇಮಾಂಶಾಫಿ ಇಸ್ಲಾಮಿಕ ಅಕಾಡೆಮಿ ಕ್ಯಾಂಪಸ್‌ನಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ ೯ಕ್ಕೆ ಕೋಶಾಧಿಕಾರಿ ಹಾಜಿ ಮುಹಮ್ಮದ್ ಅರಬಿ ಧ್ವಜಾ ರೋಹಣಗೈಯ್ಯುವರು. ಕೆ.ಕೆ. ಮಾಹಿನ್ ಮುಸ್ಲಿಯಾರ್ ಸಿಯಾರತ್‌ಗೆ ನೇತೃತ್ವ ನೀಡುವರು.  ಖತ್ಮುಲ್ ಖುರ್‌ಆನ್‌ಗೆ ಎನ್ ಪಿಎಂ ಸೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ನೇತೃತ್ವ  ನೀಡುವರು. ರಾತ್ರಿ ೭ಕ್ಕೆ ಕೆ.ಎಸ್. ಅಲಿ ತಂಙಳ್ …

ಆದಿ ದ್ರಾವಿಡ ಸಮಾಜ ಸೇವಾ ಸಂಘ ಸಭೆ: ನೂತನ ಜಿಲ್ಲಾ ಸಮಿತಿ ರೂಪೀಕರಣ

ಅಡೂರು: ಪರಿಶಿಷ್ಟ ಜಾತಿ ಗೊಳಪಟ್ಟ ಆದಿದ್ರಾವಿಡ ಸಮುದಾ ಯದ ಬೃಹತ್ ಸಭೆ ಇತ್ತೀಚೆಗೆ ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಸಂಘದ ಜಿಲ್ಲಾಧ್ಯಕ್ಷ ಗುಣಪಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾ ಅಧ್ಯಕ್ಷ ಗುಣಪಾಲರವರು ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾಚರಣೆಗೈದು ಉದ್ಘಾಟಿಸಿ ಮಾತನಾಡಿದರು. ಆದಿ ದ್ರಾವಿಡ ಸಮುದಾಯದ ಹಿರಿಯ ಮುಖಂಡ ವೀರಪ್ಪಕೈತೋಡು, ಸೀನ ಮಂಞಪ್ಪಾರ, ಕುಂಞಪ್ಪ ಮಂಞಪ್ಪಾರ, ಸುರೇಶ್ ಕಾಸರಗೋಡು, ರಾಮಚಂದ್ರ ಕಾಸರಗೋಡು, ಸಂತೋಷ್ ಸಿ.ಎ. ನಗರ ಉಪಸ್ಥಿತರಿದ್ದರು. ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. …

ಬಿಜೆಪಿ ಕೇರಳ ಹೊಣೆಗಾರಿಕೆ ಪ್ರಕಾಶ್ ಜಾವ್ದೇಕರ್‌ಗೆ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇರಳದ ಹೊಣೆಗಾರಿಕೆಯನ್ನು ಪ್ರಕಾಶ್ ಜಾವ್ದೇಕರ್‌ರಿಗೆ ವಹಿಸಿಕೊಡಲಾಗಿದೆ. ಪ್ರಸ್ತುತ ಇವರು ಪಕ್ಷದ ರಾಜ್ಯ ಪ್ರಭಾರಿಯೂ ಆಗಿದ್ದಾರೆ. ತಮಿಳುನಾಡು ಹಾಗೂ ಲಕ್ಷದ್ವೀಪದ ಚುನಾವಣಾ ಹೊಣೆಗಾರಿಕೆ ಕೇರಳೀಯರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅರವಿಂದ್ ಮೆನೋನ್‌ರಿಗಾಗಿದೆ. ಕೇರಳ ಬಿಜೆಪಿ ಸಹ ಪ್ರಭಾರಿಯಾದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್‌ರಿಗೆ ಕರ್ನಾಟಕದ ಚುನಾವಣಾ ಹೊಣೆಗಾರಿಕೆ ನೀಡಲಾಗಿದೆ.

ಬಿಜೆಪಿ ನೇತಾರ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣ: ೧೫ ಆರೋಪಿಗಳಿಗೆ ಗಲ್ಲು ಶಿಕ್ಷೆ

ಆಲಪ್ಪುಳ: ಒಬಿಸಿ ಮೋರ್ಛಾದ ರಾಜ್ಯ ಕಾರ್ಯ ದರ್ಶಿ  ನ್ಯಾಯವಾದಿ ರಂಜಿತ್ ಶ್ರೀನಿವಾಸನ್‌ರನ್ನು ಕೊಲೆ ಗೈದ ಪ್ರಕರಣದ ೧೫ ಆರೋಪಿಗಳಿಗೆ ಮಾವೇಲಿಕ್ಕರ ಅಡಿಶನಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಲೆ ಪ್ರಕರಣವೊಂದರಲ್ಲಿ ೧೫  ಮಂದಿ ಆರೋಪಿಗಳಿಗೆ  ಒಂದೇ ಬಾರಿ ಗಲ್ಲು ಶಿಕ್ಷೆ ವಿಧಿಸಿರುವುದು  ಕೇರಳದ ನ್ಯಾಯಾಂಗ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.  ಪೋಪುಲರ್ ಫ್ರೆಂಟ್ ಕಾರ್ಯಕರ್ತರಾದ ಆಲಪ್ಪುಳ ಕೋಮಳಪುರಂ ಅಂಬನಕುಳಂಗರ ಮಾಚನಾಡ್ ಕಾಲನಿಯ ನೈಸಾಂ, ಮಣ್ಣಂಚೇರಿ ಅಂಬಲಕಡವು ವಡಕ್ಕೇಚಿರಪುರಂ ಅಜ್ಮಲ್, ಆಲಪ್ಪುಳ ವೆಸ್ಟ್ ಮುಂಡು …