ಪೋಕ್ಸೋ ಪ್ರಕರಣ: ಟ್ಯೂಶನ್ ಸೆಂಟರ್‌ಗೆ ಪೊಲೀಸರಿಂದ ಮೊಹರು; ಮಾಲಕ ನಾಪತ್ತೆ

ಹೊಸದುರ್ಗ: ಪೋಕ್ಸೋ ಪ್ರಕರ ಣದಲ್ಲಿ ಆರೋಪಿಯಾದ ಕಾಞಂ ಗಾಡ್ ಬಸ್ ನಿಲ್ದಾಣ ಪರಿಸರದ ಇಂಪ್ಯಾಕ್ಟ್  ಟ್ಯೂಶನ್ ಸೆಂಟರ್ ಮಾಲಕ ಡಿಫಿ ಮುಖಂಡನಾಗಿದ್ದ ಅತಿಯಾಂಬೂರಿನ ಬಾಬುರಾಜ್ (೪೫)ನ ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಆದರೆ  ಪತ್ತೆ ಸಾಧ್ಯವಾಗಿಲ್ಲ. ಈತನ ಟ್ಯೂಶನ್ ಸೆಂಟರ್‌ನ್ನು ಮುಚ್ಚಿ ಪೊಲೀಸರು ಮೊಹರು ಹಾಕಿದರು. ಕಳೆದ ಮಂಗಳವಾರ ರಾತ್ರಿ ಟ್ಯೂಶನ್ ತರಗತಿ ಗೆಂದು ತಲುಪಿದ ವಿದ್ಯಾರ್ಥಿನಿಯನ್ನು ಬಾಬುರಾಜ್ ಲೈಂಗಿಕವಾಗಿ ದೌರ್ಜನ್ಯ ಗೈದಿದ್ದನೆ ನ್ನಲಾಗಿದೆ. ಈ ಮೊದಲು ಕೂಡಾ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಬುರಾಜ್ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದನು.  ಬಾಬುರಾಜ್‌ನ ಪತ್ನಿಯ ಮನೆ ಮಂಗಳೂರು ಆದಕಾ ರಣ ಅಲ್ಲಿ ಆತ ತಲೆಮರೆಸಿಕೊಂ ಡಿರಬಹುದೆಂಬ ಶಂಕೆಯಲ್ಲಿ ಪೊಲೀಸರು  ಪತ್ನಿಯ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

You cannot copy contents of this page