ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿ ದಾಳಿ: ೮ರ ಹರೆಯದ ಬಾಲಕನಿಗೆ ಗಾಯ

ಬೋವಿಕ್ಕಾನ: ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿಯೊಂದು ದಾಳಿ ನಡೆಸಿ ಎಂಟರ ಹರೆಯದ ಬಾಲಕ ಗಾಯಗೊಂಡ ಘಟನೆ ನಡೆದಿದೆ. ಬೋವಿಕ್ಕಾನ ಮುದಲಪ್ಪಾರದ ಸಾಬೀತ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ  ವಾಸಿಸುತ್ತಿರುವ ಮುಹಮ್ಮದ್ ಸಕೀಬ್- ಹಾಜಿರಾ ದಂಪತಿ ಪುತ್ರ ಮುಂಡಕೈ ಸರಕಾರಿ ಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಸಯ್ಯಿದ್ ಹೈದರಲಿ (೮) ಗಾಯಗೊಂಡ ಬಾಲಕ. ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಈ ಬಾಲಕ ನಿನ್ನೆ ಬೆಳಿಗ್ಗೆ ತನ್ನ ಸಹೋದರ ಮುಹಮ್ಮದ್ ಶಾಸ್‌ನೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಅಲ್ಲೇ ಪೊದೆಯೊಂದರಲ್ಲಿ …

ಮಾಜಿ ನೇಶನಲ್ ಯೂತ್‌ಲೀಗ್ ನೇತಾರ, ಯುವ ಉದ್ಯಮಿ ಬಿಜೆಪಿ ಸೇರ್ಪಡೆ

ಹೊಸದುರ್ಗ: ಎಡರಂಗದ ಘಟಕ ಪಕ್ಷವಾದ ನೇಶನಲ್ ಲೀಗ್‌ನ ಯುವ ಜನ ವಿಭಾಗವಾದ ಎನ್.ವೈ.ಎಲ್‌ನ ಮಂಡಲ ಕಮಿಟಿ ಮಾಜಿ ಪದಾಧಿಕಾರಿಯೂ, ಯುವ ಉದ್ಯಮಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎನ್‌ವೈಎಲ್ ಮಾಜಿ ಮಂಡಲ ಕೋಶಾಧಿಕಾರಿ ಕುಳಿಯಂಗಾಲ್‌ನ ಪಿ.ಎಂ. ಸುಹೈಲ್, ಕುಳಿಯಂಗಾಲ್ ನಿವಾಸಿಯೂ ಯುವ ಉದ್ಯಮಿಯಾದ ಎಂ.ಕೆ. ರಿಯಾದ್ ಎಂಬಿವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರನ್ನು ನಿನ್ನೆ ಕಾಞಂಗಾಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಅವರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಪಿ.ಎಂ. ಸುಹೈಲ್ ಈ ಹಿಂದೆ ಸಂಘಟನಾ …

‘ಹಮಾಸ್‌ನಂತೆಯೇ ಜಮ್ಮು-ಕಾಶ್ಮೀರದಲ್ಲೂ ದಾಳಿ’ ಕಾಶ್ಮೀರ ಫೈಟ್ ಉಗ್ರಗಾಮಿ ಸಂಘಟನೆಯ ಬೆದರಿಕೆ

ನವದೆಹಲಿ: ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ರೀತಿಯಲ್ಲೇ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸುತ್ತೇವೆ ಎಂದು ಕಾಶ್ಮೀರ ಫೈಟ್ ಎಂಬ ಹೊಸ ಭಯೋತ್ಪಾದಕ ಸಂಘಟನೆ ಕೇಂದ್ರ  ಸರಕಾರಕ್ಕೆ ಪತ್ರ ಮೂಲಕ ಬೆದರಿಕೆ ಹಾಕಿದೆ. ಕಾಶ್ಮೀರದ ಪ್ರವಾಸಿಗರು, ಸ್ಥಳೀಯರಲ್ಲದೆ  ಭದ್ರತಾಪಡೆಗಳನ್ನು ಗುರಿಯನ್ನಾಗಿಸುವಂತೆಯೂ ಭಯೋತ್ಪಾದಕ ಸಂಘಟನೆ ತನ್ನ ಸದಸ್ಯರಿಗೆ ಸೂಚಿಸಿದೆ. ಅಲ್ಲದೆ ಪ್ರಧಾನಮಂತ್ರಿ  ಮತ್ತು ಗೃಹ ಸಚಿವರನ್ನು ಪ್ರಧಾನ ಗುರಿಯನ್ನಾಗಿಸು ವಂತೆಯೂ ಈ ಬೆದರಿಕೆ ಪತ್ರದಲ್ಲಿ ತನ್ನ ಸದಸ್ಯರಿಗೆ ಈ ಸಂಘಟನೆ ಸೂಚನೆ ನೀಡಿದೆ. ವಿಶೇಷವಾಗಿ ಉನ್ನತ …

ನವಕೇರಳ ಸಭೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳಿಸುವಿಕೆಗೆ ನಿಷೇಧ ಹೇರಿ ಹೈಕೋರ್ಟ್ ತೀರ್ಪು

ಕೊಚ್ಚಿ: ಮುಖ್ಯಮಂತ್ರಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ನವಕೇರಳ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳಿಸುವಂತೆ ಮಾಡುವ ಕ್ರಮಕ್ಕೆ ರಾಜ್ಯ ಹೈಕೋರ್ಟ್‌ನ ನ್ಯಾಯ ಮೂರ್ತಿ ದೇವನ್ ರಾಮಚಂದ್ರನ್ ಅವರು ನಿಷೇಧ ಹೇರಿ ಆದೇಶ ಜ್ಯಾರಿಗೊಳಿಸಿದ್ದಾರೆ. ಈ ಯಾತ್ರೆಗೆ ಶಾಲೆಗಳಿಂದ ವಿದ್ಯಾ ರ್ಥಿಗಳನ್ನು ಕಳುಹಿಸಿಕೊಡುವುದಕ್ಕೂ ನ್ಯಾಯಾಲಯ ನಿಷೇಧ ಹೇರಿದೆ. ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಭಾಗಿಯನ್ನಾಗಿಸಲು ಶಿಕ್ಷಣ ಕಾನೂನು ಆಸ್ಪದ ನೀಡುತ್ತಿಲ್ಲ. ಆದರೆ ಇದನ್ನು ಉಲ್ಲಂಘಿಸಿ ಶಿಕ್ಷಣ ಉಪ ನಿರ್ದೇಶಕರು ಸುತ್ತೋಲೆ ಜ್ಯಾರಿಗೊಳಿಸಿದ್ದಾರೆ ಎಂಬುದು, ಈ ಬಗ್ಗೆ ನಡೆಸಲಾದ ಪ್ರಾಥಮಿಕ ಪರಿಶೀಲನೆಯಲ್ಲಿ ವ್ಯಕ್ತವಾಗುತ್ತಿದೆ ಎಂದು …

ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಠಾಣೆಯಲ್ಲಿ ಹಾಜರು

ಮಂಜೇಶ್ವರ: ಪೊಲೀಸರನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ದ್ದಾನೆ.  ಈ ವೇಳೆ ಆತನನ್ನು ಪೊಲೀಸ ರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಕಣ್ವತೀರ್ಥ ನಿವಾಸಿ ಭವಿಷ್ (೩೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ತಿಂಗಳ ೧೫ರಂದು ಸಂಜೆ ೬ ಗಂಟೆಗೆ ಭವಿಷ್ ಸ್ಕೂಟರ್ ನಲ್ಲಿ ಕಣ್ವತೀರ್ಥ ಗೇಟ್ ಬಳಿಯಿಂದ ಬೀಚ್ ಭಾಗಕ್ಕೆ ತೆರಳುತ್ತಿದ್ದನು. ಈ ವೇಳೆ ಎದುರಿನಿಂದ ಪೊಲೀಸ್ ವಾಹನ ಬರುತ್ತಿರುವುದನ್ನು ಕಂಡ ಈತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾ …

ರಾಜಸ್ತಾನದಲ್ಲಿ ವಿಧಾನಸಭಾ ಚುನಾವಣೆ: ಮತದಾನ ಆರಂಭ

ಹೊಸದಿಲ್ಲಿ: ರಾಜಸ್ತಾನ ರಾಜ್ಯ ವಿಧಾನಸಭಾ ಚುನಾ ವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿತು. ೫.೨೬ ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಆಡಳಿತ ಪಕ್ಷವಾದ ಕಾಂಗ್ರೆಸ್ ಹಾಗೂ ಮುಖ್ಯ ವಿಪಕ್ಷವಾದ ಬಿಜೆಪಿ ಮಧ್ಯೆ ಪ್ರಧಾನ ಸ್ಪರ್ಧೆ ನಡೆಯುತ್ತಿದೆ. ೨೦೦ ಮಂಡಲಗಳ ಪೈಕಿ ೧೯೯ರಲ್ಲಿ ಮತದಾನ ನಡೆಯುತ್ತಿದೆ. ಒಟ್ಟು ೧೮೬೨ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭಗೊಂಡಿದ್ದು ಸಂಜೆ ೬ ಗಂಟೆವರೆಗೆ ನಡೆಯಲಿದೆ.

ಕಾಪಾ ಪ್ರಕಾರ ಯುವಕ ಸೆರೆ

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ವಿರುದ್ಧ ಹೊಸದುರ್ಗ ಪೊಲೀಸರು ಕಾಪಾ ಕಾನೂನು  ಹೇರಿ ಆತನನ್ನು ಬಂಧಿಸಿದ್ದಾರೆ. ಹೊಸದುರ್ಗ ಕಲ್ಯಾಣ ರಸ್ತೆಯ ಮುತ್ತನ್‌ಪಾರ ನಿರೋಕಿ ನಿವಾಸಿ ಎನ್. ಮನುರಾಜ್ (೨೭) ಬಂಧಿತ ಆರೋಪಿ. ಈತನನ್ನು ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಒಯ್ದು ಅಲ್ಲಿ ಕೂಡಿ ಹಾಕಲಾಗಿದೆ. ಬಂಧಿತ ಆರೋಪಿ ಕೊಲೆಯತ್ನ, ಹಲ್ಲೆ, ಮದ್ಯ ಸಾಗಾಟ ಇತ್ಯಾದಿ ಏಳು ಪ್ರಕರಣಗಳಲ್ಲಿ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನವಕೇರಳ ಬಸ್‌ಗೆ ದುರಸ್ತಿ

ಕಲ್ಲಿಕೋಟೆ: ಮುಖ್ಯಮಂತ್ರಿ ಹಾಗೂ ಸಚಿವರು ಸಂಚರಿಸುವ ನವಕೇರಳ ಬಸ್ ಸಂಚಾರ ಆರಂಭಿಸಿ ಕೆಲವೇ ದಿನಗಳಾಗುತ್ತಲೇ  ಅದಕ್ಕೆ ದುರಸ್ತಿ  ಕಾಮಗಾರಿ ನಡೆಸಲಾಗಿದೆ. ಬಸ್‌ನ ಗಾಜು ಬದಲಾಯಿಸಿ ಎಸಿ ದುರಸ್ತಿ ನಡೆಸಲಾ ಗಿದೆ. ದೃಶ್ಯಗಳು ಸ್ಪಷ್ಟವಾಗಿ ಕಾಣದಿ ರುವುದರಿಂದ ಗಾಜು ಬದಲಾಯಿಸಿ ರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ  ೧೦ ಗಂಟೆ ವೇಳೆ ಕಲ್ಲಿಕೋಟೆ ನಡಕ್ಕಾವ್‌ನಲ್ಲಿರುವ ವರ್ಕ್ ಶಾಪ್‌ನಲ್ಲಿ ದುರಸ್ತಿ ನಡೆಸಲಾಗಿದೆ. ಬಸ್ ನಿರ್ಮಿಸಿದ ಸಂಸ್ಥೆಯ ನೌಕರರೂ ಕಲ್ಲಿಕೋಟೆಗೆ ತಲುಪಿದ್ದರು. ಭಾರೀ ಪೊಲೀಸರ ಬಂದೋಬಸ್ತ್‌ನೊಂದಿಗೆ ಬಸ್ಸನ್ನು ಗ್ಯಾರೇಜಿಗೆ ತಲುಪಿಸಲಾಗಿತ್ತು. ಬಸ್ ಮೊನ್ನೆ …

ಪಂಪಾದಲ್ಲಿ ಬಟ್ಟೆಬರೆ ಉಪೇಕ್ಷಿಸದಂತೆ ಮುನ್ನೆಚ್ಚರಿಕೆ

ಶಬರಿಮಲೆ: ಪಂಪಾಸ್ನಾನ ಬಳಿಕ ತೀರ್ಥಾಟಕರು ನದಿಯಲ್ಲಿ ಬಟ್ಟೆಬರೆ ಉಪೇಕ್ಷಿಸಕೂಡದೆಂದು ದೇವಸ್ವಂ ಮಂಡಳಿ ಮುನ್ನೆಚ್ಚರಿಕೆ ನೀಡಿದೆ. ಕೆಲವು ಭಕ್ತರು ತಾವು ಬಳಸಿದ ಬಟ್ಟೆಬರೆಗಳನ್ನು ನೀರಿನಲ್ಲಿ ಉಪೇಕ್ಷಿಸುತ್ತಿರುವುದು ಕಂಡುಬ ಂದಿದೆ, ಇದು ನದಿಯಲ್ಲಿ ತ್ಯಾಜ್ಯ ಸೃಷ್ಟಿಯಾಗಲು ಕಾರಣವಾಗುತ್ತಿದೆ. ನದಿಯಲ್ಲಿ ಬಟ್ಟೆಬರೆ ಉಪೇಕ್ಷಿಸ ಕೂಡದೆಂದು ವಿವಿಧ ಭಾಷೆಗಳಲ್ಲಿ ಬರೆಯಲಾದ ಸೂಚನಾಫಲಕ ಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ  ಆ ಬಗ್ಗೆ ಗಮನಹರಿಸದೆ ಕೆಲವರು ನದಿಯಲ್ಲೇ ಬಟ್ಟೆಬರೆ ಉಪೇ ಕ್ಷಿಸುತ್ತಿದ್ದಾರೆ. ಅದನ್ನು ಕಡ್ಡಾಯ ವಾಗಿ ತಡೆಯಲಾಗು ವುದೆಂದು ತಿಳಿಸಲಾಗಿದೆ.

ಸಮುದ್ರದಲ್ಲಿ ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ

ಕಾಸರಗೋಡು: ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ  ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಪತ್ತೆಯಾಗಿದೆ.  ಪಶ್ಚಿಮ ಬಂಗಾಳ ನಿವಾಸಿ ಜಯದೇವ್‌ಗಿರಿ (೫೪) ಸಾವನ್ನಪ್ಪಿದ ಬೆಸ್ತ. ಹೊಸದುರ್ಗ ಚಿತ್ತಾರಿ ಸಮುದ್ರ ಕಿನಾರೆಯಿಂದ ಮೂರು ನೋಟಿಕ್ಕಲ್ ಮೈಲಿನ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮೀನುಗಾರಿಕೆ ವೇಳೆ ಜಯದೇವ್‌ಗಿರಿ ನಿನ್ನೆ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ಆ ಕೂಡಲೇ ಚೆರ್ವತ್ತೂರು ಮಡಕರೆಯ ಬೋಟ್ ಕಾರ್ಮಿಕರು ಮತ್ತು  ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗಳು ತಮ್ಮ ರೆಸ್ಕ್ಯೂ ಬೋಟ್‌ನಲ್ಲಿ ಸಮುದ್ರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ  ನಡೆಸಿ ಜಯದೇವ್ …