ಹಂದಿ ಬೈಕ್‌ಗೆ ಢಿಕ್ಕಿ ಸವಾರ ಮೃತ್ಯು

ಕಲ್ಲಿಕೋಟೆ: ತಿರುವಂಬಾಡಿ ಯಲ್ಲಿ ಕಾಡು ಹಂದಿ ಬೈಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಪೊನ್ನಂಗಯ ಪೋತ್ತಶ್ಶೇರಿಯ ಗೋಪಿ- ವಿಲಾಸಿನಿ ದಂಪತಿ ಪುತ್ರ ಜಿನೀಶ್ (೨೫) ಮೃತಪಟ್ಟವರು. ಕಳೆದ ಆದಿತ್ಯವಾರ ರಾತ್ರಿ ಮುಕ್ಕಂ ತಿರುವಂಬಾಡಿ ರಸ್ತೆಯಲ್ಲಿ ಜಿನೇಶ್ ಸಂಚರಿಸುತ್ತಿದ್ದ ಬೈಕ್‌ಗೆ ಹಂದಿ ಢಿಕ್ಕಿ ಹೊಡೆದಿತ್ತು. ಮೃತರು ತಂದೆ, ತಾಯಿ, ಸಹೋದರರಾದ ವಿನೀಶ್, ವಿಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳು ವಾಹನ ಸವಾರರಲ್ಲಿ ಆತಂಕ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರುಪದವು-ಧರ್ಮತ್ತಡ್ಕ, ಸರ್ಕುತ್ತಿ ಕನಿಯಾಲ, ಬಳ್ಳೂರು ರಸ್ತೆಗಳ ವಿವಿಧೆಡೆ ಇಕ್ಕೆಡೆಗಳಲ್ಲಿ ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ವಾಹನ ಸವಾರರು ದೂರಿದ್ದಾರೆ. ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ. ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ಪೊದೆಗಳು ಅಡ್ಡಿ ಉಂಟಾಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಹೊಂಡವಿದ್ದು ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಸವಾರರು ತಿಳಿಸಿದ್ದಾರೆ. ಸರ್ಕುತ್ತಿ ಕನಿಯಾಲ ಮಧ್ಯೆ ಕೆಲವು ಕಡೆಗಳಲ್ಲಿ …

ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ ೪೮ನೇ ವರ್ಷದ ಭಜನಾ ವಾರ್ಷಿಕೋತ್ಸವ ನಾಳೆಯಿಂದ

ಉಪ್ಪಳ: ಶ್ರೀ ಕೃಷ್ಣ ಭಜನಾ ಸಂಘ ಕೃಷ್ಣನಗರ ಮಂಗಲ್ಪಾಡಿ ಇದರ 48ನೇ ವರ್ಷದ ಭಜನಾ ವಾರ್ಷಿಕೋತ್ಸವ ಹಾಗೂ ಅಖಂಡ ಭಜನಾ ಸಪ್ತಾಹ ನಾಳೆಯಿಂದ 26ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ 8ಕ್ಕೆ ಸ್ಥಳ ಶುದ್ದಿ, ಸಹಿತ ವಿವಿಧ ವೈಧಿಕ ಕಾರ್ಯಕ್ರಮ, ಸಂಜೆ 4ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ವೀರಪ್ಪ ಅಂಬಾರು ಪ್ರಾಸ್ತಾವಿಕ ಭಾಷಣ ಮಾಡುವರು. ಅರುಣ್‌ರಾಜ್ ಅಂಬಾ ರು ಧಾರ್ಮಿಕ ಉಪನ್ಯಾಸ …

ವಜ್ರ ಜ್ಯುಬಿಲಿಯಂಗವಾಗಿ ಎನ್‌ಜಿಒ ಯೂನಿಯನ್‌ನಿಂದ ಮನೆ ಹಸ್ತಾಂತರ

ಕುಂಬಳೆ: ಕೇರಳ ಎನ್‌ಜಿಒ ಯೂನಿಯನ್‌ನ ವಜ್ರ ಜ್ಯುಬಿಲಿ ಯಂಗವಾಗಿ ನಿರ್ಮಿಸಿದ ಮನೆಯ ಕೀಲಿ ಕೈಯನ್ನು ಸಚಿವ ರಾಮ ಚಂದ್ರನ್ ಕಡನ್ನಪ್ಪಳ್ಳಿ ಫಲಾನುಭವಿಗೆ ನೀಡಿದರು. ಬಂಬ್ರಾಣ ನಿವಾಸಿ ಅಂದುಞಿಯವರಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಸಿ.ಎ. ಸುಬೈರ್ ಅಧ್ಯಕ್ಷತೆ ವಹಿಸಿದರು. ಎನ್‌ಜಿಒ ಯೂನಿಯನ್ ರಾಜ್ಯ ಉಪಾಧ್ಯಕ್ಷ ಟಿ.ಪಿ. ಉಷಾ ನಿರ್ಮಾಣ ಕಾಮಗಾರಿಗೆ ನೇತೃತ್ವ ನೀಡಿ, ಬಿ.ಕೆ. ಮೊಯ್ದೀನ್‌ರನ್ನು ಅಭಿನಂದಿಸಿದರು. ಕುಂಬಳೆ ಪಂ. ಅಧ್ಯಕ್ಷೆ ತಾಹಿರ ಯೂಸಫ್, ಕೆ. ಭಾನುಪ್ರಕಾಶ್, ಕೆ. ಅನಿಲ್ ಕುಮಾರ್ ಮಾತನಾಡಿದರು. ವಜ್ರ ಜ್ಯುಬಿಲಿಯಂಗವಾಗಿ  ರಾಜ್ಯದಲ್ಲಿ ಕಡು …

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಗುಂಪು

ಕಾಸರಗೋಡು: ಮನೆ ಅಂಗಳ ದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿ ಗಳ ಗುಂಪು ಕಚ್ಚಿ ಎಳೆದುಕೊಂಡು ಹೋದ ಘಟನೆ ಪಡನ್ನ ಬಳಿ ನಡೆದಿದೆ. ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆ ಸಮೀಪದ ಫಾಬಿನಾ-ಸುಲೈಮಾನ್ ದಂಪತಿ ಪುತ್ರ ಬಷೀರ್ (೧.೫ವರ್ಷ) ನಿನ್ನೆ ಸಂಜೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿಗೆ ನುಗ್ಗಿ ಬಂದ ಬೀದಿನಾಯಿಗಳ ಗುಂಪೊಂದು ಆ ಮಗುವನ್ನು ಕಚ್ಚಿಕೊಂಡೊಯ್ದಿದೆ. ಆಗ ಮಗು ಜೋರಾಗಿ ಅಳತೊಡಗಿದ ಸದ್ದು ಕೇಳಿ ಮನೆ ಯವರು ಓಡಿ ಬಂದಾಗ ನಾಯಿಗಳು ಮಗುವನ್ನು ಅಲ್ಲೇ …

ಗೋಸಾಡ ಕ್ಷೇತ್ರದಲ್ಲಿ ಮಾತೃ ಮಂಡಳಿ ಸಭೆ

ಕುಂಬ್ಡಾಜೆ : ಗೋಸಾಡ ಶ್ರೀ ಮಹಿಷ ಮರ್ದಿನೀ ಕ್ಷೇತ್ರದ ಮಾತೃ ಮಂಡಳಿ ಸಭೆ ಕ್ಷೇತ್ರದಲ್ಲಿ ಜರಗಿತು. ಫೆಬ್ರವರಿ 12ರಂದು ಜರಗುವ ಪುನಃ ಪ್ರತಿಷ್ಠ ದಿನ ಮಹೋತ್ಸವ ಸಹಸ್ರ ಕದಳಿ ಯಾಗ ಮತ್ತು ಅಥರ್ವಶೀರ್ಷ ಗಣಪತಿಯಾಗ ಜರಗಲಿರುವ ಕಾರಣ ಮಾತೃ ಮಂಡಳಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾತೃ ಮಂಡಳಿಯ ಗೌರವ ಅಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ಕರೆ ನೀಡಿದರು. ಮಾತೃ ಮಂಡಳಿಯ ಅಧ್ಯಕ್ಷÉ ಲಲಿತ ಗೋಸಾಡ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನಳಿನಿ ಪರಪ್ಪೆ ಸ್ವಾಗತಿಸಿ, …

ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠೆ: ಐಲ ತರುಣ ಕಲಾವೃಂದದ ಆಶ್ರಯದಲ್ಲಿ ಸಂಭ್ರಮಾಚರಣೆ ೨೨ರಂದು

ಉಪ್ಪಳ: ಅಯೋದೆs್ಯಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಪ್ರಯುಕ್ತ ಐಲ ತರುಣ ಕಲಾವೃಂದ ಇದರ ಆಶ್ರಯದಲ್ಲಿ ಐಲ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದ ವಠಾರದಲ್ಲಿ ವಿಶೇಷ ದೀಪಾಲಂಕಾರದೊAದಿಗೆ ಸಂಭಮಾಚರಣೆ ಜ.22ರಂದು ಸಂಜೆ 5.30ರಿಂದ ನಡೆಯಲಿದೆ. ಅಖಿಲ ಭಾರತ ಕುಟುಂಬ ಪ್ರಭೋದಿನಿ ಕಾರ್ಯಕಾರಿ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸತ್ಸಂಗ ನಡೆಸುವರು. ಖ್ಯಾತ ನಟ, ನಿರ್ದೇಶಕ ಕಾಸರಗೋಡು ಚಿನ್ನಾ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಉಪಸ್ಥಿತರಿರುವರು. ಬಳಿಕ ಗಾಯಕ …

ಜಿಲ್ಲೆಯಲ್ಲಿ ೨೧೫೪ ಕಡುಬಡವರು: ಇವರ ಉದ್ಧಾರಕ್ಕೆ ಯೋಜನೆ

ಕಾಸರಗೋಡು:  ಕಡುಬಡತನ ನಿವಾರಣೆಗಾಗಿ ೨೦೨೪-೨೫ನೇ ವಾರ್ಷಿಕ ಯೋಜನೆಯಲ್ಲಿ ಗರಿಷ್ಠ ಆದ್ಯತೆ ನೀಡಲು ಜಿಲ್ಲಾ ಯೋಜನಾ ಸಮಿತಿಯಲ್ಲಿ ಕರಡು ನಿರ್ದೇಶ ನೀಡಲಾಗಿದೆ. ಜಿಲ್ಲೆಯಲ್ಲಿ ೨೧೫೪ ಕಡುಬಡವರಿದ್ದಾರೆಂದು ಲೆಕ್ಕಹಾಕಲಾಗಿದೆ. ಇವರಿಗೆ  ಬೇಕಾದ ಮೂಲಭೂತ ಸೌಕರ್ಯಗಳು, ಆರೋಗ್ಯ ಸಂರಕ್ಷಣೆ, ಅಭಿವೃದ್ಧಿ ಅಗತ್ಯಗಳು ಮೊದಲಾದವುಗಳನ್ನು  ಸೇರಿಸಿಕೊಂಡು ಕಡುವಡತನವನ್ನು ಪರಿಹರಿಸಲು ಪ್ರೊಜೆಕ್ಟ್‌ಗಳಿಗೆ ರೂಪು ನೀಡಬೇಕು. ಪಂಚಾಯತ್‌ಗಳು ಸಿದ್ಧಪಡಿಸಿದ ಮೈಕ್ರೋ ಪ್ಲಾನ್ ಯೋಜನೆ ಬ್ಲೋಕ್, ಜಿಲ್ಲಾ ಪಂಚಾ ಯತ್‌ಗಳಿಗೆ ವಹಿಸಿಕೊಳ್ಳ ಬೇಕೆಂದು ತಿಳಿಸಲಾಗಿದೆ.  ೨೫೨ ಮಂದಿಯ ಮನೆ ದುರಸ್ತಿ, ೨೯೫ ಮಂದಿಗೆ ಮನೆ, ಸ್ಥಳ ಲಭ್ಯಗೊಳಿಸುವುದು, …

ಶ್ರೀ ಕ್ಷೇತ್ರ ಕಾರ್ಮಾರಿನಲ್ಲಿ ಕೂಪನ್ ಬಿಡುಗಡೆ ೧೯ರಂದು

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕೋತ್ಸವ ಜನವರಿ 19ರಂದು ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿದೆ. ಅದೇ ದಿನ ಬೆಳಗ್ಗೆ 10.30ಕ್ಕೆ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಧನ ಸಂಗ್ರಹ ನಿಟ್ಟಿನಲ್ಲಿ ಕೂಪನನ್ನು ಸಮಿತಿಯ ಗೌರವ ಅಧ್ಯಕ್ಷ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಲಿರುವರು. ಸಮಿತಿಯ ಗೌರವ ಸಲಹೆಗಾರ ಉದ್ಯಮಿ ಬಿ ವಸಂತ ಪೈ ಅಧ್ಯಕ್ಷತೆ ವಹಿಸುವರು. ಜೀರ್ಣೋದ್ಧಾರ ಸಮಿತಿಯ ಉದ್ಯಮಿ ಮಧುಸೂದನ ಆಯರ್ ಭಾಗವಹಿಸಲಿರುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಮುಕೇಶ್, ರಾಜಶ್ರೀ …

ನಗರಸಭೆಯ ದ್ವಿತೀಯ ಹೆಲ್ತ್‌ವೆಲ್‌ನೆಸ್ ಸೆಂಟರ್ ಅಣಂಗೂರಿನಲ್ಲಿ ಉದ್ಘಾಟನೆ

ಕಾಸರಗೋಡು: ಕಾಸರಗೋಡು ನಗರಸಭೆ ಸಂಪೂರ್ಣ ಆರೋಗ್ಯ ಗುರಿಯಿರಿಸಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಹಾಯದೊಂದಿಗೆ ನಗರ ಆರೋಗ್ಯಕೇಂದ್ರದ ಅಧೀನದಲ್ಲಿ ಜ್ಯಾರಿಗೊಳಿಸುವ ಹೆಲ್ತ್ ವೆಲ್‌ನೆಸ್ ಸೆಂಟರ್‌ನ ದ್ವಿತೀಯ ಕೇಂದ್ರವನ್ನು ಅಣಂಗೂರು ಪಚ್ಚಕ್ಕಾಡ್‌ನಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಉದ್ಘಾಟಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಶೀದಾ ಫಿರೋಸ್ ಅಧ್ಯಕ್ಷತೆ ವಹಿಸಿದರು. ಖಾಲಿದ್ ಪಚ್ಚಕ್ಕಾಡ್ ಸ್ವಾಗತಿಸಿದರು. ಹಲವರು ಭಾಗವಹಿಸಿದರು.