ಬದಿಯಡ್ಕದಲ್ಲಿ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಬದಿಯಡ್ಕದಲ್ಲಿ  ಯುವಕನೋರ್ವ ನೇಣು ಬಿಗಿದು ಸಾವೀಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೇಟೆ ಬಳಿಯ ನಿವಾಸಿ ದಿ| ಗೋಪಾಲಕೃಷ್ಣ ಆಚಾರ್ಯ ಎಂಬವರ ಪುತ್ರ ದಿನೇಶ್ ಆಚಾರ್ಯ (೩೫) ಮೃತಪಟ್ಟ ವ್ಯಕ್ತಿ.  ಇವರು ಇಂದು ಬೆಳಿಗ್ಗೆ ಮನೆ ಬಳಿಯ ಹಿತ್ತಿಲಿನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಮೃತರು ತಾಯಿ ವೇದಾವತಿ, ಪತ್ನಿ ಚಿತ್ರ, ಸಹೋದರ-ಸಹೋದರಿಯರಾದ ವಿಶ್ವನಾಥ, ಪುಷ್ಪರಾಜ, ಪುಂಡಲೀಕ, ಸತೀಶ, ಚಂದ್ರಕಾಂತ, ವತ್ಸಲ, ರಾಜೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page