ದುರಸ್ತಿ ಕಾಮಗಾರಿ: ವಿದ್ಯುತ್ ವಿತರಣೆ ಆಂಶಿಕ ಮೊಟಕು

ಕಾಸರಗೋಡು: 110 ಕೆ.ವಿ. ಮೈಲಾಟಿ- ವಿದ್ಯಾನಗರ ಫೀಡರ್‌ನ ಸಾಮರ್ಥ್ಯ ಹೆಚ್ಚಿಸುವುದರಂಗ ವಾಗಿರುವ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ಇಂದಿನಿಂದ ನ.7ರವರೆಗಿನ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ 110 ಕೆ.ವಿ. ಸಬ್‌ಸ್ಟೇಶನ್‌ಗಳಲ್ಲಿ ವಿದ್ಯುತ್ ವಿತರಣೆ ಆಂಶಿಕವಾಗಿ ಮೊಟಕುಗೊಳ್ಳಲು ಸಾಧ್ಯತೆ ಇದೆ. ಸಬ್ ಸ್ಟೇಶನ್‌ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33ಕೆ.ವಿ. ಸ್ಟೇಶನ್‌ಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಎಂಬೆಡೆಗಳಿಂದಿರುವ ವಿದ್ಯುತ್ ವಿತರಣೆಯಲ್ಲಿ ತಡೆ ಉಂಟಾಗಲಿದೆ ಎಂದು ಮೈಲಾಟಿ ಲೈನ್ ಮೈಂಟನೆನ್ಸ್ ಸಬ್ ಡಿವಿಶನ್ ಅಸಿಸ್ಟೆಂಟ್ …

ಎಕೆಪಿಎ ಕಾಸರಗೋಡು ವಲಯ ಪದಾಧಿಕಾರಿಗಳು

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ವಲಯ ಸಮ್ಮೇಳನ ನಿನ್ನೆ ಜರಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಅಧ್ಯಕ್ಷರಾಗಿ ವಾಮನ್ ಕುಮಾರ್, ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಸರಿತಾ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ರೈ, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಆಯ್ಕೆಯಾದರು. ಸಮ್ಮೇಳನವನ್ನು ಕಾಸರಗೋಡು ಎಕ್ಸೈಸ್ ಅಸಿಸ್ಟೆಂಟ್ ಕಮಿಶನರ್ ಅನ್ವರ್ ಸಾದಾತ್ ಉದ್ಘಾಟಿಸಿದರು. ಪ್ರತಿನಿಧಿ ಸಮ್ಮೇಳನವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಸುಕು ನೈರಿಯ ಉದ್ಘಾಟಿಸಿದರು.

ಮುಹಿಮ್ಮಾತ್‌ನಲ್ಲಿ ಉರೂಸ್, ಸನದುದಾನ ಜನವರಿಯಲ್ಲಿ

ಪುತ್ತಿಗೆ: ಸಯ್ಯಿದ್ ತ್ವಾಹಿರುಲ್ ಅಹ್‌ದಲ್ ತಂಙಳ್‌ರ ಇಪ್ಪತ್ತನೇ ವರ್ಷದ ಉರೂಸ್ ಹಾಗೂ ಸನದುದಾನ ಸಮ್ಮೇಳನ ಜನವರಿ 29ರಿಂದ 31ರ ವರೆಗೆ ನಡೆಯಲಿದೆ. ಕೇರಳ ಮುಸ್ಲಿಂ ಜಮಾಯತ್ ಜಿಲ್ಲಾ ಅಧ್ಯಕ್ಷ ಹಸನುಲ್ ಅಹ್‌ದ್ ತಂಙಳ್ ಈ ಬಗ್ಗೆ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಫೈಸಿ ಅಧ್ಯಕ್ಷತೆ ವಹಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಹಲವರು  ಮಾತನಾಡಿದರು.

ಅನಂತಪುರ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಸ್ಫೋಟ : ಓರ್ವ ಮೃತ್ಯು; ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

ಕುಂಬಳೆ: ಅನಂತಪುರ ಉದ್ದಿಮೆ ಕೇಂದ್ರದಲ್ಲಿರುವ  ಫ್ಲೈವುಡ್ ಫ್ಯಾಕ್ಟರಿ ಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಯಾನಕ ಸ್ಫೋಟದ ಕುರಿತು ಬಾಂಬ್ ಸ್ಕ್ವಾಡ್ ಹಾಗೂ ಆರೋಗ್ಯ ಇಲಾಖೆ ತಂಡ ತಲುಪಿ ಪರಿಶೀಲನೆ ಆರಂಭಿಸಿದೆ. ನಿನ್ನೆ ಸಂಜೆ ೬.೩೦ರ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ  ಓರ್ವ  ಕಾರ್ಮಿಕ ಮೃತಪಟ್ಟು ೨೦ ಮಂದಿ ಗಾಯಗೊಂಡಿ ದ್ದಾರೆ. ಗಾಯಾಳುಗಳಲ್ಲಿ ಐದು ಮಂದಿಯ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ.  ಗಾಯಾಳುಗಳನ್ನು ಕಾಸರಗೋಡು, ಕುಂಬಳೆ, ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಘಟನೆ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿ …

ಅಬಕಾರಿ ಕಾರ್ಯಾಚರಣೆ: ಮನೆ, ಕಾರಿನಲ್ಲಿ ಬಚ್ಚಿಟ್ಟಿದ್ದ 11 ಕಿಲೋ ಗಾಂಜಾ ಪತ್ತೆ; ಓರ್ವ ಸೆರೆ, ಬಂಧಿತನು ಈ ಹಿಂದೆ ಬೇರೊಂದು ಪ್ರಕರಣದಲ್ಲೂ ಸೆರೆಗೊಳಗಾಗಿ ಜೈಲುವಾಸ ಅನುಭವಿಸಿದ್ದ

ಮಂಜೇಶ್ವರ: ಕುಬಣೂರುನಲ್ಲಿ ಕಾಸರಗೋಡು ಎಕ್ಸೈಸ್ ಆಂಡ್ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಇನ್ಸ್ಪೆಕ್ಟರ್ ವಿಷ್ಣುಪ್ರಕಾಶ್ರ ನೇತೃತ್ವದ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆ ಮತ್ತು ಕಾರಿನಲ್ಲಿ ಬಚ್ಚಿಟ್ಟಿದ್ದ ಒಟ್ಟು 11.769 ಕಿಲೋ ಗಾಂಜಾ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಕುಬಣೂರು ಕಾಡಮೂಲೆ ನಿವಾಸಿ ಮೊದೀನ್ ಶಬೀರ್ (36) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.ಅಬಕಾರಿ ತಂಡ ನಿನ್ನೆ ಸಂಜೆ ಸುಮಾರು 7.10ರ ವೇಳೆಗೆ ಆರೋಪಿಯ ಮನೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಲಗುವ ಕೊಠಡಿಯ ಹಾಸಿಗೆಯ ಅಡಿಭಾಗದಲ್ಲಿ ಬಚ್ಚಿಟ್ಟಿದ್ದ 5.269 …

ಅಸೌಖ್ಯ: ಮಹಿಳೆ ನಿಧನ

ಮಂಗಲ್ಪಾಡಿ: ಪ್ರತಾಪನಗರ ಸಮೀಪದ ತಿಂಬರ ನಿವಾಸಿ ಕೈಕಂಬದಲ್ಲಿ ವ್ಯಾಪಾರಿಯಾಗಿರುವ ದುಗ್ಗಪ್ಪ ಟಿ. ಶೆಟ್ಟಿಯವರ ಪತ್ನಿ ಸುಜಾತ ಶೆಟ್ಟಿ (45) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಕೇಪು ಬೆಂಗ್ರೋಡಿ ನಿವಾಸಿ ವೆಂಕಪ್ಪ ಶೆಟ್ಟಿ- ಲೀಲಾವತಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಆಕರ್ಶ್ ಶೆಟ್ಟಿ, ಆದರ್ಶ್, ಸಹೋದರಿ ಸುನಿತ, ಸಹೋದರರಾದ ಶಾಂತಾರಾಮ ಶೆಟ್ಟಿ, ದಯಾನಂದ ಶೆಟ್ಟಿ, ರವೀಶ್ ಶೆಟ್ಟಿ, ವಿನೋದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಹಾಗೂ ಅಪಾರ …

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಕೇಸು ದಾಖಲು

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ  ಹಲ್ಲೆ ನಡೆಸಿ   ನಷ್ಟ ವುಂಟುಮಾಡಿದ ದೂರಿನಂತೆ ಕುಂಬಳೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲಪ್ಪುರಂ ಚೆನ್ನಂಗೋಡ್ ನಿವಾಸಿ ರಾಜೇಶ್ ಕುಮಾರ್ ಕೆ (47) ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾ ಗಿದೆ. ಮಹಿಳೆಯರನ್ನು ಬಸ್ಸಿಗೆ ಹತ್ತಿಸಲಾಗುವುದಿಲ್ಲವೆಂದು ಆರೋಪಿಸಿ ಕುಂಬಳೆ ಪೇಟೆಯಲ್ಲಿ ನಿನ್ನೆ ಅಪರಾಹ್ನ ಇಬ್ಬರು ಬಸ್ಸಿಗೇರಿ ಬೈದು ತನ್ನ ಮೇಲೆ ಹಲ್ಲೆ ನಡೆಸಿದ ರೆಂದು ಆ ಮೂಲಕ ತನ್ನ ಹಾಗೂ ನಿರ್ವಾಹಕನ ಕರ್ತವ್ಯ ನಿರ್ವಹಣೆಗೆ …

ಮೋನ್‌ಥ ಚಂಡಮಾರುತ ಸಂಜೆ ಅಪ್ಪಳಿಸುವ ಸಾಧ್ಯತೆ

ಬೆಂಗಳೂರು: ಬಂಗಾಳ ಸಮುದ್ರದಲ್ಲಿ ಉದ್ಭವಿಸಿರುವ ಮೋನ್‌ಥ ಚಂಡಮಾರುತ ಇಂದು ದಡಕ್ಕೆ ಅಪ್ಪಳಿಸಲಿದೆ. ಸಂಜೆ ಆಂಧ್ರ ಪ್ರದೇಶದ ಕಾಕಿನಾಡ ಬಳಿಯ ಪಚ್ಚಲಿಪಳ್ಳ ಪರಿಸರದಲ್ಲಿ 100 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾದಲ್ಲಿ ಮುಂಜಾಗ್ರತೆ ಏರ್ಪಡಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ಇಂದು ರಜೆ ಸಾರಲಾಗಿದೆ. ಆಂಧ್ರ ಪ್ರದೇಶದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿವಿಧೆಡೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಚಳ್ಳಂಗಯ ನಿವಾಸಿ ಸೌದಿಯಲ್ಲಿ  ನಿಧನ

ಧರ್ಮತ್ತಡ್ಕ: ಇಲ್ಲಿಗೆ ಸಮೀಪದ ಚಳ್ಳಂಗಯ ಅಂಬೇರಿ ನಿವಾಸಿ, ಕೇರಳ ಮುಸ್ಲಿಂ ಜಮಾಯತ್ ಚಳ್ಳಂಗಯ ಘಟಕ ಸದಸ್ಯ, ಕೊಲ್ಲಿ ಉದ್ಯೋಗಿ ಎ.ಎಂ. ಅಬ್ಬಾಸ್ (60), ಸೌದಿ ಅರೇಬಿಯಾದ ದಮಾಮ್‌ನಲ್ಲಿ ಕೆಲಸದ ಸ್ಥಳದಲ್ಲಿ ನಿಧನ ಹೊಂದಿದರು. ಹೃದಯಾಘಾತ ಸಂಭವಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ಮರಣ ಸಂಭವಿಸಿದೆ. ಒಂದು ವರ್ಷದ ಹಿಂದೆ ಊರಿಗೆ ಬಂದು ಹಿಂತಿರುಗಿ ದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಮುಹಮ್ಮದ್ ಶಂಸೀರ್, ಅಬ್ದುಲ್ ಖಾದರ್, ಆಯಿಷತ್ ತೌಫೀರ, ಖದೀಜತ್ ತನ್ವೀರ, ಅಳಿಯ ಜಮಾಲ್ ಉರ್ಮಿ, ಸಹೋದರರಾದ …

ಬಂದಡ್ಕ ಬಳಿ ನಾಯಿಮೇಲೆ ದಾಳಿ ನಡೆಸಿರುವುದು ಚಿರತೆ

ಬಂದಡ್ಕ:  ಮಾಣಿಮೂಲೆ ಕಣ್ಣಾಡಿತೋಡು ಬಳಿ  ಇತ್ತೀಚೆಗೆ  ಕಟ್ಟಿ ಹಾಕಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ಚಿರತೆಯೇ ಆಗಿದೆಯೆಂದು ದೃಢೀಕರಿಸಲಾಗಿದೆ.  ಬಂದಡ್ಕ ಸೆಕ್ಷನ್ ಫಾರೆಸ್ಟ್ ಆಫೀಸರ್ ಪಿ. ಶೇಷಪ್ಪ ಎಂಬಿವರು ಈ ಬಗ್ಗೆ ಖಚಿತಪಡಿಸಿದ್ದು, ಸಾರ್ವಜನಿಕರಿಗೆ ಜಾಗ್ರತಾ ನಿರ್ದೇಶ ಹೊರಡಿಸಿದ್ದಾರೆ.  ಕಟ್ಟಿ ಹಾಕಿದ ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ನೋಡಿದಾಗ ಚಿರತೆ ಓಡಿ ಹೋಗಿತ್ತು.  ಈ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ನಾಯಿ ಮೇಲೆ ದಾಳಿ ನಡೆಸಿರುವುದು ಚಿರತೆಯಾಗಿದೆಯೆಂದು ತಿಳಿದುಬಂದಿದೆ. …