ತರೂರ್‌ರ ಅಸಮಾಧಾನ: ಪ್ರತಿಕ್ರಿಯಿಸದಿರಲು ಕಾಂಗ್ರೆಸ್ ತೀರ್ಮಾನ

ತಿರುವನಂತಪುರ: ಕಾಂಗ್ರೆಸ್ ನೇತಾರ, ತಿರುವನಂತಪುರ ಸಂಸದ ಶಶಿ ತರೂರ್ ಪಕ್ಷದ ಬಗ್ಗೆ ವ್ಯಕ್ತ ಪಡಿಸಿದ ಅಸಮಾಧಾನ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸ ದಿರಲು ಎಐಸಿಸಿ ನಿರ್ಧರಿಸಿದೆ. ತರೂರ್‌ರನ್ನು ಇನ್ನಷ್ಟು ಅಸಮಾ ಧಾನಪಡಿಸುವಂತಹ ಯಾವುದೇ ಪ್ರತಿಕ್ರಿಯೆ ಪಕ್ಷದಿಂದ ಉಂಟಾಗ ಕೂಡದೆಂದು ತಿಳಿಸಲಾಗಿದೆ. ಇದೇ ವೇಳೆ ತರೂರ್‌ರೊಂದಿಗೆ ನಾಯಕತ್ವ ಚರ್ಚೆ ನಡೆಸಲಿದೆಯೇ ಎಂಬ ಬಗ್ಗೆ ಅನಿಶ್ಚಿತತೆ ಮುಂದುವರಿಸಿದೆ. ನಿಲಂಬೂರು ಉಪ ಚುನಾವಣೆ ಪ್ರಚಾರಕ್ಕೆ ತನ್ನನ್ನು ಯಾರೂ ಕರೆದಿಲ್ಲ ಂದು ತಿಳಿಸಿದ ತರೂರ್, ಪಕ್ಷದ ನಾಯಕತ್ವದೊಂದಿಗೆ ತನಗೆ ಭಿನ್ನಾಭಿಪ್ರಾಯವಿದೆ ಎಂಬುವುದಾಗಿ ಸೂಚಿಸಿದ್ದರು. …

ಕೆಸರುಗದ್ದೆಯಾದ ಲಾಲ್‌ಭಾಗ್- ಕುರುಡಪದವು ರಸ್ತೆ : ಅಮ್ಮೇರಿಯಲ್ಲಿ ಬಾಳೆಗಿಡ ನೆಟ್ಟು ಸ್ಥಳೀಯರಿಂದ ಪ್ರತಿಭಟನೆ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ರಸ್ತೆ ಹಲವು ವರ್ಷಗಳಿಂದ ಶೋಚ ನೀಯÁವಸ್ಥೆಗೆ ತಲುಪಿ ಸಾರ್ವಜನಿ ಕರು ತೀರಾ ಸಮಸ್ಯೆಯನ್ನು ಎದುರಿಸುತ್ತಿ ರುವಾಗಲೇ ಮಳೆಗಾಲದ ವೇಳೆ ರಸ್ತೆ ಪೂರ್ತಿ ಹದಗೆಟ್ಟು ಬೃಹತ್ ಹೊಂಡಗಳು ಸೃಷ್ಟಿಯಾಗಿ ಕೆಸರು ಗದ್ದೆಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ನಿನ್ನೆ ಸಂಜೆ ಈ ರಸ್ತೆಯ ಚಿಪ್ಪಾರು ಅಮ್ಮೇರಿ ಯಲ್ಲಿ ಬಾಳೆಗಿಡವನ್ನು ನೆಟ್ಟು ಸ್ಥಳೀ ಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ಬಸ್ ಸಹಿತ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿರುವುದಾಗಿ ದೂರಲಾಗಿದೆ.ರಸ್ತೆ ಅಭಿವೃದ್ದಿಗೆ ಕಳೆದ ವರ್ಷ …

ಇದು ಮಹತ್ತರ ಸಾಧನೆ: ಗುಜರಿ ಹೆಕ್ಕಿ ಬದುಕು ಕಟ್ಟಿದ ದಂಪತಿಯ ಪುತ್ರಿ ಇನ್ನು ಡಾಕ್ಟರ್

ಕಾಸರಗೋಡು: ತಮಿಳುನಾಡಿನಿಂದ ತಲುಪಿ ಕಾಸರಗೋಡು ಜಿಲ್ಲೆಯವರಾಗಿ ಬದಲಾದ ಮಾರಿಮುತ್ತು ಹಾಗೂ ಮುತ್ತುಕುಮಾರಿ ದಂಪತಿ ಆಗ್ರಹ ಸಫಲಗೊಂಡಿದೆ. ಇನ್ನು ಇವರ ಮಗಳು ಡಾಕ್ಟರ್. ಪಿಲಿಕೋಡು ಮಡಿವಯಲ್‌ನಲ್ಲಿ ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವಿಸುವ ದಂಪತಿಯ ಪುತ್ರಿ ಅಂಜಲಿಗೆ ಎಂಬಿಬಿಎಸ್ ಪರೀಕ್ಷೆಯಲ್ಲಿ ಪ್ರಜ್ವಲಿಸುವ ಜಯ. ಹೌಸ್ ಸರ್ಜನ್ಸಿ ಪೂರ್ತಿಗೊಳಿಸಿ ಡಾಕ್ಟರ್ ಅಂಜಲಿ 10 ದಿನಗಳೊಳಗೆ ಮನೆಗೆ ತಲುಪುವರು. ಕಳೆದ ವಾರ ಕೊಯಂಬತ್ತೂರಿನಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಆರ್.ಎಸ್. ರಾಜಾ ಕಣ್ಣಪ್ಪನ್ ಪ್ರಮಾಣಪತ್ರ …

ಪಾಲಕ್ಕಾಡ್‌ನಲ್ಲಿ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ

ಪಾಲಕ್ಕಾಡ್: ಪಾಲಕ್ಕಾಡ್‌ನ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ ಸೇರಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಮುಹಮ್ಮದ್ ಕಾಂಗ್ರೆಸ್‌ಗೆ ಸೇರಿದ್ದಾರೆ. ಪಾಲಕ್ಕಾಡ್ ಡಿಸಿಸಿ ಅಧ್ಯಕ್ಷ ಎ. ತಂಗಪ್ಪನ್ ಮೊಹಮ್ಮದ್‌ರನ್ನು ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. 1986ರಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ನಾಗಿದ್ದು, ಪಕ್ಷದಿಂದ ನೊಂದು ಕಾಂಗ್ರೆಸ್‌ಗೆ ಸೇರಿರುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಪಾಲಕ್ಕಾಡ್ ಕೋಟಾಯಿಯಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ, 30ರಷ್ಟು ಕಾರ್ಯಕರ್ತರು, ಮುಖಂಡರು ಸಿಪಿಎಂಗೆ ಸೇರಿದ್ದರು. ಡಿಸಿಸಿ ನಾಯಕತ್ವ ಸಹಿತ ಟೀಕಿಸಿರುವ ಪಕ್ಷಾಂತರ ಕಾಂಗ್ರೆಸ್‌ಗೆ ತಿರುಗೇಟಾಗಿತ್ತು. …

ರಾತ್ರಿಪೂರ್ತಿ ಬಾವಿಯಲ್ಲೇ ಕಳೆದ ಯುವಕನ ರಕ್ಷಣೆ

ಕಾಸರಗೋಡು:  ಆವರಣಗೋಡೆ ಇಲ್ಲದ ಬಾವಿಗೆ ಬಿದ್ದು ಪ್ರಾಣನ್ನು ಕೈಯಲ್ಲಿ ಹಿಡಿದು  ರಾತ್ರಿ ಇಡೀ ಅದರಲ್ಲೇ ಕಳೆದ ಯುವಕನನ್ನು ಅಗ್ನಿಶಾಮಕದಳ, ಊರವರ ಸಹಾಯದಿಂದ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ನಡೆದಿದೆ. ಕರಿವೇಡಗಂ ಚುಳಿಪ್ಪಿಲೆ ತೋಟತ್ತಿಲ್ ಜಯನ್ ಥೋಮಸ್ (42) ಈ ರೀತಿ ಸಾವಿನ ದವಡೆಯಿಂದ ಪಾರಾದ ಯುವಕ. ಇವರು ಮೊನ್ನೆ ರಾತ್ರಿ ಮನೆಗೆ ನಡೆದುಬರುತ್ತಿದ್ದ ದಾರಿ ಮಧ್ಯೆ ಮನೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿರುವ ಕಟ್ಟೆ ಇಲ್ಲದ  ಉಪಯೋಗಶೂನ್ಯ ಬಾವಿಗೆ ಬಿದ್ದಿದ್ದಾರೆ.  ಈ ಬಾವಿಯೊಳಗೆ ಸುರಂಗವಿರುವುದರಿಂದಾಗಿ …

ತಂದೆಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಇಡುಕ್ಕಿ: ಉಡುಂಬನ್‌ಚೋಲ ದಲ್ಲಿ ತಂದೆಯನ್ನು ತಲೆಗೆ ಬಡಿದು ಕೊಲೆಗೈದ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 10 ವರ್ಷಗಳ ಬಳಿಕ ಪೊಲೀಸರು ಸೆರೆ ಹಿಡಿದರು. ಪಾರತ್ತೋಡ್ ಶಿಂಗಾರಿಕಂಡಂ ನಿವಾಸಿ ಆನಂದ್‌ರಾಜ್‌ನನ್ನು ಉಡುಂಬನ್ ಚೋಲ ಪೊಲೀಸರು ಸೆರೆ ಹಿಡಿದಿದ್ದಾರೆ. 2015ರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ತಂದೆಯಾದ ಕರುಪ್ಪಯ್ಯರನ್ನು ಆನಂದ್‌ರಾಜ್ ತಲೆಗೆ ಬಡಿದು ಕೊಲೆಗೈದಿದ್ದನು. ಪ್ರಕರಣದಲ್ಲಿ ಜೈಲು ಸೇರಿದ ಆನಂದ್‌ರಾಜ್‌ಗೆ ತೊಡುಪುಳ ನ್ಯಾಯಾಲಯ ಬಳಿಕ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನಲ್ಲಿ ಹೊರ ಬಂದ ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿ ದ್ದನು. …

ರಾಜ್ಯದಲ್ಲಿ ವ್ಯಾಪಕಗೊಳ್ಳುತ್ತಿರುವ ಲೆಪ್ರೋಸ್ಪೈರೋಸಿಸ್ ; ಈ ವರ್ಷ 1642 ಮಂದಿಗೆ ರೋಗ; 83 ಮಂದಿ ಸಾವು

ಕಾಸರಗೋಡು: ರಾಜ್ಯದಲ್ಲಿ ಇಲಿ ಜ್ವರ ಎಂದು ಕರೆಯಲ್ಪಡುವ ಲೆಪ್ರೋಸ್ಪೈ ರೋಸಿಸ್ ಎಂಬ ರೋಗ ವ್ಯಾಪಕವಾಗಿ ಹರಡುತ್ತಿರುವುದಾಗಿ ವರದಿಯಾಗಿದೆ. ಅತೀ ಮಾರಕ ಈ ರೋಗ ಈ ವರ್ಷ 1642 ಮಂದಿಗೆ ಬಾಧಿಸಿದೆ. ಈ ಪೈಕಿ 83 ಮಂದಿ ಸಾವಿಗೀಡಾಗಿದ್ದಾರೆ. ಈ ರೋಗ ಬಾಧಿಸಿದಲ್ಲಿ ಹಲವು ದಿನಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರೆ ಮಾತ್ರವೇ ಜೀವಾಪಾಯದಿಂದ ಪಾರಾಗಬಹು ದೆಂದು ಆರೋಗ್ಯ ರಂಗದ ತಜ್ಞರು ತಿಳಿಸುತ್ತಿದ್ದಾರೆ.ಇನ್ನು ಮುಂದಿನ ಮೂರು ತಿಂಗಳ ಕಾಲ ಮಳೆ ತೀವ್ರಗೊಳ್ಳುವ ಈ ಸಂದರ್ಭದಲ್ಲಿ ಈ ರೋಗ ವ್ಯಾಪಕವಾಗಿ …

ರಥಬೀದಿ ಶ್ರೀ ನಿತ್ಯಾನಂದ ಕಟ್ಟೆ ವಾರ್ಷಿಕ ದಿನಾಚರಣೆ ಕಾರ್ಯಕ್ರಮ

ಮಂಜೇಶ್ವರ: ಮಂಜೇಶ್ವರ ರಥಬೀದಿಯ ಭಗವಾನ್ ಶ್ರೀ ನಿತ್ಯಾನಂದ ಸೇವಾ ಸಮಿತಿ ಆಶ್ರಯದಲ್ಲಿ ಅವಧೂತ ಭಗವಾನ್ ಶ್ರೀ ನಿತ್ಯಾನಂದ ಕಟ್ಟೆ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಧ್ಯಾನ ಮಂದಿರದ 15ನೇ ವಾರ್ಷಿಕ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಿನ್ನೆ ನಡೆಯಿತು. ಬೆಳಿಗ್ಗೆ ಧ್ಯಾನ ಮಂದಿರದಲ್ಲಿ ಗಣಹೋಮ, 108 ನಾಮ ಜಪ, ನಿತ್ಯಾನಂದ ಕಟ್ಟೆಯಲ್ಲಿ ಅಶ್ವತ್ಥ ನಿತ್ಯಾನಂದ ಪೂಜೆ, ಮಧ್ಯಾಹ್ನ ಮಹಾಪುಜೆ, ಅನ್ನಸಂತರ್ಪಣೆ ನಡೆಯಿತು.

ಮಳ್ಹರ್ ರಜತ ವಾರ್ಷಿಕ ಆಚರಣೆ: ಸಾಮಗ್ರಿ ಸಮರ್ಪಣೆ

ಮಂಜೇಶ್ವರ: ಮಂಜೇಶ್ವರ ಮಳ್ಹರ್ ಸಂಸ್ಥೆಗಳ ರಜತ ಜ್ಯುಬಿಲಿ ಆಚರಣೆಗಳಿಗೆ ಚಾಲನೆ ನೀಡಲಾಗಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಮಳ್ಹರ್ ಶಿಲ್ಪಿ ಮುಹಮ್ಮದ್ ಉಮರುಲ್ ಫಾರೂಕ್ ಅಲ್‌ಬುಖಾರಿ ತಂಙಳ್‌ರ 10ನೇ ಸಂಸ್ಮರಣೆ 22ರಂದು ಸಮಾಪ್ತಿಗೊಳ್ಳಲಿದೆ.  ಇದಕ್ಕಾಗಿ ಮಂಜೇಶ್ವರ ವಲಯದ ವಿವಿಧ ಘಟಕಗಳಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ಶೋಭಾಯಾತ್ರೆ ಮೂಲಕ ಮಳ್ಹರ್‌ಗೆ ತರಲಾಯಿತು. ಕೇರಳ ಮುಸ್ಲಿಂ ಜಮಾಯತ್, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಜೆಎಂ, ಎಸ್‌ಎಂಎ ಸಮಿತಿಗಳ ನೇತೃತ್ವದಲ್ಲಿ ಸಂಗ್ರಹಿಸಿದ ಸಾಮಗ್ರಿಗಳನ್ನು ಮಳ್ಹರ್ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾ ಯಿತು. ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ …

ರಸ್ತೆ ಬದಿ ನಿಂತಿದ್ದ ವೃದ್ದೆಯ ಚಿನ್ನದ ಸರ ಅಪಹರಿಸಿದ ಆರೋಪಿ ಬದಿಯಡ್ಕದಲ್ಲಿ ಸೆರೆ

ಬದಿಯಡ್ಕ: ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ದೆಯ ಚಿನ್ನದ ಸರವನ್ನು ಅಪಹರಿಸಿದ ಆರೋಪಿ ಸೆರೆಯಾಗಿದ್ದಾನೆ. ಚೆನ್ನಡ್ಕ ನಿವಾಸಿ ಚಾಲಕ್ಕರ ಹೌಸ್‌ನ ಇಬ್ರಾಹಿಂ ಖಲೀಲ್ (43)ನನ್ನು ಪಯ್ಯನ್ನೂರು ಸಬ್ ಇನ್ಸ್‌ಪೆಕ್ಟರ್ ಪಿ. ಯಧು ಕೃಷ್ಣನ್‌ರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ಬದಿಯಡ್ಕದಿಂದ ಸೆರೆ ಹಿಡಿದಿದೆ. ಈ ತಿಂಗಳ ೬ರಂದು ಪಯ್ಯನ್ನೂರು ಕೇಳೋತ್‌ನಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಮನೆ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಕಾರ್ತ್ಯಾಯಿನಿಯವರ ಚಿನ್ನದ ಸರವನ್ನು ಆರೋಪಿ ಅಪಹರಿಸಿದ್ದನು. ಸ್ಥಳೀಯ ಸಿಸಿ ಟಿವಿ ಕ್ಯಾಮರಾಗಳ ದೃಶ್ಯ …