ಯುವ ಕೃಷಿಕನಿಗೆ ಬಿಜೆಪಿಯಿಂದ ಸನ್ಮಾನ

ಕಾಸರಗೋಡು: ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಬಿಜೆಪಿ ಹೊಸ ಹೆಜ್ಜೆ ಇರಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದ ಸ್ಮರಣಾರ್ಥ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಗರೀಕರಣ ವಿಪರೀತವಾಗುತ್ತಿರುವ ಈ ಕಾಲದಲ್ಲಿ  ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಬೀರಂತಬೈಲು ನಿವಾಸಿ ಯುವಕ ರಂಜಿತ್‌ರನ್ನು ಬಿಜೆಪಿ ಸನ್ಮಾನಿಸಿದೆ. ನಗರಸಮಿತಿ ವತಿಯಿಂದ ನಡೆದ ಕಾರ್ಯಕ್ರದಲ್ಲಿ ಬಿಜೆಪಿಯ ಪ್ರಮುಖರು ಭಾಗವಹಿಸಿದರು.

ಹೊಸ ವರ್ಷದ ಅಂಗವಾಗಿ ಮಾದಕ ವಸ್ತುಗಳ ತಪಾಸಣೆ ಬಿಗು: ಜಿಲ್ಲಾ ಮಟ್ಟದ ಜನಪರ ಸಮಿತಿ ಸಭೆ

ಕಾಸರಗೋಡು: ಹೊಸ ವರ್ಷದ ಅಂಗವಾಗಿ ನಕಲಿ ಮಧ್ಯ ಉತ್ಪಾದನೆ, ವಿತರಣೆ, ಮಾದಕ ವಸ್ತುಗಳ ಕಳ್ಳ ಸಾಗಣಿಕೆ, ಮಾದಕ ವಸ್ತುಗಳ ಉಪಯೋಗ ಹಾಗೂ ವಿತರಣೆ, ಅಕ್ರಮ ಮಧ್ಯ ಸಾಗಾಟ ಎಂಬಿವು ಗಳನ್ನು ತಡೆಯಲು ಅಬಕಾರಿ ಇಲಾ ಖೆಯು ತಪಾಸಣೆ ಬಿಗಿಗೊಳಿಸಿದೆ. ಈ ಕುರಿತು ಚರ್ಚಿಸಲು ಜಿಲ್ಲಾ ಮಟ್ಟದ ಜನ ಪರ ಕಮಿಟಿ ಸಭೆ ಎಡಿಎಂ ಕೆ.ನವೀನ್ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲೆಯ ಎಕ್ಸೈಸ್ ಇಲಾಖೆಯ ಡೆಪ್ಯೂಟಿ ಎಕ್ಸೈಸ್ ಕಮಿಷನರ್ ಪಿ.ಕೆ.ಜಯರಾಜ್ ರಿಪೋರ್ಟ್ ಮಂಡಿಸಿದರು. ಕ್ರಿಸ್ಮಸ್ ಹಾಗೂ ಹೊಸ …

ಮುಖ್ಯಮಂತ್ರಿಗೆ ಸಂಚಾರಿ ಕಚೇರಿ ಸೌಕರ್ಯ ಪರಿಗಣನೆಯಲ್ಲಿ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಔದ್ಯೋಗಿಕ ಯಾತ್ರೆಗಳ ವೇಳೆ ಅವರಿಗೆ ತಮ್ಮ ಕಚೇರಿಯ ಅಗತ್ಯದ ಕರ್ತವ್ಯಗಳನ್ನು ನಿರ್ವಹಿಸಲು ಸಂಚಾರಿ ಕಚೇರಿ ಸೌಕರ್ಯ ಏರ್ಪಡಿಸುವ ವಿಷಯ ಪರಿಗ ಣನೆಯಲ್ಲಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಗಾರಿಕೆ ಹೊಂದಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ಹೇಳಿದ್ದಾರೆ. ಆದರೆ  ಈ ವಿಷಯದಲ್ಲಿ ಅಂತಿಮ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗೆ ನೀಡಲಾಗುತ್ತಿರುವ ಬಿಗು ಭದ್ರತೆಯನ್ನು ಇನ್ನೂ ಮುಂದುವರಿಸಲಾಗುವುದು.

ಸಮಸ್ತದ ನೂರನೇ ವಾರ್ಷಿಕ ಘೋಷಣೆ ಸಮ್ಮೇಳನ ಇಂದು

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮದ ನೂರನೇ ವಾರ್ಷಿಕ ಘೋಷಣೆ ಸಮ್ಮೇಳನಕ್ಕೆ ಚಟ್ಟಂಚಾಲ್ ಮಾಲಿಕ್ ದಿನಾರ್ ನಗರದಲ್ಲಿ ಧ್ವಜಾರೋಹಣಗೊಂಡಿತು. ಈ ವೇಳೆ ಕೇರಳ ಮುಸ್ಲಿಂ ಜಮಾ ಯತ್‌ನ ರಾಜ್ಯ ಪ್ರಧಾನ ಕಾರ್ಯz ರ್ಶಿ ಇಬ್ರಾಹಿಮುಲ್ ಬುಖಾರಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹ್‌ಮಾನ್ ಸಖಾಫಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್  ಜಂಟಿಯಾಗಿ ಧ್ವಜಾರೋಹಣಗೈದರು. ಹಲವು ಗಣ್ಯರು ಭಾಗವಹಿಸಿದರು. ಸಾಂಸ್ಕೃತಿಕ ಸಮ್ಮೇಳನವನ್ನು ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದರು. ಇಂದು ಸಂಜೆ ೪ಕ್ಕೆ ಘೋಷಣೆ ಸಮ್ಮೇಳನ ಆರಂಭ ಗೊಳ್ಳಲಿದೆ. …

ಎನ್‌ಎಸ್‌ಎಸ್‌ನ ‘ಸ್ನೇಹಾರಾಮಂ’ ವಿಶ್ರಾಂತಿಕೇಂದ್ರ ಸಜ್ಜು

ಎಡನೀರು: ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಎನ್‌ಎಸ್‌ಎಸ್ ವಿದ್ಯಾರ್ಥಿ ಗಳು ಸಪ್ತದಿನ ಸಹವಾಸ ಕ್ಯಾಂಪ್‌ನ ಅಂಗವಾಗಿ ಚೇಡಿಕ್ಕಾನ ಬಸ್ ನಿಲ್ದಾಣ ಬಳಿಯಲ್ಲಿ ನಿರ್ಮಿಸುವ ‘ಸ್ನೇಹಾರಾಮಂ’ ಬೀದಿ ಬದಿ ವಿಶ್ರಮಕೇಂದ್ರ ನಿರ್ಮಾಣ ಅಂತಿಮ ಹಂತದಲ್ಲಿದೆ. ಜ. ೧ರಂದು ಈ ಕೇಂದ್ರವನ್ನು ಬದಿಯಡ್ಕ ಪಂ.ಗೆ ಹಸ್ತಾಂತರಿಸಲಾಗುವುದು.  ಪರಿಸರ ಸೌಹಾರ್ದವಾಗಿ ನಿರ್ಮಿಸುವ ಈ ಕೇಂದ್ರದ ಕೋ-ಆರ್ಡಿನೇಟರ್ ಶ್ರೀಜಾರ ಆಶಯವನ್ನು ತಂಡದ ನಾಯಕರಾದ ಶ್ರದ್ಧಾ, ವೈಶಾಕ್, ಅಖಿಲ, ಅಕ್ಷತ್, ನಿಯಾ, ಶಿವರ ಮೊದಲಾದವರು ಇದರ ವಿನ್ಯಾಸ ರೂಪಿಸಿದ್ದಾರೆ. ಬಿದಿರು, ಕಂಗು,  ತೆಂಗಿನ …

ಕೊಂಡೆವೂರಿನಲ್ಲಿ ಕೊರಗ ಸಮಾಜ ಸಂಗಮ ನಾಳೆ

ಉಪ್ಪಳ: ಕೊಂಡೆವೂರುಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಾಳೆ ಕಾಸರಗೋಡಿನ “ಕೊರಗ ಸಮಾಜ ಸಂಗಮ”ವನ್ನು ಆಯೋಜಿಸಲಾಗಿದೆ. ಉಪ್ಪಳದಿಂದ ಶೋಭಾಯಾತ್ರೆಯಲ್ಲಿ ಸಮಾಜ ಬಾಂಧವರು ಆಗಮಿಸಲಿದ್ದು ವಿವಿಧ ಸಮುದಾಯದ ಬಂಧುಗಳು ಅವರನ್ನು ಸ್ವಾಗತಿಸುವರು. 10.30 ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಸಮಾವೇಶವನ್ನು ಉದ್ಘಾಟಿಸುವರು. ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ, ಶಾಸಕ ಎ.ಕೆ.ಎಂ ಅಶ್ರಫ್, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಡಿ.ವೈ.ಎಸ್.ಪಿ ಸತೀಶ್, ಟಿ.ಡಿ.ಓ ಮಲ್ಲಿಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ …

ಎಂ.ಡಿ.ಎಂ.ಎ: ಪೊಲೀಸರಿಗೆ ಮಾಹಿತಿ ನೀಡಿದನೆಂದು ಆರೋಪಿಸಿ ಯುವಕನಿಗೆ ಹಲ್ಲೆ

ಕುಂಬಳೆ: ಎಂಡಿಎಂಎ ಸಾಗಾಟ ಪ್ರಕರಣದ ವಾರಂಟ್ ಆರೋಪಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ ದ್ವೇಷದಿಂದ ಮಾರಕಾಯುಧಗಳೊಂದಿಗೆ ತಲುಪಿದ ತಂಡ ಯುವಕನಿಗೆ ಹಲ್ಲೆಗೈದು ಗಾಯಗೊಳಿಸಿದೆ. ತಲೆ ಸಹಿತ ವಿವಿಧೆಡೆ  ಗಾಯಗೊಂಡ ಉಪ್ಪಳಗೇಟ್ ಶಾಫಿ ನಗರದ ಬಶೀರ್ ಅಬ್ಬಾಸ್ (೩೫)ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಮನೆಯ ಮುಂದೆ ನಿಂತಿದ್ದ ವೇಳೆ ಘಟನೆ ನಡೆದಿದೆ. ಕಾರ್ಯಕ್ರಮವೊಂದಕ್ಕೆ ತೆರಳಲೆಂದು ಬಶೀರ್ ಅಬ್ಬಾಸ್ ಹೊರಟು ನಿಂತಿದ್ದರು. ಈ ಮಧ್ಯೆ ಕಾರು ಹಾಗೂ ಬೈಕ್‌ಗಳಲ್ಲಿ ತಲುಪಿದ ೨೫ರಷ್ಟು ಮಂದಿಯ ತಂಡ ಮಾರಕಾಯು ಧಗಳಿಂದ …

ಬದಿಯಡ್ಕದಲ್ಲಿ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಬದಿಯಡ್ಕದಲ್ಲಿ  ಯುವಕನೋರ್ವ ನೇಣು ಬಿಗಿದು ಸಾವೀಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೇಟೆ ಬಳಿಯ ನಿವಾಸಿ ದಿ| ಗೋಪಾಲಕೃಷ್ಣ ಆಚಾರ್ಯ ಎಂಬವರ ಪುತ್ರ ದಿನೇಶ್ ಆಚಾರ್ಯ (೩೫) ಮೃತಪಟ್ಟ ವ್ಯಕ್ತಿ.  ಇವರು ಇಂದು ಬೆಳಿಗ್ಗೆ ಮನೆ ಬಳಿಯ ಹಿತ್ತಿಲಿನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ತಾಯಿ ವೇದಾವತಿ, ಪತ್ನಿ ಚಿತ್ರ, ಸಹೋದರ-ಸಹೋದರಿಯರಾದ ವಿಶ್ವನಾಥ, ಪುಷ್ಪರಾಜ, …

ಕಲ್ಲಿಕೋಟೆಯಲ್ಲಿ ಬೃಹತ್ ಗಾಂಜಾ ಬೇಟೆ : ಕಾಸರಗೋಡಿನ ಇಬ್ಬರ ಸಹಿತ ಮೂವರು ಸೆರೆ

ಕಾಸರಗೋಡು: ಹೊಸ ವರ್ಷಾಚರಣೆಗೆ ಇನ್ನೇನು ಎರಡು ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿರುವಂತೆಯೇ, ಹೊರ ರಾಜ್ಯಗಳಿಂದ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಮಾದಕ ವಸ್ತುಗಳು ಹರಿದು ಬರತೊಡಗಿದೆ. ಅದನ್ನು ತಡೆಗಟ್ಟಲು ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಆರಂಭಿಸಿದೆ. ಇದರಂತೆ ಕಲ್ಲಿಕೋಟೆಯ  ಎರಡೆಡೆಗಳಲ್ಲಾಗಿ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಒಟ್ಟು ೫೬ ಕಿಲೋ ಗ್ರಾಂ ಗಾಂಜಾ ಪತ್ತೆ ಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಾದ ಉಳಿಯತ್ತಡ್ಕ ಉಳಿಯ ಹೌಸ್‌ನ ಮೊಹಮ್ಮದ್ ಫೈಸಲ್ (೩೬), ಸೀತಾಂಗೋಳಿ ಸಮೀಪದ ಕಿನ್ಫ್ರಾ …

ಶುಚಿತ್ವ ಮಹತ್ವ: ಹೊಸ ಬಸ್ ನಿಲ್ದಾಣದಲ್ಲಿ ಎರಡು ವಾರದಿಂದ ಮಲಿನಜಲ ಪ್ರವಾಹ

ಕಾಸರಗೋಡು: ಶುಚಿತ್ವ ಮಹತ್ವ ಎಂಬ ಸಂದೇಶವಿಲ್ಲದಿರುತ್ತಿದ್ದರೆ ಶುಚಿತ್ವ ಕಾಯ್ದುಕೊಳ್ಳಲು ಬೇಕಾಗಿ ನಿಯೋಜಿಸಿದ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿತ್ತು ಎಂದು ಯಾರಾದರೂ ಚಿಂತಿಸಿದ್ದಾರೆಯೇ? ಇಲ್ಲದಿದ್ದರೆ ಅದಕ್ಕಿರುವ ಅವಕಾಶ ಈ ವ್ಯವಸ್ಥೆಗಳು ಜನದಟ್ಟಣೆ ಹೆಚ್ಚಿರುವ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದೆ. ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್‌ನ ಹೋಟೆಲ್‌ಗಳಿಂದ ಹಾಗೂ ಇತರ ಕಡೆಗಳಿಂದ ಮಲಿನಜಲ ಹರಿಯಬಿಡುವ ಪೈಪ್ ಎರಡು ವಾರಕ್ಕೂ ಹೆಚ್ಚಾಗಿ ಬಿರುಕು ಬಿಟ್ಟು ನೀರು ಹೊರಗೆ ಹರಿಯುತ್ತಿದೆ. ಆಟೋ ನಿಲ್ದಾಣದ ಪರಿಸರದಲ್ಲೂ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುವ ದಾರಿಯಲ್ಲಿಯೂ …