ಕಣಿಪುರ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ ೧೪ರಂದು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಈ ತಿಂಗಳ ೧೪ರಂದು (ಮಕರ ಸಂಕ್ರಮಣ) ಬೆಳಿಗ್ಗೆ ೮ ಗಂಟೆಗೆ   ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ  ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜಾದಿ ಕಾರ್ಯಗಳು ನಡೆಯಲಿದೆ. ಬೆಳಿಗ್ಗೆ ೯ರಿಂದ ಫೆಬ್ರವರಿ ೧೬ರಿಂದ ೨೪ರವರೆಗೆ ನಡೆಯುವ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

ಟ್ರೇಡ್ ಫೆಸ್ಟಿವಲ್ ಕಚೇರಿ ಉದ್ಘಾಟನೆ

ಮುಳ್ಳೇರಿಯ: ಜನವರಿ ೨೫ರಿಂದ ೨೮ರ ವರೆಗೆ ಮುಳ್ಳೇರಿಯ ರತ್ನಗಿರಿಯಲ್ಲಿ ನಡೆಯುವ ಮುಳ್ಳೇರಿಯ ಟ್ರೇಡ್ ಫೆಸ್ಟಿವಲ್ ಕಚೇರಿಯನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಜನನಿ, ಮುಂಡೋಳು ಕ್ಷೇತ್ರ ಟ್ರಸ್ಟಿ ರಘುರಾಮ ಬಲ್ಲಾಳ್, ಪಂ. ಸದಸ್ಯ ಸಂತೋಷ್, ಸವಿತಾ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ವಸಂತ ಕಾರ್ಲೆ, ವಿಜಯ ಕುಮಾರ್, ಪುರುಷೋತ್ತಮನ್, ಕೃಷ್ಣನ್, ಇಕ್ಭಾಲ್, ಶಿವಕೃಷ್ಣ ಭಟ್, ಸದಾಶಿವ ಭಾಗವಹಿಸಿದರು.

ಕೊಳಚಪ್ಪು ಶ್ರೀ ಶಾಸ್ತಾವೇಶ್ವರ ಭಜನಾ ಸಂಘ ವಾರ್ಷಿಕೋತ್ಸವ ೧೪ರಂದು

ಪೈವಳಿಕೆ: ಕೊಳಚಪುö್ಪ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಏಕಾದಶ ರುದ್ರಾಭಿಷೇಕ, ರಂಗಪೂಜೆ ಇತ್ತೀಚೆಗೆ ನಡೆಯಿತು. ಶಾಸ್ತಾವೇಶ್ವರ ಭಜನಾ ಸಂಘದ 27ನೇ ವಾರ್ಷಿಕೋತ್ಸವ ಈ ತಿಂಗಳ 14ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 6ರಿಂದ ಗಣಪತಿ ಹೋಮ, ಬೆಳಿಗ್ಗೆ 6.58ರಿಂದ ಏಕಾಹ ಭಜನೆ ಆರಂಭಗೊAಡು ಮರುದಿನ ಸೂರ್ಯೋದಯದ ತನಕ ನಡೆಯಲಿದೆ. ಬೆಳಿಗ್ಗೆ 8ರಿಂದ ಕ್ಷೇತ್ರದ ದೈವಗಳಿಗೆ ತಂಬಿಲ, 9ರಿಂದ ರುದ್ರಾಭಿಷೇಕ, 10ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ …

ಲೋಕಸಭಾ ಚುನಾವಣೆ: ಕಾಸರಗೋಡಿನಲ್ಲಿ ಸಿಪಿಎಂನ ಮೂವರ ಹೆಸರು ಪರಿಗಣನೆಯಲ್ಲಿ

ಕಾಸರಗೋಡು:  ಲೋಕಸಭಾ ಚುನಾವಣೆಗೆ ಇನ್ನೇನು ತಿಂಗಳುಗಳು ಮಾತ್ರವೇ ಬಾಕಿ ಉಳಿದುಕೊಂಡಿ ರುವಂತೆಯೇ  ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಉಮೇದ್ವಾರ ನಿರ್ಣಾಯದ ಬಗ್ಗೆ ಸಿಪಿಎಂನಲ್ಲಿ ಈಗ ಭರದ ಚರ್ಚೆ ಆರಂಭಗೊಂಡಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಯವರೇ ಆಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಾ. ವಿಪಿಪಿ ಮುಸ್ತಫಾ, ಕಣ್ಣೂರು ಜಿಲ್ಲೆಯವರಾದ ಶಾಸಕಿ ಟಿ.ವಿ. ರಾಜೇಶ್ವರಿ ಮತ್ತು ಕಣ್ಣೂರು ಜಿಲ್ಲಾ ಪಂಚಾಯತ್ ಅಧಕ್ಷೆ ಪಿ.ಪಿ. ದಿವ್ಯಾ ಅವರ ಹೆಸರುಗಳನ್ನು ಪಕ್ಷ ಪ್ರಧಾನವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ. ಪಿ.ಪಿ. ದಿವ್ಯಾರ  ಹೆಸರನ್ನೂ ಕಣ್ಣೂರು …

ಮಂಜೇಶ್ವರದಲ್ಲಿ ಸಮುದ್ರ ನೀರು ಶುದ್ದೀಕರಣ ಘಟಕ ಬಗ್ಗೆ ಅಧ್ಯಯನ

ಮಂಜೇಶ್ವರ: ಮಂಜೇಶ್ವರವನ್ನು ಕೇಂದ್ರೀಕರಿಸಿ ಸಮುದ್ರ ನೀರು ಶುದ್ದೀಕರಣ ಘಟಕ ಸ್ಥಾಪಿಸುವ ಯೋಜನೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹೀಗೆ ಈ ಸ್ಥಾವರದಿಂದ ಶುದ್ಧೀಕರಿಸಲಾಗುವ ನೀರನ್ನು ಶುದ್ಧ ಜಲವನ್ನಾಗಿ ಪರಿವರ್ತಿಸಿ ನೀರಿನ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳುವ ಪ್ರಯತ್ನ  ನಡೆಸಲಾಗುತ್ತಿದೆ. ಈ ಬಗ್ಗೆ ಈಗ ಅಧ್ಯಯನ ಮಾತ್ರವೇ ನಡೆಸಲಾಗುತ್ತಿದೆ. ಆದರೆ ಸಂಸ್ಕರಣ ಘಟಕ ಸ್ಥಾಪಿಸುವ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಲಾಗಿಲ್ಲ. ಅಧ್ಯಯನಪೂರ್ಣಗೊಂಡ ಬಳಿಕವಷ್ಟೇ ಈ ಯೋಜನೆಗೆ ಅಂತಿಮ ರೂಪು ನೀಡಲಾಗುವುದು ಎಂದು ಜಲಪ್ರಾಧಿಕಾರ ಅಧಿಕಾರಿಗಳು ಹೇಳುತ್ತಿ ದ್ದಾರೆ. ಸಮುದ್ರ ನೀರು ಶುದ್ಧೀಕರಿಸುವ …

ರಾಜ್ಯದಲ್ಲಿ ಬೃಹತ್ ಅಣೆಕಟ್ಟು ಇಲ್ಲದ ಏಕ ಜಿಲ್ಲೆ ಕಾಸರಗೋಡು

ಕಾಸರಗೋಡು:  ರಾಜ್ಯದಲ್ಲಿ ಬೃಹತ್ ಅಣೆಕಟ್ಟು ಇಲ್ಲದ ಏಕೈಕ ಜಿಲ್ಲೆ ಕಾಸರಗೋಡು ಆಗಿದೆ. ಕಾಸರಗೋಡು ಜಿಲ್ಲೆ ರೂಪುಗೊಂಡು ಇಂದಿಗೆ ೪೦ ವರ್ಷಗಳು ಸಂದಿವೆ. ಕಣ್ಣೂರು ಜಿಲ್ಲೆಯಲ್ಲಿರುವ ಪಳಶ್ಶಿ ಅಣೆಕಟ್ಟು ಮಾದರಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ದೊಡ್ಡ ಅಣೆಕಟ್ಟು ನಿರ್ಮಿಸಿದ್ದಲ್ಲಿ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಲೆದೋರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬ ಹುದು ಎಂದು ಹವಾಮಾನ ಇಲಾಖೆಯ ತಜ್ಞರು ಹೇಳುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು  ಹೊಳೆಗಳು ಮತ್ತು ಅತೀ ಹೆಚ್ಚು ಮಳೆ ಲಭಿಸುವ ಜಿಲ್ಲೆಯಾಗಿದೆ ಕಾಸರ ಗೋಡು. ಇಲ್ಲಿ ಲಭಿಸುವ …

ಸಿಪಿಎಂ ಪಾರ್ಟಿ ಗ್ರಾಮಗಳಲ್ಲಿ ಮತೀಯ ಉಗ್ರಗಾಮಿಗಳಿಗೆ ಅಭಯ- ಕೆ. ಸುರೇಂದ್ರನ್

ತಿರುವನಂತಪುರ: ಸಿಪಿಎಂನ ಪಾರ್ಟಿ ಗ್ರಾಮಗಳಲ್ಲಿ ಮತೀಯ ಉಗ್ರಗಾಮಿಗಳು ಬೆಳೆಯುತ್ತಿದ್ದಾರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್  ಆರೋಪಿಸಿದ್ದಾರೆ. ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ  ಟಿ.ಜೆ. ಜೋಸೆಫ್‌ರ ಕೈ ಕತ್ತರಿಸಿದ ಪ್ರಕರಣದ ಒಂದನೇ ಆರೋಪಿ ಕಣ್ಣೂರಿನ ಮಟ್ಟನ್ನೂರಿನಲ್ಲಿ ೧೩ ವರ್ಷ ಕಾಲ ಸುಖವಾಗಿ ವಾಸಿಸುತ್ತಿದ್ದುದು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ  ಎಂದೂ ಅವರು ತಿಳಿಸಿದ್ದಾರೆ. ತಿರುವನಂತಪುರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡುತ್ತಾ ಅವರು ಈ ಆರೋಪ ಹೊರಿಸಿದ್ದಾರೆ. ಮಟ್ಟನ್ನೂರು ರಾಜ್ಯದಲ್ಲಿ ಸಿಪಿಎಂನ ಅತೀ ದೊಡ್ಡ ಶಕ್ತಿ ಕೇಂದ್ರವಾಗಿದೆ. ಪ್ರಾಧ್ಯಾಪಕನ ಕೈ ಕತ್ತರಿಸಿದ …

ಕೂಡ್ಲು ಶಾಲಾ ಪ್ರತಿಭೆಗಳಿಗೆ ಗೌರವಾರ್ಪಣೆ

ರಾಮದಾಸ ನಗರ: ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಶಾಲಾ ಕಲೋ ತ್ಸವದಲ್ಲಿ ಸಂಸ್ಕೃತ ವಿಭಾಗದ ಚಂಪು ಪ್ರಭಾಷಣ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ಶಿವಾನಿ ಕೂಡ್ಲು ಹಾಗೂ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ವೈಷ್ಣವಿ ಬಿ ಎಸ್ ಇವರಿಗೆ ಕೂಡ್ಲು ಶಾಲಾ ವತಿಯಿಂದ ಗೌರ ವಾರ್ಪಣೆ ನಡೆಸಲಾಯಿತು. ಮುಖ್ಯೋ ಪಾಧ್ಯಾಯ ಶ್ರೀಹರಿ ಗೌರವಿಸಿದರು. ಶಾಲಾ ಕಲೋತ್ಸವದ ಸಂಚಾಲಕರಾದ ಶ್ರೀಲತಾ, ರಾಜಶ್ರೀ, ಹರ್ಷಿತ ಹಾಗು ಸಂಸ್ಕೃತ ಕಲೋತ್ಸವದ ಸಂಚಾಲಕ ಮುರಳಿಧರ ಶರ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿರಿಯ …

ಬಾಳಿಯೂರು ಮುಹಿಯದ್ದೀನ್  ಜುಮಾ ಮಸೀದಿ ಉದ್ಘಾಟನೆ ೧೪ರಿಂದ

ಮೀಯಪದವು: ಬಾಳಿಯೂರು ಮುಹಿಯದ್ದೀನ್ ಜುಮಾ ಮಸೀದಿಯ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ, ಮೂರು ದಿನಗಳ ಧಾರ್ಮಿಕ ಪ್ರವಚನ ಈ ತಿಂಗಳ ೧೪ರಂದು ಆರಂಭಗೊಳ್ಳಲಿದೆ. ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸು ವರು. ಕೆ.ಎಸ್. ಆಲಿ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು. ಬದರ್ ಮೌಲೀದ್ ಪಾರಾಯಣಕ್ಕೆ ಕುರತ್ತು ಸಾರತ್ ಫಸಲ್ ಕೋಯಮ್ಮ ತಂಙಳ್ ನೇತೃತ್ವ ನೀಡುವರು. ಸೌಹಾರ್ದ ಸಂಗಮವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, …

ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ಬಂಧಿತ ಹೆಸರು ಬದಲಾಯಿಸಿ ಕಾಸರಗೋಡಿನಲ್ಲೂ ವಾಸಿಸಿ ಮಂಜೇಶ್ವರದ ಯುವತಿಯನ್ನು ಮದುವೆಯಾಗಿದ್ದ

ಎರ್ನಾಕುಳಂ: ೨೦೧೦ ಜುಲೈ ೪ರಂದು ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫರ ಕೈ ತುಂಡರಿಸಿದ ಪ್ರಕರಣದ ಪ್ರಧಾನ ಸೂತ್ರಧಾರ ನಿಷೇಧಿತ ಪೋಪ್ಯುಲರ್ ಫ್ರಂಟ್ ಕಾರ್ಯಕರ್ತ ಪೆರುಂಬಾವೂರು ಅಶವನ್ನೂರ್ ನುಲೇಲಿ ನಿವಾಸಿ ಮುಟ್ಟಶ್ಶೇರಿ ಸವಾದ್ (೩೮) ಈ ಹಿಂದೆ ಕಾಸರಗೋಡಿನಲ್ಲೂ ತಲೆಮರೆಸಿಕೊಂಡು ಜೀವಿಸಿದ್ದನೆಂದು ಆತನನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಾಹಿತಿ ಲಭಿಸಿದೆ. ಬಂಧಿತನನ್ನು ಎನ್‌ಐಎ ಎರ್ನಾ ಕುಳಂನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ಜನವರಿ ೨೪ರ …