ವಿನ್‌ಟಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಾಳೆ ಆರೋಗ್ಯ ಸಚಿವೆಯಿಂದ ಉದ್ಘಾಟನೆ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ವಿನ್-ಟಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು  ನಾಳೆ  ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತು ಶಿಶು ಕಲ್ಯಾಣ ಖಾತೆ ಸಚಿವೆ ವೀಣಾ ಜೋರ್ಜ್ ಉದ್ಘಾಟಿಸು ವರೆಂದು ಈ ಪ್ರಯುಕ್ತ  ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಪ್ರಸ್ತುತ ಆಸ್ಪತ್ರೆಯ ಫೌಂಡೇಶನ್ ಚೇಯರ್ ಮೆನ್ ಅಬ್ದುಲ್ ಲತೀಫ್ ಉಪ್ಪಳಗೇಟ್, ಫೌಂಡರ್ ಡೈರೆಕ್ಟರ್‌ಗಳಾದ ಅಬ್ದುಲ್ ಕರೀಂ ಕೋಳಿಯಾಟ್, ಹನೀಫ್ ಅರಮನ ಮೊದಲಾದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ …

ಪೇರಾಲ್ ಶಾಲೆಯಲ್ಲಿ ಕಲೋತ್ಸವ ಕುಂಬಳೆಯಲ್ಲಿ ಡಂಗುರ ಜಾಥಾ

ಕುಂಬಳೆ: ನವೆಂಬರ್ ೧೪ರಿಂದ ೧೮ರ ವರೆಗೆ ಪೇರಾಲ್ ಜಿಜೆಬಿಎಸ್ ಶಾಲೆಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಿದ್ಧತೆಗಳು ಪೂರ್ತಿಗೊಳ್ಳುತ್ತಿದೆ. ಪೇರಾಲ್ ಗ್ರಾಮ ಈಗಾಗಲೇ ಉತ್ಸವಛಾಯೆಯಲ್ಲಿದೆ. ಸಂಘ ಸಂಸ್ಥೆಗಳು, ಸ್ಥಳೀಯರು ಕಲೋತ್ಸವ ಸಮಿತಿಯೊಂ ದಿಗೆ ಸಹಕರಿಸಿ ಕಾರ್ಯಾಚರಿಸುತ್ತಿದ್ದಾರೆ. ಕಲೋತ್ಸವದ ಪೂರ್ವಭಾವಿಯಾಗಿ ಕುಂಬಳೆ ಪೇಟೆಯಲ್ಲಿ ಸ್ವಾಗತ ಸಮಿತಿ ಹಾಗೂ ಸ್ಥಳೀಯರ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಂಗುರ ಜಾಥಾ ನಡೆಸಲಾಯಿತು. ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪ್ಯನ್, ದ್ಯಾನ್‌ಚಂದ್ ಪ್ರಶಸ್ತಿ ವಿಜೇತ ಕೆ.ಸಿ. ಲೇಖ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.  ಡಂಗುರ ಜಾಥಾದಲ್ಲಿ …

ಜಿಲ್ಲೆಯಲ್ಲಿ ಕೈಗಾರಿಕೆಗಳು ಉಚ್ಛ್ರಾಯ ಸ್ಥಿತಿಯಲ್ಲಿ

ಕಾಸರಗೋಡು: ಜಿಲ್ಲಾ ಪಂಚಾ ಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿಯಾಗಿ ಆಯೋಜಿಸಿದ ರೈಸಿಂಗ್ ಕಾಸರಗೋಡುನಂಗವಾಗಿ ಕೈಗಾರಿಕಾ ವಲಯದಲ್ಲಿ ಪ್ರಗತಿ ಕಂಡುಬಂದಿದೆ. ಈಗಾಗಲೇ ಜಿಲ್ಲೆಗೆ ತಲುಪಿದ್ದು ೧೫೦ ಕೋಟಿ ರೂ.ಗಳ ಠೇವಣಿಯಾಗಿದೆ. ಠೇವಣಿ ಸಂಗಮದಲ್ಲಿ ೧೦ ಯೋಜನೆಗಳ ಪ್ರಾರಂಭ ಚಟುವಟಿಕೆಗಳು ಆರಂಭಗೊಂಡಿದೆ. ರಬ್ಬರ್ ಲ್ಯಾಬೆಕ್ಸ್ ಉತ್ಪನ್ನಗಳ ನಿರ್ಮಾಣಕ್ಕೆ ಸಂಬಂಧಿಸಿ ಕಾಕೋಜನ್ ಇಂಡ್ಯ, ಪ್ರೈಡಂಟ್ ಇಂಡ್ಯ ಕಂಪೆನಿಗಳು, ಮಡಿಕೈ, ಮುನ್ನಾಡ್ ಎಂಬೆಡೆಗಳಲ್ಲಿ ಖಾಸಗಿ ಕೈಗಾರಿಕಾ ಎಸ್ಟೇಟ್‌ಗಳು, ಕೋಟಪುರಂ ಕಾಯಲ್ ಟೂರಿಸಂ ರಿಸೋರ್ಟ್, ಯೂಬೋನ್ ಡೈರಿ ಪ್ರೊಜೆಕ್ಟ್ ಎಂಬಿವು ಜಿಲ್ಲೆಯಲ್ಲಿ ಚಟುವಟಿಕೆ …

ಪಂಜಾಬ್‌ನಲ್ಲಿ ೩.೨ ತೀವ್ರತೆಯ ಭೂಕಂಪ

ರೂಪ್‌ನಗರ: ಪಂಜಾಬ್‌ನ ರೂಪ್ ನಗರದಲ್ಲಿ ೩.೨ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಎಸ್‌ಸಿ) ತಿಳಿಸಿದೆ. ಇಂದು ಮುಂಜಾನೆ ೧.೧೩ರ ವೇಳೆ ರೂಪ್‌ನಗರದ ಭೂಮೇಲ್ಮೈಯಿಂದ ೧೦ ಕಿ.ಮೀ. ಆಳದಲ್ಲಿ ೩.೨ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಎಸ್‌ಸಿ ತಿಳಿಸಿದೆ. ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿ ಲಭಿಸಿಲ್ಲ.

ಮತದಾರರ ಯಾದಿ ಕಾರ್ಯಾಗಾರ

ಕಾಸರಗೋಡು: ನವೆಂಬರ್ 25,26 ಡಿಸೆಂಬರ್ 2, 3 ರಂದು ತಾಲೂಕು/ ವಿಲ್ಲೇಜ್ ಮಟ್ಟದಲ್ಲಿ ಸ್ಪೆಷಲ್ ಕಾರ್ಯಾಗಾರ ಆಯೋಜಿಸ ಲಾಗಿದೆ. 17 ವರ್ಷ ಪೂರೈಸಿದ ಎಲ್ಲರಿಗೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಎಲ್ಲ ಮತದಾರರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗುವುದು.ಪರಿಶೀಲನೆಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಅವರು ಅರ್ಹರಾಗಿದ್ದರೆ ಪಟ್ಟಿಯಲ್ಲಿ ಮರು ಸೇರ್ಪಡೆಗೆ ಫಾರ್ಮ್ ನಂಬರ್ 6 ರಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುವುದು. ಅಸ್ತಿತ್ವದಲ್ಲಿರುವ ಮತದಾರರು ತಮ್ಮ ಆಧಾರ್ ನಂಬರನ್ನು ವೋಟರ್ ಐಡಿಯೊಂದಿಗೆ ಲಿಂಕ್ …

ನಡುಗಿದ ಪುತ್ತೂರು: ಯುವಕನ ಅಟ್ಟಾಡಿಸಿ ಕೊಲೆ

ಪುತ್ತೂರು: ಕರ್ನಾಟಕದ ಪುತ್ತೂರು ಪೇಟೆಯ ಹೊರವಲಯ ನೆಹರು ನಗರದಲ್ಲಿ ನಿನ್ನೆ ಮಧ್ಯರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನನ್ನು ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಖ್ಯಾತ ಹುಲಿವೇಷ ಕುಣಿತ ತಂಡದ ಅಕ್ಷಯ್ ಕಲ್ಲೇಗ (೨೪)ನನ್ನು ಕಡಿದು ಕೊಲೆಗೈಯ್ಯಲಾ ಗಿದೆ. ಅಕ್ಷಯ್ ಕಲ್ಲೇಗ ಸಾರಥ್ಯದಲ್ಲಿ ಟೈಗರ್ಸ್ ಕಲ್ಲೇಗ ಎಂಬ ತಂಡವನ್ನು ಕಟ್ಟಿ ಹುಲಿ ಕುಣಿತದಲ್ಲಿ ಪ್ರಸಿದ್ಧರಾಗಿದ್ದರು. ಹತ್ಯೆಗೆ ಕಾರಣವೇನು ಮೂಲಗಳ ಪ್ರಕಾರ ನಿನ್ನೆ ಸಂಜೆ ಅಕ್ಷಯ್‌ನ ಗೆಳೆಯನೋರ್ವ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ …

ಸ್ಕೂಟರ್ ಬೈಕ್‌ಗೆ ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಸಿಪಿಎಂ ಪ್ರಾದೇಶಿಕ ನೇತಾರ ಮೃತ್ಯು

ಮುಳ್ಳೇರಿಯ: ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರನಾದ ಸಿಪಿಎಂ ಪ್ರಾದೇಶಿಕ ನೇತಾರ ಬಸ್‌ನಡಿಯಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪಾಂಡಿ ಬಳವಂತಡ್ಕದ ಬಿ.ಎಸ್. ತಿಮ್ಮಪ್ಪ (೬೨) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಬೆಳ್ಳೂರು ಬಳಿಯ ಅನೆಕ್ಕಳ ಎಂಬಲ್ಲಿ ಅಪಘಾತ ಸಂಭವಿಸಿದೆ. ತಿಮ್ಮಪ್ಪ ಚಲಾಯಿಸುತ್ತಿದ್ದ ಸ್ಕೂಟರ್ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬಸ್‌ನಡಿಗೆ ತಿಮ್ಮಪ್ಪ ಎಸೆಯಲ್ಪಟ್ಟಿದ್ದಾರೆ. ಅವರ ಕಾಲಿನ  ಮೇಲೆ ಹಿಂಬದಿಯ ಟಯರ್ ಚಲಿಸಿದುದರಿಂದ ಗಂಭೀರ ಗಾಯಗೊಂಡ …

ಬಂದೂಕು ತೋರಿಸಿ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು:  ವಿವಾಹಿತಳಾದ ಯುವತಿಗೆ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ನಿರಂತರ ಲೈಂಗಿಕ ದೌರ್ಜನ್ಯಗೈದ ಬಗ್ಗೆ ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಚಾಲ ಫಿರೋಸ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೩೧ರ ಹರೆಯದ ವಿವಾದಿತ ಯುವತಿ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ೨೦೧೯ರಿಂದ ೨೦೨೨ ಸೆಪ್ಟಂಬರ್ ೮ರವರೆಗೆ ವಿವಿಧ ದಿನಗಳಲ್ಲಿ ಯುವತಿಯ ಮನೆಗೆ ತಲುಪಿದ ಆರೋಪಿ ಬಂದೂಕು ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಯುವತಿ …

ಬಿಟ್ ಕಾಯಿನ್ ವಂಚನೆ: ಯುವಕನ ಒಂದೂವರೆ ಕೋಟಿ ರೂ.ಲಪಟಾವಣೆ

ಹೊಸದುರ್ಗ: ಬಿಟ್ ಕಾಯಿನ್ ವಂಚನೆಗೆ ಒಳಗಾದ ಯುವಕನಿಗೆ ಒಂದೂವರೆ ಕೋಟಿ ರೂಪಾಯಿ ನಷ್ಟಗೊಂಡಿತು. ಕಾಞಂಗಾಡ್ ಕುಶಾಲ್‌ನಗರ  ಜಬಿನ ಮಂಜಿಲ್‌ನ ಖಾಲಿದ್ (೪೫)ರ ಹಣ ನಷ್ಟಗೊಂಡಿರುವುದಾಗಿ ದೂರಲಾಗಿದೆ.  ಘಟನೆಗೆ ಸಂಬಂಧಿಸಿ ಖಾಲಿದ್‌ರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳ ೨೩ರಿಂದ  ೨೫ರ ವರೆಗಿನ ದಿನಗಳಲ್ಲಿ ಅಬು ದಾಬಿಯಲ್ಲಿ ವಾಸಿಸಿ ಕೆಲಸ ನಿರ್ವಹಿಸಿದ್ದ ಖಾಲಿದ್‌ರ ಬಳಿಗೆ ತಲುಪಿ ಬಿಟ್ ಕಾಯಿನ್ ಟ್ರೇಡ್‌ರ್ ಎಂದು ತಿಳಿಸಿ  ತೆಲಂಗಾನ ಹೈದರಾಬಾದ್ ಸಿಟಿಯ ವರಪ್ರಸಾದ್, ಆಂಧ್ರಪ್ರದೇಶದ ಹರಿವೆಂಕಟ ಎಂಬಿವರು …

ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ: ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಸೇರಿದಂತೆ ೨೯ ಮಂದಿ ಆರೋಪಿಗಳು

ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಕೋಲಾಹಲವೆಬ್ಬಿಸಿರುವ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ)ನ್ನು  ಈ ಪ್ರಕರಣದ ತನಿಖೆ ನಡೆಸುತ್ತಿರುವ ಕಣ್ಣೂರು ಕ್ರೈಂಬ್ರಾಂಚ್ ಪೊಲೀಸರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಈ ವಂಚನೆ  ಬಗ್ಗೆ ಒಟ್ಟು ೨೬೩ ದೂರುಗಳು ಲಭಿಸಿದ್ದು, ಆ ಪೈಕಿ ದಾಖಲಿಸಿಕೊಳ್ಳಲಾಗಿರುವ ೧೫ ಪ್ರಕರಣಗಳ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮುಸ್ಲಿಂ ಲೀಗ್ ನೇತಾರ ಹಾಗೂ ಮಂಜೇಶ್ವರ ಮಾಜಿ ಶಾಸಕ ಹಾಗೂ ಫ್ಯಾಶನ್ ಗೋಲ್ಡ್‌ನ ಚೆಯರ್‌ಮೆನ್ ಆಗಿದ್ದ   ಎಂ.ಸಿ. ಖಮರುದ್ದೀನ್ …