ಮುಖ್ಯಮಂತ್ರಿ ಮಗಳ ಕಂಪೆನಿ ವಿರುದ್ಧ ಕೇಂದ್ರ ತನಿಖೆ ಘೋಷಣೆ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಗಳು ವೀಣಾವಿಜಯನ್ ಮಾಲಕರಾಗಿರುವ ಎಕ್ಸೋಲೋಜಿಕಲ್ ಕಂಪೆನಿ ವಿರುದ್ಧ ಕೇಂದ್ರ ಕಾರ್ಪರೇಟ್ ಸಚಿವಾಲಯ ಸಮಗ್ರ ತನಿಖೆ ಘೋಷಿಸಿದೆ.

ತನಿಖೆಗಾಗಿ ಸಚಿವಾಲಯ ಉನ್ನತ ತ್ರಿಸದಸ್ಯ ಸಮಿತಿಗೆ ರೂಪು ನೀಡಿದೆ. ಈ ಬಗ್ಗೆ ಸಮಗ್ರ ತನಿಖೆ  ನಡೆಸಿ ನಾಲ್ಕು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆಯೂ ಕೇಂದ್ರ ಸರಕಾರ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದರ ಹೊರತಾಗಿ ಖಾಸಗಿ ಕಪ್ಪು ಹೊಗೆ ವ್ಯವಹಾರ ಕಂಪೆನಿಯಾದ ಸಿ.ಎಂ.ಆರ್.ಎಲ್ ಮತ್ತು ಸಾರ್ವಜನಿಕ ಉದ್ದಿಮೆ ಅಭಿವೃದ್ಧಿ ನಿಗಮ (ಕಾರ್ಪರೇಷನ್)ನ ವಿರುದ್ಧವೂ ಕೇಂದ್ರ ಸರಕಾರ ತನಿಖೆ ಘೋಷಿಸಿದೆ.

ಈ ಎರಡು ಸಂಸ್ಥೆಗಳ ವಿರುದ್ಧ ಕೇಂದ್ರ ಸರಕಾರಕ್ಕೆ  ಈ ಹಿಂದೆ ದೂರುಗಳು ಸಲ್ಲಿಸಲ್ಪಟ್ಟಿದ್ದುವು. ಆ ಬಗ್ಗೆ ಕೇಂದ್ರ ಸಚಿವಾಲಯ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಈ ಎರಡು ಸಂಸ್ಥೆಗಳಲ್ಲಿ ಕೆಲವೊಂದು ಅವ್ಯವಹಾರಗಳು ನಡೆದಿರುವುದನ್ನು ಪತ್ತೆಹಚ್ಚಲಾಗಿತ್ತು. ಅದುವೇ ಈ ಸಂಸ್ಥೆಗಳ ವಿರುದ್ಧ ಸಮಗ್ರ ತನಿಖೆಗೆ ಕೇಂದ್ರ ಸರಕಾರ ಮುಂದಾಗಿರುವುದರ ಪ್ರಧಾನ ಹಿನ್ನೆಲೆಯಾಗಿದೆ.

ಇದರ ಹೊರತಾಗಿ ವೀಣಾ ಅವರ ಮಾಲಕತ್ವದಲ್ಲಿರುವ ಎಕ್ಸೋಲೋಜಿಕಲ್‌ನ ವಿರುದ್ಧವೂ ಕೇಂದ್ರ ಸರಕಾರ ಮತ್ತೆ ತನಿಖೆಗೆ ಘೋಷಿಸಿದೆ. ಸಿ.ಎಂ.ಆರ್.ಎಲ್, ಕೆ.ಎಸ್. ಐ.ಡಿ.ಸಿ ಮತ್ತು  ಎಕ್ಸೋಲೋಜಿಕಲ್‌ನ ನಡುವಿನ ಆರ್ಥಿಕ ಮೂಲಗಳ ಬಗ್ಗೆಯೂ ಕೇಂದ್ರದ ತ್ರಿಸದಸ್ಯ ಸಮಿತಿ ತನಿಖೆ ನಡೆಸಲಿದೆ. ಕಪ್ಪು ಹೊಗೆ ವ್ಯವಹಾರ ಕಂಪೆನಿಯಾದ ಸಿ.ಎಂ.ಆರ್.ಎಲ್.ನಿಂದ ವೀಣಾ ವಿಜಯನ್ ಸೇರಿದಂತೆ ಇತರ ಹಲ ವರಿಗೆ ಹಣವೂ ಲಭಿಸಿತ್ತೆಂಬ ಆರೋಪಗಳೂ ಈ ಹಿಂದೆ ಉಂಟಾಗಿತ್ತು. ಅದುವೇ   ಎಕ್ಸೋಲೋಜಿಕಲ್ ಕಂಪೆನಿಯನ್ನೂ ಕೇಂದ್ರ ಸರಕಾರ ತನ್ನ ತನಿಖಾ ವ್ಯಾಪ್ತಿಗೊಳಪಡಿಸಿ ದುದರ ಪ್ರಧಾನ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page