ಜಿಲ್ಲೆಯ ವಿದ್ಯುತ್ ವಿತರಣಾ ವಲಯದ ಅಭಿವೃದ್ಧಿಗಾಗಿ 395.15 ಕೋಟಿ ರೂ. ಮಂಜೂರು: ವಿಧಾನಸಭೆಯಲ್ಲಿ ವಿದ್ಯುತ್ ಸಚಿವರ ಹೇಳಿಕೆ
ಕಾಸರಗೋಡು: ಜಿಲ್ಲೆಯ ವಿದ್ಯುತ್ ವಿತರಣಾ ವಲಯದ ಅಭಿವೃದ್ಧಿಗಾಗಿ ಕಾಸರಗೋಡು ಸ್ಪೆಷಲ್ ಪ್ಯಾಕೇಜ್‌ನಿಂದ 395.15 ಕೋಟಿ ರೂ. ಮಂಜೂರು ಮಾಡಲಾಗಿದೆಯೆಂದು ವಿಧಾನಸಭೆಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ. ಜಿಲ್ಲೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಂಜೂರು ಮಾಡಲಾ ಗಿರುವ ಹಣನ್ನು ವಿನಿಯೋಗಿಸಿ ಜಿಲ್ಲೆಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ …