ಪ್ರಧಾನಮಂತ್ರಿ ಸಂದರ್ಶನ: ಜ. ೧೭ರಂದು ಗುರುವಾಯೂರು ಕ್ಷೇತ್ರದಲ್ಲಿ ಮೂರು ತಾಸುಗಳ ತನಕ ತುಲಾಭಾರ, ಸೇವೆ ಸ್ಥಗಿತ

ಗುರುವಾಯೂರು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಜನವರಿ ೧೭ರಂದು ಗುರುವಾಯೂರು ಕ್ಷೇತ್ರ ಸಂದರ್ಶಿಸಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅಂದು ಬೆಳಿಗ್ಗೆ ೫ ಗಂಟೆಯಿದ ಆರಂಭಗೊಳ್ಳಲಿರುವ ವಿವಿಧ ಹರಕೆಗಳು, ತುಲಾಭಾರಸೇವೆ, ಅನ್ನಪ್ರಾಶನ ಇತ್ಯಾದಿ ಗಳನ್ನು ಬೆಳಿಗ್ಗೆ ೬ ಗಂಟೆಗೆ ತಾತ್ಕಾಲಿಕ ನಿಲುಗಡೆಗೊಳಿಸ ಲಾಗುವುದು. ಪ್ರಧಾನಿಯವರ ಕ್ಷೇತ್ರ ಸಂದರ್ಶನದ ಬಳಿಕ ಬೆಳಿಗ್ಗೆ ೯ ಗಂಟೆ ನಂತರ ನಿಲುಗಡೆಗೊಳಿಸಲಾಗಿರುವ ಎಲ್ಲಾ ಸೇವೆಗಳು ಪುನರಾರಂಭ ಗೊಳ್ಳುವ ರೀತಿಯ ಕ್ರಮಗಳು ಕ್ರಮೀಕರಿಸಲಾಗಿದೆ.

ಜನವರಿ ೧೭ರಂದು ಗುರುವಾ ಯೂರು ಕ್ಷೇತ್ರದಲ್ಲಿ ೬೬ ಮದು ವೆಗಳಿಗೆ ಹೆಸರು ನೋಂದಾಯಿಸಲಾಗಿದೆ. ಇದರಂತೆ ಅಂದು ಬೆಳಿಗ್ಗೆ ೭ರಿಂದ ೧೧ ಗಂಟೆಯೊಳಗಾಗಿ ಈ ಮದುವೆ ಕಾರ್ಯಕ್ರಮಗಳು ನಡೆಯಬೇಕಾ ಗಿದೆ. ಪ್ರಧಾನಿಯವರ ಸಂದರ್ಶನದಿಂ ದಾಗಿ ಈ ಎಲ್ಲಾ  ಮದುವೆ ಕಾರ್ಯಕ್ರಮ ಗಳನ್ನು ಅಂದು ಬೆಳಿಗ್ಗೆ ೭ ಗಂಟೆಯ ಮೊದಲೇ ಪೂರ್ಣ ಗೊಳಿಸುವ ತೀರ್ಮಾನಕ್ಕೆ ಮುಜರಾಯಿ ಮಂಡಳಿ ಬಂದಿದೆ. ಗುರುವಾಯೂರು ಕ್ಷೇತ್ರದಲ್ಲಿ ಈ ವರ್ಷದ ಮೊದಲ ಉದಯಾ ಸ್ತಮಾನ ಸೇವೆ ಆರಂಭಗೊಳ್ಳುವ ದಿನವೂ ಜನವರಿ ೧೭ ಆಗಿದೆ. ಅದರಂತೆ ಈ ಸೇವೆ ಅಂದು ಬೆಳಿಗ್ಗೆ ೭ ಗಂಟೆಗೆ ಆರಂಭಗೊಳ್ಳಲಿದೆ. ಪ್ರಧಾನಮಂತ್ರಿಯವರು ಬೆಳಿಗ್ಗೆ ೮ ಗಂಟೆಗೆ ಕ್ಷೇತ್ರ ಸಂದರ್ಶಿಸುವರು. ಆದ್ದರಿಂದ ಆ ವೇಳೆ ಈ ಸೇವೆಗಳನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿ, ಪ್ರಧಾನಮಂತ್ರಿ ಯವರ ದರ್ಶನದ ಬಳಿಕ ಪುನರಾರಂಭಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page