ಎಸ್‌ಐಆರ್: ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿ; 26ರಂದು ಅರ್ಜಿಗಳ ಪರಿಶೀಲನೆ

ತಿರುವನಂತಪುರ: ಕೇರಳದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿಗೊಳಿಸಿದೆ. ಕೇರಳದಲ್ಲ್ಲಿ ಎಸ್‌ಐಆರ್ ಕ್ರಮವನ್ನು ಪ್ರಶ್ನಿಸಿ ಹಾಗೂ ಅದರ ವಿರುದ್ಧ ಕೇರಳ ಸರಕಾರ, ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ರ ನೇತೃತ್ವದ ಸುಪ್ರಿಂಕೋರ್ಟ್‌ನ ಪೀಠ ಕೊನೆಗೆ ಆ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಅರ್ಜಿಗಳ ಮೇಲಿನ ಮುಂದಿನ …

ಜಿಲ್ಲಾ ಪಂಚಾಯತ್ ವಿವಿಧ ಡಿವಿಶನ್‌ಗಳಿಂದ  ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ಪುತ್ತಿಗೆ ಡಿವಿಶನ್‌ನಿಂದ ಸೋಮಶೇಖರ ಜೆ.ಎಸ್, ವರ್ಕಾಡಿಯಿಂದ ಹರ್ಷಾದ್ ವರ್ಕಾಡಿ, ಪಿಲಿಕೋಡ್‌ನಿಂದ ಕರಿಂಬಿಲ್ ಕೃಷ್ಣನ್, ಉದುಮದಿಂದ ಸುಕುಮಾರಿ ಶ್ರೀಧರನ್, ಚಿತ್ತಾರಿಕ್ಕಲ್‌ನಿಂದ ವಿನ್ಸಿ ಜೈನ್, ಕಳ್ಳಾರ್‌ನಿಂದ ಸ್ಟಿಮಿ ಸ್ಟೀಫನ್, ಕಯ್ಯೂರ್‌ನಿಂದ ಸುಂದರನ್ ಸ್ಪರ್ಧಿಸುವರು. ಇವರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಕಲೆಕ್ಟರೇಟ್‌ಗೆ ತಲುಪಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಐಕ್ಯರಂಗದ ಸಂಚಾಲಕ ಗೋವಿಂದನ್ ನಾಯರ್,ಸೇವಾ ದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚ್ಚೇರಿ, ಪದಾಧಿಕಾರಿಗಳಾದ …

ಯುವತಿಗೆ ಕೇಬಲ್ ವಯರ್ ಉಪಯೋಗಿಸಿ ಹಲ್ಲೆ: ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆರೆ

ಕೊಚ್ಚಿ: ಯುವತಿಯನ್ನು ಕ್ರೂರವಾಗಿ ಹಲ್ಲೆಗೈದ ಪ್ರಕರಣದಲ್ಲಿ ಯುವಮೋರ್ಚಾ ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪು ಪರಮಶಿವಂ ಸೆರೆಯಾಗಿದ್ದಾನೆ. ಕೊಲೆಯತ್ನಕ್ಕೆ ಕೇಸು ದಾಖಲಿಸಲಾಗಿದೆ. ಮೊಬೈಲ್ ಚಾರ್ಜರ್ ಕೇಬಲ್ ಉಪಯೋಗಿಸಿ ಈತ ಯುವತಿಗೆ ಹಲ್ಲೆಗೈದಿದ್ದಾನೆ. ದೇಹದಲ್ಲಿ ಸಂಪೂರ್ಣ ಹಲ್ಲೆಯ ಗಾಯಗಳೊಂದಿಗೆ ಯುವತಿ ಮರಡ್ ಪೊಲೀಸ್ ಠಾಣೆಗೆ ನೇರವಾಗಿ ಹಾಜರಾಗಿ ಮಾಹಿತಿ ನೀಡಿದ್ದಾಳೆ. ಈಕೆಯ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ. ಕಳೆದ 5 ವರ್ಷದಿಂದ ಯುವತಿ ಹಾಗೂ ಗೋಪು ಪರಮಶಿವ ಜೊತೆಯಾಗಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಈತ ಯುವತಿಗೆ ನಿರಂತರವಾಗಿ ದೈಹಿಕ ದೌರ್ಜನ್ಯಗೈಯ್ಯುತ್ತಿದ್ದನೆಂದು …

ಅದ್ರುಕುಳಿಯಿಂದ ನಾಪತ್ತೆಯಾದ ಯುವತಿ ಪತ್ತೆಗಾಗಿ ಲುಕೌಟ್ ನೋಟೀಸ್

ಕಾಸರಗೋಡು: ಚೆರ್ಕಳ ಪಾಡಿ ಅದ್ರುಕುಳಿಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದರಂಗವಾಗಿ ವಿದ್ಯಾನಗರ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ(39)ಯ ಪತ್ತೆಗಾಗಿ ಲುಕೌಟ್ ನೋಟೀಸ್ ಹೊರಡಿಸಲಾಗಿದೆ. ಕಳೆದ ಅಕ್ಟೋಬರ್ 25ರಂದು ಬೆಳಿಗ್ಗೆ ಮನೆಯಿಂದ ಹೋದ ಲಕ್ಷ್ಮಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್‌ರ ನೇತೃತ್ವದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆಯಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯ …

ಪಿಡಬ್ಲ್ಯುಡಿಯ ಅನಾಸ್ಥೆ: ಬ್ಯಾಂಕ್ ರಸ್ತೆ ದುರಸ್ತಿಗೊಳಿಸದಿದ್ದರೆ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸುವುದಾಗಿ ಎಚ್ಚರಿಕೆ

ಕಾಸರಗೋಡು: ನಗರದ ರೈಲ್ವೇ ನಿಲ್ದಾಣ-ಕರಂದಕ್ಕಾಡು-ಮಧೂರು ರೂಟ್‌ನಲ್ಲಿ ರಸ್ತೆ ಶೋಚನೀಯಾವಸ್ಥೆ ಗೊಂಡು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಹಲವು ಬಾರಿ ದೂರು ನೀಡಿದ್ದರೂ ಇದುವರೆಗೂ ಸೂಕ್ತ ಪರಿಹಾರ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆ  ಡಾಮರೀಕರಣ ಆರಂಭಗೊಂಡು ತಿಂಗಳುಗಳು ಕಳೆದರೂ ಇನ್ನೂ ಕೂಡಾ ಕಾಮಗಾರಿ ಪೂರ್ತಿ ಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟ ವರಿಗೆ ಈ ಬಗ್ಗೆ ತಿಳಿಸಲಾಗಿದ್ದರೂ ಮಳೆಯ ಹೆಸರಲ್ಲಿ ಮುಂದೂಡಲಾಗು ತ್ತಿತ್ತು.  ಮಳೆಗಾಲ ಮುಗಿದಾಗ ಡಾಮರೀಕರಣ ಪೂರ್ತಿಗೊಳಿಸುವು ದಾಗಿ ಪಿಡಬ್ಲ್ಯು ಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ರಸ್ತೆಯಲ್ಲಿ …

ಬೆಳ್ಳೂರು ಪಂಚಾಯತ್‌ನಲ್ಲಿ ಬಿಜೆಪಿ ನಾಯಕತ್ವ-ಕಾರ್ಯಕರ್ತರ ಮಧ್ಯೆ ಸ್ಪರ್ಧೆ: ಸ್ವತಂತ್ರ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ನಾಮಪತ್ರ ಸಲ್ಲಿಕೆ

ಮುಳ್ಳೇರಿಯ: ಬಿಜೆಪಿಗೆ ಅಡಿ ಪಾಯ ಭದ್ರವಾಗಿರುವ  ಪಂಚಾ ಯತ್‌ಗಳಲ್ಲಿ ಒಂದಾಗಿರುವ ಬೆಳ್ಳೂರಿ ನಲ್ಲಿ ಈ ಬಾರಿ ಪಕ್ಷ ತೀವ್ರ  ಸವಾಲನ್ನು ಎದುರಿಸುತ್ತಿದೆಯೆಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆಯಲ್ಲಿ  ಈ ಪಂಚಾಯತ್ ನಲ್ಲಿ ಪಕ್ಷದ ಮುಖಂ ಡರು ಹಾಗೂ ಕಾರ್ಯಕರ್ತರ ಮಧ್ಯೆ ಪ್ರಧಾನ ಸ್ಪರ್ಧೆಯೆಂದು ಇಲ್ಲಿನವರು ತಿಳಿಸುತ್ತಾರೆ. ಅಭ್ಯರ್ಥಿ ನಿರ್ಣಯದಲ್ಲಿ ಉಂಟಾಗಿ ರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಪಂಚಾಯತ್‌ನಲ್ಲಿ ಈ ಬಾರಿ ಉಪಾ ಧ್ಯಕ್ಷೆಯಾಗಿರುವ ಗೀತಾ ಸ್ವತಂತ್ರೆಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ತನಗಾಗಿ ಅಲ್ಲ ಕಾರ್ಯಕರ್ತರಿಗಾಗಿ ತಾನು …

ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಮುಳಿಯಾರು ಚೂರಿಮೂಲೆಯ ದಿ| ಕೃಷ್ಣ ನಾಯ್ಕ್‌ರ ಪುತ್ರ ಸಿ.ಎಚ್. ರಾಜೇಶ್ವರ (37) ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮನೆಯೊಳಗೆ ಮೃತದೇಹ ಪತ್ತೆಯಾಗಿದೆ. ಇವರು ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ ಪುಷ್ಪ, ಪತ್ನಿ ಸೌಮ್ಯ (ಚಾಪಾಡಿಯಲ್ಲಿ ಅಂಗನವಾಡಿ ಅಧ್ಯಾಪಿಕೆ), ಮಕ್ಕಳಾದ ಗಂಗ, ನಿವೇದ್ಯ, ಸಹೋದರ- ಸಹೋದರಿಯರಾದ ರಘುವರ, ಸುಶೀಲ, ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪನಯಾಲ್ ಬ್ಯಾಂಕ್ ನೌಕರ ಮನೆ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಪನಯಾಲ ಸಹಕಾರಿ ಬ್ಯಾಂಕ್‌ನ ನೌಕರನನ್ನು ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ.  ಪನಯಾಲ್ ನಿವಾಸಿ ಟಿ. ರಾಜೇಂದ್ರನ್ (56) ಮೃತಪಟ್ಟವರು. ಸಿಪಿಎಂ ಬ್ರಾಂಚ್ ಸದಸ್ಯರಾಗಿದ್ದಾರೆ. ೫ ತಿಂಗಳು ಕಳೆದರೆ ಸೇವೆಯಿಂದ ನಿವೃತ್ತರಾಗಲಿರುವಂತೆಯೇ ರಾಜೇಂದ್ರನ್ ಇಂದು ಮುಂಜಾನೆ ಮನೆ ಹಿತ್ತಿಲಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ  ಕಂಡುಬಂದಿದ್ದಾರೆ. ಕೂಡಲೇ ಹಗ್ಗ ತುಂಡುಮಾಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾ ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮಹಜರಿಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಿನ್ನೆ ರಾತ್ರಿವರೆಗೆ ಪಂಚಾಯತ್ …

ಶಬರಿಮಲೆ ಚಿನ್ನ ಕಳವು: ಬಂಧಿತ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಜೈಲಿಗೆ; ತನಿಖೆ ಮಾಜಿ ಮುಜುರಾಯಿ ಸಚಿವರತ್ತ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಬಂಧಿಸಿದ ತಿರುವಿದಾಂಕೂರು ದೇವಸ್ವಂ ಮಂಡಳಿ   ಮಾಜಿ ಅಧ್ಯಕ್ಷ, ಸಿಪಿಎಂ ನೇತಾರ ಹಾಗೂ ಮಾಜಿ ಶಾಸಕನೂ ಆಗಿರುವ  ಎ. ಪದ್ಮಕುಮಾರ್‌ರನ್ನು ಕೊಲ್ಲಂ ವಿಜಿಲೆನ್ಸ್  ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ತಿರುವನಂತಪುರ ಸ್ಪೆಷಲ್ ಜೈಲಿನಲ್ಲಿ ೧೪ ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪದ್ಮಕುಮಾರ್‌ನನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರನ್ನು ಇಂದು …

ನಿವೃತ್ತ ಹಡಗು ಉದ್ಯೋಗಿ ನಿಧನ

ಬದಿಯಡ್ಕ: ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್ ನಿವಾಸಿ ಶ್ಯಾಮ್ ಶೆಟ್ಟಿ (62) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಹಡಗಿನಲ್ಲಿ ಉದ್ಯೋ ಗಿಯಾಗಿದ್ದ ಇವರು ನಿವೃತ್ತಿ ಬಳಿಕ ಮನೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹ ವನ್ನು ನಿನ್ನೆ ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಮೂಕಂಪಾರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದಿವಂಗತರಾದ ರಾಮಯ್ಯ ಶೆಟ್ಟಿ- ಲಕ್ಷ್ಮಿ ಶೆಟ್ಟಿ ದಂಪತಿ ಪುತ್ರನಾದ ಮೃತರು ಪತ್ನಿ ಉಷಲತ (ಬ್ರಹ್ಮಾವರದಲ್ಲಿ ಸರಕಾರಿ ಶಾಲೆ ಅಧ್ಯಾಪಿಕೆ), …