ಹಲವಾರು ಕುಟುಂಬಗಳು ಸಂಕಷ್ಟದಲ್ಲಿ: ಬಾವಿ, ಹೊಳೆಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ; ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ 4 ದಿನಕ್ಕೊಮ್ಮೆ ನಳ್ಳಿನೀರು ವಿತರಣೆ
ಉಪ್ಪಳ: ಹವಾಮಾನದಲ್ಲಿ ಬಿಸಿ ಏರುತ್ತಿರುವಂತೆಯೇ ಕುಡಿಯುವ ನೀರಿಗೆ ಕ್ಷಾಮ ತಲೆದೋರಲು ಆರಂಭ ವಾಗಿದೆ. ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿ ಯಲ್ಲಿ ಕುಡಿಯುವ ನೀರು ಕ್ಷಾಮ ವ್ಯಾಪಕವಾಗುತ್ತಿದ್ದು ಈ ಬಾರಿ ಈಗಲೇ ನೀರಿನ ಕ್ಷಾಮ ಕಂಡುಬರುತ್ತಿದೆ. ಬಾವಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರು ವುದು ಪೈಪ್ ಮೂಲಕ ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ …