ಮಂಜೇಶ್ವರ ಉಪಜಿಲ್ಲೆ ಶಾಲಾ ಕಲೋತ್ಸವ ಸಂಘಟನಾ ಸಮಿತಿ ಸಭೆ

ಧರ್ಮತ್ತಡ್ಕ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆ ಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾಕಲೋತ್ಸವದ ಸಂಘಟನಾ ಸಮಿತಿಯ ಸಭೆ ನಿನ್ನೆ ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು.
ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೋತ್ಸವದ ಯಶಸ್ವಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ವ್ಯವಸ್ಥಾಪಕಿ ವಿಜಯಶ್ರೀ ಬಿ, ಎಚ್.ಎಂ ಫೋರಂ ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಶುಭ ಹಾರೈಸಿದರು. ರಾಮಮೋಹನ್ ಸಿ.ಎಚ್ ಲೆಕ್ಕಪತ್ರ ಮಂಡಿಸಿದರು. ಬಳಿಕ ಸಹಮತದೊಂದಿಗೆ ಕಲೋತ್ಸವದ ಸಂಘಟನಾ ಸಮಿತಿಯನ್ನು ವಿಸರ್ಜಿಸಲಾಯಿತು. ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಎಚ್ ಗೋವಿಂದ ಭಟ್ ವಂದಿಸಿದರು. ಅಧ್ಯಾಪಕ ಶ್ರೀನಿವಾಸ ಕೆ.ಎಚ್ ನಿರೂಪಿಸಿದರು. ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು.

You cannot copy contents of this page