ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಳ್ಳಿಯಿಲ್‌ವೀಡ್ ನಿಧನ

ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಲ್ಲೂರು ನಿವಾಸಿ ವಿನೋದ್ ಕುಮಾರ್ ಪಳ್ಳಿಯಿಲ್‌ವೀಡ್ (೫೮) ನಿಧನಹೊಂದಿದರು. ಇಂದು ಬೆಳಿಗ್ಗೆ ಮನೆಯಲ್ಲಿ ಕುಸಿದುಬಿದ್ದ ವಿನೋದ್ ಕುಮಾರ್ ರನ್ನು ತಕ್ಷಣ ಮಾವುಂಗಾಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇವರು ಶಬರಿಮಲೆ ವ್ರತಧಾರಿಯಾಗಿದ್ದು, ಈ ತಿಂಗಳ ೧೮ರಂದು ಶಬರಿಮಲೆಗೆ ತೆರಳಲು ಅ ಗತ್ಯದ ತಯಾರಿಯಲ್ಲಿ ತೊಡಗಿದ್ದರು. ವಿನೋದ್ ಕುಮಾರ್ ಈ ಹಿಂದೆ ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸಿದ್ದರು. …

ಪ್ರಧಾನಮಂತ್ರಿ ಸಂದರ್ಶನ: ಜ. ೧೭ರಂದು ಗುರುವಾಯೂರು ಕ್ಷೇತ್ರದಲ್ಲಿ ಮೂರು ತಾಸುಗಳ ತನಕ ತುಲಾಭಾರ, ಸೇವೆ ಸ್ಥಗಿತ

ಗುರುವಾಯೂರು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಜನವರಿ ೧೭ರಂದು ಗುರುವಾಯೂರು ಕ್ಷೇತ್ರ ಸಂದರ್ಶಿಸಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅಂದು ಬೆಳಿಗ್ಗೆ ೫ ಗಂಟೆಯಿದ ಆರಂಭಗೊಳ್ಳಲಿರುವ ವಿವಿಧ ಹರಕೆಗಳು, ತುಲಾಭಾರಸೇವೆ, ಅನ್ನಪ್ರಾಶನ ಇತ್ಯಾದಿ ಗಳನ್ನು ಬೆಳಿಗ್ಗೆ ೬ ಗಂಟೆಗೆ ತಾತ್ಕಾಲಿಕ ನಿಲುಗಡೆಗೊಳಿಸ ಲಾಗುವುದು. ಪ್ರಧಾನಿಯವರ ಕ್ಷೇತ್ರ ಸಂದರ್ಶನದ ಬಳಿಕ ಬೆಳಿಗ್ಗೆ ೯ ಗಂಟೆ ನಂತರ ನಿಲುಗಡೆಗೊಳಿಸಲಾಗಿರುವ ಎಲ್ಲಾ ಸೇವೆಗಳು ಪುನರಾರಂಭ ಗೊಳ್ಳುವ ರೀತಿಯ ಕ್ರಮಗಳು ಕ್ರಮೀಕರಿಸಲಾಗಿದೆ. ಜನವರಿ ೧೭ರಂದು ಗುರುವಾ ಯೂರು ಕ್ಷೇತ್ರದಲ್ಲಿ ೬೬ ಮದು ವೆಗಳಿಗೆ ಹೆಸರು ನೋಂದಾಯಿಸಲಾಗಿದೆ. ಇದರಂತೆ …

ಸೌದಿಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಇಂದು ಊರಿಗೆ

ಬದಿಯಡ್ಕ: ಹತ್ತು ದಿನ ಗಳ ಹಿಂದೆ ಸೌದಿ ಅರೇಬಿ ಯಾದಲ್ಲಿ ಮೃತಪಟ್ಟ ಅಗಲ್ಪಾಡಿ ಪಂಜರಿಕೆಯ ನಾರಾಯಣ ಮಣಿಯಾಣಿ (೬೦)ಯವರ ಮೃತದೇಹವನ್ನು ಇಂದು ಅಪರಾಹ್ನ ಮನೆಗೆ ತಲುಪಿಸಲಾಗುವುದು. ಮೃತದೇಹವನ್ನು ಮಧ್ಯಾಹ್ನ ವೇಳೆ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ತಲುಪಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಹೃದಯ ಸಂಬಂಧ ಅಸೌಖ್ಯ ಬಾಧಿಸಿ ನಾರಾಯಣ ಮಣಿಯಾಣಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಐದು ವರ್ಷಗಳಿಂದ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  ಮೃತರು ಪತ್ನಿ ಯಶೋಧ, ಮಕ್ಕಳಾದ ಪೂರ್ಣಿಮ, ಅಪೂರ್ವ, ಅನಿಲ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಾಹನ ಅಪಘಾತದಲ್ಲಿ ಸಂಬಂಧಿಕರಾದ ಇಬ್ಬರು ಮೃತಪಟ್ಟ ಘಟನೆ: ನಾಡಿನಲ್ಲಿ ಶೋಕಸಾಗರ

ಕಾಸರಗೋಡು: ಕುಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು  ಸಂಭವಿಸಿದ ಅಪಘಾತ ದಲ್ಲಿ ಸಂಬಂಧಿಕರಾದ ಇಬ್ಬರು ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಚಟ್ಟಂಚಾಲ್ ತೈರ ಮನ್ಯಂ ತಾಳತ್ತ್ ವೀಟಿಲ್ ಎಂ. ನಾರಾಯಣನ್ ನಾಯರ್-ಮಣಿ ದಂಪತಿಯ ಪುತ್ರ ಎಂ. ಗೋಪಾಲಕೃಷ್ಣನ್ ( ೫೫) ಹಾಗೂ ಇವರ ಸಹೋದರಿ ರುಕ್ಮಿಣಿಯ ಪತಿ ಪರವನಡ್ಕ ತಲಕ್ಲಾಯಿ ನಿವಾಸಿ ಸಿಪಿಸಿಆರ್‌ಐಯ ನಿವೃತ್ತ ಉದ್ಯೋಗಿಯಾದ ಪುದುಚ್ಚೇರಿ ನಾರಾಯಣನ್ ನಾಯರ್ (೬೮) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.  ರಸ್ತೆಯಲ್ಲಿ …

ರಾಹುಲ್ ಮಾಕ್ಕೂಟ್ ನ್ಯಾಯಾಂಗ ಬಂಧನದಲ್ಲಿ: ಯೂತ್ ಕಾಂಗ್ರೆಸ್‌ನಿಂದ ಸೆಕ್ರೆಟರಿಯೇಟ್ ಮಾರ್ಚ್

ತಿರುವನಂತಪುರ: ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಳೆದ ತಿಂಗಳು ಸೆಕ್ರೆಟರಿಯೇಟ್ ಮಾರ್ಚ್ ನಡೆಸಿದುದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಂತೆ ನಿನ್ನೆ ಪೊಲೀಸರು ಬಂಧಿಸಿದ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕ್ಕೂಟ್‌ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ರಾಹುಲ್‌ರ ಬಂಧನವನ್ನು ಪ್ರತಿಭಟಿಸಿ ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಸೆಕ್ರೆಟರಿಯೇಟ್ ಮಾರ್ಚ್ ನಡೆಸಲಾಯಿತು. ಸಂಜೆ ೬ ಗಂಟೆಗೆ ಪೊಲೀಸ್ ಠಾಣೆಗೂ ಪ್ರತಿಭಟನಾ ಮಾರ್ಚ್ ನಡೆಸುವ ತೀರ್ಮಾನವನ್ನು ಕಾಂಗ್ರೆಸ್ ಕೈಗೊಂಡಿದೆ.

ಸೋಂಕಾಲು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಜಂಕ್ಷನ್‌ನಲ್ಲಿ ವಾಹನ ಅಪಘಾತಗಳು ವ್ಯಾಪಕಗೊಳ್ಳುತ್ತಿರುವುದು ಊರವರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಭಾನುವಾರ ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಕುಳೂರು ಉಮಿಕಳ ನಿವಾಸಿ ಮೊಹಮ್ಮದ್ ಹನೀಫ್ ಮೃತಪಟ್ಟಿದ್ದಲ್ಲದೆ.ಈ ಹಿಂದೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಪುಳಿಕುತ್ತಿಯಲ್ಲಿ ವಾಸವಾಗಿರುವ ವೆಂಕಟ್ರಮಣ ಆಚಾರ್ಯ ಹಾಗೂ ಸ್ಕೂಟರ್ ಕಾರು ಡಿಕ್ಕಿಯಾಗಿ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಸಣ್ಣಪುಟ್ಟ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಾಲಿನಿAದ ಕೊಡಂಗೆ-ಪ್ರತಾಪನಗರ ರಸ್ತೆಗೆ ಸಂಗಮಿಸುವ ಪರಿಸರದಲ್ಲಿ ಹಂಪ್ ಸ್ಥಾಪಿಸಿ …

ಭಾರತೀಯ ರಾಜ್ಯ ಪಿಂಚಣಿದಾರರ ಮಹಾಸಂಘ ಸಮ್ಮೇಳನ: ಸ್ವಾಗತಸಮಿತಿ ಕಚೇರಿ ಉದ್ಘಾಟನೆ

ಕಾಸರಗೋಡು: ಕಾಸg ಗೋಡಿನಲ್ಲಿ ನಡೆಯಲಿರುವ ಭಾರತೀಯ ರಾಜ್ಯ ಪಿಂಚಣಿದಾರರ ಮಹಾಸಂಘ ಸಮ್ಮೇಳನದ ಸ್ವಾಗತಸಮಿತಿ ಕಚೇರಿ ಉದ್ಘಾಟನೆ ಯನ್ನು ಕರಿಂದಳಂ ರಾಜಗೋ ಪಾಲ್ ನೆರವೇರಿಸಿದರು. ಈ ವೇಳೆ ದಯಾನಂದ, ಎಂ. ಬಾಲಕೃಷ್ಣ, ಕೆ. ಬಾಲಕೃಷ್ಣ, ಜಯೇಂದ್ರ ಸಿ.ಎಚ್, ಸಿ.ಎಚ್. ದಿನೇಶ್, ಸದಾನಂದ, ರಾಮಚಂದ್ರ, ಸಿ.ಕೆ. ಉಮಾದೇವಿ, ಬಿ. ಅಭಿ, ಮಾಧವನ್ ನಾಯರ್, ಸಿ.ಕೆ. ರವೀಂದ್ರನ್, ಅಂಬಾಡಿ, ಕುಂಞಿಕಣ್ಣನ್, ಕುಂಞಂಬು, ಬಿ. ಬಾಲಚಂದ್ರ, ಬಾಲಕೃಷ್ಣನ್, ಸುರೇಂದ್ರನ್ ಸಹಿತ ಹಲವರು ಭಾಗವಹಿಸಿದರು. ಈ ತಿಂಗಳ ೨೮ರಿಂದ ೩೦ರವರೆಗೆ ಸಮ್ಮೇಳನ ನಡೆಯಲಿದೆ.

‘ಮನೆಯಿಂದ ಲಭಿಸುವ ಸಂಸ್ಕಾರದಿಂದ ಮಕ್ಕಳು ಸತ್ಪ್ರಜೆಗಳಾಗಿ ರೂಪು’

ಕಾಸರಗೋಡು: ಮನೆಯಿಂದ ಲಭಿಸುವ ಸಂಸ್ಕಾರದಿಂದ ಮಕ್ಕಳು ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಸದ್ಭಾವನೆಗಳ ಬೀಜಗಳನ್ನು ಬಿತ್ತಿ ಮಕ್ಕಳನ್ನು ಬೆಳೆಸಬೇಕೆಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಸವಿತಾ ಟೀಚರ್ ನುಡಿದರು. ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ೮ನೇ ವಾರ್ಷಿಕದಂಗವಾಗಿ ಹಮ್ಮಿಕೊಂಡ ಮಾತೃಪೂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲಗೋಕುಲದ ಅಧ್ಯಕ್ಷ ಪ್ರಕಾಶ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಪ್ರಾಂತ್ಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬಿಯಾರ್ ಬೌದ್ಧಿಕ್ ನೀಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್, ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದರು. ಬಾಲಗೋಕುಲ …

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನ ನಕಲಿ ನ್ಯಾಯಾಧೀಶ ಸೆರೆ

ಕಾಸರಗೋಡು: ನ್ಯಾಯಾಧೀಶ ಎಂದು ನಂಬಿಸಿ ಪೊಲೀಸರನ್ನು ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಹಲವು ಪ್ರಕರಣಗಳ ಆರೋಪಿಯಾಗಿರುವ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ತಿರುವನಂತಪುರ ತೇನ್ನಲ ನಿವಾಸಿ ಶಮ್ನಾದ್ (೪೨) ಈ ರೀತಿ ಬಂಧಿತನಾದ ನಕಲಿ ನ್ಯಾಯಾಧೀಶ. ನೀಲೇಶ್ವರ ಪೊಲೀಸ್ ಠಾಣೆಗೆ ನಿನ್ನೆ ರಾತ್ರಿ ಸುಮಾರು ೧೦.೩೦ರ ವೇಳೆಗೆ ಪೊಲೀಸ್ ಇಲಾಖೆಯ ಡಿ.ಸಿ.ಆರ್.ಬಿ ವಿಭಾಗ ದಿಂದ ಇದು ಕರೆಯುತ್ತಿರುವುದಾಗಿ ಹೇಳಿ ಫೋನ್ ಕರೆ ಬಂದಿದೆ. ಪತ್ತನಂತಿಟ್ಟದ ನ್ಯಾಯಾಧೀಶ ತಮ್ಮ ಕಾರು ದಾರಿಯಲ್ಲಿ ಕೈಕೊಟ್ಟು ಅವರು ರಸ್ತೆಯಲ್ಲೇ ಉಳಿದು ಕೊಂಡಿದ್ದಾರೆ. ರಾತ್ರಿ ಉಳಿದುಕೊಳ್ಳಲು ಅವರಿಗೆ …

ಎಡನೀರು: ಐದನೇ ತರಗತಿ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು

ಎಡನೀರು: ಶಾಲಾ ವಿದ್ಯಾರ್ಥಿ ನಿಯೋರ್ವೆ ಅಸೌಖ್ಯ ಬಾಧಿಸಿ ಚಿಕಿತ್ಸೆ ಮಧ್ಯೆ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಎಡನೀರು ನಿವಾಸಿಯೂ, ಪ್ರಸ್ತುತ ಪಾಡಿಯಲ್ಲಿ ವಾಸಿಸುತ್ತಿರುವ ಅರವಿಂದ ಭಟ್ ಎಂಬವರ   ಪುತ್ರಿ  ಜಾಹ್ನವಿ (೧೦) ಮೃತಪಟ್ಟ ಬಾಲಕಿಯಾಗಿದ್ದಾಳೆ.  ಈಕೆ ಎಡನೀರು ಸ್ವಾಮೀಜೀಸ್   ಹೈಯರ್ ಸೆಕೆಂಡರಿ ಶಾಲೆಯ ೫ನೇ ತರಗತಿ  ವಿದ್ಯಾರ್ಥಿನಿಯಾಗಿದ್ದಾಳೆ. ಎಡನೀರು ಜಿಎಚ್‌ಎಸ್‌ನ ಹಳೆ ವಿದ್ಯಾರ್ಥಿನಿಯೂ ಆಗಿದ್ದಾಳೆ.  ಈಕೆಗೆ ತಿಂಗಳುಗಳ ಹಿಂದೆ ಅಸೌಖ್ಯ ಬಾಧಿಸಿ ತ್ತೆನ್ನಲಾಗಿದೆ. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ೩ ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಅನಂತರ ವೈದ್ಯರ …