ಚುನಾವಣಾ ಬಾಂಡ್‌ಗಳ ಮೂಲಕ ಪಡೆದ  ದೇಣಿಗೆ ವಿವರ ಸಲ್ಲಿಸಲು ಇಂದು ಕೊನೆ ದಿನ

ನವದೆಹಲಿ: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಎಲ್ಲಾ ದೇಣಿಗಳ ಪೂರ್ಣ ವಿವರಗಳನ್ನು ನವಂಬರ್ ೧೫ರೊಳಗಾಗಿ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶ ನೀಡಿದೆ. ೨೦೨೩ ಸೆಪ್ಟಂಬರ್ ೩೦ರ ವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸಿದ ನಿಧಿಯ ಅಪ್ ಟು ಡೇಟ್‌ನ್ನು ಪ್ರಸ್ತು ತಪಡಿಸುವಂತೆ ಸುಪ್ರೀಂಕೋರ್ಟ್ ನವಂಬರ್ ೨ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಅದರಂತೆ ಆಯೋಗ ರಾಜಕೀಯ ಪಕ್ಷಗಳಿಗೆ ಈ ಹೊಸ ನಿರ್ದೇಶ …

ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ರಾಹುಲ್ ಮಾಂಕುಟ್ಟತ್ತಿಲ್ ಆಯ್ಕೆ

ತಿರುವನಂತಪುರ: ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ರಾಹುಲ್ ಮಾಂಕುಟ್ಟತ್ತಿಲ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಹುಲ್‌ಗೆ ೨,೨೧,೯೮೬ ಮತಗಳು ಲಭಿಸಿದೆ. ಅಬಿನ್ ವರ್ಕಿ ದ್ವಿತೀಯ (೧,೬೮,೫೮೮ ಮತ), ಅರಿತ್ ಬಾಬು ತೃತೀಯ (೩೧೯೩೦) ಸ್ಥಾನಗಳಿಸಿದ್ದಾರೆ. ಅಬಿನ್ ವರ್ಕಿ ಅರಿತ ಬಾಬು ಸಹಿತ ೧೦ ಮಂದಿ ಉಪಾಧ್ಯಕ್ಷರಾಗಲಿದ್ದಾರೆ. ಒಟ್ಟು ೭,೨೯,೬೨೬ ಮತ ಚಲಾವಣೆಗೊಂಡರೆ ಇದರಲ್ಲಿ ೨,೧೬,೪೬೨ ಮತಗಳು ಅಸಿಂಧುಗೊಂಡಿದೆ. ಚುನಾವಣೆ ನಡೆದು ಎರಡು ತಿಂಗಳ ಬಳಿಕ ಫಲಿತಾಂಶ ಪ್ರಕಟಗೊಂಡಿದೆ. ಪತ್ತನಂತಿಟ್ಟ ಆದೂರ್ ನಿವಾಸಿಯಾದ ರಾಹುಲ್ ಮಾಂಕುಟ್ಟತ್ತಿಲ್ ಪ್ರಸ್ತುತ …

ಚಿನ್ಮಯ ವಿದ್ಯಾಲಯದಲ್ಲಿ ಶಿಶು ದಿನಾಚರಣೆ

ಕಾಸರಗೋಡು:  ಚಿನ್ಮಯ ವಿದ್ಯಾ ಲಯದಲ್ಲಿ ವಿವಿಧ ಕಾರ್ಯ ಕ್ರಮ ಗಳೊಂದಿಗೆ ಶಿಶು ದಿನಾಚರಣೆ ನಡೆಸಲಾಯಿತು. ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ಉದ್ಘಾಟಿಸಿದರು. ಬ್ರಹ್ಮ ಚಾರಿಣಿ ರೋಜಿಶ ಮಾತನಾಡಿ ದರು. ಚಿನ್ಮಯ ಪ್ರಾಂಶುಪಾಲ ಕೆ. ಸುನಿಲ್ ಕುಮಾರ್, ಸಹಾಯಕ ಪ್ರಾಂಶುಪಾಲ ಪ್ರಶಾಂತ್ ಬಿ. ಶುಭ ಕೋರಿದರು. ಬಳಿಕ ಚಿನ್ಮಯ ಫೆಸ್ಟ್‌ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ  ನಡೆಸಿಕೊಟ್ಟರು. ಮುಖ್ಯೋ ಪಾಧ್ಯಾಯಿನಿ ಪೂರ್ಣಿಮಾ ಎಸ್.ಆರ್, ಸಿಂಧೂ ಶಶೀಂದ್ರನ್, ಅಧ್ಯಾಪಕರು, ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದರು. …

ಹೊಸ ಅನುಭವ ನೀಡಿದ ವಿದ್ಯಾರ್ಥಿಗಳ ಶಿಶು ದಿನ ರ‍್ಯಾಲಿ

ಕಾಸರಗೋಡು: ನೆಹರೂರವರ ನೆನಪಲ್ಲಿ ಸಾವಿರಾರು ಮಕ್ಕಳು ವಿವಿಧ ವೇಷಗಳಲ್ಲಿ ಶಿಶು ದಿನ ರ‍್ಯಾಲಿಯಲ್ಲಿ ಭಾಗವಹಿಸಿದಾಗ ವಿದ್ಯಾನಗರಕ್ಕೆ ಅದು ಹೊಸ ಅನುಭವವನ್ನು ನೀಡಿತು. ಸ್ಟೂಡೆಂಟ್ಸ್ ಪೊಲೀಸ್, ಸ್ಕೌಟ್ ಆಂಡ್ ಗೈಡ್ಸ್, ರೆಡ್‌ಕ್ರಾಸ್, ಹುಲಿವೇಷ, ಬ್ಯಾಂಡ್ ಮೇಳ, ಮಕ್ಕಳ ಸಿಂಗಾರಿ ಮೇಳ, ಕರಾಟೆ ಹೀಗೆ ವಿವಿಧ ವಲಯಗಳ ಮಕ್ಕಳು ಒಂದಾದ ಶಿಶುದಿನ ರ‍್ಯಾಲಿಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮೈದಾನದಲ್ಲಿ ನಡೆದ ಸ್ಟೂಡೆಂಟ್ ಪಾರ್ಲಿಮೆಂಟ್‌ನಲ್ಲಿ ಮಕ್ಕಳ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ವೇಲೇಶ್ವರಂ ಶಾಲೆಯ ಶಿವದ ಕುಮಾ ರ್ ಉದ್ಘಾಟಿಸಿದರು. ಮಕ್ಕಳ …

ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗೆ ಮರಣದಂಡನೆ

ಕೊಚ್ಚಿ: ಇಡೀ ಕೇರಳವನ್ನೇ ನಡುಗಿಸಿದ, ಅಲುವಾದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತೀ ಕ್ರೂರವಾದ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿ ಬಳಿಕ ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದ ಆರೋಪಿಗೆ  ಎರ್ನಾಕುಳಂ  ಪೋಕ್ಸೋ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಿಹಾರದ ವಲಸೆ ಕಾರ್ಮಿಕ ಹಾಗೂ ಅಲುವಾದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದ ಆರೋಪಿ ಅಸ್ಫಾಕ್ ಆಲಂ (೨೮)ಎಂಬಾತನಿಗೆ   ನ್ಯಾಯಾಲಯ ಇಂದು ಬೆಳಿಗ್ಗೆ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ಮಕ್ಕಳ ದಿನಾಚರಣೆ ದಿನವಾದ ಇಂದು ಎರ್ನಾಕುಳಂ ಫೋಕ್ಸೋ …

ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ ದುರುಪಯೋಗ ಅರ್ಜಿ ವಜಾಗೊಳಿಸಿ ಲೋಕಾಯುಕ್ತ ತೀರ್ಪು: ಸರಕಾರ ನಿರಾಳ

ತಿರುವನಂತಪುರ: ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿ ರುವ ಅರ್ಜಿಯನ್ನು ಲೋಕಾಯುಕ್ತದ ಪೂರ್ಣ ಪೀಠ ವಜಾಗೈದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ೧೮ ಸಚಿವರುಗಳನ್ನು ಪ್ರತಿವಾದಿಗಳನ್ನಾಗಿಸಿ ಆರ್.ಎಸ್. ಶಶಿ ಕುಮಾರ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಲೋಕಾಯುಕ್ತ ವಜಾಗೊಳಿಸಿ ತೀರ್ಪು ನೀಡಿದ್ದು, ಅದು ರಾಜ್ಯ ಸರಕಾರವನ್ನು ನೀರಾಳಗೊಳಿಸಿದೆ. ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ಆ ನಿಧಿಯನ್ನು ಹೇಗೆ ವ್ಯಯಿಸಬೇಕೆಂದು ತೀರ್ಮಾನಿಸುವ ಅಧಿಕಾರ ಸರಕಾರಕ್ಕಿದೆ ಎಂದೂ ಲೋಕಾಯುಕ್ತ …

ಕರಿ ಆಯಿಲ್ ಸಂಸ್ಕರಣಾ ಘಟಕದ ಕಾರ್ಮಿಕ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕರಿ ಆಯಿಲ್ ಶುದ್ಧೀಕರಣ ಘಟಕದ ಸಿಬ್ಬಂದಿ ಅತ್ಯಂತ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಡಿಕೈ ಪಂಚಾ ಯತ್ ಎರಿಕುಳಂ ನಿಡುಂತುಡುಪ್ಪು ಪಾರದಲ್ಲಿರುವ ಕರಿ ಆಯಿಲ್ ಸಂಸ್ಕರಣಾ ಘಟಕದ ಕಾರ್ಮಿಕ   ಮಡಿಕೈ ಸಮೀಪದ ಕಕ್ಕಾಟ್ ಒಯತ್ತ್ ಕಾಯಿಲೆವಳಪ್ಪಿಲ್‌ನ  ಬಾಲನ್ (೬೫) ಎಂಬವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ. ಕರಿ ಆಯಿಲ್ ಸಂಸ್ಕರಣಾ ಘಟಕದ ಬಳಿಯಲ್ಲೇ ಇವರು ಸಾವನ್ನಪ್ಪಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದಾರೆ. ಬಾಯಿಯಲ್ಲಿ  ರಕ್ತವಾಂತಿಯಾದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮಾತ್ರವಲ್ಲ ಕಾಲಿನ ಪಾದದಲ್ಲೂ ರಕ್ತದ …

ಶಾಲಾ ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣ : ಮುಖ್ಯೋಪಾಧ್ಯಾಯಿನಿಯ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯ ತಿರಸ್ಕೃತ

ಕಾಸರಗೋಡು:  ಶಾಲೆಯಲ್ಲಿ ವಿದ್ಯಾರ್ಥಿಯ ತಲೆಕೂದಲು ಕತ್ತರಿಸಿದ ಪ್ರಕರಣದಲ್ಲಿ ಆರೋಪಿಯಾದ ಮುಖ್ಯೋಪಾಧ್ಯಾಯಿನಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಚಿಟ್ಟಾರಿಕ್ಕಲ್ ಕೋಟ್ಟಮಲಮಾರ್ ಗ್ರಿಗೋರಿಯೋಸ್ ಸ್ಮಾರಕ ಯುಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶೆರ್ಲಿ ಜೋಸೆಫ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೆ. ಬಾಲಕೃಷ್ಣನ್ ತಿರಸ್ಕರಿಸಿದ್ದಾರೆ. ಅಕ್ಟೋಬರ್ ೧೯ರಂದು ವಿದ್ಯಾ ರ್ಥಿಯ ಕೂದಲು ಕತ್ತರಿಸಿದ ಘಟನೆ ನಡೆದಿತ್ತು. ಐದನೇ ತರಗತಿ ವಿದ್ಯಾರ್ಥಿ ತನ್ನ ತಲೆ ಕೂದಲನ್ನು ಉದ್ದಕ್ಕೆ ಬೆಳೆಸಿದ್ದನೆನ್ನಲಾಗಿದೆ. ಅ. ೧೯ರಂದು ಶಾಲೆಯಲ್ಲಿ ಅಸೆಂಬ್ಲಿ ಕಳೆದ …

ಗೃಹಿಣಿಯನ್ನು ಅಪಹರಿಸಿ ಕೊಲೆ: ಓರ್ವ ಆರೋಪಿ ಬಂಧನ; ಇನ್ನೋರ್ವನಿಗಾಗಿ ಶೋಧ

ಕಲ್ಲಿಕೋಟೆ: ಗೃಹಿಣಿಯನ್ನು ಅಪಹರಿಸಿಕೊಂಡೊಯ್ದು ಕೊಲೆಗೈದು ಮೃತದೇಹವನ್ನು ಕಂದಕಕ್ಕೆ ಎಸೆದ ಘಟನೆ ಕಲ್ಲಿಕೋಟೆ ಬಳಿ ನಡೆದಿದೆ. ಕಲ್ಲಿಕೋಟೆ ಕುಟ್ಟಿ ಕಾಟೂರ್ ವಡಕ್ಕೆ ವಿರಪ್ಪೊಯಿಲ್ ವೀಟಿಲ್ ಸೈನಬ (೫೨) ಎಂಬಾಕೆ ಕೊಲೆಗೈಯ್ಯಲ್ಪಟ್ಟ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಮೇಲಪ್ಪುರಂ ತಾನೂರ್ ಕುನ್ನುಂಪುರ ಸಮದ್ (೫೨) ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. ಇನ್ನೋರ್ವ ಆರೋಪಿಯಾದ ಗುಡಲ್ಲೂರು ನಿವಾಸಿ ಸುಲೈಮಾನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ತಮಿಳುನಾಡಿನಲ್ಲಿ ಶೋಧ ನಡೆಯುತ್ತಿದೆ. ಸೈನಬ ಈ ತಿಂಗಳ ೭ರಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪತಿ …

ಎಲ್‌ಪಿ ಶಾಲೆಯ ಮಾದರಿ ಕಾರ್ಯ: ಕುಂಬಳೆ ಉಪಜಿಲ್ಲಾ  ಶಾಲಾ ಕಲೋತ್ಸವ ಪೇರಾಲ್ ಶಾಲೆಯಲ್ಲಿ ಇಂದಿನಿಂದ

ಕುಂಬಳೆ: ರಾಜ್ಯದ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಎಲ್‌ಪಿ ಶಾಲೆಯೊಂದರ ನೇತೃತ್ವದಲ್ಲಿ ಉಪಜಿಲ್ಲಾ ಕಲೋತ್ಸವ ನಡೆಯುತ್ತಿದೆ. ಈ ಸಾಧನೆಗೆ ನೇತೃತ್ವ ವಹಿಸಿರುವುದು ಕುಂಬಳೆ ಪಂ.ನ ಪೇರಾಲ್ ಎಲ್‌ಪಿ ಶಾಲೆಯಾಗಿದೆ. ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಜೆಜಿಬಿಎಸ್ ಪೇರಾಲ್ ಶಾಲೆಯಲ್ಲಿ ಇಂದಿನಿಂದ ಈ ತಿಂಗಳ ೧೮ರ ವರೆಗೆ ನಡೆಯಲಿದೆ. ಭಾರೀ ವೆಚ್ಚ ನಿರೀಕ್ಷಿಸುವ ಕಲೋತ್ಸವವನ್ನು ವಹಿಸಿಕೊಳ್ಳಲು ಹೈಸ್ಕೂಲ್‌ಗಳೇ ಹಿಂದೇಟು ಹಾಕುವಾಗ ಪೇರಾಲ್ ಶಾಲೆ ಮಾದರಿ ಸೃಷ್ಟಿಸಿದೆ. ಕಲೋತ್ಸವವನ್ನು ೧೬ರಂದು ಶಾಸಕ ಎಕೆಎಂ ಅಶ್ರಫ್ ಔಪಚಾರಿಕವಾಗಿ ಉದ್ಘಾಟಿಸುವರು. ಸಂಸದ ರಾಜ್‌ಮೋ …