ಗಣೇಶ್ ಕುಮಾರ್, ಕಡನ್ನಪಳ್ಳಿ ಇಂದು ಸಂಜೆ ಸಚಿವರಾಗಿ ಪ್ರಮಾಣವಚನ

ತಿರುವನಂತಪುರ: ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಕೆ.ಬಿ. ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ ಎಸ್ ಅಧ್ಯಕ್ಷ ಕಡನ್ನ ಪಳ್ಳಿ ರಾಮಚಂದ್ರನ್ ಅವರು ಇಂದು ಸಂಜೆ ೪ ಗಂಟೆಗೆ ರಾಜ್ ಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ  ಸಚಿವರುಗಳಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ರಿಂದ ಪ್ರಮಾಣವಚನ ಸ್ವೀಕರಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ  ಪರಸ್ಪರ ಗುದ್ದಾಟದಲ್ಲಿ ತೊಡಗಿರುವ ರಾಜ್ಯ ಪಾಲರು ಮತ್ತು ಮುಖ್ಯಮಂತ್ರಿಯವರು ಇಂದು ನಡೆಯಲಿರುವ ಈ …

ಎಂಡೋಸಲ್ಫಾನ್ ಬಾವಿಗೆ ಸುರಿದು ಮುಚ್ಚಿದ ಪ್ರಕರಣ: ಕೇಂದ್ರ ತಂಡ ಮಿಂಚಿಪದವಿಗೆ ತಲುಪಿ ಪರಿಶೀಲನೆ

ಮುಳ್ಳೇರಿಯ: ಪ್ಲಾಂಟೇಶನ್ ಕಾರ್ಪೋರೇಶನ್ ಕೇರಳ (ಪಿಸಿಕೆ) ಇದರ ಗೋಡೌನ್‌ನಲ್ಲಿ ಬಾಕಿ ಉಳಿದಿದ್ದ ಎಂಡೋಸಲ್ಫಾನ್ ಕೀಟ ನಾಶಕವನ್ನು ಪಾಳು ಬಾವಿಯಲ್ಲಿ ತುಂಬಿಸಿ ಮುಚ್ಚಿಡಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ತಂಡ ನಿನ್ನೆ  ಮಿಂಚಿಪದವಿಗೆ ತಲುಪಿ ಸ್ಥಳ ಪರಿಶೀಲನೆ ನಡೆಸಿದೆ. ಕೇಂದ್ರ ಮಲಿನೀಕರಣ ನಿಯಂತ್ರಣ ಮಂಡಳಿ ದಕ್ಷಿಣವಲಯ (ಬೆಂಗಳೂರು) ರೀಜಿನಲ್ ಡೈರೆಕ್ಟರ್ ಡಾ. ಜಿ. ಚಂದ್ರಬಾಬು ಅವರ ನೇತೃತ್ವದ ತಂಡ ಮಿಂಚಿಪದವಿಗೆ ತಲುಪಿದ್ದು ಅಲ್ಲಿನ ಮಣ್ಣು, ನೀರಿನ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗಾಗಿ  ಕಂಡೊಯ್ದಿದೆ. ಪ್ಲಾಂಟೇಶನ್ ಕಾರ್ಪೋರೇಶನ್‌ನ ಅಧಿಕಾರಿಗಳಿಂದ  ಹಾಗೂ ನಾಗರಿಕ ರಿಂದ …

ಗುಂಡು ತಗಲಿ ಮಾವೋವಾದಿ ನಾಯಕಿ ಸಾವನ್ನಪ್ಪಿರುವುದಾಗಿ ಪೋಸ್ಟರ್ ಪ್ರತ್ಯಕ್ಷ

ಕಣ್ಣೂರು: ಕಣ್ಣೂರು ಜಿಲ್ಲೆಯ  ನೆಟ್ಟಿತ್ತೋಟಿನಲ್ಲಿ ಕೇರಳ ಪೊಲೀಸ್ ಇಲಾಖೆಯ ತಂಡರ್ ಬೋಲ್ಟ್ ಮತ್ತು ಮಾವೋವಾದಿಗಳ ಮಧ್ಯೆ ನವಂಬರ್ ೧೩ರಂದು ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ನಾಯಕಿ ಮೂಲತಃ ಕರ್ನಾಟಕ ನಿವಾಸಿ ಕವಿತಾ (ಲಕ್ಷ್ಮಿ) ಸಾವನ್ನಪ್ಪಿರುವುದಾಗಿ ಬರೆದ ಪೋಸ್ಟರ್‌ವೊಂದು ಇಂದು ಬೆಳಿಗ್ಗೆ ತಿರುವಲ್ಲಾ ದಲ್ಲಿ ಪ್ರತ್ಯಕ್ಷಗೊಂಡಿದೆ. ಮಾವೋವಾದಿ ಪಶ್ಚಿಮಘಟ್ಟದ ವಿಶೇಷ ವಲಯ ಸಮಿತಿ ಹೆಸರಲ್ಲಿ ಈ ಪೋಸ್ಟರ್ ಲಗತ್ತಿಸಲಾಗಿದೆ. ಆದರೆ  ಕವಿತಾ ಸಾವಿನ ಬಗ್ಗೆ ನಮಗೇನೂ ಮಾಹಿತಿ ಲಭಿಸಿಲ್ಲವೆಂದೂ ಪೋಸ್ಟರ್ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಢಿಕ್ಕಿ ಹೊಡೆದು ಕೃಷಿಕ ಮೃತ್ಯು: ದೇಲಂಪಾಡಿ ಪರಿಸರದಲ್ಲಿ ಶೋಕಸಾಗರ

ಅಡೂರು:  ಬೈಕ್ ಢಿಕ್ಕಿ ಹೊಡೆದು ಕೃಷಿಕರೊಬ್ಬರು ಮೃತಪಟ್ಟ ದಾರುಣ ಘಟನೆ ದೇಲಂಪಾಡಿಯಲ್ಲಿ ಶೋಕಸಾಗರ ಸೃಷ್ಟಿಸಿದೆ. ದೇಲಂಪಾಡಿ ಬಳಿಯ ಬೆಳ್ಳಿ ಪ್ಪಾಡಿ ದೇವರಗುಂಡ ನಿವಾಸಿ ಪುರು ಷೋತ್ತಮ ಗೌಡ (೭೨) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಜಾಲ್ಸೂರಿನಲ್ಲಿ ಅಪಘಾತ ಸಂಭವಿಸಿದೆ.  ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್‌ಪೋಸ್ಟ್ ಸಮೀಪ ರಸ್ತೆ ದಾಟುತ್ತಿದ್ದ ಪುರುಷೋ ತ್ತಮ ಗೌಡರಿಗೆ ಪುತ್ತೂರು ಭಾಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ಗಂಭೀರಗಾಯ ಗೊಂಡ ಅವರನ್ನು ಸ್ಥಳೀಯರು ಕೂಡಲೇ ಸುಳ್ಯದ ಆಸ್ಪತ್ರೆಗೆ  …

ಯುವಕನನ್ನು ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸಿದ ಯುವತಿ, ತಾಯಿ ವಿರುದ್ಧ ಕೇಸು

ಕಾಸರಗೋಡು: ಪೋಕ್ಸೋ ಕಾನೂನನ್ನು ದುರುಪಯೋಗ ಪಡಿಸಿದ ತಾಯಿ ಮತ್ತು ಮಗಳ ವಿರುದ್ಧ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ತಲಶ್ಶೇರಿ ಎಡಯನ್ನೂರಿನ ಮೆರ್ಸಿ ಮಾಥ್ಯು (೬೬) ಮತ್ತು ಆಕೆಯ ಪುತ್ರಿ ಬಿಂದು (೩೬) ಎಂಬವರ ವಿರುದ್ಧ  ತಲಶ್ಶೇರಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಸರಗೋಡು ವೆಳ್ಳರಿಕುಂಡು ನಿವಾಸಿ ಇ.ಕೆ. ಮನೋಜ್ (ಥೋಮಸ್) ಎಂಬವರ ಪತ್ನಿಯಾಗಿದ್ದಾಳೆ ಬಿಂದು. ಇವರ ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕು ಉಂಟಾಗಿ ಅದರ ಹೆಸರಲ್ಲಿ ಅವರಿಬ್ಬರು ವಿವಾಹ ವಿಚ್ಚೇಧನ ಕೋರಿ ತಲಶ್ಶೇರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. …

ಮಹಿಳೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕುಟ್ಟಿಕ್ಕೋಲು ಕಲ್ಕರ ಹೌಸಿನ ಎಲುಂಬನ್ ಎಂಬವರ ಪತ್ನಿ ಕೊಟ್ಟಿ (೮೧) ನಿನ್ನೆ ಅವರ ಮನೆ ಪಕ್ಕದ ಮರವೊಂ ದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಗಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು. ಮೃತರು ಮಕ್ಕಳಾದ ಗೋಪಾಲನ್, ನಾರಾಯಣನ್, ಕುಂಞಿರಾಮನ್, ಸರೋಜಿನಿ, ಸೊಸೆಯಂದಿರಾದ ಮಾಧವಿ, ನಾರಾಯಣಿ, ಶ್ಯಾಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಜಕೂಡ್ಲು ಶ್ರೀ ಧೂಮಾವತೀ ದೈವಸ್ಥಾನ ಮಹಾದ್ವಾರ ಲೋಕಾರ್ಪಣೆ

ಪರ‍್ಲ:ದೇವಸ್ಥಾನ-ದೈವಸ್ಥಾನದ ಮಹಾದ್ವಾರಗಳು ಪಾವಿತ್ರö್ಯದ ಸಂಕೇತ ಹಾಗೂ ಮನದ ಕಲ್ಮಷ ತೊಡೆದು ಹಾಕುವ ಹಾದಿಯಾಗಿದೆ ಎಂಬುದಾಗಿ ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.ಪರ‍್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಸ್ಥಾನದ ಎದುರು ನರ‍್ಮಿಸಲಾದ ನೂತನ ಮಹಾದ್ವಾರದ ಲೋಕರ‍್ಪಣೆ ಕರ‍್ಯಕ್ರಮದಲ್ಲಿ ಅವರು ಧರ‍್ಮಿಕ ಭಾಷಣ ಮಾಡಿದರು. ರಾಮ, ಕೃಷ್ಣರು ನಮಗೆ ಆರ‍್ಶಪ್ರಾಯರಾಗಿದ್ದು, ರಾಮಾಯಣದಂತಹ ಪುರಾಣ ಕತೆಗಳ ಬಗ್ಗೆ ಮಕ್ಕಳಿಗೆ ಬೋಧನೆ ನೀಡಬೇಕು ಎಂದು ತಿಳಿಸಿದರು.ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಹಾದ್ವಾರ …

ಅಯೋಧ್ಯೆಯ ಮಂತ್ರಾಕ್ಷತೆ ಮಂಗಲ್ಪಾಡಿಯಲ್ಲಿ ವಿತರಣೆ

ಉಪ್ಪಳ: ಅಯೋಧ್ಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್‌ನ 23 ಗ್ರಾಮಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ಸಂಜೆ ನಡೆಯಿತು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಪ್ರಮುಖ ಜಿತ್ತೇಂದ್ರ ಪ್ರತಾಪನಗರ ಮಂತ್ರಾಕ್ಷತೆಯ ಬಗ್ಗೆ ವಿವರಣೆ ನೀಡೀದರು. ಮಹಾಲಿಂಗೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಪತ್ವಾಡಿ, ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷರು, ಹಾಗೂ ವಿಶ್ವ ಹಿಂದೂ ಪರಿಷತ್ ಮಂಗಲ್ಪಾಡಿ ಖಂಡ ಸಮಿತಿ ಅಧ್ಯಕ್ಷ ಹರಿನಾಥ …

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ: ಅಡೂರಿನಲ್ಲಿ ಅಕ್ಷತೆ ಮೆರವಣಿಗೆ

ಅಡೂರು: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿರುವ ಪ್ರತಿಷ್ಠಾ ಮಹೋತ್ಸವದಂಗವಾಗಿ ಅಕ್ಷತೆಕಾಳನ್ನು ಶ್ರೀ ರಾಮನಾಮಜಪ ಮೆರವಣಿಗೆ ಮೂಲಕ ಮಹಾದ್ವಾರಕಟ್ಟೆಯಿಂದ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಲಂಪಾಡಿ ಪಂ. ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ರಾಧಾಕೃಷ್ಣ ಮೇರ್ಟ, ಲಕ್ಷ್ಮಣ ಪೊನಾರಂ, ರಮೇಶ ನೇತೃತ್ವ ವಹಿಸಿದ್ದರು.

ಕಾಂಗ್ರೆಸ್ ಸ್ಥಾಪನಾ ದಿನಾಚರಣೆ

ಮೀಯಪದವು : ಮೀಂಜ ಮಂ ಡಲ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ನೇಶನಲ್ ಕಾಂಗ್ರೆಸ್ ಪಕ್ಷದ 139ನೇ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಮೀಂಜ ಮಂ ಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರರ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿ.ರಾಮ್ ಭಟ್ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿ ಸಿದರು. ಸಂಕಬೈಲ್ ಸತೀಶ್ ಅಡಪ್ಪ ಪ್ರಧಾನ ಭಾಷಣ ಮಾಡಿದರು. ನೇತಾರ ರಾದ ಅಬ್ದುಲ್ ಖಾದರ್ ಹಾಜೀ ತಲೇಕಳ, ಮೊಹಮ್ಮದ್ ಶಾಫೀ, ಹಮೀದ್ ಕಣಿಯೂರ್, ಪಳ್ಳಿಕುಂಞ ತಲೇಕಳ, ಜೋಕಿಂ ಮೊಂತೇರೋ, ಅಹ್ಮದ್ …