ಜಿಲ್ಲಾ ಶಾಲಾ ಕಲೋತ್ಸವ: ಚಪ್ಪರ ಮುಹೂರ್ತ

ಮುಳ್ಳೇರಿಯ: ದ.೫ರಿಂದ ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಜಿಲ್ಲಾ ಶಾಲಾ ಕಲೋತ್ಸವದ ಚಪ್ಪರ ನಿರ್ಮಾಣಕ್ಕೆ ನಿನ್ನೆ ಚಾಲನೆ ನೀಡಲಾಯಿತು. ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಚಪ್ಪರ ಹಾಗೂ ವೇದಿಕೆ ಉಪ ಸಮಿತಿ ಅಧ್ಯಕ್ಷ ಎಂ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಎಂ.ವಿ. ರಾಜೀವನ್ ಸ್ವಾಗತಿಸಿದರು. ಜಿಲ್ಲಾ ಪಂ. ಸದಸ್ಯೆ ಎಸ್.ಎನ್. ಸರಿತ, ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಎಂ. ಜನನಿ, ಸದಸ್ಯ ಎಂ. ರತ್ನಾಕರ, ಇ. ಮೋಹನನ್, ರೂಪಸತ್ಯನ್, ಎಂ. …

ಕುಂಬಳೆ ಪಂ. ಬಿಜೆಪಿ ಜನಪಂಚಾಯತ್

ಕುಂಬಳೆ: ರಾಜ್ಯದಾದ್ಯಂತ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನಡೆಸುವ ಜನಪಂಚಾಯತ್ ಕಾರ್ಯಕ್ರಮದಂಗವಾಗಿ ಕುಂಬಳೆ ಪೇಟೆಯಲ್ಲಿ ಬಿಜೆಪಿ ಪಂ. ಸಮಿತಿ ಆಶ್ರಯದಲ್ಲಿ ಜನ ಪಂಚಾಯತ್ ನಡೆಯಿತು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಅವರು  ಮಾತನಾಡಿ ಕೇಂದ್ರದ ಜನೋಪಯೋಗಿ ಯೋಜನೆಗಳನ್ನು ಹೆಸರು ಬದಲಿಸಿ ತಮ್ಮ  ಸಾಧನೆಯಾಗಿ ರಾಜ್ಯದ ಪಿಣರಾಯಿ ವಿಜಯನ್ ಸರಕಾರ ಪ್ರಚಾರ ನಡೆಸುತ್ತಿದೆಯೆಂದೂ, ಈ ಬಗ್ಗೆ ಜಾಗ್ರತರಾಗಬೇಕೆಂದು ತಿಳಿಸಿದರು.  ಕುಂಬಳೆ ದಕ್ಷಿಣ ಏರಿಯಾ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ  ವಹಿಸಿದರು. ಮಂಡಲ …

ಮಧೂರು ಕ್ಷೇತ್ರದ ಮಹಾದ್ವಾರ ನಿರ್ಮಾಣ ಶಿಲಾನ್ಯಾಸ ನಾಳೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮುಂಬಯಿಯ ಪ್ರಮುಖ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ ಇವರು ನೂತನವಾಗಿ ನಿರ್ಮಿಸುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ  ಬೆಳಿಗ್ಗೆ ೯.೪೫ರ ಧನು ಲಗ್ನ ಸುಮುಹೂರ್ತದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು  ಮಠ ಶ್ರೀ ನಿತ್ಯಾನಂದ ಯೋಗಾ ಶ್ರಮದ ಶ್ರೀ ಯೋಗಾನಂದ ಸರಸ್ವತೀ …

ನಿವೃತ್ತ ಜಸ್ಟೀಸ್ ಎಂ. ಫಾತಿಮಾಬೀವಿ ನಿಧನ

ಪತ್ತನಂತಿಟ್ಟ: ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯಾಧೀಶೆಯೂ, ತಮಿಳುನಾಡಿನ ಮಾಜಿ ರಾಜ್ಯಪಾಲರಾದ ನಿವೃತ್ತ ಜಸ್ಟೀಸ್ ಎಂ. ಫಾತಿಮಾಬೀವಿ (೯೬) ನಿಧನಹೊಂದಿದರು. ವಯೋಸಹಜ ಅಸೌಖ್ಯದಿಂದ ಕೊಲ್ಲಂನ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಸಂಭವಿಸಿದೆ. ಇವರು ೧೯೮೯ರಿಂದ ೧೯೯೨ರ ವರೆಗೆ ಸುಪ್ರೀಂಕೋರ್ಟ್‌ನ ಜಡ್ಜ್ ಆಗಿದ್ದರು. ೧೯೯೭-೨೦೦೧ರ ಕಾಲಾ ವಧಿಯಲ್ಲ್ಲಿ ತಮಿಳುನಾಡಿನ ರಾಜ್ಯಪಾಲ ರಾಗಿಯೂ  ಸೇವೆ ಸಲ್ಲಿಸಿದ್ದರು. ೧೯೫೦ರಲ್ಲಿ ನ್ಯಾಯವಾದಿ ಯಾಗಿ ಸೇವೆ ಆರಂಭಿಸಿದ ಫಾತಿಮಾ ಬೀವಿ ೧೯೫೮ರಲ್ಲಿ ಮುನ್ಸಿಫ್, ೧೯೮೦ರಲ್ಲಿ ಇನ್‌ಕಂ ಟ್ಯಾಕ್ಸ್ ಅಪ್ಪಲೇಟ್ ಟ್ರಿಬ್ಯೂನಲ್ ಜ್ಯುಡೀಶ್ಯಲ್ ಸದಸ್ಯೆ ಯಾಗಿದ್ದರು. ೧೯೮೩ರಲ್ಲಿ ಹೈಕೋ …

ಕಿಳಿಂಗಾರಿನಲ್ಲಿ ಶ್ರೀ ಸತ್ಯಸಾಯಿ ಬಾಬಾರ ೯೮ನೇ ಜನ್ಮದಿನಾಚರಣೆ

ಬದಿಯಡ್ಕ: ಹಿರಿಯರ ಆದರ್ಶ ಗಳನ್ನು ಮುಂದುವರಿಸಿಕೊAಡು ಹೋಗುವ ಮಕ್ಕಳು ಸಮಾಜದಲ್ಲಿ ಬೆಳೆದುಬರುವಂತಾಗಬೇಕು. ಅದಕ್ಕಾಗಿ ನಮ್ಮ ಮಕ್ಕಳಿಗೆ ತಾಯಿಯೇ ಗುರು ವಾಗಿ ಉತ್ತಮ ಸಂಸ್ಕಾರ ನೀಡುವ ಕಾರ್ಯವನ್ನು ಮಾಡಬೇಕು. ಸೇವಾ ಕಾರ್ಯಗಳಿಗೆ ರಾಜಕೀಯವೊಂದೇ ವೇದಿಕೆಯಲ್ಲ ಎಂಬುದನ್ನು ನಾವು ಇಲ್ಲಿಕಾಣಬಹುದಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅಭಿಪ್ರಾಯಪಟ್ಟರು.ಕಿಳಿಂಗಾರು ಸಾಯಿಮಂದಿರದಲ್ಲಿ ನಿನ್ನೆ ಜರಗಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ೯೮ನೇ ಜನ್ಮದಿನಾಚರಣೆಯ ಸಂದರ್ಭ ಬಡಜನತೆಗೆ ಕಿಳಿಂಗಾರು ದಿ| ಸಾಯಿರಾಂಭಟ್ ಮನೆಯವರು ನೀಡುವ ಹೊಲಿಗೆಯಂತ್ರ ವಿತರಣೆ ಯನ್ನು ಉದ್ಘಾಟಿಸಿ …

ಅರಿಬೈಲು ಭಜನಾ ಮಂದಿರದಲ್ಲಿ ತೈಲಚಿತ್ರ ಅನಾವರಣ, ಕಟ್ಟಡ ಉದ್ಘಾಟನೆ

ಕಡಂಬಾರು: ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಭವನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ತೈಲಚಿತ್ರ ಅನಾವರಣ ಹಾಗೂ ನೂತನ ಕಟ್ಟಡ ಉದ್ಘಾಟನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಆರಂಭಗೊಂಡಿತು. ಇದರಂಗವಾಗಿ ನಿನ್ನೆ ಸಂಜೆ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ತೈಲಚಿತ್ರ ಅನಾವರಣ, ನೂತನ ಕಟ್ಟಡದ ಉದ್ಘಾಟನೆ ಜರಗಿತು.  ಮಧ್ಯಾಹ್ನ ಮಹಾಪೂಜೆ, ಮದ್ವ್ವಾಧೀಶ ರಾಮಕೃಷ್ಣ ಕಾಟುಕುಕ್ಕೆ ಇವರಿಂದ ದಾಸವಾಣಿ, ಅನ್ನಸಂತರ್ಪಣೆ  ಜರಗಿತು. …

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

ಕಾಸರಗೋಡು: ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಅಭಿನಂದನಾ ಕಾರ್ಯಕ್ರಮ ಜರಗಿತು.ಬೀರಂತಬೈಲಿನ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸೀತಾರಾಮ ಕೊಪ್ಪಲು, ಬಾಲಚಂದ್ರ ಕೆ. ಕುಂಬಳೆ ಭಾಗವಹಿಸಿದರು. ಗೌರವ ಅಧ್ಯಕ್ಷ ನಿರಂಜನ ಕೊರಕೋಡು, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾದಿsಕಾರಿ ಸತೀಶ್ ಮಾಸ್ಟರ್ ಕೂಡ್ಲು, ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಮಹಿಳಾ ಸಂಘದ …

ಸಾಮಗ್ರಿ ವಿತರಣೆ ವಾಹನಗಳಿಗೆ ದಂಡ ಹೇರುವುದನ್ನು ನಿಲ್ಲಿಸಬೇಕು- ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್

ಕಾಸರಗೋಡು: ಅತ್ಯಗತ್ಯ ಸಾಮಗ್ರಿಗಳನ್ನು ವಿತರಿಸುವ ಡಿಸ್ಟ್ರಿಬ್ಯೂಟರ್‌ಗಳಿಗೆ ಪೇಟೆಯ ಅಂಗಡಿಗಳ ಮುಂಭಾಗ ಸಾಮಗ್ರಿಗಳನ್ನು ಸಪ್ಲೈ ಮಾಡಲು ಸಾಧ್ಯವಾಗುತ್ತಿಲ್ಲವೆಂದು, ಸಪ್ಲೈ ವಾಹನಗಳಿಗೆ ಪೊಲೀಸರು ದಂಡ ಹೇರುವುದನ್ನು ಹೊರತುಪಡಿಸಬೇಕೆಂದೂ ಆಲ್ ಕೇರಳ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್ ಆಗ್ರಹಿಸಿದೆ. ಈ ಬಗ್ಗೆ ನಡೆಸಿದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಮಾಹಿನ್ ಕೋಳಿಕ್ಕರ ಅಧ್ಯಕ್ಷತೆ ವಹಿಸಿದರು. ರಾಜ್ಯ ಅಧ್ಯಕ್ಷ ಮುಜೀಬ್ ರಹ್‌ಮಾನ್ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್, ವಿ. ಅಯ್ಯಪ್ಪನ್ ನಾಯರ್, ಬಿನು ಮಂಞಲಿ, ವತ್ಸನ್ ಮೆನೋನ್, ಎ.ಪಿ. ಶಿವದಾಸನ್, …

ಆಸ್ಪತ್ರೆ ಲಿಫ್ಟ್‌ನೊಳಗೆ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಬಂಧನ

ಕುಂಬಳೆ: ಆಸ್ಪತ್ರೆಯ ಲಿಫ್ಟ್‌ನೊಳಗೆ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ  ಆರೋಪಿಯಾದ ಮಧ್ಯವಯಸ್ಕನನ್ನು ಪೊಲೀಸರು ಮೂರು ದಿನದೊಳಗೆ ಬಂಧಿಸಿದ್ದಾರೆ. ಬದಿಯಡ್ಕ ಬಳಿಯ ಪೆರಡಾಲ ನಿವಾಸಿ ಮೊಹಮ್ಮದ್ (೫೧) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಪ್, ಎಸ್.ಐ. ವಿ.ಕೆ. ಅನೀಶ್ ಎಂಬಿವರು ಸೇರಿ ಸೆರೆ ಹಿಡಿದಿದ್ದಾರೆ. ಕಿರುಕುಳ ಯತ್ನಕ್ಕೊಳಗಾದ ಬಾಲಕಿ ಆರೋಪಿಯ ಗುರುತು ಹಚ್ಚಿದ್ದಾಳೆ. ಅನಂತರ ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗೆ  ಎರಡು ವಾರಗಳ ರಿಮಾಂಡ್ …

೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ: ಪಿತ ಸೆರೆ

ಕಾಸರಗೋಡು: ಹದಿನೈದು ವರ್ಷದ ಪುತ್ರಿಗೆ  ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಆಕೆಯ ತಂದೆಯನ್ನು ಮೇಲ್ಪರಂಬ ಪೊಲೀಸರುಬಂಧಿಸಿದ್ದಾರೆ. ಬಂಧಿತ ಆರೋಪಿಗೆ ೪೨ ವರ್ಷ ಪ್ರಾಯವಿದೆ. ಪೋಕ್ಸೋ ಕಾನೂನು ಪ್ರಕಾರ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಾಲಕಿ ೧೧ ವರ್ಷ ಪ್ರಾಯವಾದಾಗಲೇ ಆರೋಪಿ ಆಕೆಗೆ ನಿರಂತರ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದನೆಂದು ಬಾಲಕಿ ಪೊಲೀಸರಲ್ಲಿ  ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ. ಈ ಬಾಲಕಿಯನ್ನು ಆಕೆ ಕಲಿಯುತ್ತಿರುವ ಶಾಲೆಯಲ್ಲಿ ಕೌನ್ಸಿಲಿಂಗ್‌ಗೊಳಪಡಿಸಲಾಗಿತ್ತು. ಅದರಲ್ಲಿ ಆಕೆ ನಡೆದ ವಿಷಯ ತಿಳಿಸಿದ್ದಳು.  ಬಾಲಕಿಯನ್ನು ಪೊಲೀಸರು …