ಮೊಬೈಲ್ ಫೋನ್ ಅಂಗಡಿಯಿಂದ ಹಾಡಹಗಲೇ ಕಳವು: ಆರೋಪಿ ಸೆರೆ

ಕಾಸರಗೋಡು: ಹಾಡಹಗಲೇ ಮೊಬೈಲ್ ಫೋನ್ ಅಂಗಡಿಯಿಂದ 12 ಸಾವಿರ ರೂಪಾಯಿ ಮೌಲ್ಯದ ಫೋನ್ ಕಳವುಗೈದ ಆರೋಪದಂತೆ ಯುವಕನನ್ನು ಬಂಧಿಸಲಾಗಿದೆ. ಚಟ್ಟಂಚಾಲ್ ಬೆಂಡಿಚ್ಚಾಲ್ ಕನಿಯಾಂಕುಡ್ ನಿವಾಸಿ ಸಿ.ಎಂ ಅಬ್ದುಲ್ ಖಾದರ್(39) ಎಂಬಾತನನ್ನು ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನಿರ್ದೇಶ ಪ್ರಕಾರ ಎಸ್.ಐ. ಎ.ಎನ್.ಸುರೇಶ್ ಕುಮಾರ್ ಬಂಧಿಸಿದ್ದಾರೆ. ಚಟ್ಟಂಚಾಲ್ ಪೇಟೆಯಲ್ಲಿ ಕಾರ್ಯಾಚರಿಸುವ ಸೆಲೆಕ್ಷನ್ ವರ್ಲ್ಡ್ ಎಂಬ ಅಂಗಡಿಯಿಂದ ಬುಧವಾರ ಮೊಬೈಲ್ ಫೋನ್ ಕಳವಿಗೀಡಾಗಿತ್ತು. ಅಂಗಡಿ  ನೌಕರನಾದ ಕನಿಯಾಂಕುಂಡ್‌ನ ಅಬ್ದುಲ್ ಖಾದರ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಮೀನು ಲಾರಿ ಅಪಘಾತ: ಮಲಿನ ಜಲ  ರಸ್ತೆಗೆ: ಶುಚಿಗೊಳಿಸಿದ ಅಗ್ನಿಶಾಮಕದಳ

ಕಾಸರಗೋಡು: ಮೀನು ಹೇರಿಕೊಂಡು ಮಡಕ್ಕರದಿಂದ ಮಂಗಳೂರಿಗೆ ಹೋಗುತ್ತಿದ್ದ ಮಿನಿ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಅದರಲ್ಲಿದ್ದ ಮೀನುಗಳು ಹಾಗೂ ಮಲಿನಜಲ ರಸ್ತೆಗೆ ಚೆಲ್ಲಿ ದುರ್ನಾತ ವಾತಾವರಣ ಸೃಷ್ಟಿಯಾದ ಘಟನೆ ರಾಜ್ಯ ಹೆದ್ದಾರಿಯ ಮೇಲ್ಪರಂಬ ಮಸೀದಿ ಬಳಿ ನಿನ್ನೆ ನಡೆದಿದೆ. ಅಪಘಾತ ಬಳಿಕ ಲಾರಿಯಲ್ಲಿದ್ದವರು ರಸ್ತೆಯಿಂದ ಮೀನುಗಳನ್ನು ಹೆಕ್ಕಿ ಪೆಟ್ಟಿಗೆಗೆ ತುಂಬಿಸಿ ಬೇರೆ ಲಾರಿಯಲ್ಲಿ ಸಾಗಿಸಿದರೂ ರಸ್ತೆಯಲ್ಲಿ ಆವರಿಸಿದ ಮಲಿನಜಲವನ್ನು ತೆರವುಗೊಳಿಸಲಿಲ್ಲ. ಇದರಿಂದ ಆ ಪರಿಸರದಲ್ಲಿ ದುರ್ನಾತ ಸೃಷ್ಟಿಯಾಗಿದ್ದು, ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ …

ಶಾಫಿ ಪರಂಬಿಲ್‌ಗೆ ಪೊಲೀಸರಿಂದ ಹಲ್ಲೆ: ಕಾಂಗ್ರೆಸ್ ಪ್ರತಿಭಟನೆ

ಬಂದ್ಯೋಡು: ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶಾಫಿ ಪರಂಬಿಲ್ ಹಾಗೂ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದು, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಫಾರೂಕ್ ಶಿರಿಯ ಉದ್ಘಾಟಿಸಿದರು.ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಇÁಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ ಅಲ್ಶೇಡಾ, ಅಜೀಝ್, ತುಳಸಿ, ಶಿಹಾಬ್ ಎಂ.ಕೆ, ಹನೀಫ್ …

ಕಾಂಗ್ರೆಸ್ ನೇತಾರನ ನಿಧನಕ್ಕೆ ಸರ್ವಪಕ್ಷದಿಂದ ಸಂತಾಪ ಸಭೆ

ನೀರ್ಚಾಲು:  ಕಾಂಗ್ರೆಸ್ ನೇತಾರನೂ, ನಿವೃತ್ತ ಆರೋಗ್ಯ ಇಲಾಖೆ ನೌಕರ ಐತ್ತಪ್ಪ ಚೆನ್ನೆಗುಳಿ ಅವರ ನಿಧನಕ್ಕೆ ಸರ್ವಪಕ್ಷ ಸಂತಾಪ ಸೂಚಕ ಸಭೆ ನಡೆಸಲಾಯಿತು. ಕಾಂಗ್ರೆಸ್ ಬದಿಯಡ್ಕ ಮಂಡಲ ಕಮಿಟಿ ನೇತೃತ್ವದಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೀಲಕಂಠನ್ ಪುಷ್ಪಾರ್ಚನೆ ನಡೆಸಿದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ವಿವಿಧ ಪಕ್ಷಗಳ ನೇತಾರರಾದ ಬದಿಯಡ್ಕ ಪಂ. ಅಧ್ಯಕ್ಷ ಎಂ. ಅಬ್ಬಾಸ್, ಕುಂಜಾರು ಮೊಹಮ್ಮದ್ ಹಾಜಿ, ಸುಬೈರ್ ಬಾಪಾಲಿಪೊನ, ನಾರಾಯಣ ಮಣಿಯಾಣಿ ನೀರ್ಚಾಲು, ಗಂಗಾಧರ …

ಅಸೌಖ್ಯ: ತ್ಸುನಾಮಿ ಕಾಲನಿ ನಿವಾಸಿ ಯುವತಿ ನಿಧನ

ಕಾಸರಗೋಡು: ಅಡ್ಕತ್ತಬೈಲು ತ್ಸುನಾಮಿ ಕಾಲನಿಯ ವಿಜೇಶ್‌ರ ಪತ್ನಿ ಬಬಿಷ(34) ನಿಧನಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಪೆರುಂಬಳದ ಸಹೋದರಿಯ ಮನೆಯಲ್ಲಿದ್ದ ಬಬಿಷಾರನ್ನು ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಮರಣ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ರಿಯಾಂಸಿ, ಅನ್ವಿಕ, ತಾಯಿ ವಿನುತ, ಸಹೋದರಿಯರಾದ ವಂದನ, ವಿನುಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಬಳೆಯ ನೂತನ ಟ್ರಾಫಿಕ್ ಪರಿಷ್ಕಾರ: ವ್ಯಾಪಾರಿಗಳ, ಪ್ರಯಾಣಿಕರ ಸಮಸ್ಯೆ ಪರಿಹರಿಸಬೇಕು-ಪಿಡಿಪಿ

ಕುಂಬಳೆ: ಪೇಟೆಯ ಹೊಸ ಟ್ರಾಫಿಕ್ ಪರಿಷ್ಕರಣೆಯಿಂದಾಗಿ ಹಳೆ ಬಸ್ ನಿಲ್ದಾಣ ಪರಿಸರದ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಕಾಣಬೇಕೆಂದು ಪಿಡಿಪಿ ಕುಂಬಳ ಪಂ. ಸಮಿತಿ ಸಭೆ ಆಗ್ರಹಿಸಿದೆ. ಬಸ್ ನಿಲ್ದಾಣ  ಪರಿಸರದಲ್ಲಿ, ಪೊಲೀಸ್ ಠಾಣೆ ರಸ್ತೆಯಲ್ಲಿ ಹಲವಾರು ಸಣ್ಣ,  ದೊಡ್ಡ ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಬಸ್ ನಿಲ್ದಾಣವನ್ನು  ಆ ಭಾಗಕ್ಕೆ ಬದಲಿಸಿದ ಕಾರಣ ಬಸ್ ಪ್ರಯಾಣಿಕರು ಮೀಟರಗಳಷ್ಟು ದೂರ ನಡೆಯಬೇಕಾಗುತ್ತಿದೆ. ಪೆರ್ಲ, ಬದಿಯಡ್ಕ, ಮುಳ್ಳೇರಿಯ, ಸೀತಾಂಗೋಳಿ, ಪೇರಾಲ್ ಕಣ್ಣೂರು ಮೊದಲಾದ ಸ್ಥಳಗಳಿಗೆ ತೆರಳಬೇಕಾದ ಬಸ್ ಪ್ರಯಾಣಿಕರು …

ಬಿಜೆಪಿ ಮಂಗಲ್ಪಾಡಿ 7ನೇ ವಾರ್ಡ್ ಕಾರ್ಯಕರ್ತರ ಸಮಾವೇಶ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್‌ನ 7 ವಾರ್ಡ್ ಕಾರ್ಯಕರ್ತರ ಸಮಾವೇಶ ಪ್ರತಾಪ ನಗರ ಶ್ರೀ ಗೌರಿ ಗಣೇಶ ಭಜನಾ ಮಂದಿರದಲ್ಲಿ ನಿನ್ನೆ ಸಂಜೆ ನಡೆಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್ ಸುನಿಲ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲು ಕೇಂದ್ರ ಸರಕಾರದ ಸೌಲಭ್ಯಗಳ ಬಗ್ಗೆ ವಿವರಿಸಿದರು, ವಾರ್ಡ್ ಕನ್ವೀನರ್ ಪ್ರವೀಣ್ ಪಿ ಅಧ್ಯಕ್ಷತೆ ವಹಿಸಿದರು, ಪಂ. ಸದಸ್ಯೆ ಸುಧಾ ಗಣೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ , ಓ.ಬಿ.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ …

ಎನ್‌ಡಿಪಿಎಸ್ ಪಿಟ್ ಆಕ್ಟ್ ಪ್ರಕಾರ ಇಬ್ಬರ ಸೆರೆ

ಕಾಸರಗೋಡು: ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಎನ್‌ಡಿಪಿಎಸ್ ಪಿಟ್ ಆಕ್ಟ್ ಪ್ರಕಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಮೂಕಂಪಾರೆ ನಿವಾಸಿ ಅಲೆಕ್ಸ್ ಚಾಕೊ (28) ಎಂಬಾತನನ್ನು ಬದಿಯಡ್ಕ ಪೊಲೀಸರು ಮತ್ತು  ಹೊಸದುರ್ಗ ಪಡನ್ನಕ್ಕಾಡ್ ನಿವಾಸಿ ವಿಷ್ಣು ಪಿ. (29) ಎಂಬಾತನನ್ನು ನೀಲೇಶ್ವರ ಪೊಲೀಸರು ಈ ಆಕ್ಟ್ ಪ್ರಕಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಂತರ ತಿರುವನಂತಪುರದ ಪೂಜಾಪುರ ಸೆಂಟ್ರಲ್‌ಜೈಲ್‌ಗೆ ಸಾಗಿಸಲಾಗಿದೆ. ಈ ಇಬ್ಬರು ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪಿಟ್ ಎನ್ ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಬಿಜೆಪಿ ಕಾರ್ಯಕರ್ತ ನಿಧನ

ಪೈವಳಿಕೆ: ಹಲವು ವರ್ಷಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಬಿಜೆಪಿ ಕಾರ್ಯಕರ್ತ ನಿಧನ ಹೊಂದಿದರು.  ಪೈವಳಿಕೆ ಬಾಯಾರು ದಳಿಕುಕ್ಕು ನಿವಾಸಿ ನಾರಾಯಣ ಪಾಟಾಳಿ- ರತ್ನಾವತಿ ದಂಪತಿ ಪುತ್ರ ವಿನೋದ್‌ರಾಜ್ (36) ನಿಧನ ಹೊಂದಿದರು. ನಿನ್ನೆ ಮಂಗಳೂರು ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸಂಘ ಪರಿವಾರದ ಸಕ್ರಿಯ ಕಾರ್ಯ ಕರ್ತರಾಗಿದ್ದ ವಿನೋದ್‌ರಾಜ್‌ರಿಗೆ ಕೆಲವು ವರ್ಷದ ಹಿಂದೆ ಅಸೌಖ್ಯ ತಗಲಿತ್ತು. ಇವರ ಚಿಕಿತ್ಸೆಗಾಗಿ ಸಂಘ ಪರಿವಾರದ ನೇತೃತ್ವದಲ್ಲಿ ಸಮಿತಿ ರಚಿಸಿ ಧನ ಸಂಗ್ರಹ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಲು ಪ್ರಯತ್ನ ನಡೆದಿತ್ತು. ಈ ಮಧ್ಯೆ …

ಮಟ್ಕಾ ದಂಧೆ: ಲಾಟರಿ ಆಕ್ಟ್ ಪ್ರಕಾರ 3 ಮಂದಿ ಸೆರೆ

ಕುಂಬಳೆ: ಶಾಂತಿಪಳ್ಳದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಲಾಟರಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಸೆರೆ ಹಿಡಿದಿದ್ದಾರೆ. ದೇವಿನಗರ ನಿವಾಸಿ ವಿಘ್ನೇಶ್ (26), ಶಾಂತಿಪಳ್ಳ ನಿವಾಸಿ ಶರಣ್ ಕುಮಾರ್ (39), ಸೂರಂ ಬೈಲು ನಿವಾಸಿ ಪ್ರವೀಣ್ ಕುಮಾರ್ (30)ನನ್ನು ನಿನ್ನೆ ಅಪರಾಹ್ನ ಶಾಂತಿಪಳ್ಳದಿಂದ ಸೆರೆ ಹಿಡಿಯ ಲಾಗಿದ್ದು ಇವರಿಂದ 2,44,800 ರೂ. ವಶಪಡಿಸಲಾಗಿದೆ. ಎಸ್‌ಐ ಕೆ. ಶ್ರೀಜೇಶ್, ಪ್ರೊಬೆಶನಲ್ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್, ಪೊಲೀಸರಾದ ಅನೂಪ್, ಪ್ರಜೀಶ್ ಸೆರೆ ಹಿಡಿದ ತಂಡದಲ್ಲಿದ್ದರು. ಇವರನ್ನು ಇಂದು …