ಕಾಂಗ್ರೆಸ್ ಸ್ಥಾಪನಾ ದಿನಾಚರಣೆ

ಮೀಯಪದವು : ಮೀಂಜ ಮಂ ಡಲ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ನೇಶನಲ್ ಕಾಂಗ್ರೆಸ್ ಪಕ್ಷದ 139ನೇ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಮೀಂಜ ಮಂ ಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರರ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿ.ರಾಮ್ ಭಟ್ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿ ಸಿದರು. ಸಂಕಬೈಲ್ ಸತೀಶ್ ಅಡಪ್ಪ ಪ್ರಧಾನ ಭಾಷಣ ಮಾಡಿದರು. ನೇತಾರ ರಾದ ಅಬ್ದುಲ್ ಖಾದರ್ ಹಾಜೀ ತಲೇಕಳ, ಮೊಹಮ್ಮದ್ ಶಾಫೀ, ಹಮೀದ್ ಕಣಿಯೂರ್, ಪಳ್ಳಿಕುಂಞ ತಲೇಕಳ, ಜೋಕಿಂ ಮೊಂತೇರೋ, ಅಹ್ಮದ್ ಡಿ.ಎಸ್ ಮದಂಗಲ್ಲು, ಮೊಹಮ್ಮದ್ ಮೀಯಪದವು, ಹಮೀದ್ ಅಡ್ಕ ಉಪಸ್ಥಿತರಿದ್ದರು.

You cannot copy contents of this page