ಶಬರಿಮಲೆ: ಮಂಡಲ, ಮಕರಜ್ಯೋತಿ ತೀರ್ಥಾಟನೆಗೆ ಇಂದು ಚಾಲನೆ

ಶಬರಿಮಲೆ: ಈ ಬಾರಿಯ ಮಂಡಲ, ಮಕರಜ್ಯೋತಿ ತೀರ್ಥಾಟನೆಗಾಗಿ ಶಬರಿಮಲೆ ಕ್ಷೇತ್ರ ಬಾಗಿಲು ಇಂದು ಸಂಜೆ ತೆರೆಯಲಾಗುವುದು. ಸಂಜೆ ೫ ಗಂಟೆಗೆ ತಂತ್ರಿ ಕಂಠರ ಮಹೇಶ್ ಮೋಹನರ್‌ರ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಕೆ. ಜಯರಾಮನ್ ನಂಬೂದಿರಿ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸುವರು. ಶಬರಿಮಲೆಯ ಮುಖ್ಯ ಅರ್ಚಕ ಮೂವಾಟುಪುಳ ಏನಂನಲ್ಲೂರ್ ಪುತ್ತಿಲ್ಲತ್ತ್ ಮಾನದ ಪಿ.ಎನ್. ಮಹೇಶ್ ನಂಬೂದಿರಿ, ಮಾಳಿಗಪ್ಪುರಂ ಮುಖ್ಯ ಅರ್ಚಕ ಗುರುವಾಯೂರು ಅಂಞಾರ್ ಪುಂಗಾಟುಮನ ಪಿ.ಜಿ. ಮುರಳಿ ನಂಬೂದಿರಿ ಎಂಬಿವರ ಅಭಿಷೇಕ ಕಾರ್ಯಕ್ರಮ ಇಂದು ರಾತ್ರಿ ಸನ್ನಿಧಾನದಲ್ಲಿ ನಡೆಯಲಿದೆ. ಪ್ರಸ್ತುತ ಶಬರಿಮಲೆ ಹಾಗೂ ಮಾಳಿಗ ಪುರಂನ ಮುಖ್ಯ ಅರ್ಚಕರಾಗಿದ್ದ ಜಯರಾಮನ್ ನಂಬೂದಿರಿ ಹಾಗೂ ಹರಿಹರನ್ ನಂಬೂದಿರಿ ಒಂದು ವರ್ಷದ ಪೂಜೆಗಳನ್ನು ಪೂರ್ತಿಗೊಳಿಸಿ ಇಂದು ರಾತ್ರಿ ಸನ್ನಿಧಾನದಿಂದ ಮರಳಲಿದ್ದಾರೆ. ನಾಳೆ ಮುಂಜಾನೆ ನೂತನ ಮುಖ್ಯ ಅರ್ಚಕರು ಕ್ಷೇತ್ರದ ಬಾಗಿಲು ತೆರೆಯಲಿದ್ದಾರೆ.

RELATED NEWS

You cannot copy contents of this page