ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಯುವಕ ಸೆರೆ

ಕಾಸರಗೋಡು: ಶಾಲಾ ವಿದ್ಯಾರ್ಥಿನಿಗೆ  ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಯುವಕನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ನಿವಾಸಿ ತಸ್ರೀಫ್ (೧೯) ಬಂಧಿತನಾದ ಆರೋಪಿ. ೧೫ ವರ್ಷದ ಶಾಲಾ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋ ಪಿಸಿ ನೀಡಲಾದ ದೂರಿನಂತೆ ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ.

ತಂಡಗಳ ಮಧ್ಯೆ ಹೊಡೆದಾಟ: ಓರ್ವನಿಗೆ ಗಂಭೀರ ಗಾಯ: ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ನಗರದ ಕೋಟೆಕಣಿಯಲ್ಲಿ ನಿನ್ನೆ ರಾತ್ರಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಇದರಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಕೂಡ್ಲು ಮೀಪುಗುರಿ ನಿವಾಸಿ ತೇಜ ಯಾನೇ ಅಜೆಯ್ ಕುಮಾರ್ (೨೭) ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಘರ್ಷಣೆಗೆ ಸಂಬಂಧಿಸಿ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಸನತ್ ಮತ್ತು ವಿಜಿತ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಬ್ಬಿಣದ ಸರಳು ಮತ್ತು ಗಾಜಿನಿಂದ ಹೊಡೆದು ತೇಜರಿಗೆ ಗಾಯಗೊಳಿಸಿರುವುದಾಗಿ …

ಮುಖ್ಯಮಂತ್ರಿ ಮಗಳ ಕಂಪೆನಿ ವಿರುದ್ಧ ಕೇಂದ್ರ ತನಿಖೆ ಘೋಷಣೆ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಗಳು ವೀಣಾವಿಜಯನ್ ಮಾಲಕರಾಗಿರುವ ಎಕ್ಸೋಲೋಜಿಕಲ್ ಕಂಪೆನಿ ವಿರುದ್ಧ ಕೇಂದ್ರ ಕಾರ್ಪರೇಟ್ ಸಚಿವಾಲಯ ಸಮಗ್ರ ತನಿಖೆ ಘೋಷಿಸಿದೆ. ತನಿಖೆಗಾಗಿ ಸಚಿವಾಲಯ ಉನ್ನತ ತ್ರಿಸದಸ್ಯ ಸಮಿತಿಗೆ ರೂಪು ನೀಡಿದೆ. ಈ ಬಗ್ಗೆ ಸಮಗ್ರ ತನಿಖೆ  ನಡೆಸಿ ನಾಲ್ಕು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆಯೂ ಕೇಂದ್ರ ಸರಕಾರ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದರ ಹೊರತಾಗಿ ಖಾಸಗಿ ಕಪ್ಪು ಹೊಗೆ ವ್ಯವಹಾರ ಕಂಪೆನಿಯಾದ ಸಿ.ಎಂ.ಆರ್.ಎಲ್ ಮತ್ತು ಸಾರ್ವಜನಿಕ ಉದ್ದಿಮೆ ಅಭಿವೃದ್ಧಿ ನಿಗಮ (ಕಾರ್ಪರೇಷನ್)ನ ವಿರುದ್ಧವೂ ಕೇಂದ್ರ ಸರಕಾರ ತನಿಖೆ …

ಕೊಪ್ಪಳ ಹೊಳೆಯಲ್ಲಿ  ಪತ್ತೆಯಾದ ಮೃತದೇಹ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯದ್ದು

ಮಂಜೇಶ್ವರ: ಹೊಸಬೆಟ್ಟು ಬಳಿಯ ಕೊಪ್ಪಳ ಹೊಳೆಯಲ್ಲಿ ಇತ್ತೀಚೆಗೆ ಪತ್ತೆಯಾದ ಮೃತದೇಹ ಸುರತ್ಕಲ್ ಬಳಿಯ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿಯಾಗಿ ದ್ದಾರೆಂದು ದೃಢೀಕರಿಸಲಾಗಿದೆ. ಸುರತ್ಕಲ್ ಬಳಿಯ ಕಾಟಿಪಳ್ಳ ನಿವಾಸಿ ಅಬೂಬಕರ್ ಎಂಬವರ ಪುತ್ರ ಇಹಾಬ್ (೨೦) ಮೃತ ವ್ಯಕಿ ಯೆಂದು ತಿಳಿದುಬಂದಿದೆ.  ಕಾಸರ ಗೋಡು ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂಬಂಧಿಕರು ಮೃತದೇಹ ಇಹಾಬ್‌ನದ್ದೆಂದು ದೃಢೀಕರಿಸಿದ್ದಾರೆ. ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಗಿದೆ. ಮಂಗಳೂರಿನ ಕಾಲೇಜೊಂ ದರಲ್ಲಿ ದ್ವಿತೀಯ ವರ್ಷ ಮೆಡಿಕಲ್ ವಿದ್ಯಾರ್ಥಿಯಾದ ಇಹಾಬ್ ಕೆಲವು ದಿನಗಳಹಿಂದೆ ತಲಪ್ಪಾಡಿಯಲ್ಲಿರುವ ಸಂಬಂಧಿಕರ ಮನೆಗೆ …

ಕುಂಬಳೆ ಪೇಟೆಯಲ್ಲಿ ಚರಂಡಿಗಳು ಸೆಪ್ಟಿಕ್ ಟ್ಯಾಂಕ್: ದುರ್ವಾಸನೆ ಅಸಹನೀಯ

ಕುಂಬಳೆ: ಕುಂಬಳೆ ಪೇಟೆಯ ವ್ಯಾಪಾರ ಸಂಸ್ಥೆಗಳು ಸೇರಿದಂತೆ ಸಕಲ ಕಟ್ಟಡಗಳ ಸೆಪ್ಟಿಕ್ ಟ್ಯಾಂಕ್ ಪೇಟೆಯ ಚರಂಡಿಗಳಾಗಿವೆ ಎಂದು ಪಂಚಾಯತ್ ಅಧಿಕಾರಿಗಳಿಗೆ ಖಚಿತವಾಯಿತು. ಕುಂಬಳೆ ಮುಳ್ಳೇರಿಯ ಕೆ.ಎಸ್.ಟಿ.ಪಿ ರಸ್ತೆಯ ಡ್ರೈನೇಜ್ ಕರಾರುದಾರರು ಪೂರ್ತಿಗೊಳಿಸದಿರುವುದು ಇದಕ್ಕಾಗಿಯಾಗಿದೆ.  ಚರಂಡಿ ಶುಚೀಕರಣವೆಂಬ ವಿವಿಧ ಕಡೆಗಳಿಂದ ಬೇಡಿಕೆ ಬಂದಾಗ ಪಂಚಾಯತ್ ಅಧಿಕಾರಿಗಳು ರಸ್ತೆ ನಿರ್ಮಾಣದೊಂದಿಗೆ ಚರ್ಚೆ ನಡೆಸಿದ್ದರು. ಚರ್ಚೆಯ ಆಧಾರದಲ್ಲಿ ಚರಂಡಿಗಳನ್ನು ಶುಚೀಕರಿಸಲು ಆರಂಭಿಸಿದಾಗ ಚರಂಡಿಯಲ್ಲಿ ಸಂಪೂರ್ಣ ಪಾಯಿಖಾನೆ ಮಲಿನಜಲ, ರಸ್ತೆ ಬದಿಯ ಎಲ್ಲಾ ಕಟ್ಟಡಗಳಿಂದಿರುವ ಮಲಿನ ಜಲ ಪೈಪನ್ನು ಚರಂಡಿಗೆ ಹರಿಯಬಿಟ್ಟಿರುವುದು ಪತ್ತೆಹಚ್ಚಲಾಗಿದೆ. …

ಉತ್ತರ ಮಲಬಾರ್ ಸಹಿತ ಕೇರಳದಲ್ಲಿ ಪೋಪುಲರ್ ಫ್ರಂಟ್‌ನ ಸ್ಲೀಪಿಂಗ್ ಸೆಲ್ ಸಕ್ರಿಯ-ವರದಿ

ಕಣ್ಣೂರು: ಉತ್ತರ ಮಲ ಬಾರ್ ಸಹಿತ ರಾಜ್ಯದ ಕೆಲವು ಭಾಗಗಳಲ್ಲಿ ನಿಷೇಧಿತ ಪೋಪುಲರ್ ಫ್ರಂಟ್ ಸ್ಲೀಪಿಂಗ್ ಸೆಲ್‌ಗಳು ಈಗಲೂ ಸಕ್ರಿಯವಾಗಿವೆಯೆಂದು ಪೊಲೀಸ್ ಗುಪ್ತಚರ ವಿಭಾಗ ಸ್ಪೆಶಲ್ ಬ್ರಾಂಚ್ ವರದಿಮಾಡಿದೆ. ನಿಷೇಧಕ್ಕಿಂತ ಮೊದಲು ಶಕ್ತಿ ಕೇಂದ್ರಗಳಾಗಿರುವ ಸ್ಥಳಗಳಲ್ಲಿ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯವಾ ಗಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.  ಇದು ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೋಪುಲರ್ ಫ್ರಂಟ್‌ನ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯಗೊಂಡಿರು ವುದಾಗಿ ಎನ್‌ಐಎಗೂ ಮಾಹಿತಿ ಲಭಿಸಿದೆ. ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಕ್ಕೆ ಎನ್‌ಐಎ ತೊಡಗಿದೆ. ಅಂತಹ …

ತಿರುವಾಭರಣ ಶೋಭಾಯಾತ್ರೆ ಇಂದು

ಪತ್ತನಂತಿಟ್ಟ: ಮಕರಜ್ಯೋತಿ ದಿನದಂದು ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸಲಿರುವ ತಿರುವಾಭರಣ ಒಳಗೊಂಡ ಶೋಭಾಯಾತ್ರೆ ಇಂದು ಮಧ್ಯಾಹ್ನ ೧ ಗಂಟೆಗೆ ಪಂ ದಳದಿಂದ ಹೊರಡಲಿದೆ.  ಪರಂಪ ರಾಗತ ದಾರಿಯಲ್ಲಿ ಸಂಚರಿಸುವ ಶೋಭಾಯಾತ್ರೆ ೧೫ರಂದು ಸಂಜೆ ಸನ್ನಿಧಾನಕ್ಕೆ ತಲುಪಲಿದೆ. ಬಳಿಕ ತಿರುವಾಭರಣವನ್ನು ಶ್ರೀ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಪೊನ್ನಂಬಲ   ಬೆಟ್ಟದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ.  ಇದೇ ವೇಳೆ ಮಕರಜ್ಯೋತಿ ದರ್ಶನಕ್ಕೆ ಬೇಕಾದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಪುಲ್ಲುಮೇಡ್, ಪರುಂದುಪಾರ, ಪಾಂಚಾಲಿಮೇಡ್ …

ಸೈಬರ್ ವಂಚನೆ ತಡೆಗಟ್ಟಲು ಪೊಲೀಸರಿಗೆ ಎಐ ಟೂಲ್ ಕಿಟ್

ಕಾಸರಗೋಡು: ಕೃತಕತನ ಬುದ್ದಿ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್-ಎಐ) ಉಪಯೋಗಿಸಿ ನಡೆಸಲಾಗುವ ಸೈಬರ್ ವಂಚನೆ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರಿಗೆ ಎಐ ಟೂಲ್ ಕಿಟ್ ನೀಡಲು ಸರಕಾರ ತೀರ್ಮಾನಿಸಿದೆ. ಎಐ ವೀಡಿಯೋಗಳು ಅವುಗಳ ಚಿತ್ರಗಳು, ವಾಸ್ತವತೆ ಮತ್ತು ಅವುಗಳ ಮೂಲ ತಿಳಿದುಕೊಳ್ಳಲು ಸಾಧ್ಯವಾ ಗುವ  ರೀತಿಯ ಟೂಲ್ ಕಿಟ್ ಆಗಿದೆ ಇದು.  ಹೈದರಾಬಾದ್‌ನ ಸಿ-ಡೋಕ್ ಇಂತಹ ಟೂಲ್ ಕಿಟ್  ಅಭಿವೃದ್ಧಿಪಡಿಸಿದೆ. ಅದು ಶೀಘ್ರ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಬಂದು  ಸೇರಲಿದೆಯೆಂದು ರಾಜ್ಯ ಸೈಬರ್ ಆಪರೇಶನ್ ಎಸ್‌ಪಿ ಎಸ್. ಗೌರಿಶಂಕರ್ ತಿಳಿಸಿದ್ದಾರೆ. …

ಅಣಂಗೂರು ಪಚ್ಚಕ್ಕಾಡ್ ಹೆಲ್ತ್ ವೆಲ್‌ನೆಸ್ ಸೆಂಟರ್ ಉದ್ಘಾಟನೆ ೧೫ರಂದು

ಕಾಸರಗೋಡು: ರಾಷ್ಟ್ರೀಯ ಆರೋಗ್ಯ ಮಿಶನ್‌ನ ಸಹಾಯದೊಂದಿಗೆ ನಗರ ಆರೋಗ್ಯ ಕೇಂದ್ರದ ಅಧೀನದಲ್ಲಿ ಜ್ಯಾರಿಗೊಳಿಸುವ ಹೆಲ್ತ್ ವೆಲ್‌ನೆಸ್ ಸೆಂಟರ್‌ನ ದ್ವಿತೀಯ ಕೇಂದ್ರ ಜನವರಿ ೧೫ರಂದು ಅಪರಾಹ್ನ ೩ ಗಂಟೆಗೆ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಉದ್ಘಾಟಿಸುವರು. ನಗರಸಭೆ ಜ್ಯಾರಿಗೊಳಿಸುವ ಮೂರು ಕೇಂದ್ರಗಳಲ್ಲಿ ಅಣಂಗೂರು ಪಚ್ಚಕ್ಕಾಡ್‌ನ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ. ನಗರಸಭಾ ಉಪಾಧ್ಯಕ್ಷೆ ಶಂಸೀರ ಫಿರೋಜ್ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.

ಸ್ವಾತಂತ್ರ್ಯ ಚಳವಳಿಗೆ, ಸಂವಿಧಾನ ನಿರ್ಮಾಣಕ್ಕೆ ವಿವೇಕಾನಂದರು ಪ್ರೇರಣೆ-ಕರುಣಾಕರನ್ ನಂಬ್ಯಾರ್

ಕಾಸರಗೋಡು: ಸ್ವಾಮಿ ವಿವೇಕಾನಂದರು ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಸಂವಿಧಾನ ನಿರ್ಮಾಣದಲ್ಲಿ  ಕ್ರಿಯಾತ್ಮಕವಾಗಿ ಸ್ವಾಧೀನಿಸಿದ್ದ ವ್ಯಕ್ತಿಯೆಂದು ಭಾರತೀಯ ಅಭಿಭಾಷಕ ಪರಿಷತ್ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಭಿಪ್ರಾಯಪಟ್ಟರು. ಭಾರತೀಯ ಅಭಿಭಾಷಕ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿವೇಕಾನಂದ ಜಯಂತಿ  ಆಚರಣೆಯಲ್ಲಿ ಅವರು  ಪ್ರಧಾನ ಭಾಷಣ ಮಾಡಿದರು.   ವಿವೇಕಾನಂದರು ಭಾರತೀಯ ಯುವತ್ವದ ಮಾದರಿಯಾಗಿ ದ್ದಾರೆಂದು ಅವರು ನುಡಿದರು.  ಕಾರ್ಯಕ್ರಮವನ್ನು ಅಭಿಭಾಷಕ ಪರಿಷತ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್ ಉದ್ಘಾಟಿಸಿದರು. …