ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು

ಚೆರ್ಕಳ: ರಾಷ್ಟ್ರೀಯ ಹೆದ್ದಾರಿಯ  ಬೇವಿಂಜೆ ತಿರುವಿನಲ್ಲಿ ಬೈಕ್‌ನ ಹಿಂಬದಿ ಸವಾರ ವಿದ್ಯಾರ್ಥಿ ಲಾರಿ ಢಿಕ್ಕಿ ಹೊಡೆದು ಮೃತಪಟ್ಟನು. ಬೈಕ್ ಚಲಾಯಿಸಿದ ಗೆಳೆಯ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಯಲ್ಲಿದ್ದಾನೆ. ನಾಯಮ್ಮಾರ್ ಮೂಲೆ ಟಿಐಎಚ್‌ಎಸ್‌ಎಸ್‌ನ ಪ್ಲಸ್‌ವನ್ ವಿದ್ಯಾರ್ಥಿ ಆಲಂಪಾಡಿ ಎರಿಯಪ್ಪಾಡಿಯ ಶಿಹಾಬ್ (೧೭) ಮೃತಪಟ್ಟರುವುದು. ಮಂಗಳೂರು   ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಎರಿಯಪ್ಪಾಡಿಯ ಆದಿಲ್ (೧೮)ನನ್ನು ಗಾಯಗಳೊಂ ದಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಸಂಜೆ  ಬೇವಿಂಜೆ ಸ್ಟಾರ್ ನಗರದಲ್ಲಿ ಅಪಘಾತ ಸಂಭವಿಸಿದೆ.

ಹಿರಿಯ ಚಾಲಕ ನಿಧನ

ವಿದ್ಯಾನಗರ: ಪನ್ನಿಪ್ಪಾರೆ ಎಂ.ಜಿ. ನಗರದ ಹಿರಿಯ ಚಾಲಕ ಕೆ. ನಾರಾಯಣನ್ (೭೮)ನಿಧನ ಹೊಂದಿದರು. ಮೃತರು ಪತ್ನಿ ಬೇಬಿ, ಮಕ್ಕಳಾದ ಬಿ. ಮೋಹನನ್ (ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಮೆನೇಜರ್), ಬಿ. ಶೈಲಜ, ಬಿ. ರವೀಂದ್ರನ್, ಬಿ. ಅನಿಲ್, ಬಿ. ಪ್ರಶಾಂತ್, ಬಿ. ಉಷಾಕುಮಾರಿ, ಬಿ. ಸಿಂಧು, ಸೊಸೆಯಂದಿರಾದ ಪಿ.ವಿ. ಸುಜಲ, ಕೆ. ನಿರ್ಮಲ, ಕೆ. ಬಿಂದು, ಕೆ. ಸುಜಿನ, ಅಳಿಯಂದಿರಾದ ದಾಮೋಧರನ್, ಪಿ.ವಿ. ಶಶಿಧರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಡಿ. ಚಂದ್ರನ್ ಈ …

ಛತ್ತೀಸ್‌ಗಡದಲ್ಲಿ ಪೊಲೀಸ್ ಕಾರ್ಯಾಚರಣೆ; ಮೂರು ಮಾವೋವಾದಿಗಳು ಗುಂಡಿಗೆ ಬಲಿ

ರಾಯ್ಪುರ: ಛತ್ತೀಸ್‌ಗಡದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚ ರಣೆಯಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಛತ್ತೀಸ್‌ಗಡದ ದಾಂತೇ ರಾದ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಪ್ರದೇಶದ ದಬ್ಬಕುನ್ನ ಗ್ರಾಮದ ಬೆಟ್ಟದಲ್ಲಿ ಮಾವೋವಾ ದಿಗಳು  ಅಡಗಿರುವ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಪೊಲೀಸರು ತಂಡ ಅಲ್ಲಿಗೆ ಸಾಗಿದಾಗ ಅಲ್ಲಿ ಪೊಲೀಸರು ಮತ್ತು ಮಾವೋ ವಾದಿಗಳ ನಡುವೆ ಗುಂಡಿನ ಚಕಮಕಿ ನಡೆದು, ಅದರಲ್ಲಿ ಮೂವರು ಮಾ ವೋವಾದಿಗಳು ಹತರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಾನವ ಕಳ್ಳಸಾಗಾಟ: ೩೦೩ ಭಾರತೀಯ ವಿಮಾನ ಫ್ರಾನ್ಸ್‌ನಿಂದ ಮುಂಬೈಗೆ ತೆರಳಲು ಅನುಮತಿ

ನವದೆಹಲಿ: ಮಾನವ ಕಳ್ಳಸಾಗಾಟ ಆರೋಪದ ಮೇಲೆ ಫ್ರಾನ್ಸ್‌ನ ವೆಟ್ರಿ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದ್ದ ಲೆಜೆಂಡ್ ಏರ್ ಲೈನ್ಸ್ ವಿಮಾನಕ್ಕೆ ಮೂರು ದಿನಗಳ ನಂತರ ಮುಂಬೈಗೆ ಹೊರಡಲು ಅನುಮತಿ ನೀಡ ಲಾಗಿದೆ. ಈ ವಿಮಾನದಲ್ಲಿ ಒಟ್ಟು ೩೦೩ ಪ್ರಯಾಣಿಕರಿದ್ದು, ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದಾರೆ.ಈ ವಿಮಾನ ಯುನೈಟೆಡ್ ಅರಬ್ ಎಮಿರೈಟ್ಸ್‌ನಿಂದ ನಿಖರಾಗುವಕ್ಕೆ ಎರಡು ದಿನಗಳ ಹಿಂದೆ ಪ್ರಯಾಣ ಆರಂಭಿಸಿತ್ತು.

ಕಡನ್ನಪಳ್ಳಿ, ಗಣೇಶ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ೨೯ರಂದು

ಕಾಸರಗೋಡು:  ರಾಜ್ಯದ ಅತೀ ಹಿರಿಯ ಶಾಸಕ ಕಾಂಗ್ರೆಸ್ (ಎಸ್)ನ ರಾಜ್ಯ ಅಧ್ಯಕ್ಷರೂ ಆಗಿರುವ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಕೆ.ಬಿ. ಗಣೇಶ್ ಕುಮಾರ್‌ರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ತೀರ್ಮಾನಕ್ಕೆ ಎಡರಂಗ ರಾಜ್ಯ ಸಮಿತಿ ಬಂದಿದೆ ಎಂದು ಎಡರಂಗದ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ತಿಳಿಸಿದ್ದಾರೆ. ಈ ತಿಂಗಳ ೨೯ರಂದು ಸಂಜೆ ರಾಜ್‌ಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರಿಂದ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಗಣೇಶ್ ಕುಮಾರ್ ಸಚಿವರಾಗಿ ಪ್ರಮಾಣವಚನ …

ಹೆದ್ದಾರಿಯಲ್ಲಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಟ್ಯಾಂಕರ್ ಲಾರಿ

ಕುಂಬಳೆ: ನಿಯಂತ್ರಣ ತಪ್ಪಿದ ಟ್ಯಾಂಕರ್ ಲಾರಿ ಯೊಂದು ನಿರ್ಮಾಣ ನಡೆಯು ತ್ತಿರುವ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಸಿಲುಕಿಕೊಂಡಿತು. ಬಳಿಕ ಕ್ರೈನ್ ಬಳಸಿ ಅದನ್ನು ತೆರವುಗೊಳಿಸಲಾಯಿತು. ನಿನ್ನೆ ರಾತ್ರಿ ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿರಾಷ್ಟ್ರೀಯ ಹೆದ್ದಾರಿ ಶಿರಿಯದಲ್ಲಿ ಡಿವೈಡರ್ ನಿರ್ಮಾಣಕ್ಕಾಗಿ ಸಿದ್ಧಪಡಿಸಿದ್ದ ಕಬ್ಬಿಣದ ಸರಳುಗಳಲ್ಲಿ ಸಿಲುಕಿ ಕೊಂಡಿತ್ತು. ಅಪಘಾತದಲ್ಲಿ ಯಾರಿಗೂ ಗಾಯವುಂಟಾಗಿಲ್ಲ.

ಎಣ್ಮಕಜೆಯಲ್ಲಿ ಬಿಜೆಪಿ ಸ್ನೇಹ ಯಾತ್ರೆ

ಪೆರ್ಲ: ಬಿಜೆಪಿ ನಡೆಸುವ ಸ್ನೇಹಯಾತ್ರೆಯಂಗವಾಗಿ ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಉಕ್ಕಿನಡ್ಕ, ಮಣಿಯಂಪಾರೆ, ಇಡಿಯಡ್ಕ, ಚರ್ಚ್‌ಗೆ ಭೇಟಿ ನೀಡಿ ಕೇಕ್ ಕೊಟ್ಟು ಶುಭಕೋರಲಾಯಿತು. ಬಿಜೆಪಿ ರಾಜ್ಯ ಕ್ರಿಸ್ಮಸ್ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಎಣ್ಮಕಜೆ ಸಮಿತಿ ಅಧ್ಯಕ್ಷ ಸುಮಿತ್ ರಾಜ್, ಬಿಜೆಪಿ ನಾಯಕರಾದ ಚಂದ್ರಕಾಂತ್ ಶೆಟ್ಟಿ, ಪುನೀತ್, ಗಣೇಶ್ ಪ್ರಸಾದ್ ಮುಣಿಯಂಪಾರೆ ಭಾಗವಹಿಸಿದ್ದರು.

ಕಯ್ಯಾರ್ ಚರ್ಚ್‌ನಲ್ಲಿ ಸಂಭ್ರಮದ ಕ್ರಿಸ್ಮಸ್

ಕಯ್ಯಾರ್: ಯೇಸುಕ್ರಿಸ್ತನ ಜನ್ಮದಿನವನ್ನು ಕ್ರೈಸ್ತ ಬಾಂಧವರು ಇಂದು ಸಂಭ್ರಮದಿಂದ ಆಚರಿಸಿದರು. ಹಬ್ಬದಂಗವಾಗಿ ನಿನ್ನೆ ರಾತ್ರಿ ಚರ್ಚ್‌ಗಳಲ್ಲಿ  ವಿಶೇಷಬಲಿಪೂಜೆನೆರವೇರಿತು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿನಡೆದ ಬಲಿಪೂಜೆಯನ್ನು ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ಫಾದರ್ ಲಿಯೊ ಲಸ್ರಾದೊ ದಿವ್ಯ ಬಲಿ ಪೂಜೆ ನೆರವೇರಿಸಿ ಸಂದೇಶ ನೀಡಿದರು. ರಾಂಚಿ ಸೆಮಿನರಿಯ ಪ್ರಾಧ್ಯಾಪಕ ಫಾ| ಜೋನ್ ಕ್ರಾಸ್ತ, ಕೊಹಿಮಾ ವಲಯದ ಜೆಜ್ವಿತ್ ಧರ್ಮಗುರು ನ್ಯಾಯವಾದಿ, ಫಾ| ರವಿ ಸಾಗರ್ ಎಸ್.ಜೆ. ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮ ಗುರು ಫಾದರ್ ವಿಶಾಲ್ ಮೋನಿಸ್ ಪಾಲ್ಗೊಂಡರು. ಕ್ರಿಸ್ಮಸ್ …

ವ್ಯಾಪಕಗೊಂಡಿರುವ ಬೀದಿ ನಾಯಿಗಳು: ಪಾದಚಾರಿಗಳಲ್ಲಿ ಭೀತಿ

ಉಪ್ಪಳ: ಬೀದಿ ನಾಯಿಗಳ ಉಪಟಳದಿಂದ ಪಾದಚಾರಿಗಳಲ್ಲಿ ಭೀತಿ ಸೃಷ್ಟಿಸಿದೆ. ಪೆರ್ಮುದೆ, ಸುಬ್ಬಯ್ಯಕಟ್ಟೆ, ಚೇವಾರು, ಉಪ್ಪಳ, ಹೊಸಂಗಡಿ ಸಹಿತ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ಇದರಿಂದ ನಡೆದು ಹೋಗುವವರಿಗೆ ಭೀತಿ ಉಂಟಾಗಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ತಿನ್ನಲು ಗುಂಪು ಗುಂಪಾಗಿ ಪರಸ್ಪರ ಕಚ್ಚಾಡುತ್ತಿರುವ ನಾಯಿಗಳು ನಡೆದು ಹೋಗುವ ಜನರನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುವುದು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ನಾಯಿಯ ಕಾಟದಿಂದ ಶಾಲಾ ಮಕ್ಕಳಲ್ಲಿ ಆತಂಕ ಹೆಚ್ಚಿದೆ. ಅಲ್ಲದೆ ರಸ್ತೆಯಲ್ಲಿ ವಾಹನಗಳ ಎದುರಿನಿಂದ ಅಡ್ಡದಿಡ್ಡಿಯಾಗಿ ಅಲೆದಾಡುತ್ತಿರುವುದರಿಂದ ಅಪಘಾತಕ್ಕೂ …

ಶಬರಿಮಲೆ: ನಾಳೆ ಬೆಳಿಗ್ಗೆ ೧೧ ಗಂಟೆ ಬಳಿಕ ವಾಹನಗಳಿಗೆ ನಿಯಂತ್ರಣ

ಶಬರಿಮಲೆ: ನಾಳೆ ನಡೆಯಲಿ ರುವ ಚಿನ್ನಾಭರಣ ಶೋಭಯಾತ್ರೆಗೆ ಸಂಬಂಧಿಸಿ ಶಬರಿಮಲೆಯಲ್ಲಿ ಪೂಜಾಸಮಯದಲ್ಲಿ ಉಂಟು ಮಾಡಿ ರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಅಯ್ಯಪ್ಪ ಭಕ್ತರನ್ನು ನಿಲೈಕಲ್‌ನಿಂದ ಪಂಪಾಕ್ಕೆ ತೆರಳು ವುದಕ್ಕೆ ಪೊಲೀಸರು ನಿಯಂತ್ರಣ ಏರ್ಪಡಿಸಿರುವುದಾಗಿ ತಿರುವಿದಾಂ ಕೂರ್ ದೇವಸ್ವಂ ಮಂಡಳಿ ತಿಳಿಸಿದೆ. ನಾಳೆ ಮಧ್ಯಾಹ್ನದ ಪೂಜೆಯ ಬಳಿಕ ಸಂಜೆ ೫ ಗಂಟೆಗೆ ಶಬರಿಮಲೆಯ ನಡೆ ಬಾಗಿಲು ತೆರೆಯಲಾಗುವುದು. ಆದುದರಿಂದ ನಾಳೆ ಬೆಳಿಗ್ಗೆ ೧೧ ಗಂಟೆವರೆಗೆ ಮಾತ್ರವೇ ನಿಲೈಕಲ್‌ಗೆ ತಲುಪುವ ಅಯ್ಯಪ್ಪ ಭಕ್ತರ ವಾಹನ ಗಳನ್ನು ಪಂಪಾಕ್ಕೆ ಬಿಡಲಾಗುವುದು. ೧೧ ಗಂಟೆ …