ಕಾಶ್ಮೀರದಲ್ಲಿ ಕಾರು ಅಪಘಾತ: ನಾಲ್ವರು ಪಾಲಕ್ಕಾಡ್ ನಿವಾಸಿಗಳು ಮೃತ್ಯು

ಪಾಲಕ್ಕಾಡ್: ಜಮ್ಮು-ಕಾಶ್ಮೀರದಲ್ಲಿ ಕಾರು ಕಂದಕಕ್ಕೆ ಉರುಳಿ ಪಾಲಕ್ಕಾಡ್ ನಿವಾಸಿಗಳಾದ ನಾಲ್ಕು ಮಂದಿ ಸಹಿತ ಐವರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪಾಲಕ್ಕಾಡ್ ಚಿಟ್ಟೂರು ನೆಡುಮಂಗಾಡ್ ನಿವಾಸಿಗಳಾದ ಸುಧೀಶ್(೩೩), ಅನಿಲ್(೩೪), ರಾಹುಲ್(೨೮), ವಿಘ್ನೇಶ್ (೨೩) ಎಂಬವರು ಹಾಗೂ ಜಮ್ಮು ಕಾಶ್ಮೀರ ನಿವಾಸಿಯಾದ ಕಾರು ಚಾಲಕ ಅಜಾಸ್ ಅಹಮ್ಮದ್ ಅಸರ್ ಎಂಬವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಪಾಲಕ್ಕಾಡ್ ನಿವಾಸಿಗಳಾದ ರಾಜೇಶ್, ಅರುಣ್, ಮನೋಜ್ ಎಂಬಿವರು ಗಾಯಗೊಂಡಿದ್ದಾರೆ.

ಇವರು ಪ್ರವಾಸಕ್ಕಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದರು. ನಿನ್ನೆ ಮಧ್ಯಾಹ್ನ ಸೋಜಿಲಾಪಾಸ್ ಸಂದರ್ಶಿಸಿದ ಬಳಿಕ ಲೇಹ್ ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮೂಲಕ ಶ್ರೀನಗರಕ್ಕೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

RELATED NEWS

You cannot copy contents of this page