ಬಳ್ಳೂರು ಮುಣ್ಚಿತ್ತಡ್ಕ ಅಣೆಕಟ್ಟು ಉಪಯೋಗಶೂನ್ಯ

ಪೈವಳಿಕೆ: ಪಂಚಾಯತ್‌ನ ೭ನೇ ವಾರ್ಡ್ ಬಳ್ಳೂರು ಮುಣ್ಚಿತ್ತಡ್ಕ ಹೊಳೆಗೆ ನಿರ್ಮಿಸಿದ ಅಣೆಕಟ್ಟು ಉಪಯೋಗಶೂನ್ಯವಾಗುತ್ತಿದೆಯೆಂದು ಕೃಷಿಕರು ತಿಳಿಸಿದ್ದಾರೆ. ಅಣೆಕಟ್ಟು ನೀರು ಸಂಗ್ರಹಿಸಿಡಬೇಕಾದರೆ ಅದರ ಹಲಗೆ ಗಳನ್ನು ಹಾಕಬೇಕಾಗಿದೆ. ಆದರೆ ಅಣೆಕಟ್ಟಿನ ಹಲಗೆಗಳು ಶೆಡ್‌ನಲ್ಲಿ ಬಿದ್ದುಕೊಂಡಿದ್ದು ಉಪಯೋಗಶೂನ್ಯ ವಾಗುತ್ತಿದೆ. ಈ ಪರಿಸರದ ಕೃಷಿಕರ ಕೃಷಿಗೆ ನೀರುಣಿಸಲು ನಿರ್ಮಿಸಿದ ಈ ಅಣೆಕಟ್ಟಿನ ಹಲಗೆಯನ್ನು ಬೇಸಿಗೆ ಯಲ್ಲಿ ಹಾಕಿ ನೀರು ಸಂಗ್ರಹಿಸಲಾ ಗುತ್ತಿದೆ. ಆದರೆ ಕಳೆದ ವರ್ಷ ಮತ್ತು ಈ ವರ್ಷ ಈ ಕಾರ್ಯ ನಡೆಸಲಾಗಿಲ್ಲ. ಆದ್ದರಿಂದ ಈ ಪ್ರದೇ ಶದಲ್ಲಿ ನೀರಿನ …

ಕ್ರಿಸ್ಮಸ್ ಋತು: ರಾಜ್ಯದಲ್ಲಿ ೨೩೦.೪೭ ಕೋಟಿ ರೂ.ಗಳ ದಾಖಲೆ ಮದ್ಯ ಮಾರಾಟ

ಕಾಸರಗೋಡು: ಕ್ರಿಸ್ಮಸ್ ಉತ್ಸವ ಋತು ಆರಂಭಗೊಂಡ ಬಳಿಕದ ಕಳೆದ ಮೂರು ದಿನಗಳಲ್ಲಾಗಿ ರಾಜ್ಯ ಬಿವರೇಜ್ ಕಾರ್ಪರೇಶನ್‌ನ ಚಿಲ್ಲರೆ ಮದ್ಯ ಮಾರಾಟದಂಗಡಿಗಳಲ್ಲಾಗಿ ಒಟ್ಟು ೨೩೦.೪೭ ಕೋಟಿ ರೂ.ಗಳ ದಾಖಲೆಯ ಮದ್ಯ ಮಾರಾಟವಾ ಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೨೧೦.೩೫ ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಕ್ರಿಸ್ಮಸ್‌ನ ಹಿಂದಿನ ದಿನವಾದ ಭಾನುವಾರ ದಂದು ಮಾತ್ರವಾಗಿ ೭೦.೭೩ ಕೋಟಿ ರೂ.ಗಳ  ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ದಿನ ೬೯.೫೫ ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಡಿ. ೨೨ರಂದು ೭೫.೭೦ …

ಮದ್ಯದ ಅಮಲಿನಲ್ಲಿ ಎಸ್‌ಐಗೆ ಹಲ್ಲೆಗೈದ ಯುವತಿ ಸೆರೆ

ಕಣ್ಣೂರು: ಮದ್ಯದ ಅಮಲಿನಲ್ಲಿ ಯುವತಿಯೋರ್ವೆ ಎಸ್‌ಐಗೆ ಹಲ್ಲೆಗೈದ ಘಟನೆ ನಡೆದಿದೆ. ಈ ಸಂಬಂಧ ತಲಶ್ಶೇರಿ ಕೂಳಿ ಬಜಾಸ್ ನಿವಾಸಿ ರಸೀನ ಎಂಬಾಕೆಯನ್ನು ಬಂಧಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಈಕೆ ಆರೋಪಿಯಾಗಿದ್ದಾಳೆನ್ನಲಾಗಿದೆ.  ಈ ಹಿಂದೆಯೂ ಮದ್ಯದ ಅಮಲಿನಲ್ಲಿ ಈಕೆ ಗಲಾಟೆ ಸೃಷ್ಟಿಸಿದ್ದಳೆಂದೂ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ  ಸ್ನೇಹಿತನೊಂದಿಗೆ ತಲು ಪಿದ ರಸೀನ ನಾಗರಿಕರನ್ನು ಅಸಭ್ಯವಾಗಿ ನಿಂದಿಸಿದ್ದು, ಸ್ಥಳದಲ್ಲಿ ಭೀತಿಯ ವಾತಾ ವರಣ ಸೃಷ್ಟಿಸಿದ್ದಾಳೆ.  ವಿಷಯ ತಿಳಿದು ತಲಶ್ಶೇರಿ ಎಸ್‌ಐ ದೀಪ್ತಿಯ ನೇತೃತ್ವದಲ್ಲಿ ಪೊಲೀಸರು ತಲುಪಿದ್ದಾರೆ. ಯುವತಿಯನ್ನು …

ಜ್ಯೋತಿಷಿ ಅಸೌಖ್ಯ ಬಾಧಿಸಿ ಸಾವು

ಬದಿಯಡ್ಕ: ಬದಿಯಡ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಜ್ಯೋತಿಷಿ ಅಸೌಖ್ಯದಿಂದ ಮೃತಪಟ್ಟರು. ಮಂಗಳೂರಿನಲ್ಲಿ ಜ್ಯೋತಿಷಿಯಾಗಿದ್ದ ಕರ್ನಾಟಕದ ಹಾಸನ ನಿವಾಸಿ ರಂಗಸ್ವಾಮಿ (೩೯) ಎಂಬವರು ಮೃತ ವ್ಯಕ್ತಿ.  ನಿನ್ನೆ ಸಂಜೆ ೪ ಗಂಟೆಗೆ ವೇಳೆ ಅಪಸ್ಮಾರ ಉಂಟಾದ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ಇವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಮಾಸ್ ಬಗ್ಗೆ ನೀಡಿದ ಹೇಳಿಕೆ ತಿದ್ದಲಾರೆ-ತರೂರ್

ತಿರುವನಂತಪುರ:  ಮುಸ್ಲಿಂ ಲೀಗ್ ನೇತೃತ್ವದಲ್ಲಿ ಇತ್ತೀಚೆಗೆ ಕಲ್ಲಿಕೋಟೆಯಲ್ಲಿ ಪಾಲೆಸ್ತಿನ್ ಬೆಂಬಲಿಸಿ ನಡೆಸಿದ ರ‍್ಯಾಲಿಯಲ್ಲಿ ನಾನು ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಹಮಾಸ್ ಬಗ್ಗೆ ನೀಡಿದ ಹೇಳಿಕೆಯನ್ನು ನಾನು ತಿದ್ದೆನೆಂದು  ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ. ನಾನು ನನ್ನ ಪಕ್ಷದ ನಿಲುವನ್ನೇ ಹೇಳಿದ್ದೇನೆ. ಗಾಝಾ ವಿಷಯದಲ್ಲಿ ಎಲ್ಲಾ ಸಮಯದಲ್ಲೂ ನಾನು ಒಂದೇ ನಿಲುವು ಹೊಂದಿದ್ದೇನೆ. ನಾನು ವಿಶ್ವಸಂಸ್ಥೆಯ ಸದಸ್ಯನಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ವ್ಯಕ್ತಿಯೂ ಆಗಿದ್ದೇನೆ. ಆದ್ದರಿಂದ ಗಾಝಾ ಬಿಕ್ಕಟ್ಟಿನ ಬಗ್ಗೆ ನನಗೆ ಯಾರೂ ಕಲಿಸುವುದು ಬೇಡ. ಯುದ್ಧ …

ಮಂಡಲಪೂಜೆ ನಾಳೆ: ಶಬರಿಮಲೆಗೆ ಭಕ್ತ ಪ್ರವಾಹ

ಶಬರಿಮಲೆ: ಶ್ರೀ ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನಾಳೆ ನಡೆಯಲಿರುವಂತೆಯೇ ಶಬರಿಮಲೆಗೆ ಭಕ್ತರ ಪ್ರವಾಹ ಮುಂದುವರಿ ಯುತ್ತಿದೆ. ನಿನ್ನೆ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಕ್ಷೇತ್ರ ದರ್ಶನ ನಡೆಸಿದ್ದಾರೆ. ಇಂದು ಕೂಡಾ ಭಕ್ತರ ಭಾರೀ ಸಂದಣಿ ಕಂಡುಬಂದಿದೆ. ಇಂದು ಹದಿನೆಂಟು ಮೆಟ್ಟಿಲೇರಲು ಕಾದುನಿಂತ ತೀರ್ಥಾಟಕರ ಸರದಿ ಶಬರಿಪೀಠವರೆಗೆ ಸಾಗಿದೆ. ಭಕ್ತರ ಸಂದಣಿ ಪರಿಗಣಿಸಿ ಪಂಪಾದಲ್ಲೇ ನಿಯಂತ್ರಣ ಹೇರಲಾಗಿದೆ. ಇದೇ ವೇಳೆ ಅರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಹೊರಟ ತಂಗಅಂಗಿ ಶೋಭಾಯಾತ್ರೆ ಇಂದು ಸನ್ನಿದಾನಕ್ಕೆ ತಲುಪಲಿದೆ. ಬಳಿಕ ತಂಗಅಂಗಿಯನ್ನು …

ಕರ್ನಾಟಕ ಮದ್ಯ ವಶ

ಪೆರ್ಲ: ಗಾಳಿಗೋಪುರದಲ್ಲಿ ಅಬಕಾರಿ ತಂಡ ನಡೆಸಿದ ದಾಳಿ ಯಲ್ಲಿ ೫.೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀ ಸರ್ ಸಾಬು ಕೆ  ನೇತೃತ್ವದಲ್ಲಿ, ಪ್ರಿವೆಂ ಟೀವ್ ಆಫೀಸರ್ ರವೀಂದ್ರನ್, ಸಿಇಒಗ ಳಾದ ಮನೋಜ್ ಪಿ, ಮೋಹನ ಕುಮಾರ್ ಎನ್, ಪ್ರಭಾಕರನ್ ಎಂ ಎ ಮತ್ತು ಸಾಬೀತ್‌ಲಾಲ್ ವಿ.ಬಿ ಎಂಬಿವರು  ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ …

ಅಮಲು ಪದಾರ್ಥ ಸೇವಿಸಿ ಕಿರುಕುಳ ಕೇಸು ದಾಖಲು

ಉಪ್ಪಳ: ಅಮಲು ಪದಾರ್ಥ ಸೇವಿಸಿ ಸಾರ್ವಜನಿಕವಾಗಿ ಕಿರುಕುಳ ಉಂಟಾಗುವ ರೀತಿಯಲ್ಲಿ ವರ್ತಿಸಿದ ಓರ್ವನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ, ಪಾಲಕ್ಕಾಡ್ ಕುನ್ನುಪುರ ನಿವಾಸಿಯೂ ಮೀಯಪದವಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದೀಪು ಶಶಿಧರನ್ ಕೆ.ಎಸ್. ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ನಿನ್ನೆ ಸಂಜೆ ಮೀಯಪದವು ಬಸ್ ತಂಗುದಾಣ ಸಮೀಪ ಅಮಲು ಪದಾರ್ಥ ಸೇವಿಸಿ ಸಾರ್ವ ಜನಿಕರಿಗೆ ತೊಂದರೆ ಉಂಟಾ ಗುವ ರೀತಿಯಲ್ಲಿ ವರ್ತಿಸಿದ್ದನು. ಈ ಬಗ್ಗೆ ತಿಳಿದು ಪೊಲೀಸರು ತಲುಪಿ ಆತನನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡರು.

ಪೆರ್ಮುದೆಯಲ್ಲಿ ಕ್ರಿಸ್ಮಸ್ ಆಚರಣೆ

ಪೆರ್ಮುದೆ: ಕ್ರಿಸ್ಮಸ್ ಆಚರಣೆಯ ಅಂಗವಾಗಿ ಭಾನುವಾರ ರಾತ್ರಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿ ಯಲ್ಲಿ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ದಿವ್ಯಬಲಿಪೂಜೆಗೆ ವಂ| ಫಾ| ಮೆಲ್ವಿನ್ ಫೆರ್ನಾಂಡಿಸ್ ನೇತೃತ್ವ ನೀಡಿದರು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರಲ್ಸ್ ಗಾಯನ ನಡೆಯಿತು. ಕ್ರಿಸ್ಮಸ್ ಸಂದೇಶ ಸಾರುವ ಕ್ರಿಸ್ಮಸ್ ಟ್ರೀ, ಗೋದಲಿ, ಕ್ರಿಸ್ಮಸ್ ತಾತಾನ ಕುಣಿತ, ಸಿಡಿಮದ್ದು ಗಮನ ಸೆಳೆದುವು.ಪೆರ್ಮುದೆ ಸೈಂಟ್ ಲಾರೆನ್ಸ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಕ್ರಿಸ್ಮಸ್ ಸೌಹಾರ್ದಕೂಟ ನಡೆಯಿತು. ಸಮಾಜ ಸೇವಕ ಹರೀಶ ಬೊಟ್ಟಾರಿ, …

ನವಕೇರಳ ಸಭೆ:  ರಾಜ್ಯದಾದ್ಯಂತ ಒಟ್ಟು ಲಭಿಸಿದ್ದು ೬,೧೨,೧೬೭ ದೂರುಗಳು

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ನಡೆಸಿದ ನವಕೇರಳ ಸಭೆಯಲ್ಲಿ ಇದುವರೆಗೆ ಒಟ್ಟು ೬,೨೧,೧೬೭ ದೂರುಗಳು ಲಭಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಆದರೆ ಲಭಿಸಿದ ದೂರುಗಳ ಪೈಕಿ ಎಷ್ಟಕ್ಕೆ ತೀರ್ಪು ಕಲ್ಪಿಸಲಾಗಿದೆಯೆಂದು ಸರಕಾರ ಸ್ಪಷ್ಟಪಡಿಸಿಲ್ಲ. ಅತೀ ಹೆಚ್ಚು ದೂರುಗಳು ಲಭಿಸಿರುವುದು ಮಲಪ್ಪುರಂ ಜಿಲ್ಲೆಯಿಂದಾಗಿದೆ. ಮಲಪ್ಪುರಂನಿಂದ ೮೧೩೫೪ ದೂರುಗಳು, ಪಾಲಕ್ಕಾಡ್‌ನಿಂದ ೬೧೨೩೪, ಕೊಲ್ಲಂನಿಂದ ೫೦೯೩೮, ಪತ್ತನಂತಿಟ್ಟದಿಂದ ೨೩೬೧೦, ಆಲಪುಳದಿಂದ ೫೩೦೪೪, ತೃಶೂರಿನಿಂದ ೫೪೨೬೦, ಕೋಟ್ಟಯಂನಿಂದ ೪೨೬೫೬, ಇಡುಕ್ಕಿಯಿಂದ ೪೨೨೩೪, ಕಲ್ಲಿಕೋಟೆಯಿಂದ ೪೫೮೯೭, ಕಣ್ಣೂರಿನಿಂದ ೨೮೮೦೩, ಕಾಸರಗೋಡಿನಿಂದ …