ವರ್ಕಾಡಿಯಲ್ಲಿ ಸಿಡಿಲು ಬಡಿದು ಮನೆ ಹಾನಿ : ಬಿಜೆಪಿ ನೇತಾರರು ಭೇಟಿ

ಮಂಜೇಶ್ವರ: ಸಿಡಿಲು ಬಡಿದು ಮನೆ ಹಾನಿಗೊಂಡಿದ್ದು, ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್‌ನ ಬೋಳಪದವುನ ದೇವಕಿ ಶೆಟ್ಟಿ ಎಂಬವರ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದು ಹೆಂಚು ಹಾಸಿದ ಮನೆಯ ಗೋಡೆ ಬಿರುಕು ಬಿಟ್ಟು ಮನೆ ಹಾನಿಗೊಂಡಿದೆ. ಇದರಿಂದ ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ, ನೇತಾರರಾದ ಸುಧಾಮ ಗೋಸಾಡ, ಧೂಮಪ್ಪ ಶೆಟ್ಟಿ ತಾಮಾರು, ಯತೀರಾಜ್‌ಶೆಟ್ಟಿ ಕೆದುಂಬಾಡಿ, ಭಾಸ್ಕರ ಪೊಯ್ಯೆ, ಹರೀಶ್ ಕನ್ನಿಗೂಳಿ, ಪವನ್ …

ನವಕೇರಳ ಬಸ್ಸಿನ ಮೇಲೆ ಚಪ್ಪಲಿ ಎಸೆತ: ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ನರಹತ್ಯಾ ಯತ್ನ ಪ್ರಕರಣ: ನಾಲ್ವರ ಸೆರೆ

ಕೊಚ್ಚಿ: ಪೆರುಂಬಾವೂರಿನಲ್ಲಿ  ನವಕೇರಳ ಯಾತ್ರೆಯಲ್ಲಿ ಭಾಗವಹಿಸಲೆಂದು ಮುಖ್ಯಮಂತ್ರಿ ಮತ್ತು ಇತರ ಸಚಿವರುಗಳು ಸಂಚರಿಸುತ್ತಿದ್ದ ಬಸ್ಸಿಗೆ ಕೆಎಸ್‌ಯು ಕಾರ್ಯಕರ್ತರು ಚಪ್ಪಲಿ ಎಸೆದಿದ್ದು, ಅದಕ್ಕೆ ಸಂಬಂಧಿಸಿ ಕೆಎಸ್‌ಯುನ ಹಲವು ಕಾರ್ಯಕರ್ತರ ವಿರುದ್ಧ ಪೊಲೀಸರು ನರಹತ್ಯಾಯತ್ನ ಮತ್ತು ಇತರ ಹಲವು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಈ ಪ್ರಕರಣಕ್ಕೆ ಸಂಬಂಧಿಸಿ  ಜಿಬಿನ್‌ದೇವಕುಮಾರ್, ಜೈಡನ್, ಬೇಸಿಲ್ ವರ್ಗೀಸ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ವರ್ಗೀಸ್ ಕೆಎಸ್‌ಯು ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರು ಸಂಚರಿಸುತ್ತಿದ್ದ ಬಸ್ಸಿಗೆ ನಿನ್ನೆ ಸಂಜೆ  ಪೆರುಂಬಾವೂರಿಗೆ …

ಕೊಲ್ಲಂನ ದಂಪತಿ, ಪುತ್ರಿ ಮಡಿಕೇರಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕರ್ನಾಟಕದ ಮಡಿಕೇರಿಯ ರೆಸಾರ್ಟ್‌ನಲ್ಲಿ ಕೊಲ್ಲಂ ನಿವಾಸಿ ದಂಪತಿ ಹಾಗೂ ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪರವೂರ್ ಕುನಯಿಲ್ ಚಾಮವಿಳ ನಿವಾಸಿ ಬಾಬು ಸೇನನ್- ಕಸ್ತೂರಿ ಬಾ ದಂಪತಿಯ ಪುತ್ರ ವಿನೋದ್ ಬಾಬು ಸೇನನ್ (೪೩), ಪತ್ನಿ ಜಿಬಿ ಎಬ್ರಹಾಂ (೩೮), ಪುತ್ರಿ ಜೈನ್ ಮರಿಯ ಜೇಕಬ್ (೧೧) ಎಂಬಿವರು ಮೃತಪಟ್ಟವರಾಗಿದ್ದಾರೆ. ಪುತ್ರಿಯನ್ನು ಕೊಲೆಗೈದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಸಯಿಸಲಾಗಿದೆ. ಜಿಬಿ ವಿನೋದ್‌ನ ದ್ವಿತೀಯ ಪತ್ನಿಯಾಗಿದ್ದಾಳೆ. ಜಿಬಿಯ ಮೊದಲ ಪತಿಗೆ ಜನಿಸಿದವಳಾಗಿದ್ದಾಳೆ ಜೈನ್ ಮರಿಯ ಎಂದು …

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ : ಪೈಕ-ಮುಳ್ಳೇರಿಯ ರಸ್ತೆ ಕಾಮಗಾರಿ ಉದ್ಘಾಟನೆ

ಮುಳ್ಳೇರಿಯ: ಪೈಕ- ನೀರೋಳಿಪಾರೆ- ಮುಳ್ಳೇರಿಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿಸೇರಿಸಿ ಅಭಿವೃದ್ಧಿಪಡಿಸುವ ಕಾರಡ್ಕ ಪಂ. ವ್ಯಾಪ್ತಿಯ ಈ ರಸ್ತೆಯ ಕಾಮಗಾರಿಗೆ ಅಡ್ಕ ಪೌರ್ಣಮಿ ಕ್ಲಬ್ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ. ಮಿತ್ರ ವರದಿ ಮಂಡಿಸಿದರು. ಕಾರಡ್ಕ ಬ್ಲೋಕ್ ಪಂ. …

ಊರಿನ ಉತ್ಸವವಾಗಿ ಬದಲಾದ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ತೆರೆ

ಮುಳ್ಳೇರಿಯ: ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾಪ್ತಿಯಾಗ ಲಿದೆ. ಕಳೆದ ೫ರಿಂದ ಕಾರಡ್ಕ ಸರಕಾರಿ ಶಾಲೆಯಲ್ಲಿ ನಡೆದು ಬರುತ್ತಿರುವ ಶಾಲಾ ಕಲೋತ್ಸವಕ್ಕೆ ಇಂದು ಸಂಜೆ ೫ ಗಂಟೆಗೆ ತೆರೆ ಬೀಳಲಿದ್ದು, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೋಯ್ ಮುಖ್ಯ ಅತಿಥಿಯಾಗಿ ರುವರು. ವಿಜೇತರಿಗೆ ಎಡಿಎಂ ನವೀನ್ ಬಾಬು ಕೆ, ಎ.ಪಿ. ಉಷಾ, ಎಂ. ಶ್ರೀಧರ ಟ್ರೋಫಿ ವಿತರಿಸುವರು. ಅಡುಗೆ ಸಿದ್ಧಪಡಿಸಿದವರನ್ನು ಪಿ.ವಿ. ಮಿನಿ, ಲೈಟ್ ಆಂಡ್ …

ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ನಿಧನ

ಕೊಚ್ಚಿ: ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ (೭೩) ಅಸೌಖ್ಯ ನಿಮಿತ್ತ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು. ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಕಾನಂ  ಅವರ ಕಾಲಿನ ಪಾದವನ್ನು ಇದೇ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಗೊಳ ಪಡಿಸಲಾಗಿತ್ತು. ಈ ಮಧ್ಯೆ ನಿನ್ನೆ ಅವರು ದಿಢೀರ್ ಹೃದಯಾಘಾತಕ್ಕೊ ಳಗಾಗಿ ತಕ್ಷಣ  ತುರ್ತು  ಚಿಕಿತ್ಸೆ ನೀಡ ಲಾಯಿತಾದರೂ  ಅದು ಫಲಕಾರಿ ಯಾಗದೆ ಸಂಜೆ  ಮೃತಪಟ್ಟರು. ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ ಹೆಲಿಕಾಫ್ಟರ್‌ನಲ್ಲಿ ತಿರುವನಂತ ಪುರ ಜಗದಿಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿಂದ ಅದನ್ನು …

ಲೋಕಸಭಾ ಚುನಾವಣೆಗೆ ಸಜ್ಜಾದ ಬಿಜೆಪಿ: ರಾಜ್ಯದಲ್ಲಿ ಆರು ಕ್ಷೇತ್ರಗಳಲ್ಲಿ ಕಣ್ಣು

ತಿರುವನಂತಪುರ: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಅದಕ್ಕೆ ಕೇರಳದಲ್ಲಿ ಬಿಜೆಪಿ ಈಗಲೇ ಸಜ್ಜಾಗಿ ನಿಂತಿದೆ. ರಾಜ್ಯದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಧಾನವಾಗಿ ಕಣ್ಣಿರಿಸಿದೆ. ಪ್ರತೀ ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಮೂವರು ಎಂಬಂತೆ ಉಮೇದ್ವಾರ ಯಾದಿಯನ್ನು ಬಿಜೆಪಿ ತಯಾರಿಸುತ್ತಿದೆ. ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪ್ರಕಾಶ್ ಬಾಬು, ಪಿ.ಕೆ. ಕೃಷ್ಣದಾಸ್ ಮತ್ತು ರವೀಶ ತಂತ್ರಿ ಕುಂಟಾರು ಅವರ ಹೆಸರು ಪಕ್ಷದ ಪರಿಗಣನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು …

ನಿಯಂತ್ರಣ ತಪ್ಪಿದ ಟಿಪ್ಪರ್‌ಲಾರಿಯಿಂದ ಹಾರಿದ ಚಾಲಕ ಲಾರಿಯಡಿ ಸಿಲುಕಿ ಮೃತ್ಯು: ಪೊಲೀಸರು ಹಿಂಬಾಲಿಸಿರುವುದಾಗಿ ಆರೋಪ

ಬದಿಯಡ್ಕ: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಲು ಯತ್ನಿಸಿದ ಚಾಲಕ ಅದೇ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಆದರೆ ಪೊಲೀಸರು ಹಿಂಬಾಲಿಸಿ ರುವುದೇ ಲಾರಿ ಅಪಘಾತಕ್ಕೀ ಡಾಗಲು  ಕಾರಣವೆಂದು  ನಾಗರಿಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಚೆರ್ಲಡ್ಕ ಎದುರ್ತೋಡಿನ ಅಸ್ಮಿಯ ಮಂಜಿಲ್‌ನ ಅಬ್ದುಲ್ ರಹ್ಮಾನ್-ಆಯಿಶಾ ದಂಪತಿಯ ಪುತ್ರ ನೌಫಲ್ (೨೪) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಮುಂಜಾನೆ ಒಂದು ಗಂಟೆ ವೇಳೆ ಬದಿಯಡ್ಕ ಗೋಳಿಯಡ್ಕದಲ್ಲಿ ಅಪಘಾತ ಸಂಭವಿಸಿದೆ. ಹೊಯ್ಗೆ ಹೇರಿದ ಲಾರಿ ಇಳಿಜಾರಿನಲ್ಲಿ …

ಬಸ್‌ನಡಿಗೆ ಬಿದ್ದು ಪ್ರಯಾಣಿಕ ದಾರುಣ ಮೃತ್ಯು

ಮುಳ್ಳೇರಿಯ: ಬಸ್‌ನಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಿನ್ನೆ ಗಾಳಿಮುಖ ದಲ್ಲಿ ಸಂಭವಿಸಿದೆ.ಗಾಡಿಗುಡ್ಡೆ ಬಳಿಯ ಕೋಳಿಕ್ಕಾಲ್ ನಿವಾಸಿ ಕುಂಞಿರಾಮ ಮಣಿಯಾಣಿ (೭೦) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ನಿನ್ನೆ ಗಾಳಿಮುಖಕ್ಕೆ ತೆರಲಿದ್ದಾರೆನ್ನಲಾಗಿದೆ. ಬಸ್ಸಿನಿಂದಿಳಿದು ರಸ್ತೆ ದಾಟುವ ವೇಳೆ ಅದೇ ಬಸ್‌ನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ  ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದರು.ಮೃತರು ಪತ್ನಿ ನಾರಾಯಣಿ, ಮಕ್ಕಳಾದ ಮಣಿ, ಸಂತೋಷ್, ಸರೋಜಿನಿ, ಶ್ಯಾಮಲ, ಸಾವಿತ್ರಿ ಹಾಗೂ …

ತಾಳ್ತಾಜೆ ನಿವಾಸಿಯ ನಿಗೂಢ ಸಾವು: ಆಂತರಿಕ ಅವಯವಗಳು ರಾಸಾಯನಿಕ ತಪಾಸಣೆಗೆ

ಉಪ್ಪಳ: ಮುಳಿಗದ್ದೆ ತಾಳ್ತಾಜೆ ಕೊರಗಕಾಲನಿಯ ಮತ್ತಡಿ ಎಂಬವರ ಪುತ್ರ ಗೋಪಾಲ (೨೮)ರ ನಿಗೂಢ ಸಾವಿನ ಕುರಿತು ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ  ಪರೀಕ್ಷೆಯಲ್ಲಿ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹದಿಂದ ಸಂಗ್ರಹಿಸಿದ ರಕ್ತ ಹಾಗೂ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗೊಳಗಾಗಿ ಕಳುಹಿಸಲಾಗಿದೆ. ಅವುಗಳ ತಪಾಸಣೆಯಲ್ಲಿ ಮಾತ್ರವೇ ಸಾವಿನ ಕಾರಣ ತಿಳಿಯಲು ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೫ರಂದು ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಗೋಪಾಲ ೧೦ ಗಂಟೆ …