ಕಾಟುಕುಕ್ಕೆ-ಖಂಡೇರಿಯಲ್ಲಿ ನೀರಿಲ್ಲ: ಬಿಲ್ ಮಾತ್ರ!
ಪೆರ್ಲ: ಕಾಟುಕುಕ್ಕೆ, ಖಂಡೇರಿ, ಕೊಲ್ಯ ಎಂಬೆಡೆಗಳಲ್ಲಿ ಜಲಜೀವನ್ ಮಿಶನ್ ಯೋಜನೆಯ ಜಲ ವಿತರಣೆ ನಡೆಯುತ್ತಿಲ್ಲವೆಂದು ದೂರಲಾಗಿದೆ. ಇದರಿಂದ ೧೦೦ರಷ್ಟು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ೨ ವರ್ಷ ಹಿಂದೆ ಸಂಪರ್ಕ ಲಭಿಸಿದ್ದ ಕುಟುಂಬಗಳಿಗೆ ಈಗ ನೀರು ವಿತgಣೆಯಾಗುವುದಿಲ್ಲ. ಆದರೆ ಉಪಯೋಗಿಸಿದ ನೀರಿಗೆ ೨೦೦೦ ರೂ. ಪಾವತಿಸಲು ಮೊಬೈಲ್‌ಗೆ ಸಂದೇಶ ಲಭಿಸಿದೆ. ಇತರ ಜಲಯೋಜನೆಗಳಿಲ್ಲದ ಎಣ್ಮಕಜೆ ಪಂಚಾಯತ್‌ನ ನಾಲ್ಕನೇ ವಾರ್ಡ್‌ನ ಈ ಪ್ರದೇಶದ ಜನರ ಏಕ ಆಶ್ರಯವಾಗಿದೆ ಈ ಯೋಜನೆ. ಕಾಟುಕುಕ್ಕೆಯ ಹೈಯರ್ ಸೆಕೆಂಡರಿ ಶಾಲೆಯವರೆಗೆ ನೀರು ಲಭಿಸುತ್ತಿದೆ. ಇಲ್ಲಿಂದ ಖಂಡೇರಿಗೆ …