ಮಧೂರು ಕ್ಷೇತ್ರದ ಮಹಾದ್ವಾರ ನಿರ್ಮಾಣ ಶಿಲಾನ್ಯಾಸ ನಾಳೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮುಂಬಯಿಯ ಪ್ರಮುಖ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ ಇವರು ನೂತನವಾಗಿ ನಿರ್ಮಿಸುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ  ಬೆಳಿಗ್ಗೆ ೯.೪೫ರ ಧನು ಲಗ್ನ ಸುಮುಹೂರ್ತದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು  ಮಠ ಶ್ರೀ ನಿತ್ಯಾನಂದ ಯೋಗಾ ಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮೊದಲಾದವರ ಸಾನ್ನಿಧಿಯದಲ್ಲಿ ಶಿಲಾನ್ಯಾಸ  ನೆರವೇರಲಿದೆ. ಬಳಿಕ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀಕರಣ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ ವಹಿಸುವರು. ನಾಲ್ವರು ಸ್ವಾಮೀಜಿಯವರು  ಆಶೀರ್ವಚನ ನೀಡಿ ಮಾತನಾಡುವರು. ಕೇಂದ್ರ ಸರಕಾರದ ಪ್ರವಾಸೋದ್ಯಮ ಖಾತೆ (ಸ್ವತಂತ್ರ) ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಮತ್ತು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ವಿಶೇಷ ಆಹ್ವಾನಿತರಾಗಿ ಭಾಗವಹಿ ಸುವರು. ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ, ದೇರೇಬೈಲು ಶ್ರೀ ಶಿವಪ್ರಸಾದ್ ತಂತ್ರಿ, ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡ ವರ್ಮ ರಾಜಯಾನೆ ರಾಮಂತರಸು, ಆರ್‌ಎಸ್ ಎಸ್‌ನ ಅಖಿಲ ಭಾರತ ಕುಟುಂಬ ಪ್ರಬೋದನ್ ಟೋಳಿ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮೊದಲಾದವರು ಗೌರವ ಉಪಸ್ಥಿತರಿರುವರು. ಇದರ  ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮುಂಬೈಯ ಉದ್ಯಮಿ  ಸದಾಶಿವ ಶೆಟ್ಟಿ ಕುಳೂರು ಅವರು ಮಹಾದ್ವಾರದ ಶಿಲಾನ್ಯಾಸ ನಡೆಸುವರು.

ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಕಲ್ಲಿಕೋಟೆ ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ, ಮಲಬಾರ್ ದೇವಸ್ವಂ ಬೋರ್ಡ್ ಕಲ್ಲಿಕೋಟೆ ಇದರ ಕಮಿಷನರ್ ಪಿ. ನಂದಕುಮಾರ್, ಬೋರ್ಡ್‌ನ ಕಾಸರಗೋಡು ಡಿವಿಶನ್ ಎ.ಸಿ ಯಾಗಿರುವ ಪಿ.ಕೆ. ಪ್ರದೀಪ್ ಕುಮಾರ್, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ  ಹಾಗೂ ಅಧ್ಯಕ್ಷರೂ ಆಗಿರುವ ಕಿಶೋರ್ ಆಳ್ವ, ಸಿ.ಎ. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಮಲಬಾರ್ ದೇವಸ್ವಂ ಬೋರ್ಡ್‌ನ ಕಾಸರಗೋಡು ಡಿವಿಶನ್ ಏರಿಯಾ ಸಮಿತಿ ಅಧ್ಯಕ್ಷ ಕೊಟ್ಟಾರ ವಾಸುದೇವನ್, ಸದಸ್ಯ ಶಂಕರ್ ರೈ ಮಾಸ್ಟರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಸಿ. ಕೃಷ್ಣ ವರ್ಮರಾಜ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ, ಕರ್ನಾಟಕ ಮಾಜಿ ವಿಧಾನಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಶಿರಿಯ ಸೀರೆ ಶ್ರೀ ಶಂಕರ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಕ್ಷೇತ್ರ ನವೀಕರಣ ಸಮಿತಿ ಉಪಾಧ್ಯಕ್ಷ ಡಾ| ಬಿ.ಎಸ್. ರಾವ್, ವಾರ್ಡ್ ಸದಸ್ಯೆ ಸ್ಮಿಜಾ ವಿನೋದ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page