ಪಿಣರಾಯಿ ವಿಜಯನ್ ಸರಕಾರ ಸ್ಥಳೀಯಾಡಳಿತ ಸಂಸ್ಥೆಗಳ ಕತ್ತು ಹಿಚುಕುತ್ತಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ತೀವ್ರ ಆರ್ಥಿಕ ಸಂದಿಗ್ಧತೆಯನ್ನು ಹಿಮ್ಮೆಟ್ಟಿಸಲು ಸ್ಥಳೀಯಾಡಳಿತ ಸಂಸ್ಥೆಗಳ ನಿಧಿಯನ್ನು ಕಡಿತಗೊಳಿಸಿದ ಪಿಣರಾಯಿ ಸರಕಾರದ ಕ್ರಮ ಸ್ಥಳೀಯಾಡಳಿತ ಸಂಸ್ಥೆಗಳನ್ನು ಆರ್ಥಿಕವಾಗಿ ಹಿಚುಕುತ್ತಿದೆ,  ತ್ರಿಸ್ತರ ಪಂಚಾಯತ್‌ಗಳ ಚಟುವಟಿಗಳ ತಾಳ ತಪ್ಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಯೋಜಿಸಿದ ಜನ ಪಂಚಾ ಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೊರೋನಾ ಸಮಯದಲ್ಲಿ ಕೆಲಸ ಕಳೆದು ಕೊಂಡು ಹಿಂತಿರುಗಿದ  ಅನಿವಾಸಿಗಳಿಗೆ ಆರು ತಿಂಗಳ ವೇತನ ನೀಡುವುದಾಗಿ ತಿಳಿಸಿ ವಂಚಿಸಿದ ಪಿಣರಾಯಿ ಸರಕಾರ …

ಮಂಗಲ್ಪಾಡಿ ಪಂಚಾಯತ್‌ನಿಂದ ಸ್ಪರ್ಧಿಸುವ ವಿವಿಧ ಪಕ್ಷಗಳ ಅಭ್ಯರ್ಥಿಗಳು

ಉಪ್ಪಳ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಮಂಗಲ್ಪಾಡಿ ಪಂಚಾಯತ್‌ನಿAದ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ ಮೂಸೋಡಿ ಕದೀಜ [ಸ್ವತಂತ್ರ], ರೇಷ್ಮ.ಕೆ. ಆರ್. [ಸ್ವತಂತ್ರ], ಸುಮಯ್ಯ.ವಿ [ಲೀಗ್], 2ನೇ ವಾರ್ಡ್ ಉಪ್ಪಳಗೇಟ್ ಗೋಲ್ಡನ್ ಅಬ್ದುಲ್ ರಹಿಮಾನ್ [ಲೀಗ್], ಅಶ್ರಫ್ [ಸ್ವತಂತ್ರ], ನಿತಿನ್ [ಬಿಜೆಪಿ], 3ನೇ ವಾರ್ಡ್ ಮುಳಿಂಜ ಮುನೀರ್ ಕೆ.ಪಿ [ಸ್ವತಂತ್ರ], ಮುಹಮ್ಮದ್ ಹನೀಫ್.ಬಿ [ಹನೀಫ್ ಬಾಬಾ] [ಲೀಗ್], ಮೊಹಮ್ಮದ್ ಇಂತ್ಯಾಸ್ [ಸ್ವತಂತ್ರ], ಹರಿನಾಥ ಭಂಡಾರಿ [ಬಿಜೆಪಿ], 4ನೇ ವಾರ್ಡ್ ಉಪ್ಪಳ …

ಡಾ. ಡಿ. ವೀರೇಂದ್ರ ಹೆಗಡೆಯವರ 78ನೇ ಹುಟ್ಟುಹಬ್ಬ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಜನ್ಮದಿನ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ  ಹುಟ್ಟುಹಬ್ಬ ಆಚರಿಸಲಾಯಿತು. ಬೆಳಿಗ್ಗೆ ಭಜನೆ ಬಳಿಕ ಸಭೆ ನಡೆಯಿತು. ಇದೇ ವೇಳೆ ತಾಲೂಕು ಜನಜಾಗೃತಿ ವೇದಿಕೆಯಿಂದ ಕೊಡುಗೆಯಾಗಿ ನೀಡಿದ ಪುಸ್ತಕವನ್ನು ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಆಶ್ರಮದ ರಮೇಶ್ ಕಳೇರಿಯವರಿಗೆ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಕಾರಡ್ಕ ವಲಯ ಅಧ್ಯಕ್ಷ …

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಆರಂಭ

ಕಾಸರಗೋಡು: ಛಾಯಾಗ್ರಹಣ ವಲಯದಲ್ಲಿ ಕೆಲಸ ಮಾಡುವವರ ಅತ್ಯಂತ ದೊಡ್ಡ ಸಂಘಟನೆಯಾದ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ೪೧ನೇ ಜಿಲ್ಲಾ ಸಮ್ಮೇಳನ ಕಾಞಂಗಾಡ್ ವ್ಯಾಪಾರ ಭವನದಲ್ಲಿ ಆರಂಭಗೊಂಡಿತು. ನಿಧನ ಹೊಂದಿದ ಫೊಟೋ ಗ್ರಾಫರ್‌ಗಳಾದ ವಿನೋದ್, ಚಿದಾನಂದ ಅರಿಬೈಲು ಎಂಬಿವರ ಸ್ಮರಣಾರ್ಥವಿರುವ ನಗರದಲ್ಲಿ ಎರಡು ದಿನಗಳಲ್ಲಾಗಿ ಸಮ್ಮೇಳನ ನಡೆಯಲಿದೆ. ನಿನ್ನೆ  ಬೆಳಿಗ್ಗೆ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಧ್ವಜಾರೋಹಣಗೈದರು. ಬಳಿಕ ಟ್ರೇಡ್ ಫೇರ್‌ನ್ನು ರಾಜ್ಯಾಧ್ಯಕ್ಷ ಎ.ಸಿ. ಜೋನ್ಸನ್ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. …

ಮಂಡಲ ಅಧ್ಯಕ್ಷರ ವರ್ತನೆಯಿಂದ ಬೇಸತ್ತು ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್ ಉಪಾಧ್ಯಕ್ಷ ರಾಜೀನಾಮೆ

ಬದಿಯಡ್ಕ: ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್‌ನ ಸರ್ವಾಧಿಕಾರಕ್ಕೆ ಮನನೊಂದು ಹಾಗೂ ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್‌ರ ವರ್ತನೆಯಿಂದ ಬೇಸತ್ತು ಮುಸ್ಲಿಂ ಲೀಗ್ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ  ಅಬ್ದುಲ್ ಹಮೀದ್ ಪಳ್ಳತ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಡಲ ಅಧ್ಯಕ್ಷ ತನ್ನ ಆಸಕ್ತಿಗೆ ಅನುಸಾರವಾಗಿ ಕಾರ್ಯಾಚರಿಸುತ್ತಿದ್ದು, ಕಾರ್ಯಕರ್ತರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ. ತನ್ನ ಸ್ವಂತ ಲಾಭಕ್ಕಾಗಿ ಮಂಡಲ ಅಧ್ಯಕ್ಷ ಪಕ್ಷವನ್ನು ದುರುಪಯೋಗ ಮಾಡುತ್ತಿರುವುದಾಗಿ ಅಬ್ದುಲ್ ಹಮೀದ್ ದೂರಿದ್ದಾರೆ. ಹಳೆಯ 7ನೇ ವಾರ್ಡ್‌ನಿಂದ ಎರಡು …

ಚಿನ್ನಾಭರಣ ಲಪಟಾಯಿಸಲು ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಪುತ್ರಿ

ತೃಶೂರು: ತಾಯಿಯ ಚಿನ್ನಾಭರಣಗಳನ್ನು ಲಪಟಾಯಿಸಲು ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಘಟನೆ  ನಡೆದಿದೆ. ತೃಶೂರು ಮುಂ ಡೂರು ನಿವಾಸಿ ತಂಗಮಣಿ (75) ಕೊಲೆಗೀಡಾಗಿದ್ದು, ಈ ಸಂಬಂಧ ಮಗಳು ಸಂಧ್ಯ (45), ಈಕೆಯ ಪ್ರಿಯತಮ ನಿತಿನ್ (27) ಎಂಬಿವರನ್ನು  ಪೊಲೀಸರು ಬಂಧಿಸಿದ್ದಾರೆ. ತಂಗಮಣಿಯ ಚಿನ್ನಾಭರಣ ಗಳನ್ನು ಲಪಟಾಯಿಸಲು ಮಗಳು ಪ್ರಿಯತ ಮನೊಂದಿಗೆ ಸೇರಿ ಈ ಕೃತ್ಯವೆ ಸಗಿದ್ದಾ ಳೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಶನಿವಾರ ಬೆಳಿಗ್ಗೆ  ತಂಗಮ ಣಿಯನ್ನು ಕೊಲೆಗೈಯ್ಯಲಾಗಿದೆ. ಅಂದು ರಾತ್ರಿ ಹಿತ್ತಿಲಲ್ಲಿ ಮೃತದೇಹ …

ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ ಚಾಲಕ ಅಪಾಯದಿಂದ ಪಾರು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೀನು ಲಾರಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಪೆರಿಯಾ ಕೇರಳ ಕೇಂದ್ರ ವಿಶ್ವವಿದ್ಯಾಲಯ ಸಮೀಪ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕಾಞಂಗಾಡ್‌ನಿಂದ  ಎರಡು ಘಟಕ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದೆ. ಪೊನ್ನಾನಿಯಿಂದ ಮಂಗಳೂರು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂ ಡಿದೆ.   ಲಾರಿಗೆ ಬೆಂಕಿ ಹತ್ತಿಕೊಂಡಿರು ವುದನ್ನು ಕಂಡ ಚಾಲಕ ಕರ್ನಾಟಕದ ಕುಂದಾಪುರ ನಿವಾಸಿ ಮುಹಸಿನ್ ಕೂಡಲೇ ಲಾರಿಯನ್ನು ನಿಲ್ಲಿಸಿ ಹೊರಗಿಳಿದು ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾನೆ. ಇಂಜಿನ್ ಬಿಸಿಯಾ …

ಕುಬಣೂರು ನಿವಾಸಿ ಸಹಿತ ಮೂವರು ವಾಹನ ಕಳವು ತಂಡದ ಸೆರೆ: ತನಿಖೆ ಕಾಸರಗೋಡಿಗೆ

ಕಾಸರಗೋಡು: ಕುಬಣೂರು ಹಾಗೂ ಚೆರ್ವತ್ತೂರು ನಿವಾಸಿಗಳು ಸಹಿತ ಮೂವರು ಅಂತಾರಾಜ್ಯ ವಾಹನ ಕಳ್ಳರು ಎರ್ನಾಕುಳಂನಲ್ಲಿ ಸೆರೆಗೀಡಾಗಿದ್ದು, ಈ ಸಂಬಂಧ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿ ಸಲಾಗಿದೆ.  ಬೇಕೂರು ಕುಬಣೂರಿನ ಕೆ.ಪಿ. ಅಬೂಬಕ್ಕರ್ ಸಿದ್ದಿಕ್ (41), ಚೆರ್ವತ್ತೂರು ಕೋರಪರಂಬಿಲ್‌ನ ಸಿದ್ದಿಕ್ (48), ಕಣ್ಣೂರು ಮಾಡಾಯಿ ಕಿನಾಕುಳಿಲ್ ಶಾಜಿದ್ ಯಾನೆ ಸೋಡಾಬಾಬು (47)ಎಂಬಿವರನ್ನು ಪನಂಗಾಡ್ ಪೊಲೀಸ್ ಇನ್‌ಸ್ಪೆಕ್ಟರ್ ವಿಪಿನ್‌ದಾಸ್ ಬಂಧಿಸಿದ್ದರು. ಸಿದ್ದಿಕ್ ವಿರುದ್ದ ಕೇರಳ ಹಾಗೂ ತಮಿಳುನಾಡಿನ ಮೇಟುಪಾಳಯಂ, ನಾಮಕ್ಕಲ್ ಎಂಬಿಡೆಗಳಲ್ಲಿ ದರೋಡೆ ಸಹಿತ 25 ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಬೂಬ …

ಪ್ರತಾಪನಗರ: ಹದಗೆಟ್ಟ ರಸ್ತೆಯಲ್ಲಿ ಶೋಚನೀಯ ಸಂಚಾರ; ದುರಸ್ತಿಗೆ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಸೋಂಕಾಲು-ಪ್ರತಾಪನಗರ ರಸ್ತೆ ಹದಗೆಟ್ಟು ಶೋಚನಿ ಯಾವಸ್ಥೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಹೊಂಡ ಗಳಲ್ಲಿ ಮಳೆ ನೀರು ಸಂಗ್ರಹಗೊಳ್ಳುವು ದರಿಂದ ಸಂಚಾರದ ವೇಳೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೊಂಡದಲ್ಲಿ ಸಿಲುಕಿ ಹಾನಿಗೀಡಾಗುತ್ತಿರುವ ಬಗ್ಗೆ ದೂರಲಾಗುತ್ತಿದೆ. ಶಿಶು ಮಂದಿರ ಹಾಗೂ ಬೀಟಿಗದ್ದೆ ಪರಿಸರದಲ್ಲಿ ಶೋಚನೀಯವಸ್ಥೆಗೆ ತಲುಪಿದ ರಸ್ತೆಯಲ್ಲಿ ಒಂದೂವರೆ ತಿಂಗಳ ಹಿಂದೆ ಜಲ್ಲಿಕಲ್ಲುಗಳನ್ನು ತಂದು ಹಾಸಿ ದ್ದಾರೆ. ಆದರೆ ಅದನ್ನು ಸಮತಟ್ಟು, ಡಾಮಾರೀಕರಣ ನಡೆಸಲಿಲ್ಲ. …

ಕೌಟುಂಬಿಕ ಸಮಸ್ಯೆ: ಸಹೋದರನನ್ನು ಇರಿದು ಕೊಲೆಗೈದ ಅಣ್ಣ

ಮಲಪ್ಪುರಂ:  ಕೌಟುಂಬಿಕ ವಿವಾದದಿಂದ  ಸಹೋದರನೋರ್ವ ತಮ್ಮನನ್ನು ಇರಿದು ಕೊಲೆಗೈದ ಘಟನೆ ಪೂಕೋಟೂರು ಪಳ್ಳಿಮುಖ್ ಎಂಬಲ್ಲಿ ನಡೆದಿದೆ. ಇಲ್ಲಿನ ಅಮೀರ್ (26) ಸಾವಿಗೀಡಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಸಹೋದರ ಜುನೈದ್ (28)ನನ್ನು ಮಂಜೇರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ಈ ಭೀಕರ ಕೊಲೆಕೃತ್ಯ ನಡೆದಿದೆ. ಮನೆಯಲ್ಲಿ ಇವರಿಬ್ಬರು ಮಾತ್ರವೇ ಇದ್ದರು. ಇವರ ಮಧ್ಯೆ ವಾಗ್ವಾದವುಂಟಾಗಿದ್ದು, ಈ ಮಧ್ಯೆ  ಜುನೈದ್ ಚಾಕುವಿನಿಂದ ಇರಿದು ಅಮೀರ್‌ನನ್ನು ಕೊಲೆಗೈದಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳು …