ರಸ್ತೆ ಬದಿ ಕುಸಿದು ಬಿದ್ದ ವ್ಯಕ್ತಿ ಸಾವು

ಮಂಜೇಶ್ವರ: ರಸ್ತೆ  ಬದಿ ಕುಸಿದು ಬಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಚೌಕಿ ನಿವಾಸಿ ಶಂಕರ(೩೮) ಎಂಬವರು ಮೃತ ವ್ಯಕ್ತಿ. ನಿನ್ನೆ ಸಂಜೆ ಇವರು ತಲಪಾಡಿಯಲ್ಲಿ ರಸ್ತೆ ಬದಿ ಕುಸಿದು ಬಿದ್ದಿದ್ದರು. ಕೂಡಲೇ ಸ್ಥಳೀಯರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿ ಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಸಿಲುಕಿ ಕಾರು ಪಲ್ಟಿ: ಸುಳ್ಯದ ಐವರಿಗೆ ಗಾಯ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ರಸ್ತೆಯ ಹೊಂಡಕ್ಕೆ ಕಾರು ಸಿಲುಕಿ ಪಲ್ಟಿಹೊಡೆದು ಅದರಲ್ಲಿದ್ದ ಸುಳ್ಯ ನಿವಾಸಿಗಳಾದ ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಚಟ್ಟಂಚಾಲ್ ಬಳಿ ನಡೆದಿದೆ. ಚಟ್ಟಂಚಾಲ್ ಮದೀನಾ ಮರದ ಗಿರಣಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸುಳ್ಯ ನಿವಾಸಿಗಳಾದ ಐವರು ಕಾರಿನಲ್ಲಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಊರಿಗೆ ಹಿಂತಿರುಗು ತ್ತಿದ್ದ ದಾರಿ ಮಧ್ಯೆ ಕಾರು ಚಟ್ಟಂಚಾಲ್‌ಗೆ ತಲುಪಿದಾಗ ಆ ದಾರಿಯಾಗಿ ಬರುತ್ತಿದ್ದ ಸ್ಕೂಟರೊಂದಕ್ಕೆ ಸೈಡ್ …

ನವಕೇರಳ ಸಭೆ ಭಾರೀ ಭದ್ರತೆಯೊಂದಿಗೆ ಇಂದು ಸಮಾಪ್ತಿ

ತಿರುವನಂತಪುರ: ಪೈವಳಿಕೆಯಿಂದ ಆರಂಭಗೊಂಡ ನವಕೇರಳ ಸಭೆ ಇಂದು ತಿರುವನಂತಪುರದಲ್ಲಿ ಸಮಾಪ್ತಿ ಗೊಳ್ಳಲಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ನವೆಂಬರ್ ೧೮ರಂದು ನವಕೇರಳ ಸಭೆ ಆರಂಭಗೊಂಡಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಲ್ಲಾ ಸಚಿವರುಗಳು ಭಾಗವಹಿಸಿದ ನವಕೇರಳ ಯಾತ್ರೆ ರಾಜ್ಯದ ೧೪೦ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಿ ಇಂದು ಕೊನೆಯ ಕಾರ್ಯಕ್ರಮ ತಿರುವನಂತ ಪುರದಲ್ಲಿ ನಡೆಯಲಿದೆ. ಪ್ರತೀ ಮಂಡಲಗಳಲ್ಲಿ ನಡೆದ ಕಾರ್ಯಕ್ರಮ ವೇಳೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸಾರ್ವಜನಿಕರಿಂದ ಸಾವಿರಾರು ಅರ್ಜಿಗಳು  …

ಬಿಜೆಪಿ ಜಿಲ್ಲಾಧ್ಯಕ್ಷರಿಂದ ಪುತ್ತಿಗೆ ಪಂ. ಪರ್ಯಟನೆ

ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರ ಪಂಚಾಯತ್ ಯಾತ್ರೆಯಂತೆ ಪುತ್ತಿಗೆ ಪಂಚಾಯತ್‌ನ ಹಿರಿಯ ಕಾರ್ಯಕರ್ತರನ್ನು, ಸಾಮಾ ಜಿಕ, ಧಾರ್ಮಿಕ ಮುಂದಾಳು ಗಳನ್ನು ಭೇಟಿ ಮಾಡಿದರು. ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ಪ್ರಾರಂಭಗೊಂಡು ಧರ್ಮತ್ತಡ್ಕ ನೆರಿಯ ಲಕ್ಷ್ಮೀನಾರಾಯಣ ಭಟ್, ರಾಮ ಗೌಡ ಗುರುಸ್ವಾಮಿ, ಮೇಪೋಡು, ಬಾಡೂರು ಕಮಲಸಿರಿ ಮನೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ವಿಮರ್ಶಕ ಬಾಡೂರು ಎನ್ ಸುಬ್ರಹ್ಮಣ್ಯ, ಮುಗು ಪರಿಸರದ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ …

ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಸಾಂಸ್ಕೃತಿಕೋತ್ಸವ ಆರಂಭ

ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಾಂಸ್ಕೃತಿಕೋತ್ಸವ ಇಂದು ಬೆಳಿಗ್ಗೆ ಮುಳ್ಳೇರಿಯದ ಗಣೇಶ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಆರಂಭವಾಯಿತು. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ. ಡಾ. ರವಿಪ್ರಸಾದ್ ಧ್ವಜಾರೋಹಣ ನಡೆಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಟಿ ಕೆ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಡಾ. ಬಿ. ಸೀತಾರಾಮ ಕಡಮಣ್ಣಾಯ, ಮುಳ್ಳೇರಿಯ ವಲಯ ಕಾರ್ಯದರ್ಶಿ ರಾಘವೇಂದ್ರ ರಾವ್, ವಿಜಯರಾಜ ಪುಣಿಂಚಿತ್ತಾಯ, ಬ್ರಹ್ಮಶ್ರೀ ಕುಂಟಾರು ವಾಸುದೇವ …

ಐಟಿಐ ಚುನಾವಣೆ; ಎಸ್‌ಎಫ್‌ಐಗೆ ಮೇಲುಗೈ

ಕಾಸರಗೋಡು: ಜಿಲ್ಲೆಯ ಐಟಿಐ ಯೂನಿಯನ್ ಚುನಾವಣೆಯಲ್ಲಿ ಎಸ್‌ಎಫ್‌ಐ ೧೦ರಲ್ಲಿ ಎಂಟು ಟ್ರೈನಿ ಕೌನ್ಸಿಲ್ ಯೂನಿಯನ್‌ಗಳಲ್ಲಿ ಜಯಗಳಿಸಿದ ೭ ಕಡೆಗಳಲ್ಲಿ ಅವಿರೋ ಧ ಆಯ್ಕೆ ನಡೆದಿದೆ. ಪಿಲಿಕ್ಕೋಡ್, ಕಯ್ಯೂರ್, ಕುತ್ತಿಕೋಲ್, ಕೋಡೋಂಬೇಳೂರು, ಮಡಿಕೈ, ನೀಲೇಶ್ವರ, ಭೀಮನಡಿ ಎಂಬಿಡೆ ಗಳಲ್ಲಿ  ಅವಿರೋಧ ಆಯ್ಕೆಯಾ ಗಿದ್ದು, ಇದಲ್ಲದೆ ಪುಲ್ಲೂರು ಸರಕಾರಿ ಐಟಿಐಯಲ್ಲಿ ಸಂಪೂರ್ಣ ಸೀಟುಗಳಲ್ಲಿ ಜಯಗಳಿಸಿದೆ. ಕಾಸg ಗೋಡು ಸರಕಾರಿ ಐಟಿಐಯಲ್ಲಿ, ಸೀತಾಂಗೋಳಿ  ಐಟಿಐಯಲ್ಲಿ ಎಂಎಸ್‌ಎಫ್-ಕೆಎಸ್‌ಯು  ಮೈತ್ರಿಗೆ ಜಯ ಉಂಟಾಗಿದೆ.

ಬೇಕಲ್ ಫೆಸ್ಟ್: ಭದ್ರತೆ ಖಚಿತಪಡಿಸದಿದ್ದರೆ ಕಾರ್ಯಾಚರಿಸಲು ಅನುಮತಿ ಇಲ್ಲ- ಜಿಲ್ಲಾಧಿಕಾರಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟಿವಲ್‌ನಂಗವಾಗಿ ಕಾರ್ಯಾ ಚರಿಸುವ ಸ್ಪೀಡ್ ಬೋಟ್, ಪಾರಸೈಲಿಂಗ್, ಜೋಯಿಂಟ್ ವ್ಹೀಲ್ ಮೊದಲಾದ ಅಡ್ವೆಂಚರ್ ಸ್ಪೋರ್ಟ್ಸ್, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ, ಸ್ಟಾಲ್‌ಗಳಿಗೆ ಭದ್ರತೆ ಖಚಿತಪಡಿಸುವ ದಾಖಲೆಗಳನ್ನು ಹಾಜರು ಪಡಿಸಲಾಗಿಲ್ಲವೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ  ಬಿಆರ್‌ಡಿಸಿಗೆ ಪತ್ರ ರವಾನಿಸಿದ್ದಾರೆ. ಇದಕ್ಕೂ, ಇತರ ನಿರ್ಮಾಣಗಳಿಗೂ ಎನ್‌ಒಸಿ ಪಡೆದುಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ನೋಟೀಸ್ ನೀಡಿಯೂ ಲೈಸನ್ಸ್ ಪಡೆಯದ ಕಾರಣ ಇದು ಕಾರ್ಯಾಚರಿ ಸುವುದು ಕಾನೂನು ವಿರುದ್ಧವೆಂದು ಪಳ್ಳಿಕೆರೆ ಪಂಚಾಯತ್ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಲಿಖಿತವಾಗಿ ಸೂಚಿಸಿದ್ದರು. ೨೧ರಂದು ೧೨ ಗಂಟೆಯ ಮುಂಚಿತ ಎಲ್ಲಾ …

ಮಂಜೇಶ್ವರ ಉಪಜಿಲ್ಲೆ ಶಾಲಾ ಕಲೋತ್ಸವ ಸಂಘಟನಾ ಸಮಿತಿ ಸಭೆ

ಧರ್ಮತ್ತಡ್ಕ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆ ಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾಕಲೋತ್ಸವದ ಸಂಘಟನಾ ಸಮಿತಿಯ ಸಭೆ ನಿನ್ನೆ ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು.ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೋತ್ಸವದ ಯಶಸ್ವಿಗೆ ಅಭಿನಂದನೆ ಸಲ್ಲಿಸಿದರು.ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ವ್ಯವಸ್ಥಾಪಕಿ ವಿಜಯಶ್ರೀ ಬಿ, ಎಚ್.ಎಂ ಫೋರಂ ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ರಕ್ಷಕ ಶಿಕ್ಷಕ …

ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ವಾರ್ಷಿಕೋತ್ಸವ ೨೮ರಂದು

ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ 44ನೇ ವಾರ್ಷಿಕೋತ್ಸವ ಡಿ.28ರಂದು ಜರಗಲಿದೆ. ಪ್ರಾತಃಕಾಲ ಗಣಪತಿ ಹೋಮ, ದೀಪ ಪ್ರತಿಷ್ಠೆ, ಶ್ರೀ ಗೋಪಾಲಕೃಷ್ಣ ಪೈ ಬದಿಯಡ್ಕ ಅವರಿಂದ ದೀಪಜ್ವಲನೆ, 7.30ರಿಂದ, ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಮಾತೃಮಂಡಳಿ ಹಾಗೂ ಶ್ರೀ ಕುಮಾರಸ್ವಾಮಿ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 10 ಗಂಟೆಗೆ ಶ್ರೀ ಧರ್ಮಶಾಸ್ತಾ ಕುಣಿತ ಭಜನಾ ತಂಡದವರಿAದ ಕುಣಿತ ಭಜನೆ, ವಿಶ್ವನಾಥ ನಾಯ್ಕ ಬಲವಂತಡ್ಕ ಇವರ ಶಿಷ್ಯರ ರಂಗಪ್ರವೇಶ 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಧರ್ಮಶಾಸ್ತಾ …

ಜ್ಯೂಸ್‌ನಲ್ಲಿ ಮದ್ಯಸೇರಿಸಿ ನೀಡಿ ಯುವತಿಗೆ ದೌರ್ಜನ್ಯ ದೃಶ್ಯಗಳನ್ನು ಸೆರೆಹಿಡಿದ ಗೆಳತಿ ಹಾಗೂ ಗೆಳೆಯ ಸೆರೆ

ತಿರುವನಂತಪುರ: ಕೋವಳಂನಲ್ಲಿ ಜ್ಯೂಸ್ ಗೆ ಮದ್ಯ ಬೆರೆಸಿ ನೀಡಿ ಯುವತಿಯನ್ನು ಲೈಂಗಿಕವಾಗಿ ದೌರ್ಜನ್ಯ ಗೈದ ಪ್ರಕರಣದಲ್ಲಿ ಯುವತಿಯ ಗೆಳತಿ ಹಾಗೂ ಗೆಳೆಯನನ್ನು  ಕೋವಳಂ ಪೊಲೀಸರು ಬಂಧಿಸಿದ್ದಾರೆ.  ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ ಯುವತಿಯನ್ನು ಕೋವಳಂನ ಖಾಸಗಿ ಹೋಟೆಲ್‌ನಲ್ಲಿ ದೌರ್ಜನ್ಯಗೈಯ್ಯ ಲಾಗಿದೆ. ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಥೆರಫಿಸ್ಟ್ ಆಗಿ ಉದ್ಯೋಗದಲ್ಲಿರುವ ಮಲಪ್ಪುರಂ ಈಶ್ವರಮಂಗಲ ನಿವಾಸಿ ಶರತ್ (೨೮), ಈತನ ಗೆಳತಿ ಮಣ್ಣಾರ್ ಕಾಡ್‌ನ ಸೂರ್ಯ (೩೩) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕಳೆದ ೧೭ರಂದು ಘಟನೆ ನಡೆದಿದೆ.  ಶ್ರೀಪದ್ಮನಾಭ ಸ್ವಾಮಿ ಕ್ಷೇತ್ರ  …