ಎಂಡಿಎಂಎ ಸಹಿತ ಯುವಕ ಸೆರೆ

ಕುಂಬಳೆ: 9.810 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಬಂಬ್ರಾಣ ದಿಡುಮೆ ನಿವಾಸಿ ಮುಹಮ್ಮದ್ ನೌಫಲ್ (27) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ರಾತ್ರಿ 7.25ರ ವೇಳೆ ನಯಾಬ ಜಾರ್‌ನಲ್ಲಿ ಎಸ್‌ಐ ಹಾಗೂ ತಂಡ ಗಸ್ತು ನಡೆಸುತ್ತಿದ್ದಾಗ ಮೊಹಮ್ಮದ್ ನೌಫಲ್ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದನು. ಪೊಲೀಸರ ವಾಹನವನ್ನು ಕಂಡು ಅಡಗಿ ನಿಲ್ಲಲು ಈತ ಪ್ರಯತ್ನಿಸಿದ್ದು, ಇದರಿಂದ  ಪೊಲೀ ಸರು ಈತನನ್ನು ತಪಾಸಣೆಗೈದಾಗ ಮಾದಕವಸ್ತು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ಸೀನಿಯರ್ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕದಲ್ಲಿ ಮಾತ್ರ ಮಾರಾಟಗೈಯ್ಯಬಹುದಾದ ಆರು ಲೀಟರ್ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ದ್ದಾರೆ. ಪಚ್ಚಂಬಳದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕಿರಣ್ ಕುಮಾರ್ ಎಚ್ (28) ಎಂಬಾತನನ್ನು ನಿನ್ನೆ ಸಂಜೆ ಹೇರೂರು ಚೋಕೆ ಎಂಬಲ್ಲಿಂದ ಮದ್ಯ ಸಹಿತ ಸೆರೆಹಿಡಿದಿರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ಕುಂಬಳೆ ರೇಂಜ್ ಅಬಕಾರಿ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮಾನಸ್ ಕೆ,  ಸಿಇಒಗಳಾ ದ ಅಖಿಲೇಖ್ ಎಂ, ರಾಹುಲ್ ಇ, ಸೂರ್ಜಿತ್ ಕೆ, ಚಾಲಕ ಪ್ರವೀಣ್ ಕುಮಾರ್ ಎಂಬಿವರು  ಕಾರ್ಯಾ ಚರಣೆ ನಡೆಸಿದ …

ಸ್ಕೂಟರ್‌ಗೆ ಪಿಕಪ್ ವ್ಯಾನ್ ಢಿಕ್ಕಿ: ಯುವಕ ಮೃತ್ಯು

ಹೊಸದುರ್ಗ:  ಸ್ಕೂಟರ್‌ಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಪಯ್ಯನ್ನೂರಿನಲ್ಲಿ ಸಂಭವಿಸಿದೆ. ತೃಕರಿಪುರ ಸೌತ್ ಕಕ್ಕುನ್ನಂ ನಿವಾಸಿ ಕೆ. ಕುಂಞಿಕಣ್ಣನ್ ಎಂಬವರ ಪುತ್ರ ಸುಕೇಶ್ (38)ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 11.45ರ ವೇಳೆ ಪಯ್ಯನ್ನೂರು ಮೀನಾ ಬಜಾರ್‌ನಲ್ಲಿ ಅಪಘಾತ ಸಂಭವಿಸಿದೆ. ಸ್ನೇಹಿತ ನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ  ಅಪಘಾತ ಸಂಭವಿಸಿದೆ. ಗಂಭೀರ ಗಾಯ ಗೊಂಡ ಸುಕೇಶ್‌ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಾಯಿ ದೇವಕಿ, ಸಹೋದರ ರತೀಶ್ …

ಹಿಪ್ನೋಟಿಸಂ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆಗೈದು ಗಾಯ: ಘಟನೆಯಿಂದ ಬೆಚ್ಚಿಬಿದ್ದ ರಕ್ಷಕರು: ಶಾಲಾ ಅಧಿಕಾರಿಗಳು, ಅಧ್ಯಾಪಕರಿಗೆ ಪೊಲೀಸರಿಂದ ತಾಕೀತು

ಕುಂಬಳೆ: ಶಾಲಾ ವಿದ್ಯಾರ್ಥಿಗಳಿಗೆ ಹಿಪ್ನೋಟಿಸಂ ಬಗ್ಗೆ ತಿಳಿಸುವುದಾಗಿ ಹೇಳಿ ಇತರ ಕೆಲವು ಹಿರಿಯ ವಿದ್ಯಾರ್ಥಿಗಳು ಗಂಭೀರ ಹಲ್ಲೆಗೈದು ಅವರ ಪ್ರಜ್ಞೆ ತಪ್ಪಿಸಿದ ಘಟನೆ ನಾಡಿನಲ್ಲಿ ಸುದ್ದಿಯಾಗಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಈ ವಿಷಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಲಾ ಅಧಿಕಾರಿಗಳು, ಅಧ್ಯಾಪಕರು, ಪ್ರಕರಣಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ ತಾಕೀತು ನೀಡಿದ್ದಾರೆ.   ಮುಟ್ಟಂನಲ್ಲಿರುವ ಖಾಸಗಿ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಹಿಪ್ನೋಟಿಸಂನ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ …

ಕಾಲುದಾರಿಗಾಗಿ ಗುಡ್ಡೆ ಕೊರೆತ: ಕಲ್ಲಂಗೈಯಲ್ಲಿ ಚಟುವಟಿಕೆರಹಿತವಾದ ಶಾಲಾ ಕಟ್ಟಡ ಹೆದ್ದಾರಿಗೆ ಕುಸಿಯುವ ಭೀತಿ

ಮೊಗ್ರಾಲ್ ಪುತ್ತೂರು: ಯಾವುದೇ ನಿಮಿಷದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕುಸಿದು ಬೀಳಬಹುದು ಎಂಬ ಭೀತಿಯಲ್ಲಿರುವ ಕಲ್ಲಂಗೈ ಎಎಲ್‌ಪಿ ಶಾಲೆಯನ್ನು ಮುರಿದು ತೆಗೆಯಲು ಶಾಲಾ  ಅಧಿಕಾರಿಗಳು ಕ್ರಮ ಸ್ವೀಕರಿಸ ಬೇಕೆಂದು ಬೇಡಿಕೆ ಮೂಡಿ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯಲ್ಲೇ ನಿರ್ಮಿಸುವ ಕಾಲುದಾರಿಗೆ ಬೇಕಾಗಿ ರಸ್ತೆ ನಿರ್ಮಾಣ ಕಂಪೆನಿ ಅಧಿಕಾರಿಗಳು ಮಣ್ಣು ಕೊರೆದಾಗ ಈ ಭಾಗದಲ್ಲಿ ಗುಡ್ಡೆ ಕುಸಿತ ಉಂಟಾಗಿದ್ದು, ಇದು ಶಾಲಾ ಕಟ್ಟಡಕ್ಕೆ ಬೆದರಿಕೆ ಸೃಷ್ಟಿಸಿದೆ. ಕಟ್ಟಡ ಯಾವುದೇ ಕ್ಷಣ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಾರಣ ಈ …

ರಾಜ್ಯದಲ್ಲಿ ಅತೀ ಹೆಚ್ಚು ಅಪಘಾತಕ್ಕೊಳಗಾಗುವುದು ದ್ವಿಚಕ್ರ ವಾಹನಗಳು

ಕಾಸರಗೋಡು: ರಾಜ್ಯದಲ್ಲಿ ಅಪಘಾತಕ್ಕೊಳ ಗಾಗುವ ವಾಹನಗಳಲ್ಲಿ ಬಹುಪಾಲು ದ್ವಿಚಕ್ರ ವಾಹನಗಳೇ ಆಗಿವೆ. ಇದರಲ್ಲಿ ಬೈಕ್ ಮತ್ತು ಸ್ಕೂಟರ್ಗಳು ಒಳಗೊಂಡಿವೆ.ಕಳೆದ ವರ್ಷ ರಾಜ್ಯದಲ್ಲಿ 16,108 ವಾಹನ ಅಪಘಾತ ಗಳು ಉಂಟಾಗಿದ್ದು ಇದರಲ್ಲಿ ಬಹುಪಾಲು ದ್ವಿಚಕ್ರ ವಾಹನ ಗಳೇ ಆಗಿವೆ. ಈ ಅಪಘಾತದಲ್ಲಿ 1237 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. 11,374 ಮಂದಿ ಗಂಭೀರ ಗಾಯಗೊಂಡಿದ್ದಾರೆ. 3497 ಮಂದಿ ಸಣ್ಣಪುಟ್ಟ ಗಾಯ ಗೊಂಡಿದ್ದಾರೆ. ಹೀಗೆ ಕಳೆದ ವರ್ಷ ನಡೆದ ಅಪಘಾತ ಕ್ಕೊಳಗಾದ ವಾಹನಗಳಲ್ಲಿ 5892 ದ್ವಿಚಕ್ರ ವಾಹನಗಳು ಒಳಗೊಂಡಿವೆ. ಇದರಲ್ಲಿ …

ರೇಶನ್ ಅಂಗಡಿಗಳನ್ನು ಮಿನಿ ಮಾವೇಲಿ ಸ್ಟೋರ್‌ಗಳನ್ನಾಗಿಸುವ ಯೋಜನೆ ಪರಿಗಣನೆ

ಕಾಸರಗೋಡು: ರೇಶನ್ ಅಂಗಡಿ ಗಳನ್ನು ಮಿನಿ ಮಾಲೇಲಿ ಸ್ಟೋರ್‌ಗಳನ್ನಾ ಗಿಸುವ ಯೋಜನೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರಿಗಣನೆಯಲ್ಲಿದೆ. ಹೀಗೆ ರೇಶನ್ ಅಂಗಡಿಗಳನ್ನು ಮಿನಿ ಮಾವೇಲಿ ಸ್ಟೋ ರ್‌ಗಳಾಗಿ ಪರಿವರ್ತಿಸಿದಲ್ಲಿ ರೇಶನ್ ಸಾಮಗ್ರಿಗಳ ಹೊರತಾಗಿ ಇತರ ನಿತ್ಯೋ ಪಯೋಗಿ ಸಾಮಗ್ರಿಗಳು ಇದೇ ಕೇಂದ್ರ ದಲ್ಲಿ  ರಿಯಾಯಿತಿ ಬೆಲೆಗೆ ಲಭಿಸಲಿದೆ. ಸಪ್ಲೈಕೋದ ಸೇವೆಗಳು ಜನರಿಗೆ ಇನ್ನಷ್ಟು ವ್ಯಾಪಕವಾಗಿ ಲಭಿಸುವಂತೆ ಮಾಡುವುದರ ಜೊತೆಗೆ ರೇಶನ್ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯ ವನ್ನು ಖಚಿತಪಡಿಸುವುದೇ ಈ ಹೊಸ ಯೋಜನೆಯ ಪ್ರಧಾನ …

ಪಯ್ಯನ್ನೂರಿನಿಂದ ಇಡುಕ್ಕಿಗೆ ಉಲ್ಲಾಸ ಯಾತ್ರೆಗೆ ತೆರಳಿದ್ದ ಬಸ್ ನಿಯಂತ್ರಣ ತಪ್ಪಿ ಅಪಘಾತ: 16 ಮಂದಿಗೆ ಗಾಯ

ಕಣ್ಣೂರು: ಕೆಎಸ್‌ಆರ್‌ಟಿಸಿಯ  ಉಲ್ಲಾಸ ಯಾತ್ರೆ ಹೊರಟ ಬಸ್ ನಿಯಂತ್ರಣ ತಪ್ಪಿ ಮಗುಚಿ ಅಪಘಾತ ಸಂಭವಿಸಿದೆ. ಪಯ್ಯನ್ನೂರಿ ನಿಂದ ಇಡುಕ್ಕಿಗೆ ತೆರಳುತ್ತಿದ್ದ ಬಸ್ ಪನಂಕುಟ್ಟಿ ಸಮೀಪ ಅಪಘಾತಕ್ಕೀ ಡಾಗಿದೆ. ಇದರಿಂದ 16 ಮಂದಿ ಗಾಯಗೊಂಡರು. ಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಘಟನೆ ನಡೆದಿದೆ. ಬಸ್ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. 26 ಮಂದಿ ಹಾಗೂ ಇಬ್ಬರು ಮಕ್ಕಳು ಅಡಕವಾದ ತಂಡ ಪಯ್ಯನ್ನೂರಿ ನಿಂದ ಗೋವಾಕ್ಕೆ ಪ್ರಯಾಣ …

ಬದಿಯಡ್ಕದಲ್ಲಿ ಓಣಂ ಸಿರಿ ಕಾರ್ಯಕ್ರಮ

ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ನಿನ್ನೆ ಇರಾ ಸಭಾಭವನದಲ್ಲಿ ಜರಗಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿದರು. ಹಿರಿಯ ವ್ಯಾಪಾರಿ ಪಾಂಡುರಂಗ ಪ್ರಭು ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ದಿನೇಶ್ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿ ಹರೀಶ್ ರೈ ಪುತ್ರಕಳ, ಪ್ರತಿಭೆ ಪ್ರವಿಶಾ ಪೊಡಿಪ್ಪಳ್ಳರನ್ನು ಅಭಿನಂದಿಸಲಾಯಿತು. ರಮಾನಾಥ ರೈ, ರವಿ ನವಶಕ್ತಿ, ರತ್ನಾಕರ ಒಡಂಗಲ್ಲು, ತಾರನಾಥ ರೈ, ಬ್ರಯಾನ್, ಉಮೇಶ್ ರೈ, …

ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ: ಸಮಗ್ರ ತನಿಖೆ ನಡೆಸಬೇಕು- ನ್ಯಾ. ಕೆ. ಶ್ರೀಕಾಂತ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಬ್ಬರು ಮೊಗ್ರಾಲ್ ಪುತ್ತೂರು ಬಳಿ ಕ್ರೈನ್‌ನ ಬಕೆಟ್ ತುಂಡಾಗಿ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ. ನಿರ್ಮಾಣ ಕೆಲಸದಲ್ಲಿ  ಕಾರ್ಮಿಕರಿಗೆ ಅಗತ್ಯದ ಸುರಕ್ಷಾ ವ್ಯವಸ್ಥೆ ಏರ್ಪಡಿಸುವಲ್ಲಿ ಗುತ್ತಿಗೆ ಸಂಸ್ಥೆಯ ವತಿಯಿಂದ ನಿರ್ಲಕ್ಷ್ಯ ಉಂಟಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಮಾತ್ರವಲ್ಲ ನಿರ್ಮಾಣ ಕೆಲಸದ ಮೇಲ್ನೋಟ ವಹಿಸುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ …