ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದ ಯುವಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಟಿವಿಯಲ್ಲಿ ಕ್ರಿಕೆಟ್ ಆಟ ವೀಕ್ಷಿಸುತ್ತಿದ್ದಂತೆ ಹಡಗು ಕಾರ್ಮಿಕನಾದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪಾಲಕುನ್ನು ಬಳಿಯ ಏರೋಲ್ ಕಲ್ಲಡ ನಿವಾಸಿ ಗಂಗಾಧರನ್- ನಾರಾಯಣಿ ದಂಪತಿಯ ಪುತ್ರ ನಿತೀಶ್ (೩೧) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಟಿವಿಯಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ಮಧ್ಯೆಗಿನ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಂತೆ ನಿತೀಶ್ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ನಿತೀಶ್‌ರ ಆಕಸ್ಮಿಕ ಸಾವು ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮೃತರು ಪತ್ನಿ ಶಿಜಿನ, ಪುತ್ರ ಋತ್ವಿಕ್, …

ಸ್ಕೂಟರ್ ಉಪೇಕ್ಷಿಸಿ ಸವಾರ ಪರಾರಿ: ಮದ್ಯ, ಸ್ಕೂಟರ್ ಪೊಲೀಸ್ ವಶ

ಮಂಜೇಶ್ವರ: ಪೊಲೀಸ್ ವಾಹನವನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ವ್ಯಕ್ತಿ ಪರಾರಿಯಾದ ಘಟನೆ ನಡೆದಿದೆ. ಉಪೇಕ್ಷಿಸಿದ ಸ್ಕೂಟರನ್ನು ಪರಿಶೀಲಿಸಿ ದಾಗ ಅದರಲ್ಲಿ ೯೦ ಮಿಲ್ಲಿಯ ೩೨೦ ಪ್ಯಾಕೆಟ್ ಮದ್ಯ ಪತ್ತೆಯಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ಮಂಜೇಶ್ವರ ಕಣ್ವತೀರ್ಥದಿಂದ ರೈಲ್ವೇ ಗೇಟ್ ಭಾಗಕ್ಕೆ ಸ್ಕೂಟರ್ ಸಂಚರಿ ಸುತ್ತಿತ್ತು. ಈ ವೇಳೆ ಮಂಜೇಶ್ವರ ಠಾಣೆಯ ಎಸ್‌ಐ ಪ್ರಶಾಂತ್ ಕೆ.ಯವರು  ಗಸ್ತು ನಡೆಸುತ್ತಿದ್ದ ವಾಹನ ಈ ಭಾಗದಿಂದ ಬರುತ್ತಿದ್ದಾಗ ಸ್ಕೂಟರ್ ಉಪೇಕ್ಷಿಸಿ ಸವಾರ ಪರಾರಿಯಾಗಿದ್ದಾನೆ. ಸ್ಕೂಟರ್ ಹಾಗೂ ಮದ್ಯವನ್ನು …

ಬಿಎಂಎಸ್ ನೇತಾರನ ಕಳವುಗೈದ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಸುತ್ತಾಟ: ಓರ್ವ ಆರೋಪಿ ಸೆರೆ; ಇನ್ನೋರ್ವನಿಗಾಗಿ ಶೋಧ

ಕಾಸರಗೋಡು: ಬೈಕ್ ಕದ್ದು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ  ದೃಶ್ಯ ರಸ್ತೆ ಬದಿಯ ಎಐ ಕ್ಯಾಮರಾ ದಲ್ಲಿ ಸೆರೆಯಾಗಿ ಸಿಕ್ಕಿಬಿದ್ದ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಓರ್ವ ನನ್ನು ಹೊಸದುರ್ಗ ಪೊಲೀಸರು ಕಲ್ಲಿಕೋಟೆ ಬಳಿಯಿಂದ ಬಂಧಿಸಿದ್ದಾರೆ. ಕಲ್ಲಿಕೋಟೆ ಲೋಗಿಕುಳಂಗರ ಕ್ಷೇತ್ರ ಬಳಿಯ ಪುನತ್ತಿಲ್ ಮೀತಲ್ ವೀಟಿಲ್‌ನ ಎ.ಪಿ. ಅಭಿನವ್ (೧೯) ಬಂಧಿತ ಆರೋಪಿ. ಆದರೆ ಕದ್ದ ಬೈಕ್‌ನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.  ಆ ಬೈಕ್‌ನಲ್ಲಿ ತನ್ನ ಜತೆಗಿದ್ದ ಇನ್ನೋರ್ವ ಆರೋಪಿ ಕಲ್ಲಿಕೋಟೆ ಕುರುಚ್ಚುಂಡು ನಿವಾಸಿ ಅಭಿನ್‌ರಾಜ್ ಎಂಬಾತ ಕೊಂಡೊಯ್ದಿರುವುದಾಗಿ …

ಕುಂಬಳೆ ಪೇಟೆಯಲ್ಲಿ ಮೀನು ಮಾರಾಟ: ಇಬ್ಬರ ವಿರುದ್ಧ ಕೇಸು

ಕುಂಬಳೆ: ಕುಂಬಳೆ ಪೇಟೆಯ ಬಸ್ ನಿಲ್ದಾಣ ಬಳಿ ಸಾರ್ವಜನಿಕರಿಗೆ  ಸಮಸ್ಯೆ ಸೃಷ್ಟಿಯಾಗುವ ರೀತಿಯಲ್ಲಿ  ಮೀನು ಮಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದ ಸಲೀಂ (೩೮), ಮೊಯ್ದೀನ್ (೪೦) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಇಬ್ಬರು ಪೇಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದುದರಿಂದ ತ್ಯಾಜ್ಯ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗಿರುವುದಾಗಿ ದೂರಲಾಗಿತ್ತೆನ್ನಲಾಗಿದೆ.  ಇದರಿಂದ ಅಲ್ಲಿ ಮೀನು ಮಾರಾಟ ಮಾಡದಂತೆ ಪೊಲೀಸರು ತಾಕೀತು ನೀಡಿದರೂ ನಿರ್ಲಕ್ಷಿಸಿ ಮತ್ತೆ ಮೀನು ಮಾರಾಟ ನಡೆಸಿದ …

ಸುದ್ಧಿ ಮಾಧ್ಯಮ ವರದಿಗಾರ್ತಿ ಜತೆ ಅನುಚಿತ ವರ್ತನೆ ಆರೋಪ: ಬಿಜೆಪಿ

ರ‍್ಯಾಲಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರಾದ ಸುರೇಶ್ ಗೋಪಿ  ಕಲ್ಲಿಕೋಟೆ: ಸುದ್ಧಿ ಮಾಧ್ಯಮ ವರದಿಗಾರ್ತಿ ಜೊತೆ ಅನುಚಿತ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ದೂರಿಗೆ ಸಂಬಂಧಿಸಿ   ಬಿಜೆಪಿ ನೇತಾರ, ಸಿನೆಮಾ ನಾಯಕ ನಟ ಸುರೇಶ್ ಗೋಪಿ ನಿನ್ನೆ ಬೆಳಿಗ್ಗೆ ಬಿಜೆಪಿಯ ಬೃಹತ್ ರ‍್ಯಾಲಿಯೊಂದಿಗೆ ಕಲ್ಲಿಕೋಟೆ ನಡಕಾವ್ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ. ಈ ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಪೊಲೀಸರು ಸುರೇಶ್ ಗೋಪಿಗೆ ಸಮನ್ಸ್ ಜ್ಯಾರಿಗೊಳಿಸಿದ್ದರು. ಅದರಂತೆ ಅವರು ಠಾಣೆಯಲ್ಲಿ ನಿನ್ನೆ ಬೆಳಿಗ್ಗೆ …

ಶಬರಿಮಲೆ: ಮಂಡಲ, ಮಕರಜ್ಯೋತಿ ತೀರ್ಥಾಟನೆಗೆ ಇಂದು ಚಾಲನೆ

ಶಬರಿಮಲೆ: ಈ ಬಾರಿಯ ಮಂಡಲ, ಮಕರಜ್ಯೋತಿ ತೀರ್ಥಾಟನೆಗಾಗಿ ಶಬರಿಮಲೆ ಕ್ಷೇತ್ರ ಬಾಗಿಲು ಇಂದು ಸಂಜೆ ತೆರೆಯಲಾಗುವುದು. ಸಂಜೆ ೫ ಗಂಟೆಗೆ ತಂತ್ರಿ ಕಂಠರ ಮಹೇಶ್ ಮೋಹನರ್‌ರ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಕೆ. ಜಯರಾಮನ್ ನಂಬೂದಿರಿ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸುವರು. ಶಬರಿಮಲೆಯ ಮುಖ್ಯ ಅರ್ಚಕ ಮೂವಾಟುಪುಳ ಏನಂನಲ್ಲೂರ್ ಪುತ್ತಿಲ್ಲತ್ತ್ ಮಾನದ ಪಿ.ಎನ್. ಮಹೇಶ್ ನಂಬೂದಿರಿ, ಮಾಳಿಗಪ್ಪುರಂ ಮುಖ್ಯ ಅರ್ಚಕ ಗುರುವಾಯೂರು ಅಂಞಾರ್ ಪುಂಗಾಟುಮನ ಪಿ.ಜಿ. ಮುರಳಿ ನಂಬೂದಿರಿ ಎಂಬಿವರ ಅಭಿಷೇಕ ಕಾರ್ಯಕ್ರಮ ಇಂದು ರಾತ್ರಿ ಸನ್ನಿಧಾನದಲ್ಲಿ …

ಬ್ಯಾಂಕ್ ನೌಕರೆ ನೇಣು ಬಿಗಿದು ಸಾವು

ಹೊಸದುರ್ಗ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಬ್ಯಾಂಕ್ ನೌಕರೆ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪಯ್ಯನ್ನೂರು ಕೇಳೋತ್ತ್‌ನ ಸಂಗೀತ್ ಎಂಬವರ ಪತ್ನಿ ಶ್ರುತಿ (೨೮) ಮೃತ ಯುವತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ಮನೆಯ ಮೇಲಂತಸ್ತಿನ ಬೆಡ್‌ರೂಂನಲ್ಲಿ ಈಕೆ ನಿದ್ರಿಸಿದ್ದಳು. ರಾತ್ರಿ ೧೨ ಗಂಟೆಗೆ ಎಚ್ಚರಗೊಂಡಾಗ ಪತ್ನಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪತಿ ಮನೆಯವರಲ್ಲಿ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಬಿ.ಎಂ.ಎಸ್.ನಿಂದ ಕುಂಬಳೆ, ಮಂಜೇಶ್ವರ ಪಂ. ಧರಣಿ

ಕುಂಬಳೆ: ಕೃಷಿ ಕಾರ್ಮಿಕರ ಅವ ಗಣನೆ, ಸರಕಾರದ ಕಾರ್ಮಿಕ ವಂಚನೆ ನೀತಿ ವಿರುದ್ಧ ರಾಜ್ಯದಾದ್ಯಂತ ಬಿಎಂಎಸ್ ನಡೆಸುವ ಮುಷ್ಕರದಂಗ ವಾಗಿ ಕುಂಬಳೆ, ಮಂಜೇಶ್ವರ ಪಂಚಾಯತ್ ಮುಂಭಾಗ ಧರಣಿ ಮುಷ್ಕರ ನಡೆಸಲಾಯಿತು. ೬೦ ವರ್ಷ ಪೂರ್ತಿಗೊಂಡ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ೫೦೦೦ ರೂ. ಪಿಂಚಣಿ ನೀಡಬೇಕು, ಕೃಷಿ ಕ್ಷೇಮ ಬೋರ್ಡ್‌ನಿಂದ ಕ್ಷೇಮನಿಧಿ ಸೌಲಭ್ಯ ಸಮಯಾನುಸಾರ ನೀಡಬೇಕು, ಬಾಕಿ ಉಳಿದಿರುವ ಪಿಂಚಣಿ ಕೂಡಲೇ ವಿತರಿ ಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಲಾಯಿತು. ಕುಂಬಳೆಯಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಸತ್ಯನಾಥನ್  …

ಪೈವಳಿಕೆ ವಿಲ್ಲೇಜ್‌ನಲ್ಲಿ ಬ್ಯಾಂಕ್ ಸಾಲ ಮರುಪಾವತಿ ಅದಾಲತ್

ಉಪ್ಪಳ: ಪೈವಳಿಕೆ ಗ್ರೂಪ್ ವಿಲ್ಲೇಜಿಗೆ ಒಳಪಟ್ಟ ಪೈವಳಿಕೆ ಹಾಗೂ ಚಿಪ್ಪಾರ್ ವಿಲ್ಲೇಜ್ ಗಳಲ್ಲಿ ಬ್ಯಾಂಕ್ ಸಾಲ ಪಾವತಿಸಲು ಬಾಕಿ ಇದ್ದವರಿಗಾಗಿ ಬ್ಯಾಂಕ್ ಸಾಲ ಮರುಪಾವತಿ ಅದಾಲತನ್ನು ಪೈವಳಿಕೆ ಗ್ರೂಪ್ ವಿಲೇಜ್ ಕಚೇರಿಯಲ್ಲಿ ನಿನ್ನೆ ನಡೆಸಲಾಯಿತು. ಕೆನರಾ ಬ್ಯಾಂಕ್ ಪೈವಳಿಕೆ ಬ್ರಾಂಚ್, ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ ಬ್ರಾಂಚ್ ಬಾಯಾರ್ ಪದವು, ಕೇರಳ ಬ್ಯಾಂಕ್ ಉಪ್ಪಳ ಬ್ರಾಂಚ್ ಎಂಬಿ ಬ್ಯಾಂಕ್‌ಗಳಲ್ಲಿ ಒಳಪಟ್ಟ ಸಾಲಗಾರರು ಭಾಗವಹಿಸಿದರು. ತಹಶೀಲ್ದಾರ್, ರೆವೆನ್ಯೂ ರೆಕವರಿ ಕಾಸರಗೋಡು ಶಿಬು, ಕೆನರಾ ಬ್ಯಾಂಕ್ ಪೈವಳಿಕೆ ಶಾಖೆ ಮೆನೇಜರ್ …

ಬದಿಯಡ್ಕ ಪಂಚಾಯತ್ ಬಂಟರ ಸಂಘದ ಆಶ್ರಯದಲ್ಲಿ ‘ತುಡರ್ ಪರ್ಬ’

ಬದಿಯಡ್ಕ: ಪಂಚಾಯತ್ ಬಂಟರ ಸಂಘದ ಆಶ್ರಯದಲ್ಲಿ ವಳಮಲೆ ಜನನ ತರವಾಡು ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಪರ್ಬ ಕಾರ್ಯಕ್ರಮ ಜರಗಿತು.ಬದಿಯಡ್ಕ ಪಂಚಾಯತ್ ಸರ್ವಿಸ್ ಸೊಸೈಟಿಯ ಅಧ್ಯಕ್ಷ ನಿರಂಜನ್ ರೈ ಪೆರಡಾಲ ಸಬೆsಯಲ್ಲಿ ಅಧ್ಯಕ್ಷತೆ ವಹಿಸಿದರು. ತರವಾಡಿನ ಯಜಮಾನ ಕುಂಞ ಣ್ಣರೈ ದೀಪ ಬೆಳಗಿಸಿ ಉದ್ಘಾಟಿಸಿದರು.ಸಾಹಿತಿ ಶ್ರೀನಿವಾಸ ಆಳ್ವ ಕಳತ್ತೂರು ಬಂಟ ಸಮಾಜದಲ್ಲಿ ದೀಪಾವಳಿ ಹಬ್ಬದ ಆಚರಣೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ ಚಂದ್ರಹಾಸ ರೈ, ಕುಂಬಳೆ …