ಗೃಹಿಣಿಗೆ  ಕಿರುಕುಳ ನೀಡಿದ ಯುವಕ ಸೆರೆ

ಮುಳ್ಳೇರಿಯ:  ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಯುವಕ ಸೆರೆಗೀಡಾಗಿದ್ದಾನೆ.  ಅಡೂರು ಕೊರತ್ತಿಮೂಲೆ ನಿವಾಸಿಯಾದ ೩೭ರ ಹರೆಯದ ಯುವಕ ಸೆರೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ನಲ್ವತ್ತರ ಹರೆಯದ ಗೃಹಿಣಿ ಈ ಬಗ್ಗೆ  ದೂರು ನೀಡಿದ್ದಳು. ಯುವಕನ ವಿರುದ್ಧ ಇದೇ ಯುವತಿ ಈ ಹಿಂದೆಯೂ ಇದೇ ರೀತಿಯ ದೂರು ನೀಡಿದ್ದಳ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅನಂತರವೂ ಯುವತಿಗೆ  ಆರೋಪಿ ಕಿರುಕುಳ ನೀಡಿರುವುದಾಗಿ  ಹೇಳಲಾಗುತ್ತಿದೆ. ಈ ಬಗ್ಗೆ …

ನವಕೇರಳ ಸಭ ಸಂಪೂರ್ಣ ಪರಾಜಯ-ರಮೇಶ್ ಚೆನ್ನಿತ್ತಲ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಸಭೆ ಸಂಪೂರ್ಣವಾಗಿ ಪರಾಜಯಗೊಂ ಡಿದೆಯೆಂದು ಕಾಂಗ್ರೆಸ್‌ನ ಹಿರಿಯ ನೇತಾರ, ಮಾಜಿ ವಿರೋಧಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಕಾಸರಗೋಡು ಬ್ಲೋಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ  ಏಕದಿನ ಶಿಬಿರದ ಉದ್ಘಾಟನೆಯ ಮೊದಲು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು. ನವಕೇರಳ ಯಾತ್ರೆಗೆ ಕಾಸರಗೋಡಿನಿಂದಲೇ ಚಾಲನೆ ನೀಡಲಾಗಿತ್ತು. ಈ  ಜಿಲ್ಲೆಯಲ್ಲಿ  ಮಾತ್ರವಾಗಿ ಜನರಿಂದ ೧೪೦೦೦ಕ್ಕಿಂತಲೂ ಹೆಚ್ಚು ದೂರುಗಳು ಆವೇಳೆ ಲಭಿಸಿತ್ತು. ಆ …

ಸಾಲ ಮರು ಪಾವತಿಸಬೇಕಾದ ಕೊನೆಯ ತಾರೀಕು ಆದಿತ್ಯವಾರ: ಒಂದು ದಿನ ತಡವಾಗಿ ಸಾಲ ಮೊತ್ತ ಪಡೆಯಲು ನಿರಾಕರಣೆ; ಬ್ಯಾಂಕ್ ವಿರುದ್ಧ ತೀರ್ಪು

ಕಾಸರಗೋಡು: ಬ್ಯಾಂಕ್‌ನಿಂದ ಪಡೆದ ಸಾಲದ ಮೊತ್ತವನ್ನು ಮರುಪಾವತಿಸಲಿರುವ ಕೊನೆಯ ತಾರೀಕು ಆದಿತ್ಯವಾರವಾದ ಹಿನ್ನೆಲೆಯಲ್ಲಿ ಅದರ ಮರುದಿನ ಮೊತ್ತ ಪಾವತಿಸಲು ತೆರಳಿದ ಸಾಲಗಾರನಿಂದ ಹಣ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಿದ್ಧರಾಗಲಿಲ್ಲವೆನ್ನಲಾಗಿದೆ. ಇದರಿಂದಾಗಿ ಸಾಲಗಾರನಿಗೆ  ಕೇಂದ್ರ ಸಬ್ಸಿಡಿ ನಷ್ಟಗೊಂಡಿತೆಂಬ ದೂರಿನಂತೆ ಸಾಲಗಾರನಿಗೆ ಅನುಕೂಲವಾಗಿ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗ ತೀರ್ಪು ನೀಡಿದೆ. ಒಂದು ದಿನ ತಡವಾದ ಹಿನ್ನೆಲೆಯಲ್ಲಿ  ಸಾಲದ ಮೊತ್ತ ಪಡೆಯಲಿಲ್ಲವೆಂಬ ಆರೋಪದಂತೆ ಬ್ಯಾಂಕ್ ೧೦,೦೦೦ ರೂಪಾಯಿ ನಷ್ಟ ಪರಿಹಾರ ಹಾಗೂ ೫೦೦೦ ರೂಪಾಯಿ ನ್ಯಾಯಾಲಯದ ಖರ್ಚು ನೀಡಬೇಕೆಂಬುವುದಾಗಿ …

ಬಿರ್ಮಿನಡ್ಕದಲ್ಲಿ ಮಾಜಿ ಪಂಚಾಯತ್ ಸದಸ್ಯನ ಮಗನಿಗೆ ಇರಿತ

ಬದಿಯಡ್ಕ: ಗಡಿ ಪ್ರದೇಶದಲ್ಲಿರುವ ಮರದ ಹೆಸರಿನಲ್ಲಿ ಉಂಟಾದ ವಿವಾದ ದಿಂದ ವಾಗ್ವಾದ ನಡೆದಿದ್ದು, ಈ ವೇಳೆ ಮಾಜಿ ಪಂಚಾಯತ್ ಸದಸ್ಯನ ಮಗನಿಗೆ ಇರಿತವುಂಟಾಗಿದೆ. ಬಿರ್ಮಿನಡ್ಕದ ಮಾಜಿ ಪಂಚಾಯತ್ ಸದಸ್ಯ ಮುಹಮ್ಮದ್‌ರ ಪುತ್ರ ಲತೀಫ್‌ಗೆ ಇರಿತವುಂಟಾಗಿದೆ. ಇವರನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ನೆರೆಮನೆ ನಿವಾಸಿ ಇರಿದಿರುವುದಾಗಿ ಹೇಳಲಾಗುತ್ತಿದೆ. ಗಡಿ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರದ ರೆಂಬೆಗಳಿಗೆ ಸಂಬಂಧಿಸಿದ ವಿವಾದವೇ ಘಟನೆಗೆ ಕಾರಣವೆಂದು ಸಂಶಯಿಸಲಾಗುತ್ತಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ಅನಧಿಕೃತ ಹೊಯ್ಗೆ ಸಾಗಾಟ ಎರಡು ಲಾರಿಗಳ ವಶ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಮಂಜೇಶ್ವರ ಪೊಲೀಸರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ. ವರ್ಕಾಡಿ ಭಾಗದಿಂದ ಹೊಸಂಗಡಿ ಭಾಗಕ್ಕೆ ಹೊಯ್ಗೆ ಸಾಗಿಸುತ್ತಿದ್ದ ಒಂದು ಲಾರಿಯನ್ನು ಮೊರತ್ತಣೆ ಬಸ್ ನಿಲ್ದಾಣ ಬಳಿಯಿಂದ ಎಸ್.ಐ ಪ್ರಶಾಂತ್ ವಶಪಡಿಸಿಕೊಂಡು ಲಾರಿ ಚಾಲಕ ವರ್ಕಾಡಿ ತಲೆಕ್ಕಿ ನಿವಾಸಿ ಮೊಹಮ್ಮದ್ ಉಸಾಮ (೨೪) ಎಂಬಾತನನ್ನು ಸೆರೆಹಿಡಿದಿದ್ದಾರೆ. ಇನ್ನೊಂದು ಲಾರಿಯನ್ನು ಎಸ್‌ಐ ನಿಖಿಲ್ ಕಡಂಬಾರ್ ಶಾಲೆ ಬಳಿಯಿಂದ ವಶಪಡಿ ಸಿಕೊಂಡು ಚಾಲಕ ಕರ್ನಾಟಕ ನಿವಾಸಿ ಕದರಿ (೪೧) ಎಂ ಬಾತನನ್ನು ಬಂಧಿಸಲಾಗಿದೆ.

ಕಾರು ಢಿಕ್ಕಿ ಹೊಡೆದು ಟ್ಯಾಕ್ಸಿ ಚಾಲಕನಿಗೆ ಗಾಯ

ಉಪ್ಪಳ: ರಸ್ತೆ ದಾಟುತ್ತಿದ್ದ ಟ್ಯಾಕ್ಸಿ ಚಾಲಕನಿಗೆ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ನಡೆದಿದೆ. ಬೇಕೂರು ಒಬರ್ಲೆ ನಿವಾಸಿ ಪುತ್ತು ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೭.೩೦ರ ವೇಳೆ ಉಪ್ಪಳ ಬಳಿಯ ಮಣ್ಣಂಗುಳಿಯಲ್ಲಿ ಘಟನೆ ನಡೆದಿದೆ. ಪುತ್ತು ತನ್ನ ಟ್ಯಾಕ್ಸಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ರಸ್ತೆ ದಾಟುತ್ತಿದ್ದಾಗ ಕೈಕಂಬ ಭಾಗದಿಂದ ಬಂದ ಕಾರು ಅವರಿಗೆ  ಢಿಕ್ಕಿ ಹೊಡೆದಿದೆ. ಅದೇ ಕಾರು ಬಳಿಕ ಬೈಕೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ.

ಹೆಚ್ಚುತ್ತಿರುವ ಭಕ್ತರ ಸಂದಣಿ: ತಿರುಪತಿ ಮಾದರಿಯಲ್ಲಿ ನಿಯಂತ್ರಣ

ಶಬರಿಮಲೆ: ಕ್ಷೇತ್ರದರ್ಶನ ನಡೆಸುವ ತೀರ್ಥಾಟಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ಸಂದಣಿಯನ್ನು ನಿಯಂತ್ರಿಸಲು ತಿರುಪತಿ ಮಾದರಿಯಲ್ಲಿ ಕ್ಯೂ ವ್ಯವಸ್ಥೆ ಏರ್ಪಡಿಸಲಾಗಿದೆ. ನಿನ್ನೆ ಮುಂಜಾನೆ ಯಿಂದಲೇ ಕ್ಯೂ ಕಾಂಪ್ಲೆಕ್ಸ್‌ಗಳಲ್ಲಿ ತೀರ್ಥಾಟಕರನ್ನು ನಿಲ್ಲಿಸಿದ ಬಳಿಕ ಸನ್ನಿಧಾನದಿಂದ ಲಭಿಸಿದ ಪೊಲೀಸರ ನಿರ್ದೇಶ ಪ್ರಕಾರ  ಪ್ರತೀ ಕಾಂಪ್ಲೆಕ್ಸ್ ಗಳನ್ನು ತೆರೆದು ಬಿಡಲಾಯಿತು. ಶನಿವಾರ, ಆದಿತ್ಯವಾರ ದಿನ ಗಳಲ್ಲಿ ತೀರ್ಥಾಟಕರು ಪಂಪಾ ದಿಂದ ಸನ್ನಿಧಾನಕ್ಕೆ ತಲುಪಲು ೭ರಿಂದ ೮ ಗಂಟೆವರೆಗೆ ತಗಲುತ್ತದೆ. ನಿನ್ನೆ ತೀರ್ಥಾಟಕರ ಸಂಖ್ಯೆಯಲ್ಲಿ ಹೆಚ್ಚಳವಿದ್ದರೂ ೪ರಿಂದ ೫ ಗಂಟೆ ಯೊಳಗೆ ತಲುಪಲು …

ಸಾಯಿ ಗ್ರಾಮ ಮನೆಗಳ ಕೀಲಿ ಕೈ ಹಸ್ತಾಂತರ ಶೀಘ್ರ: ಪೂರ್ವಸಿದ್ಧತೆ ಚರ್ಚೆ

ಪೆರ್ಲ: ಎಣ್ಮಕಜೆ ಪಂಚಾ ಯತ್‌ನಲ್ಲಿ ಸತ್ಯಸಾಯಿ ಓರ್ಫನೇಜ್ ಟ್ರಸ್ಟ್ ಎಂಡೋಸಲ್ಫಾನ್ ಸಂತ್ರಸ್ತರಿ ಗಾಗಿ ನಿರ್ಮಿಸಿದ ಮನೆಗಳ ಕೀಲಿ ಕೈ ಹಸ್ತಾಂ ತರದ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ವಿವರಿಸಲು ಜಿಲ್ಲಾಧಿಕಾರಿ ಕೆ. ಇಂಭಶೇ ಖರ್ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಮಿನಿ ಕಾನ್ಫರೆನ್ಸ್ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಫಲಾನುಭವಿಗಳ, ಸಾಯಿ ಟ್ರಸ್ಟ್ ಪದಾಧಿಕಾರಿಗಳ, ಅಧಿಕಾರಿಗಳು   ಭಾಗವಹಿಸಿದರೂ ಎಣ್ಮಕಜೆ ಪಂ., ಕುಟುಂಬಶ್ರೀ ಮಿಶನ್ ಜಂಟಿಯಾಗಿ ಯೋಜನೆ ಮನೆಗಳನ್ನು ಕೊನೆಯ  ಹಂತದ ಶುಚೀಕರಣ ನಡೆಸಲಿದೆ.  ಈ ಮನೆಗಳಿಗೆ ಜಲಜೀವನ್ ಮಿಶನ್ ಮೂಲಕ …

ನಗರದ ಸಾರಿಗೆ ಸಂಚಾರ ತಡೆ ಪರಿಹಾರಕ್ಕೆ ಅಧಿಕಾರಿಗಳ ಜಂಟಿ ತಪಾಸಣೆ

ಕಾಸರಗೋಡು: ನಗರದ ಸಾರಿಗೆ ತಡೆಯನ್ನು ಹೊರತುಪಡಿಸಲು ಪಾರ್ಕಿಂಗ್ ವ್ಯವಸ್ಥೆ ಸಿದ್ಧಪಡಿಸಲು ನಗರಸಭಾ ಅಧ್ಯಕ್ಷ, ನಗರಸಭಾ ಸುಪರಿಂಟೆಂಡೆಂಟ್, ಇಂಜಿನಿಯರ್, ಪೊಲೀಸ್ ಸಹಿತದ ತಂಡ ಹೊಸ ಬಸ್ ನಿಲ್ದಾಣದಿಂದ ಟ್ರಾಫಿಕ್ ಜಂಕ್ಷನ್‌ವರೆಗೆ ಪರಿಶೀಲನೆ ನಡೆಸಿದೆ. ತಂಡದಲ್ಲಿ ವಿ.ಎಂ. ಮುನೀರ್, ರಾಮಚಂದ್ರನ್, ಎನ್.ಡಿ, ದಿಲೀಶ್, ಜಿ. ಗಂಗಾಧರನ್, ಎಂ.ಎನ್. ಸೌಮ್ಯ, ಎಂ. ಅನಿತ, ಪೊಲೀಸ್ ಅಧಿಕಾರಿ ಗಳಾದ ಸಿಐಪಿ ಅಜಿತ್ ಕುಮಾರ್, ಎಸ್.ಐ. ಸಜಿ ಮೋನ್ ಜಾರ್ಜ್, ಎಎಸ್‌ಐ ಕೆ. ಶಶಿಧರನ್, ಕೆ. ಜಿನಚಂದ್ರನ್, ಟ್ರಾಫಿಕ್ ಎಸ್.ಐ. ಅಜೀಶ್, ಮೋಟಾರು ವಾಹನ …

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಅಭಾವ ಪರಿಹರಿಸಬೇಕು-ಶಾಸಕ

ಮಂಜೇಶ್ವರ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರುಗಳ ಖಾಲಿ ಹುದ್ದೆ ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಕೆಎಂ ಅಶ್ರಫ್ ಆಗ್ರಹಪಟ್ಟರು. ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಂಪುಕಲ್ಲು, ಕಗ್ಗಲ್ಲು ಅನಧಿಕೃತ ಕ್ವಾರೆಗಳ ವಿರುದ್ಧ ಜಿಯೋಲಜಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಯೆಂದೂ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.  ಬಂಬ್ರಾಣದಲ್ಲಿ ೪೦೦ ಎಕ್ರೆಯಷ್ಟು ಕೃಷಿ ಭೂಮಿ ವನ್ಯ ಮೃಗಗಳ ಹಾವಳಿಯಿಂದ ನಷ್ಟವುಂಟಾಗಿರುವು ದರಿಂದಾಗಿ ಕೃಷಿಕರಿಗೆ ಸೂಕ್ತ ನಷ್ಟಪರಿಹಾರ ನೀಡಲು ಕೃಷಿ ಇಲಾಖೆ ಕ್ರಮ …