ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಚೆರ್ಕಳದಲ್ಲಿ ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೨.೮೮ ಲೀಟರ್ ಮದ್ಯ ವಶಪಡಿಸಿ ಕೊಂಡಿದೆ. ಈ ಸಂಬಂಧ ಕರ್ನಾಟಕ ಹಾವೇರಿ  ನಿವಾಸಿ ಸಂತೋಷ್ (೨೭) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ. ಇನ್ನೋರ್ವ ವ್ಯಕ್ತಿ ಸಂತೋಷ್‌ನ ಮೂಲಕ ಮದ್ಯ ಮಾರಾಟ ನಡೆಸುತ್ತಿದ್ದನೆಂಬ ಮಾಹಿ ತಿಯೂ ಲಭಿಸಿದೆ ಎಂದು ಅಬ ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ರೈಲ್ವೇ ಹಳಿ ಸಮೀಪ ವಿದ್ಯುತ್ ಕಂಬಕ್ಕೆ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಸಾವಿನಲ್ಲಿ ನಿಗೂಢತೆ

ಮಂಜೇಶ್ವರ: ಮಂಜೇಶ್ವರದಲ್ಲಿ ಯುವಕನೋರ್ವ ನಿಗೂಢ ರೀತಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಸುಮಾರು ನೂರು ಮೀಟರ್ ದೂರದಲ್ಲಿ ರೈಲು ಹಳಿ ಸಮೀಪವಿರುವ ವಿದ್ಯುತ್ ಕಂಬದಲ್ಲಿ  ಮೃತದೇಹ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಹಳಿ ಬದಿಯಲ್ಲಾಗಿ ನಡೆದು ಹೋಗುತ್ತಿದ್ದವರಿಗೆ ಮೃತದೇಹ ಕಂಡುಬಂದಿದೆ. ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ವ್ಯಕ್ತಿಗೆ ಸುಮಾರು ೪೫ರಿಂದ ೫೦ ವರ್ಷ ಪ್ರಾಯ ಅಂದಾಜಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಮೃತ ವ್ಯಕ್ತಿ ಒಳ ಉಡುಪು ಮಾತ್ರವೇ ಧರಿಸಿದ್ದು, ಬಟ್ಟೆಯಿಂದ ನೇಣು ಬಿಗಿದಿರುವುದಾಗಿ ತಿಳಿದುಬಂದಿದೆ. …

ಒಣಗಲು ಹಾಕಿದ್ದ ಅಡಿಕೆ ಕಳವು: ಅಬಕಾರಿ ಪ್ರಕರಣದ ಆರೋಪಿ ಸಹಿತ ಇಬ್ಬರು ಸೆರೆ

ಮುಳ್ಳೇರಿಯ: ವೈದ್ಯರ ಮನೆ ಅಂಗಳದಲ್ಲಿ ಒಣಗಲು ಹಾಕಿದ್ದ ೪೦೦೦ ಅಡಿಕೆ ಕಳವುಗೈದ ಪ್ರಕರಣದಲ್ಲಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ ಅಬಕಾರಿ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮುಳ್ಳೇರಿಯ ಪಾರಕ್ಕಲ್‌ನ ರೋಬಿನ್ (೪೫), ಮುಳಿಯಾರು ಪೇರಡ್ಕದ ಹರೀಶ್ ಕುಮಾರ್ (೪೧) ಎಂಬಿವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಮುಳ್ಳೇರಿಯದ  ಡಾಕ್ಟರ್  ಸುಕೇಶ್ ರಾಜ್‌ರ ಮನೆ ಅಂಗಳದಿಂದ ಅಡಿಕೆ ಕಳವು ನಡೆದಿದೆ. ಒಣಗಲು ಹಾಕಿದ್ದ ಅಡಿಕೆ ಕಳವಿಗೀಡಾದ ಬಗ್ಗೆ ನಿನ್ನೆ ಬೆಳಿಗ್ಗೆ ಡಾಕ್ಟರ್ ಆದೂರು ಪೊಲೀಸರಿಗೆ ದೂರು ನೀಡಿದ್ದರು. …

ಬಸ್ಸು ತಂಗುದಾಣದಲ್ಲಿ ನಿಂತಿದ್ದ ಪ್ಲಸ್‌ಟು ವಿದ್ಯಾರ್ಥಿಗೆ ತಂಡದಿಂದ ಹಲ್ಲೆ

ಕುಂಬಳೆ: ತರಗತಿ ಮುಗಿದು ಮನೆಗೆ ತೆರಳಲು ಬಸ್ ತಂಗುದಾಣದಲ್ಲಿ ನಿಂತಿದ್ದ ಪ್ಲಸ್‌ಟು ವಿದ್ಯಾರ್ಥಿಗೆ  ಮಾರಕಾಯುಧಗಳೊಂದಿಗೆ ತಲುಪಿದ ತಂಡ ಹಲ್ಲೆಗೈದು ದಾಗಿ ದೂರಲಾಗಿದೆ.  ಶಿರಿಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯೂ ನೆಲ್ಲಿಕುಂಜೆ ಚೇರಂಗೈ ಕಡಪ್ಪುರ ನಿವಾಸಿ ಯಾದ ಮೊಹಮ್ಮದ್ ಆಸಿಖ್ (೧೭)ಗೆ ಹಲ್ಲೆಗೈಯ್ಯಲಾಗಿದೆ. ವಿದ್ಯಾರ್ಥಿಯನ್ನು  ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಕಂಡರೆ ಪತ್ತೆಹಚ್ಚಬಹುದಾದ ಹತ್ತು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಪೋಕ್ಸೋ ಪ್ರಕರಣ: ಮದ್ರಸ ಅಧ್ಯಾಪಕನಿಗೆ ರಿಮಾಂಡ್

ಕುಂಬಳೆ: ಹನ್ನೆರಡರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಮದ್ರಸ ಅಧ್ಯಾಪಕನನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ಕಿದೂರು ಬಜ್ಪೆಕಡವಿನ ಅಬ್ದುಲ್ ಹಮೀದ್ (೪೪)ನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಈತನಿಗೆ  ನ್ಯಾಯಾಲಯ ೧೪ ದಿನಗಳ ರಿಮಾಂಡ್ ವಿಧಿಸಿದೆ. ಕಿರುಕುಳ ಯತ್ನಕ್ಕೊಳಗಾದ ಬಾಲಕಿ ಮನೆಗೆ ತಲುಪಿ ವಿಷಯ ತಿಳಿಸಿದಾಗಲೇ ಘಟನೆ  ಬಹಿರಂಗಗೊಂಡಿದೆ. ಬಳಿಕ ಮನೆಯವರು ಮಸೀದಿ ಕಮಿಟಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿದ ಹಿನ್ನೆಲೆಯಲ್ಲಿ  ಅಬ್ದುಲ್ ಹಮೀದ್‌ನನ್ನು ಕೆಲಸ ನಿರ್ವಹಿಸುವ ಮದ್ರಸದಿಂದ ಹೊರ ಹಾಕಲಾಗಿತ್ತು.

ಹೊಯ್ಗೆ ಸಾಗಿಸುತ್ತಿದ್ದ ಓಮ್ನಿ ವಶ: ಓರ್ವ ಸೆರೆ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮಂಜೇಶ್ವರ ಎಸ್‌ಐ ನಿಖಿಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓಮ್ನಿ ಚಾಲಕ ಉಪ್ಪಳ ನಿವಾಸಿ ಅಬ್ದುಲ್ ಸಮೀರ್ (೪೧)ನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಹೊಸಂಗಡಿ ಭಾಗಕ್ಕೆ ಸಂಚ ರಿಸುತ್ತಿದ್ದ ವಾಹನವನ್ನು ಪೊಲೀಸರು ಉಪ್ಪಳ ಗೇಟ್ ಬಳಿ ತಪಾಸಣೆ ನಡೆಸಿ ದಾಗ ಅದರಲ್ಲಿ ಹೊಯ್ಗೆ ಪತ್ತೆಯಾ ಗಿದೆ. ಓಮ್ನಿಯ ಸೀಟುಗಳನ್ನು ತೆರವುಗೊಳಿಸಿ ಗೋಣಿ ಚೀಲಗಳಲ್ಲಿ  ಹೊಯ್ಗೆ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ನವಕೇರಳ ಸಭೆಗಾಗಿ ಶಾಲಾ ಆವರಣ ಗೋಡೆ ನಾಶ

ಕೊಚ್ಚಿ       : ನವಕೇರಳ ಸಭೆಯ ಕಾರ್ಯಕ್ರಮ ನಡೆಯುವ ಶಾಲೆಗಳ ಆವರಣಗೋಡೆ ಮುರಿಯುವ  ಕೆಲಸ ಈಗಲೂ ಮುಂದುವರಿಯುತ್ತಿರು ವುದಾಗಿ ದೂರಲಾಗಿದೆ. ನವಕೇರಳ ಸಭೆಗಾಗಿ ಎರ್ನಾಕುಳಂ ಪೆರುಂಬಾವೂರಿನ ಸರಕಾರಿ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣ ಗೋಡೆಯ ಒಂದು ಭಾಗವನ್ನು ಇದೀಗ  ಮುರಿಯಲಾಗಿದೆ. ನವಕೇರಳ ಸಭೆಯಲ್ಲಿ ಭಾಗವಹಿಸುವ ಜನರಿಗೆ ದಾರಿ ಸೌಕರ್ಯ ಒದಗಿಸಲು ಆವರಣಗೋಡೆ ಯನ್ನು ಮುರಿಯುತ್ತಿರುವುದಾಗಿ ಆರೋಪವುಂಟಾಗಿದೆ. ವೇದಿಕೆಗೆ ಇರುವ ಪ್ರಧಾನ ದ್ವಾರದ ಹೊರತು  ವೇದಿಕೆಯ ಸಮೀಪಕ್ಕೆ ತಲುಪಲು ಸಾಧ್ಯವಾಗುವ ರೀತಿಯಲ್ಲಿ ಶಾಲಾ ಮೈದಾನದ ಮತ್ತೊಂದು ಭಾಗದಲ್ಲಿರುವ ಗೋಡೆಯನ್ನು …

ಪೊಲೀಸರು ಹಿಂಬಾಲಿಸಿದ ಕಾರು ಮಗುಚಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ಪೊಲೀಸರ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಪೊಲೀಸರು ತಮ್ಮ ಜೀಪಿನಲ್ಲಿ ಹಿಂಬಾಲಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರ ವಿರುದ್ಧ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ರ ನ್ಯಾಯಾಲಯ (೨)ದ ನಿರ್ದೇಶ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದ ಓಣಂ ಹಬ್ಬದ ಋತುವಿನಲ್ಲಿ ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್-ಟು ವಿದ್ಯಾರ್ಥಿ ಪೇರಾಲ್ ಕಣ್ಣೂರು ಫರೋಸ್ (೧೭) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಆತ ಸಾವನ್ನಪ್ಪಿದ್ದನು. …

ಕಾಶ್ಮೀರದಲ್ಲಿ ಕಾರು ಅಪಘಾತ: ನಾಲ್ವರು ಪಾಲಕ್ಕಾಡ್ ನಿವಾಸಿಗಳು ಮೃತ್ಯು

ಪಾಲಕ್ಕಾಡ್: ಜಮ್ಮು-ಕಾಶ್ಮೀರದಲ್ಲಿ ಕಾರು ಕಂದಕಕ್ಕೆ ಉರುಳಿ ಪಾಲಕ್ಕಾಡ್ ನಿವಾಸಿಗಳಾದ ನಾಲ್ಕು ಮಂದಿ ಸಹಿತ ಐವರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪಾಲಕ್ಕಾಡ್ ಚಿಟ್ಟೂರು ನೆಡುಮಂಗಾಡ್ ನಿವಾಸಿಗಳಾದ ಸುಧೀಶ್(೩೩), ಅನಿಲ್(೩೪), ರಾಹುಲ್(೨೮), ವಿಘ್ನೇಶ್ (೨೩) ಎಂಬವರು ಹಾಗೂ ಜಮ್ಮು ಕಾಶ್ಮೀರ ನಿವಾಸಿಯಾದ ಕಾರು ಚಾಲಕ ಅಜಾಸ್ ಅಹಮ್ಮದ್ ಅಸರ್ ಎಂಬವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಪಾಲಕ್ಕಾಡ್ ನಿವಾಸಿಗಳಾದ ರಾಜೇಶ್, ಅರುಣ್, ಮನೋಜ್ ಎಂಬಿವರು ಗಾಯಗೊಂಡಿದ್ದಾರೆ. ಇವರು ಪ್ರವಾಸಕ್ಕಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದರು. ನಿನ್ನೆ ಮಧ್ಯಾಹ್ನ ಸೋಜಿಲಾಪಾಸ್ ಸಂದರ್ಶಿಸಿದ ಬಳಿಕ ಲೇಹ್ …

ರೋಯಲ್ ಟ್ರಾವಂಕೂರ್ ಠೇವಣಿ ವಂಚನೆ: ಕುಂಬಳೆಯಲ್ಲಿ ಪೊಲೀಸ್ ತನಿಖೆ ಆರಂಭ

ಕುಂಬಳೆ: ಬಡಜನತೆಗೆ ಭರವಸೆಯೊಡ್ಡಿ ಕೋಟ್ಯಂ ತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಲಾಯಿ ತೆಂಬ ದೂರುಗಳು ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಂಗವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೋಯಲ್ ಟ್ರಾವಂಕೂರ್ ಕಂಪೆನಿಯ ಕುಂಬಳೆ ಶಾಖೆಯ ನೌಕರೆಯರಾದ ಐವರು ಯುವತಿಯರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕಂಪೆನಿಗೆ ಠೇವಣಿ ಸಂಗ್ರಹಿಸಿಕೊಟ್ಟ ತಮಗೂ ಕಂಪೆನಿ ವೇತನ ನೀಡದೆ ವಂಚಿಸಿದೆಯೆಂದು ದೂರುಗಾರರು ಪೊಲೀಸರಲ್ಲಿ ತಿಳಿಸಿದ್ದಾರೆ. ಠೇವಣಿಗಾರರಿಂದ ಲಭಿಸಿದ ಹಣವನ್ನು ಎಣಿಕೆ ಮಾಡಿ ಯಥಾ ಸಮಯ ಕಂಪೆನಿಯ ಮಾಲಕರಿಗೆ ಹಸ್ತಾಂತರಿಸಿರುವುದಾಗಿ ಅವರು …