ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ : ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಜ.೧ರಿಂದ

ಕಾಸರಗೋಡು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ದಾಖಲಿಸಲಾಗಿರುವ ಲಂಚ ಸ್ವೀಕಾರ ಆರೋಪ ಪ್ರಕರಣವನ್ನು ರದ್ದುಪಡಿಸಬೇಕೆಂದು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತಿತರರು ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆ  ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಜನವರಿ ೧ರಿಂದ ಆರಂಭಗೊಳ್ಳಲಿದೆ. ಈ ಪ್ರಕರಣದ ವಿಚಾರಣೆ ನಿನ್ನೆ ಆರಂಭಗೊಳ್ಳಬೇಕಾಗಿತ್ತು. ಆದರೆ ನ್ಯಾಯಾಧೀಶರು ನಿನ್ನೆ ರಜೆಯಾಗಿದ್ದ ಕಾರಣದಿಂದ ವಿಚಾರಣೆಯನ್ನು ಬಳಿಕ ಜನವರಿ ೧ಕ್ಕೆ ಮುಂದೂಡಲಾಯಿತು. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಮಂಜೇಶ್ವರ …

ಕೊಲ್ಲಬಂಜಾರ ಸ್ಮಶಾನಕ್ಕೆ ಶೆಡ್ ನಿರ್ಮಾಣ ಕಾಮಗಾರಿ ಆರಂಭ: ಊರವರ ಬೇಡಿಕೆಗೆ ಸ್ಪಂದನೆ

ಉಪ್ಪಳ: ಪೈವಳಿಕೆ ಪಂಚಾ ಯತ್‌ನ ೧೪ನೇ ವಾರ್ಡ್ನ ಕಯ್ಯಾರ್ ಬಳಿಯ ಕೊಲ್ಲಬಂಜಾರ ಸಾರ್ವ ಜನಿಕ ಸ್ಮಶಾನದಲ್ಲಿ ಶೆಡ್ಡ್ ನಿರ್ಮಾ ಣದ ಕಾಮಗಾರಿ ಆರಂಭಗೊA ಡಿದೆ. ಸ್ಮಶಾನಕ್ಕೆ ಆವರಣಗೋಡೆ ಮಾತ್ರವೆ ಈ ಹಿಂದೆ ನಿರ್ಮಿಸ ಲಾಗಿದೆ. ಇದರ ಅಭಿವೃದ್ದಿಗಾಗಿ ಊರವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ವಾರ್ಡ್ ಪ್ರತಿನಿದಿs ರಾಜೀವಿ ಶೆಟ್ಟಿಗಾರ್ ರವರ ಮುತುವರ್ಜಿಯಿಂದ ಪಂಚಾ ಯತ್‌ನಿಂದ ಪsಂಡ್ ಮಂಜೂರು ಗೊಂಡು ಇದೀಗ ಅದರ ಕಾಮಗಾರಿ ಆರಂಭಿಸಲಾಗಿದೆ. ಪಿಲ್ಲರ್ ಹಾಕುವ ಕೆಲಸ ನಡೆಯುತ್ತಿದೆ. ಕುಡಾಲು ಮೇರ್ಕಳ, ಕಯ್ಯಾರ್ ಗ್ರಾಮ ಸಹಿತ …

ಸಮುದ್ರದಲ್ಲಿ ಸ್ನಾನಕ್ಕಿಳಿದು ಅಲೆಗಳ ಸೆಳೆತಕ್ಕೊಳಗಾದ ೨೦ರಷ್ಟು ಮಕ್ಕಳು:  ಮೀನು ಕಾರ್ಮಿಕರ ಪ್ರಯತ್ನದಿಂದ ಅಪಾಯದಿಂದ ರಕ್ಷಣೆ

ಕಾಸರಗೋಡು: ಕಾಸರಗೋಡು ಕಡಪ್ಪುರದಲ್ಲಿ ಸ್ನಾನಕ್ಕಿಳಿದ ಇಪ್ಪತ್ತರಷ್ಟು ಮಕ್ಕಳು ಭಾರೀ ಅಲೆಗೆ ಸಿಲುಕಿ ಆಳ ಸಮುದ್ರದತ್ತ ಒಯ್ಯಲ್ಪಟ್ಟಿದ್ದು, ವಿಷಯ ತಿಳಿದು ಮೀನು ಕಾರ್ಮಿಕರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದ ಮಕ್ಕಳನ್ನು ಅಪಾಯದಿಂದ ರಕ್ಷಿಸಲಾಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಕಾಸರಗೋಡು ಕಡಪ್ಪುರ ಬಳಿ ಅಯ್ಯಪ್ಪ ದೀಪೋತ್ಸವಕ್ಕೆಂದು ತಲುಪಿದ ೧೨,೧೩,೧೪ರ ಹರೆಯದ ಸುಮಾರು ೨೦ರಷ್ಟು ಮಕ್ಕಳು ಇಂದು ಬೆಳಿಗ್ಗೆ ಸಮುದ್ರ ಕಿನಾರೆಗೆ ತಲುಪಿದ್ದಾರೆ. ಬಳಿಕ  ಮೀನು ಕಾರ್ಮಿಕರು ಬಳಸುವ ಕ್ಯಾನ್‌ಗಳನ್ನು ದೇಹಕ್ಕೆ ಕಟ್ಟಿ ಇವರು ಸಮುದ್ರಕ್ಕಿಳಿದಿದ್ದರು. ಆದರೆ ಅದೇ ಹೊತ್ತಿನಲ್ಲಿ  …

ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಸರ ಎಳೆದು ಕಳ್ಳ ಪರಾರಿ

ಕಾಸರಗೋಡು: ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ನಡೆದಿದೆ. ಹೊಸದುರ್ಗ ಬಲ್ಲಾ ಕಡಪ್ಪುರದ ಮೈಮೂನಾ ಎಂಬಾಕೆಗೆ ಈ ಅನುಭವ ಉಂಟಾಗಿದೆ. ನಿನ್ನೆ ರಾತ್ರಿ ಮನೆ ಮುಂದೆ ಯಾವುದೋ ಶಬ್ದ ಉಂಟಾದಾಗ ಮೈಮೂನಾ ಮನೆಯ ಎದುರುಗಡೆಯ ಬಾಗಿಲು ತೆರೆದು ಹೊರ ಬಂದು ನೋಡಿದಾಗ ಹೊರಗಡೆ ಇದ್ದ ಕಳ್ಳನೋರ್ವ ಆಕೆಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಿಡಿದೆಳೆದಿದ್ದಾನೆ. ಮೈಮೂನಾ   ತಡೆದಾಗ ಸರ ತುಂಡಾಗಿ ಅದರ …

ಪಾನ್‌ಮಸಾಲೆ ಸಹಿತ ಸೆರೆ

ಮಂಜೇಶ್ವರ: ಪಾನ್ ಮಸಾಲೆ ಕೈವಶವಿರಿಸಿಕೊಂಡಿದ್ದ ಇಬ್ಬರನ್ನು ಮಂಜೇಶ್ವರ ಎಸ್‌ಐ ರಮೇಶ್ ಸೆರೆ ಹಿಡಿದಿದ್ದಾರೆ. ಮೀಯಪದವು ನಿವಾಸಿ ಅಬೂಬಕರ್ (೪೯)ನನ್ನು ನಿನ್ನೆ ರಾತ್ರಿ ೨೯ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಸೆರೆ ಹಿಡಿಯ ಲಾಗಿದೆ. ಬಾಯಿಕಟ್ಟೆ ನಿವಾಸಿ ಅಬ್ದುಲ್ಲ (೮೦)ನನ್ನು ನಿನ್ನೆ ಮಧ್ಯಾಹ್ನ ೬೪ ಪ್ಯಾಕೆಟ್ ಪಾನ್‌ಮಸಾಲೆ ಸಹಿತ ಬೇಕೂರಿನಿಂದ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂಬಳೆ:  ಪಾನ್ ಮಸಾಲೆ ಕೈವಶವಿರಿಸಿಕೊಂಡ ಓರ್ವನನ್ನು ಕುಂಬಳೆ ಎಸ್‌ಐ ಗಣೇಶ್ ಬಂಧಿಸಿದ್ದಾರೆ. ಪುತ್ತಿಗೆ ಕಯ್ಯಾಂಕೂಡ್ಲು ನಿವಾಸಿ ಮೊಹಮ್ಮದ್ ಅರ್ಶಾದ್ (೩೫)ನನ್ನು …

೯ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ಪ್ರಕರಣ: ಆರೋಪಿಗೆ ೪೮ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಪರಿಶಿಷ್ಟ ವಿಭಾಗಕ್ಕೆ ಸೇರಿದ ಒಂಬತ್ತರ ಹರೆಯದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್‌ಟ್ರಾಕ್ ಸ್ಪೆಷಲ್ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರಾದ ಸಿ. ದೀಪು ಅವರು ಪೋಕ್ಸೋ ಹಾಗೂ ಐಪಿಸಿಯ ಇತರ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೪೮ ವರ್ಷ ಸಜೆ ಹಾಗೂ ೫೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ವಣಿಯಾಡಿ ಕರಿವೇಡಗಂ ನಿವಾಸಿ ಮೊಹಮ್ಮದ್ ಹನೀಫಾ (೪೭) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಒಟ್ಟು ನೀಡಲಾದ ೪೮ ವರ್ಷಗಳ ಶಿಕ್ಷೆಯಲ್ಲಿ ೩೩ …

ಬಿಜೆಪಿ ಪಾರಮ್ಯ : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗಿರುವ ದಿಕ್ಸೂಚಿ

ನವದೆಹಲಿ: ಪಂಚ ರಾಜ್ಯಗಳಿಗೆ ನಡೆದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಪಾರಮ್ಯ ಮುಂದಿನ ಲೋಕಸಭೆ ಚುನಾವಣೆಗೆ ಒಂದು ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಹಿಂದಿ ಹೃದಯ ಕೇಂದ್ರಗಳಾದ ಮಧ್ಯ ಪ್ರದೇಶದಲ್ಲಿ ವಿಧಾನಸಭೆಯ ಒಟ್ಟು ೨೩೦ ಬಲದಲ್ಲಿ ಬಿಜೆಪಿ ೧೬೩ (ಕಳೆದ ಬಾರಿ ೧೦೯) ಸ್ಥಾನ ಗೆದ್ದು ಪ್ರಚಂಡ ಬಹುಮತ ಪಡೆದುಕೊಂಡಿದೆ. ಒಟ್ಟು ಚಲಾಯಿಸಲ್ಪಟ್ಟ ಮತದಲ್ಲಿ ಬಿಜೆಪಿಗೆ ಶೇ. ೪೮.೫೨ ಮತಗಳು ಲಭಿಸಿವೆ.  ಹಿಂದೆ ೧೧೪ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ …

ತೆಲಂಗಾನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ನಾಳೆ ಪ್ರಮಾಣವಚನ ಸ್ವೀಕಾರ

ಹೈದರಾಬಾದ್: ತೆಲಂಗಾನ ಚುನಾ ವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್ ನಾಳೆ ಇದೇ ಮೊದಲ ಬಾರಿಯಾಗಿ ತೆಲಂಗಾನದಲ್ಲಿ  ಸರಕಾರ ರಚಿಸಲಿದೆ. ಹೈದರಾಬಾದ್‌ನ ಎಲ್ಬಿ ಸ್ಟೇಡಿಯಂನಲ್ಲಿ ಕಾಂಗ್ರೆಸ್‌ನ ಅತ್ಯಂತ  ಪ್ರಭಾವಿ ನೇತಾರ, ರಾಜ್ಯ ಅಧ್ಯಕ್ಷರೂ ಆಗಿರುವ ರೇವಂತ್ ರೆಡ್ಡಿ ನಾಳೆ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು.  ತನ್ನ ನೇತೃತ್ವದಲ್ಲಿ ಸರಕಾರ ರಚಿಸುವ ಪ್ರಸ್ತಾವವನ್ನು ರೇವಂತ್ ರೆಡ್ಡಿ ತೆಲಂಗಾನ ರಾಜ್ಯಪಾಲರಿಗೆ ಈಗಾಗಲೇ ಸಲ್ಲಿಸಿದ್ದಾರೆ.

ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಮಂಜೇಶ್ವರ: ಕಡಂಬಾರು ಬಜ ದಲ್ಲಿ ಕುಂಬಳೆ ಅಬಕಾರಿ ರೇಂಜ್‌ನ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೯೦ ಎಂ.ಎಲ್ ನ ೨೩ ಟೆಟ್ರಾ ಪ್ಯಾಕೆಟ್ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಕಡಂಬಾರು ಬಜೆ ಕೊಡಿಂಜಿಲ್ ಹೌಸ್‌ನ ಗಿರೀಶ್ ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಐ.ಬಿ. ಪಿ.ಒ. ಶ್ರೀನಿವಾಸನ್ ಪತ್ತಿಲ್, ಸಿಇಒ ಹಮೀದ್ ಎಂ. ಮತ್ತು ಚಾಲಕ ಪ್ರವೀಣ್ ಎಂಬಿವರು ಒಳಗೊಂಡಿದ್ದರು.