ಉದ್ಯಾವರದಲ್ಲಿ ದುಬೈ ಸಮಿತಿಯಿಂದ ರಕ್ತದಾನ ಶಿಬಿರ

ಮಂಜೇಶ್ವರ : ಉದ್ಯಾವರ ದುಬೈ ಕಮಿಟಿ ಹಾಗೂ ಸ್ಟೋರ್ಟಿಂಗ್ ಉದ್ಯಾವರ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ಕೆ ಎಂ ಸಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಉದ್ಯಾವರ ಕೇಂದ್ರ ಮಹಲ್ ಮದ್ರಸದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರು. ಉದ್ಯಾವರ ಸಾವಿರ ಜಮಾಯತ್ ಖತೀಬ್ ಅಬ್ದುಲ್ ಕರೀಂ ದಾರಿಮಿ ಪ್ರಾರ್ಥನೆ ಗೈದರು. ಜಮಾಯತ್ ಮುದರಿಸ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ ಖಾದರ್ ಫೈಜಿ, ಮುಕ್ತಾರ್ …

ಪತ್ನಿ ಪ್ರಿಯತಮನೊಂದಿಗೆ ಪರಾರಿ: ಪತಿಯಿಂದ ಪ್ರಿಯತಮನ ತಾಯಿಯ ಕೊಲೆ

ಆಲಪ್ಪುಳ: ಪತ್ನಿಯೊಂದಿಗೆ ಪರಾರಿಯಾದ ಪ್ರಿಯತಮನ ತಾಯಿಯನ್ನು ತಲೆಗೆ ಹೊಡೆದು ಕೊಂದು ಪತಿ ಪ್ರತಿಕಾರಗೈದ ಘಟನೆ ನಡೆದಿದೆ. ಆಲಪ್ಪುಳ ಪುನ್ನಪ್ರ ವಾಡೈಕಲ್ ದಿ| ಬಾಬುರ ಪತ್ನಿ ಪ್ರಸನ್ನ (೬೪) ಕೊಲೆಗೀಡಾದವರು. ಆರೋಪಿ ಸುಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಬ್ಬಿಣದ ಸಲಾಖೆಯಿಂದ ಪ್ರಸನ್ನರ ತಲೆಗೆ ಹೊಡೆದು ಕೊಲೆಗೈಯ್ಯಲಾಗಿತ್ತು. ಸುಧಿಯ ಪತ್ನಿ ಹಾಗೂ ಪ್ರಸನ್ನರ ಪುತ್ರ ವಿನೀಸ್ ಮಧ್ಯೆ ಪ್ರೇಮವಿದ್ದು, ಯುವತಿಯನ್ನು ಈತ ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಪ್ರತಿಕಾರವಾಗಿ ಸುಧಿ ವಿನೀಸ್‌ನ ಮನೆಗೆ ತಲುಪಿದ್ದು, ವಾಗ್ವಾದದ ಬಳಿಕ ತಲೆಗೆ ಬಡಿದು ಕೊಲೆಗೈದಿದ್ದನೆನ್ನಲಾಗಿದೆ. …

ಕುಂಟಿಕಾನ ಮಠದಲ್ಲಿ ಶತ ರುದ್ರಾಭಿಷೇಕ, ಭಜನೆ

ಬದಿಯಡ್ಕ: ನೀರ್ಚಾಲು ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜಾ ಮಹೋತ್ಸವದ ಪ್ರಯುಕ್ತ ಶ್ರೀದೇವರಿಗೆ ಶತರುದ್ರಾಭಿಷೇಕ ನಡೆಯಿತು. ಇದೇ ಸಂದರ್ಭದಲ್ಲಿ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಮಹಿಳಾ ಭಜನಾ ಮಂಡಳಿ ಇವರಿಂದ ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಶ್ರೀಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಅನ್ನಪೂರ್ಣೇಶ್ವರೀ ಗುಡಿ, ಗರ್ಭಗುಡಿ, ನಮಸ್ಕಾರ ಮಂಟಪದ ಕೆಲಸ ಪೂರ್ಣಗೊಂಡಿದೆ. ಮಾಡಿಗೆ ತಾಮ್ರ ಅಳವಡಿಸಲಾಗಿದ್ದು, ರಾಜಾಂಗಣದ ಮುಂಭಾಗಕ್ಕೆ ಶಾಶ್ವತ ಚಪ್ಪರದ ಕೆಲಸ ಪ್ರಗತಿಯಲ್ಲಿದೆ.

ಪ್ರಧಾನಮಂತ್ರಿ ಇಂದು ತೃಶೂರಿಗೆ

ತೃಶೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತೃಶೂರಿಗೆ ಆಗಮಿಸಲಿದ್ದು, ಬಿಜೆಪಿ ಹಾಗೂ ಮಹಿಳಾಮೋರ್ಚಾ ಹಮ್ಮಿ ಕೊಂಡ ರೋಡ್ ಶೋ ಮತ್ತು ಮಹಿಳಾ ಸಮ್ಮೇಳನದಲ್ಲಿ ಭಾಗವಹಿ ಸುವರು. ಅಪರಾಹ್ನ ೨ ಗಂಟೆಗೆ ಕುಟ್ಟನೆಲ್ಲೂರ್ ಹೆಲಿಪ್ಪಾಡ್‌ನಲ್ಲಿ ಇಳಿಯುವ ಪ್ರಧಾನಮಂತ್ರಿಯವರನ್ನು ಜಿಲ್ಲಾಧಿಕಾರಿ ವಿ.ಆರ್. ಕೃಷ್ಣತೇಜ ಸ್ವಾಗತಿಸುವರು. ಬಳಿಕ ಕಾರಿನಲ್ಲಿ  ತೃಶೂರಿಗೆ ತೆರಳುವ ಅವರನ್ನು ಬಿಜೆಪಿ ರಾಷ್ಟ್ರೀಯ, ರಾಜ್ಯ ನೇತಾರರು ಸ್ವಾಗತಿಸುವರು. ಜಿಲ್ಲಾ ಜನರಲ್ ಆಸ್ಪತ್ರೆಯ ಮುಂಭಾಗದಿಂದ ರೋಡ್ ಶೋ ಆರಂಭಗೊಳ್ಳಲಿದೆ. ಅಪರಾಹ್ನ ೩ ಗಂಟೆಗೆ ತೆಕ್ಕಿಲ್‌ಕಾಡ್ ಮೈದಾನದಲ್ಲಿ ೨ ಲಕ್ಷ ಮಹಿಳೆಯರು …

ಶಾಲಾ ವಿದ್ಯಾರ್ಥಿಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದು ಕಿರುಕುಳ: ಕೇಸು ದಾಖಲು

ಬದಿಯಡ್ಕ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನನ್ನು ಸ್ಕೂಟರ್ ನಲ್ಲಿ ಕರೆದೊಯ್ದು ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ೧೬ರ ಹರೆ ಯದ ಬಾಲಕ ನೀಡಿದ ದೂರಿನಂತೆ ಕಂಡರೆ ಪತ್ತೆಹಚ್ಚಬಹುದಾದ ಓರ್ವನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನ್ನು ಸ್ಕೂಟರ್‌ನಲ್ಲಿ  ಕರೆದೊಯ್ದು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

ಬಸ್ ಪ್ರಯಾಣ ವೇಳೆ ಬಾಲಕಿಯ ದಿಟ್ಟಿಸಿ ನೋಡಿದ ಮಧ್ಯವಯಸ್ಕ: ಪೊಲೀಸರಿಗೆ ಹಸ್ತಾಂತರ

ಕುಂಬಳೆ: ತಾಯಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೧೪ರ ಹರೆಯದ ಬಾಲಕಿಯನ್ನು ದಿಟ್ಟಿಸಿ ನೋಡಿದ ಮಧ್ಯವಯಸ್ಕನನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಬಳಿಕ ಸಂಬಂಧಿಕರನ್ನು ಕರೆಸಿದ ಪೊಲೀಸರು ಆರೋಪಕ್ಕೆಡೆಯಾದ  ವ್ಯಕ್ತಿಗೆ ಚಿಕಿತ್ಸೆಗೊಳಪಡಿಸಲಾಯಿತು. ಕುಂಬಳೆಯಿಂದ ಪೆರ್ಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮಧ್ಯವಯ ಸ್ಕನಾದ ಪ್ರಯಾಣಿಕನ ಉಪಟಳ ಸಹಿಸಲಾಗದೆ ಬಾಲಕಿ ಬಸ್‌ನೊಳಗೆ ಬೊಬ್ಬಿಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಬಸ್ ಸೀತಾಂಗೋಳಿಗೆ ತಲುಪಿದಾಗ ಪೊಲೀಸ್ ಸಹಾಯ ಕೇಂದ್ರದಲ್ಲಿ ವಿಷಯ ತಿಳಿಸಿ ಆರೋಪಕ್ಕೆಡೆಯಾದ ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಬಳಿಕ ಇನ್‌ಸ್ಪೆಕ್ಟರ್ ಇ. ಅನೂಪ್ ಸ್ಥಳಕ್ಕೆ …

ಖಾಸಗಿ ಶಾಲೆಯ ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ: ತಪ್ಪಿದ ಭಾರೀ ದುರಂತ

ಮಧೂರು:  ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಯ ವ್ಯಾನ್ ಅಪಘಾತಕ್ಕೀ ಡಾಯಿತು. ಕೋಳಿಯಡ್ಕಂ ಅಪ್ಸರ ಶಾಲೆಯ ವ್ಯಾನ್ ಅಪಘಾತಕ್ಕೀಡಾ ಗಿದೆ. ಇಂದು ಬೆಳಿಗ್ಗೆ ಎಂಟೂವರೆಗೆ ಮಧೂರು, ಕುಂಜಾರ್ ಕೊರತ್ತಿಕುಂಡ್‌ನಲ್ಲಿ ಅಪಘಾತ ಸಂಭವಿಸಿದೆ. ಹನಿ ಮಳೆಗೆ ನಿಯಂತ್ರಣ ತಪ್ಪಿದ ವ್ಯಾನ್ ರಸ್ತೆ ಬದಿಯ ಹೊಂಡದತ್ತ ಚಲಿಸಿದೆ. ಈ ವೇಳೆ ಅಲ್ಲಿದ್ದ ಅಕೇಶಿಯಾ ಮರಕ್ಕೆ ಢಿಕ್ಕಿ ಹೊಡೆದು ನಿಂತ ಕಾರಣ ಭಾರೀ ದುರಂತ ತಪ್ಪಿದೆ. ಅಪಘಾತದಿಂದ ೧೨ರಷ್ಟು ಮಕ್ಕಳಿಗೆ ಸಣ್ಣಪುಟ್ಟ ಗಾಯ ಉಂಟಾಗಿದೆ. ಇವರಿಗೆ ವಿದ್ಯಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

ಸರಣಿ ವಾಹನ ಅಪಘಾತ: ಮಕ್ಕಳು ಸೇರಿ ೧೦ ಮಂದಿಗೆ ಗಾಯ

ಕಾಸರಗೋಡು: ಮೂರೆಡೆಗಳಲ್ಲಾಗಿ ನಡೆದ ವಾಹನ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಹತ್ತು ಮಂದಿ ಗಾಯಗೊಂಡ ಘಟನೆಗಳು ನಡೆದಿವೆ. ಪೊಯಿನಾಚಿಗೆ ಸಮೀಪದ ಕಲ್ಲಾಳಿ ಮುನಬಂ ಬಸ್ ತಂಗುದಾಣದ ಬಳಿ ನಿನ್ನೆ ಮಧ್ಯಾಹ್ನ ಜೀಪೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಬೇಕಲ ಶಿಕ್ಷಣ ಉಪಜಿಲ್ಲೆಯ ನಿವೃತ್ತ ಶಿಕ್ಷಣ ಅಧಿಕಾರಿ ಕಲ್ಲಳಿ ಕುಂಬಳಂಪಾರೆಯ ಕೆ. ಶ್ರೀಧರನ್ (೫೭) ಅವರ ಮಗ ಮತ್ತು ಸಂಬಂಧಿಕರಾದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಟ್ಟಂಚಾಲ್- ದೇಳಿ …

ಶಬರಿಮಲೆಗೆ ಹರಿದು ಬರುತ್ತಿದೆ ಭಕ್ತರ ಮಹಾಪ್ರವಾಹ: ತಲೆಯೆತ್ತಿದ ಭದ್ರತಾ ಸಮಸ್ಯೆ

ಶಬರಿಮಲೆ: ಶಬರಿಮಲೆಗೆ ಹರಿದು ಬರುತ್ತಿರುವ ತೀರ್ಥಾಟಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಿಂದಾಗಿ ಜನವರಿ ೧೦ರಿಂದ ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ಪೂರ್ಣವಾಗಿ ಹೊರತುಪಡಿಸಲಾ ಗಿದೆ. ಇದರಂತೆ ಪಂಪಾ ಸೇರಿದಂತೆ ಮುಜರಾಯಿ ಮಂಡಳಿಯ ಯಾವುದೇ ಕೇಂದ್ರಗಳಲ್ಲಿ ಸ್ಪೋಟ್ ಬುಕ್ಕಿಂಗ್ ಜ. ೧೦ರಿಂದ ಇರದು. ಮಾತ್ರವಲ್ಲ, ಜನವರಿ ೧೪ ಮತ್ತು ೧೫ರಂದುವರ್ಚುವಲ್ ಕ್ಯೂ ಮಿತಿಯನ್ನೂ ಕಡಿತಗೊಳಿಸಲಾಗಿದೆ. ಸಾಧಾರಣವಾಗಿ ಮಕರಜ್ಯೋತಿಯ ಮೂರು ದಿನಗಳ ಮೊದಲು ಶಬರಿಮಲೆಗೆ ಆಗಮಿಸುವ ಭಕ್ತರು ಮಕರ ಜ್ಯೋತಿ ದರ್ಶನ ಹಾಗೂ ತಿರುವಾಭರಣ್ (ಶ್ರೀ ದೇವರ  ಚಿನ್ನದ ಒಡವೆ) …

ಬಿದ್ದು ಸಿಕ್ಕಿದ ಚಿನ್ನದ ಸರ ವಾರಸುದಾರರಿಗೆ ಹಸ್ತಾಂತರ: ಮಹಿಳೆಯ ಪ್ರಾಮಾಣಿಕತೆಗೆ ಮೆಚ್ಚುಗೆ

ಕುಂಬಳೆ: ಪೇಟೆಯಲ್ಲಿ ಬಿದ್ದು ಸಿಕ್ಕಿದ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಮಹಿಳೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೇರಾಲ್ ಕಣ್ಣೂರಿನ ಮುಜೀದ್‌ರ ಪತ್ನಿ ಆಯಿಶಾ ಮೆಚ್ಚುಗೆಗೆ ಪಾತ್ರರಾದ ಮಹಿಳೆಯಾಗಿದ್ದಾರೆ. ಈ ತಿಂಗಳ ೧ರಂದು ಮಧ್ಯಾಹ್ನ ಕುಂಬಳೆ ಪೇಟೆಯ ಮೀನು ಮಾರುಕಟ್ಟೆ ಬಳಿ ಆಯಿಶಾರಿಗೆ ಒಂದೂವರೆ ಪವನ್‌ನ ಚಿನ್ನದ ಸರ ಬಿದ್ದು ಸಿಕ್ಕಿತ್ತು. ಅದನ್ನು ಅವರು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಆದರೆ  ಅದರ ವಾರಸುದಾರರು ಯಾರೂ ಬಂದಿರ ಲಿಲ್ಲ. ಈ ಹಿನ್ನೆಲೆಯಲ್ಲಿ ಸರ ಬಿದ್ದು …