ಪೆರಡಾಲದಲ್ಲಿ ಮೋಟಾರ್ ಪಂಪ್ ಕಳವು ಪ್ರಕರಣ:  ಆರೋಪಿಗಳನ್ನು ಶಿಕ್ಷಿಸುವಂತೆ ಬಿಜೆಪಿ ಒತ್ತಾಯ

ಬದಿಯಡ್ಕ: ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರಿನ ಮೋಟಾರ್ ಪಂಪ್ ಕಳವುಗೈದ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬದಿಯಡ್ಕ ಈಸ್ಟ್ ಕಮಿಟಿ ಒತ್ತಾಯಿಸಿದೆ. ಕಳವಿಗೆ ಸಹಾಯವೊದಗಿಸಿರುವುದು ಯಾವ ಸದಸ್ಯನೆಂದು ಪಂಚಾಯತ್ ಜನರಿಗೆ ತಿಳಿಸಬೇಕೆಂದೂ ಇಲ್ಲದಿದ್ದಲ್ಲ್ಲಿ ಎಲ್ಲಾ ಸದಸ್ಯರನ್ನು ಜನರು ಸಂಶಯಿಸುವರೆಂದು ಸಭೆ ಅಭಿಪ್ರಾಯಪಟ್ಟಿದೆ.  ಸಭೆಯಲ್ಲಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ,  ಪ್ರಧಾನ ಕಾರ್ಯದರ್ಶಿ ಪಿ.ಆರ್.  ಸುನಿಲ್, ಗೋಪಾಲಕೃಷ್ಣ, ಭಾಸ್ಕರ, ಬಾಲಕೃಷ್ಣ ಶೆಟ್ಟಿ, ಅವಿನಾಶ್ ರೈ ಮಾತನಾಡಿದರು.

ಪೋಕ್ಸೋ ಪ್ರಕರಣ: ಮಂಡಲ ಕಾಂಗ್ರೆಸ್‌ನಿಂದ ಪ್ರತಿಭಟನೆ

ಉಪ್ಪಳ: ವಂಡಿ ಪೆರಿಯಾರ್, ಪೋಕ್ಸೋ ಅಪರಾಧಿಯ ವಿರುದ್ಧದ ಅಪರಾಧ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  ಅಪ ರಾಧಿ ಅರ್ಜುನನ್ ವಿರುದ್ಧ  ಆರೋಪ ಸಾಬೀತುಪಡಿಸಲಾಗ ದಿರುವುದು ಪೊಲೀಸ್ ಹಾಗೂ ಪ್ರೊಸಿಕ್ಯೂಟರ್‌ಗಳ ಅನಾಸ್ಥೆ ಕಾರಣವೆಂದು ಆರೋಪಿಸಿ ಪ್ರತಿಭಟಿಸಲಾಗಿದೆ. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ  ವಹಿಸಿದರು. ಮಹಮ್ಮದ್ ಸೀಗಂದಡಿ ಉದ್ಘಾಟಿಸಿದರು. ಪಿ.ಎಂ. ಖಾದರ್ ಹಾಜಿ, ಓಂಕೃಷ್ಣ, ಅಲ್ಮೆಡ ಸೋಜ, ಇಬ್ರಾಹಿಂ, ಪ್ರದೀಪ್ ಕುಮಾರ್ ಶೆಟ್ಟಿ, ಹಾರಿಸ್, ಮಾತನಾಡಿದರು. ಯೂಸಫ್ …

ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ಧನುರ್ಮಾಸ ಪೂಜೆಗೆ ಚಾಲನೆ

ಮಂಜೇಶ್ವರ: ಬಂಗ್ರಮAಜೇ ಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವ ಸ್ಥಾನದಲ್ಲಿ ಧನುರ್ಮಾಸ ಪೂಜೆ ನಿನ್ನೆಯಿಂದ ಆರಂಭಗೊAಡಿತು. ಮುಂಜಾನೆ ಗಣಪತಿ ಹವನ, ಕಲಶಾಭಿಷೇಕ ನಡೆದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ್.ಕೆ ಉಮೇಶ ತಂತ್ರಿ ಮಂಗಳೂರು ಇವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ವೇಳೆ ಕ್ಷೇತ್ರ ಸಮಿತಿ ಪದಾಧಿಕಾರಿ ಗಳ ಸಹಿತ ಭಕ್ತರು ಪಾಲ್ಗೊಂ ಡರು. ಜ.೧೪ರ ತನಕ ಪೂಜೆ ನಡೆಯ ಲಿದೆ. ಒಂದÀÄ ತಿಂಗ ಳÀÄ ಪ್ರತಿ ದಿನ ಮುಂಜಾನೆ ಓಜ ಸಾಹಿತ್ಯ ಕೂಟ ಇವರಿಂದ ಭಜನೆ, …

ಉಪ್ಪಳ ಗ್ರಾಂಡ್ ಎಕ್ಸ್‌ಪೋ ೨೨ರಿಂದ

ಕುಂಬಳೆ: ಯೂನಿವೆಂಟ್ ಇವೆಂಟ್  ಮೆನೇಜ್‌ಮೆಂಟ್ ಡಿ. ೨೨ರಿಂದ ಜನವರಿ ೮ರವರೆಗೆ ಕೈಕಂಬದಲ್ಲಿ ಎಕ್ಸಿಬಿಷನ್ ನಡೆಸಲಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಫ್ಲವರ್ ಶೋ, ಇಂಟರ್‌ನೇಶನಲ್ ಪೆಟ್ ಶೋ, ವೇದಿಕೆ ಕಾರ್ಯಕ್ರಮಗಳು, ನರ್ಸರಿಗಳು, ವಿವಿಧ ರೀತಿಯ ಸ್ಟಾಲ್‌ಗಳನ್ನು ಎಕ್ಸ್‌ಪೋದ ಅಂಗವಾಗಿ ನಡೆಸಲಾಗುವುದು. ರೈಡ್‌ಗಳಿರುವುದು. ಮಕ್ಕಳಿಗೆ ಟಿಕೆಟ್‌ನಲ್ಲಿ ರಿಯಾಯಿತಿ ಲಭಿಸಲಿದೆ ಯೆಂದು ಸಂಬಂಧಪಟ್ಟವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನವಾಸ್ ಎನ್, ಇಬ್ರಾಹಿಂ ಖಲೀಲ್, ಸಕೀರ್ ಹುಸೈನ್, ಸಕರಿಯ ಭಾಗವಹಿಸಿದರು.

ಮೀಂಜ ಪಂ.ನ ಮೈದಾನ ಅಭಿವೃದ್ಧಿಗೆ ಒಂದು ಕೋಟಿ ರೂ. ಮಂಜೂರು

ಹೊಸಂಗಡಿ: ಮೀಂಜ ಪಂಚಾಯತ್‌ನ ಮೈದಾನದ ಅಭಿವೃದ್ಧಿಗೆ  ೧ ಕೋಟಿ ರೂ.ಗಳ ಆಡಳಿತಾನುಮತಿ ಲಭಿಸಿದೆ ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಮೀಯಪದವುನಲ್ಲಿರುವ ಪಂ. ಮೈದಾನದಲ್ಲಿ ಯಾವುದೇ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಶಾಸಕರು ನೀಡಿದ ಮನವಿ ಹಿನ್ನೆಲೆಯಲ್ಲಿ ಕಳೆದ  ಬಜೆಟ್‌ನಲ್ಲಿ ಇದಕ್ಕೆ  ಮೊತ್ತ ಮೀಸಲಿಡಲಾಗಿತ್ತೆಂದು ಶಾಸಕರು ತಿಳಿಸಿದ್ದಾರೆ. ಮೈದಾನದಲ್ಲಿ ಗ್ಯಾಲರಿ, ವೇದಿಕೆ, ಶುಚಿತ್ವ ಸಮುಚ್ಚಯ. ಕಚೇರಿ, ಆವರಣಗೋಡೆ ಸಹಿತ ವಿವಿಧ ಸೌಕರ್ಯಗಳನ್ನು ಏರ್ಪಡಿಸಲಾಗುವುದು. ತಾಂತ್ರಿಕ ಒಪ್ಪಿಗೆ ಲಭಿಸಿದ ಕೂಡಲೇ ಟೆಂಡರ್ ಕ್ರಮಗಳನ್ನು ನಡೆಸಿ ಕಾಮಗಾರಿ ಆರಂಭಿಸಲಾಗುವುದೆಂದು ಶಾಸಕರು ತಿಳಿಸಿದ್ದಾರೆ.

ಪೆನ್ಶನರ್ಸ್ ಮಹಾಸಂಘದಿಂದ ಪೆನ್ಶನ್ ದಿನಾಚರಣೆ

ಕಾಸರಗೋಡು: ಭಾರತೀಯ ಪೆನ್ಶನರ್ಸ್ ಮಹಾಸಂಘದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಪೆನ್ಶನ್ ದಿನ ಆಚರಿಸಲಾಯಿತು. ಚಂದ್ರಗಿರಿ ದೇವಸ್ಥಾನದ ಪರಿಸರದಲ್ಲಿ ನಡೆದ ಸಭೆಯನ್ನು ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಕೆ. ಉಮಾದೇವಿ ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಸುರೇಶ್ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಚಂದು, ಸದಾನಂದ, ಗೋಪಾಲನ್, ಸಿ.ಎಚ್. ಜಯೇಂದ್ರ, ಎ. ಮುರಳೀಧರನ್ ಮಾತನಾಡಿದರು.

ಬೆಳ್ಳೂರು ಲಕ್ಷದೀಪೋತ್ಸವ: ಆಮಂತ್ರಣಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಅಯೋಧ್ಯೆ ಯಲ್ಲಿ ಶ್ರೀರಾಮ ದೇವಾಲಯದಲ್ಲಿ ದೇವರ ಪ್ರತಿಷ್ಠೆ ನಡೆಯುವ ಜ. ೨೨ರಂದು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರ ದಲ್ಲಿ ಲಕ್ಷದೀಪೋತ್ಸವ ಹಮ್ಮಿಕೊಂಡಿ ರುವುದು ಉತ್ತಮವಾಗಿ ದೆಯೆಂದು ಉದ್ಯಮಿ ಗೋಪಾಲಕೃಷ್ಣ ಪೈ ಅಭಿಪ್ರಾಯಪಟ್ಟರು. ಕ್ಷೇತ್ರದಲ್ಲಿ ಕ್ಷೇತ್ರ ಆಡಳಿತ ಸಮಿತಿ, ಭಕ್ತವೃಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ವಾಧೀಶ ರಾಮಕೃಷ್ಣ ಕಾಟುಕುಕ್ಕೆ ಶಿಷವೃಂದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಜ್ಯೋತಿಷಿ ಉಣ್ಣಿಕೃಷ್ಣನ್‌ರಿಗೆ ಆಮಂ ತ್ರಣಪತ್ರಿಕೆ ನೀಡಿ ಬಿಡುಗಡೆಗೊಳಿಸಲಾ ಯಿತು. ಲಕ್ಷದೀಪೋತ್ಸವ ಸಮಿತಿ  ಅಧ್ಯಕ್ಷ  …

ನರೇಂದ್ರಮೋದಿ ತಿರುವನಂತಪುರದಲ್ಲಿ ಸ್ಪರ್ಧೆ ಸಾಧ್ಯತೆಯನ್ನು ಅಲ್ಲಗಳೆಯದ ಬಿಜೆಪಿ

ನವದೆಹಲಿ: ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಿರುವನಂತ ಪುರದಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ಬಿಜೆಪಿ ನೇತೃತ್ವ ಅಲ್ಲಗಳೆದಿಲ್ಲ. ಮೋದಿ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವರೇ ಎಂದು ಸುದ್ದಿಗಾರರು ಬಿಜೆಪಿಯ ಕೇರಳ ಘಟಕದ ಹೊಣೆಗಾರಿಕೆ ಹೊಂದಿರುವ ಪ್ರಕಾಶ್ ಜಾವ್ದೇಕರ್‌ರಲ್ಲಿ ಪ್ರಶ್ನಿಸಿದಾಗ ಆ ಸಾಧ್ಯತೆಯನ್ನು ಇಲ್ಲವೆಂದು ಹೇಳಲಾಗುತ್ತಿಲ್ಲವೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪುರ ಹಿಂಸಾಚಾರದ ಹೆಸರಲ್ಲಿ ಕೇರಳದಲ್ಲಿ  ಕ್ರೈಸ್ತರು ಬಿಜೆಪಿಯಿಂದ ದೂರವಾಗಿಲ್ಲ. ಆ ಬಗ್ಗೆ ಕಾಂಗ್ರೆಸ್ ಮತ್ತು ಎಡರಂಗ ನಡೆಸುತ್ತಿರುವ ಪ್ರಚಾರ  ಸಫಲವಾಗದು. ಕೇರಳದಲ್ಲಿ ಬಿಜೆಪಿ ೫ …

ಐಎಸ್‌ಆರ್‌ಒ ಯುವ ವಿಜ್ಞಾನಿ ಸೂರ್ಲು ನಿವಾಸಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಬಾಹ್ಯಾಕಾಶರಂ ಗದಲ್ಲಿ ನೂತನ ಸಾಧನೆಗೈದ ಭಾರತದ ಚಂದ್ರಯಾನ್-೩ರಲ್ಲಿ ಭಾಗಿಯಾಗಿದ್ದ ಯುವ ವಿಜ್ಞಾನಿ ಹೃದಯಾಘಾತ ದಿಂದ ನಿಧನ ಹೊಂದಿದರು. ಸೂರ್ಲು ನಿವಾಸಿ ಪ್ರಸ್ತುತ ಬೆಂಗಳೂರಲ್ಲಿ ವಾಸವಾಗಿದ್ದ ಅಶೋಕ್ (೪೩) ಮೃತ ಪಟ್ಟವರು. ಇವರಿಗೆ ಮಂಡಿನೋವು ಆಗಿ ಆಪರೇಶನ್ ನಡೆಸಿ ವಿಶ್ರಾಂತಿ ಯಲ್ಲಿದ್ದ ವೇಳೆ ನಿನ್ನೆ ಹೃದಯಾಘಾತ ಉಂಟಾಗಿ ಸಾವು ಸಂಭವಿಸಿದೆ. ಇವರ ಪತ್ನಿ ಮಶ್ಯಾಂಕ್ ಕೂಡಾ ಐಎಸ್ ಆರ್‌ಒದಲ್ಲಿ ಉದ್ಯೋಗದಲ್ಲಿದ್ದಾರೆ. ಚಂದ್ರಯಾನ್‌ನ ಯಶಸ್ವಿಯ ಬಳಿಕ ಸೂರ್ಲು ಗಣೇಶ ಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯ ಕ್ರಮದಲ್ಲಿ ಇವರನ್ನು ಗೌರವಿಸಲಾಗಿತ್ತು. …

ಮುಖವಾಡಧಾರಿ ತಂಡದಿಂದ ವೃದ್ದ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನ ದರೋಡೆ

ಕಾಸರಗೋಡು: ವೃದ್ದ ದಂಪತಿಗಳು ಮಾತ್ರವೇ ವಾಸಿಸುತ್ತಿರುವ ಮನೆಗೆ   ಮುಖವಾಡ ಧರಿಸಿ ಅಕ್ರಮವಾಗಿ ಮನೆಗೆ ಪ್ರವೇಶಿಸಿದ ದರೋಡೆಕೋರರ ತಂಡ ವೃದ್ಧ ದಂಪತಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿ ಚಿನ್ನದ ಒಡವೆ ದರೋಡೆಗೈದ ಘಟನೆ ಚೆಮ್ನಾಡ್ ಬಳಿ ಇಂದು ಮುಂಜಾನೆ ನಡೆದಿದೆ. ಚೆಮ್ನಾಡ್ ಪರವನಡ್ಕಕ್ಕೆ ಸಮೀಪದ ಕೈಂದಾರಿನ ಕೋಡೋತ್ತ್ ಹೌಸಿನ ಕೋಡೋತ್ತ್ ಕುಂಞಿ ಕಣ್ಣನ್ ನಂಬ್ಯಾರ್ (೭೮) ಎಂಬವರ ಮನೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಈ ಮನೆಯಲ್ಲಿ ಕುಂಞಿಕಣ್ಣನ್ ನಂಬ್ಯಾರ್ ಮತ್ತು ಅವರ ಪತ್ನಿ ತಂಗಮಣಿ …