ಮಣ್ಣಂಗುಳಿ ಮಖಾಂ ಉರೂಸ್ ೨೦ರಿಂದ ಆರಂಭ

ಕುಂಬಳೆ: ಮಣ್ಣಂಗುಳಿ ಮಖಾಂ ಉರೂಸ್ ಈ ತಿಂಗಳ ೨೦ರಿಂದ ೨೮ರವರೆಗೆ ನಡೆಯಲಿದೆ. ೨೦ರಂದು ಬೆಳಿಗ್ಗೆ ೧೦ ಗಂಟೆಗೆ ಮಖಾಂ ಸಿಯಾರತ್‌ಗೆ ಕೆ.ಎಸ್. ಆಟ್ಟಕೋಯ ತಂಙಳ್ ನೇತೃತ್ವ ನೀಡುವರು. ಕೋಯಕುಟ್ಟಿ ತಂಙಳ್ ಅಲ್ ಬುಖಾರಿ ಉಪ್ಪಳ ಧ್ವಜಾರೋಹಣ ನಡೆಸುವರು. ಶಿಹಾಬುದ್ದೀನ್ ತಂಙಳ್ ಉದ್ಘಾಟಿಸುವರು. ಶಾಫಿ ಸಖಾಫಿ ಪ್ರಧಾನ ಭಾಷಣ ನಡೆಸುವರು. ೨೧ರಂದು ಇ.ಪಿ. ಅಬೂಬಕ್ಕರ್ ಅಲ್‌ಖಾಸಿಮಿ ಪತ್ತನಾಪುರಂ, ೨೨ರಂದು ಮಸೌದ್ ಸಖಾಫಿ ಗುಡಲ್ಲೂರ್, ಮುಂದಿನ ದಿನಗಳಲ್ಲಿ ಜುನೈದ್ ಖಾಸಿಮಿ ಈರಾಟ್ ಪೇಟೆ, ಸಮೀರ್ ದಾರಿಮಿ ಕೊಲ್ಲಂ, ಪೇರೋಡ್ ಮೊಹಮ್ಮದ್ …

ಪೋಕ್ಸೋ ಪ್ರಕರಣ: ಟ್ಯೂಶನ್ ಸೆಂಟರ್‌ಗೆ ಪೊಲೀಸರಿಂದ ಮೊಹರು; ಮಾಲಕ ನಾಪತ್ತೆ

ಹೊಸದುರ್ಗ: ಪೋಕ್ಸೋ ಪ್ರಕರ ಣದಲ್ಲಿ ಆರೋಪಿಯಾದ ಕಾಞಂ ಗಾಡ್ ಬಸ್ ನಿಲ್ದಾಣ ಪರಿಸರದ ಇಂಪ್ಯಾಕ್ಟ್  ಟ್ಯೂಶನ್ ಸೆಂಟರ್ ಮಾಲಕ ಡಿಫಿ ಮುಖಂಡನಾಗಿದ್ದ ಅತಿಯಾಂಬೂರಿನ ಬಾಬುರಾಜ್ (೪೫)ನ ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಆದರೆ  ಪತ್ತೆ ಸಾಧ್ಯವಾಗಿಲ್ಲ. ಈತನ ಟ್ಯೂಶನ್ ಸೆಂಟರ್‌ನ್ನು ಮುಚ್ಚಿ ಪೊಲೀಸರು ಮೊಹರು ಹಾಕಿದರು. ಕಳೆದ ಮಂಗಳವಾರ ರಾತ್ರಿ ಟ್ಯೂಶನ್ ತರಗತಿ ಗೆಂದು ತಲುಪಿದ ವಿದ್ಯಾರ್ಥಿನಿಯನ್ನು ಬಾಬುರಾಜ್ ಲೈಂಗಿಕವಾಗಿ ದೌರ್ಜನ್ಯ ಗೈದಿದ್ದನೆ ನ್ನಲಾಗಿದೆ. ಈ ಮೊದಲು ಕೂಡಾ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಬುರಾಜ್ ತಿಂಗಳುಗಳ …

ಮನೆಯಿಂದ ಹಾಡಹಗಲೇ ೨೩ ಪವನ್ ಚಿನ್ನಾಭರಣ ಕಳವು

ಬದಿಯಡ್ಕ:   ಹಾಡಹಗಲೇ ಮನೆಗೆ  ಕಳ್ಳರು ನುಗ್ಗಿ ೮ ಲಕ್ಷ  ರೂ. ಮೌಲ್ಯದ ೨೩.೫ ಪವನ್‌ನ ಚಿನ್ನದೊಡವೆ ಕಳವುಗೈದ ಘಟನೆ ಮುಗುವಿನಲ್ಲಿ ನಡೆದಿದೆ. ಮುಗು  ಕುಂಞಿಪದವು ನಿವಾಸಿ  ಸ್ವಾತಿ ಮಂಜುನಾಥ ರೈ ಎಂಬವರ ಮನೆಯಲ್ಲಿ  ನಿನ್ನೆ  ಹಗಲು ಈ ಕಳವು ನಡೆದಿದೆ. ಮನೆಯವರು   ನಿನ್ನೆ ಮಧ್ಯಾಹ್ನ ಸಮೀಪದ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಅವರು ಹಿಂತಿರುಗಿ ಮನೆಗೆ ಬರುವಷ್ಟರೊಳಗೆ ಕಳವು ನಡೆದಿದೆ. ಮನೆಯ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನೊಳಗಿದ್ದ ಸಾಮಗ್ರಿಗಳನ್ನೆಲ್ಲಾ ಹೊರಗೆ ತೆಗೆದು ಹಾಕಿದ ಸ್ಥಿತಿಯಲ್ಲಿತ್ತು. ಕಪಾಟಿನೊಳಗಿರಿಸಲಾಗಿದ್ದ …

ಗುರುವಾಯೂರು ಕ್ಷೇತ್ರ ದರ್ಶನ ನಡೆಸಿ ವಧು-ವರರನ್ನು ಆಶೀರ್ವದಿಸಿದ ಪ್ರಧಾನಿ ಮೋದಿ

ಗುರುವಾಯೂರು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಇಂದು ಬೆಳಿಗ್ಗೆ ಗುರುವಾಯೂರು ಕ್ಷೇತ್ರ ಸಂದರ್ಶನ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಕೇರಳೀಯ ಸಂಪ್ರದಾಯದಂತೆ ಕ್ಷೇತ್ರ ಸಂದರ್ಶಿಸಿದ ಪ್ರಧಾನಿಯವರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಚೆನಸು ನಂಬೂದಿರಿ, ಮುಜರಾಯಿ ಮಂಡಳಿ ಅಧ್ಯಕ್ಷ ಪ್ರೊ. ವಿಜಯನ್ ಮೊದಲಾದವರು ಸ್ವಾಗತಿಸಿದರು.  ಆ ವೇಳೆ ಗುರುವಾಯೂರು ಕ್ಷೇತ್ರ ಮತ್ತು ಪರಿಸರದಾದ್ಯಂತ ಬಿಗು ಭದ್ರತೆ ಏರ್ಪಡಿಸಲಾಯಿತು.  ಎರಡು ತಾಸುಗಳ ತನಕ ಶ್ರೀ ಕ್ಷೇತ್ರದಲ್ಲಿ ಉಳಿದುಕೊಂಡ ಪ್ರಧಾನಿಯವರು ದೇವರಿಗೆ ಶಿಲ್ಪವೊಂದನ್ನು ಕಾಣಿಕೆಯಾಗಿ ಸಮರ್ಪಿಸಿದರು. ತುಲಾಭಾರಸೇವೆಯನ್ನು ನಡೆಸಿದರು. ನಂತರ ಅದೇ …

ಚದುರಂಗ ಚತುರ ಪ್ರಜ್ಞಾನಂದ ಈಗ ವಿಶ್ವದ ನಂ.೧

ನವದೆಹಲಿ: ನೆದರ್‌ಲ್ಯಾಂಡ್ ವಿಜ್ಕ್ ಅನ್‌ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಲ್ ಟೂರ್ನಿಯಲ್ಲಿ ಭಾರತದ ಚದುರಂಗ ಚತುರ ರಮೇಶ್ ಬಾಬು ಪ್ರಜ್ಞಾನಂದ ಅವರು ಹಾಲಿ ಚಾಂಪ್ಯನ್ ಚೀನಾದ ಡಿಂಗ್ ಲಿರಿನ್‌ರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚೆಸ್ ಚಾಂಪ್ಯನ್ ವಿಶ್ವನಾಥನ್ ನಂತರ ಚಾಂಪ್ಯನ್ ಆಟಗಾರರನ್ನು ಸೋಲಿಸಿದ ಎರಡನೇ ಭಾರತೀಯ ಎಂಬ ದಾಖಲೆಗೂ ಆರ್. ಪ್ರಜ್ಞಾನಂದ ಪಾತ್ರರಾಗಿದ್ದಾರೆ. ತಮ್ಮ ಇತ್ತೀಚೆಗಿನ ಅದ್ಭುತ  ಪ್ರದರ್ಶನದಿಂದ ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿ ಪ್ರಜ್ಞಾನಂದ ವಿಶ್ವದ ನಂ. ೧ ಚೆಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

೧೨೯ ಲೀಟರ್ ಕರ್ನಾಟಕ ಮದ್ಯ ವಶ : ಆಟೋ ರಿಕ್ಷಾ ಸಹಿತ ಇಬ್ಬರ ಸೆರೆ

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್  ಆಂಟಿ ಕರಪ್ಶನ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಸಾಜನ್  ಅಪ್ಯಾಲ್ ನೇತೃತ್ವದ ತಂಡ ಕಾಸರಗೋಡು ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೨೯.೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.  ಈ ಸಂಬಂಧ ಕುಂಬಳೆ ಪೇರಾಲ್ ಕಣ್ಣೂರಿನ ಸೂರಂಬೈಲು ನಿವಾಸಿ ನಾರಾಯಣನ್  ಎಂ (೫೮) ಮತ್ತು ಮಧೂರು ಗಣೇಶ ನಿವಾಸದ ಕಿರಣ್ ಕುಮಾರ್ (೪೮) ಎಂಬಿಬ್ಬರನ್ನು ಬಂಧಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಆಟೋ ರಿಕ್ಷಾವನ್ನು ಅಬಕಾರಿ ತಂಡ ವಶಕ್ಕೆ …

ಲೋಕಸಭಾ ಚುನಾವಣೆ: ಕೆ.ಕೆ. ಶೈಲಜಾ ಕಾಸರಗೋಡಿಗಿಲ್ಲ: ಉಣ್ಣಿತ್ತಾನ್  ವಿರುದ್ಧ ಸ್ಪರ್ಧೆ ಬಗ್ಗೆ ಎಡರಂಗದಲ್ಲಿ ಚರ್ಚೆ ಸಕ್ರಿಯ

ಕಾಸರಗೋಡು: ಮಾಜಿ ಸಚಿವೆ ಹಾಗೂ ಶಾಸಕಿಯಾಗಿರುವ ಕೆ.ಕೆ. ಶೈಲಜಾ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲವೆಂಬುದು ಖಚಿತವಾಗಿದೆ. ಶೈಲಜರನ್ನು ವಡಗರ, ಅಥವಾ ಕಣ್ಣೂರಿನಲ್ಲಿ ಸ್ಪರ್ಧಿಸುವಂತೆ ಪಕ್ಷದಲ್ಲಿ ನಡೆಯುತ್ತಿರುವ ಸಕ್ರಿಯ ಚರ್ಚೆಯಿಂದ ಕಾಸರಗೋಡಿನಲ್ಲಿ ಎಡರಂಗದಿಂದ ಸ್ಪರ್ಧಿಸುವವರು ಯಾರೆಂಬ ಬಗ್ಗೆ ಚರ್ಚೆ ಆರಂಭ ಗೊಂಡಿದೆ. ಟಿ. ಗೋವಿಂದನ್‌ರ ಬಳಿಕ ಕಣ್ಣೂರು ಜಿಲ್ಲೆಯಿಂದಿರುವ ಯಾರು ಕೂಡಾ ಕಲ್ಯಾಶ್ಶೇರಿ, ಪಯ್ಯನ್ನೂರು ವಿಧಾನಸಭಾ ಮಂಡಲಗಳು ಸೇರಿರುವ ಕಾಸರಗೋಡು ಲೋಕಸಭಾ ಮಂಡಲದಲ್ಲಿ ಸ್ಪರ್ಧಿಸಿಲ್ಲ. ಆದುದರಿಂದ ಈ ಬಾರಿ ಕಣ್ಣೂರು ಜಿಲ್ಲೆಯ ಓರ್ವರನ್ನು ಸ್ಪರ್ಧೆಗಿಳಿಸಬೇಕೆಂಬ ಬೇಡಿಕೆ ತೀವ್ರವಾಗಿದೆ. ಈ …

ಬಿಯರ್ ಬಾಟ್ಲಿಯಿಂದ ತಲೆಗೆ ಹಲ್ಲೆ : ಓರ್ವನ ವಿರುದ್ಧ ಕೇಸು ದಾಖಲು

ಸೀತಾಂಗೋಳಿ: ಬಿಯರ್ ಬಾಟ್ಲಿಯಿಂದ ಹೊಡೆದು ತಲೆಗೆ ಗಾಯಗೊಳಿಸಿರುವುದಾಗಿ ನೀಡಿದ ದೂರಿನಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೂರಂಬೈಲು ನಿವಾಸಿ ಅಜೇಶ್ (೩೭) ನೀಡಿದ ದೂರಿನಂತೆ ಧೀರಜ್ ಎಂಬಾತನ  ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೊನ್ನೆ ರಾತ್ರಿ ಸೀತಾಂಗೋಳಿಯಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆಯುತ್ತಿದ್ದಾಗ ತಡೆಯಲು ಯತ್ನಿಸಿದ ವೇಳೆ ಅಜೇಶ್‌ರ ತಲೆಗೆ ಬಿಯರ್ ಬಾಟ್ಲಿಯಿಂದ ಹೊಡೆದಿದ್ದು, ಗಾಯಗೊಂಡ ಅವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೈಗೆ ಚಾಕುವಿನಿಂದ ಇರಿದಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ನಾಪತ್ತೆಯಾಗಿದ್ದ ಬಾಲಕಿ ಉಡುಪಿಯಿಂದ ಪತ್ತೆ

ಕುಂಬಳೆ: ನಾಪತ್ತೆಯಾಗಿದ್ದ ೧೭ರ ಹರಯದ ಬಾಲಕಿಯನ್ನು ಉಡುಪಿಯಿಂದ ಪತ್ತೆಹಚ್ಚಲಾಗಿದೆ. ಚೇವಾರು ಬಳಿಯ ನಿವಾಸಿ ೧೭ರ ಬಾಲಕಿ ಕಳೆದ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಮನೆಯಿಂದ ಹೊರಟಿದ್ದು ಆ ಬಳಿಕ ಹಿಂತಿರುಗಿರಲಿಲ್ಲ. ಈ ಹಿನ್ನೆಲೆ ಯಲ್ಲಿ ಚಿಕ್ಕಪ್ಪ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ಉಡುಪಿಯಲ್ಲಿ  ಈಕೆ ನಿನ್ನೆ ಪತ್ತೆಯಾಗಿದ್ದು, ಈಕೆಯನ್ನು ಊರಿಗೆ ಕರೆತರಲಾಗಿದೆ.

ಗಾಂಜಾ, ಮದ್ಯ ವಶ

ಕಾಸರಗೋಡು:  ಅಬಕಾರಿ ತಂಡ ನಿನ್ನೆ ಎರಡೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ೫೦ ಗ್ರಾಂ ಗಾಂಜಾ ಮತ್ತು ಅಮಿತವಾಗಿ ಕೈವಶವಿರಿಸಿಕೊಂಡಿದ್ದ ೪ ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಕಾಸರಗೋಡು ಐಬಿ ನೀಡಿದ ಗುಪ್ತ ಮಾಹಿತಿಯಂತೆ ಕಾಸg ಗೋಡು ಅಬಕಾರಿ ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ ಅವರ ನೇತೃತ್ವದ ಅಬಕಾರಿ ತಂಡ ಬೆಂಡಿಚ್ಚಾ ಲ್‌ನಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ೫೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೊಹ ಮ್ಮದ್ ನಿಜಾಸ್ …