ಕಣ್ವತೀರ್ಥ ಪರಿಸರದಲ್ಲಿ ಮೀನು ಸಂಸ್ಕರಣ ಫ್ಯಾಕ್ಟರಿಯಿಂದ ಪರಿಸರ ಮಲಿನ: ಕ್ರಿಯಾ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಕಣ್ವತೀರ್ಥ ಪರಿಸರ ದಲ್ಲಿ ಹಲವು ವರ್ಷಗಳಿಂದ ಕಾರ್ಯಾ ಚರಿಸುತ್ತಿರುವ ಯುನೈಟೆಡ್ ಸಿ-ಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಲಾಯಿತು. ಕಣ್ವತೀರ್ಥ ಗೇಟ್‌ನಿಂದ ಆರಂಭಗೊಂಡ ಪ್ರತಿ ಭಟನಾ ಮೆರವಣಿಗೆಯನ್ನು ಮಂಜೇಶ್ವರ ಪಂ. ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ಪಂಚಾಯತ್ ಮುಂಭಾಗದಲ್ಲಿ ನಿವೃತ್ತ ಸೇನಾಧಿಕಾರಿ ವಿಜಯ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಧುಸೂದನ ಆಚಾರ್ಯ ಉದ್ಘಾಟಿಸಿ ದರು. ಈ ಫ್ಯಾಕ್ಟರಿಯಿಂದ …

ಕ.ಸಾ.ಪ.ದಿಂದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ

ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಸರ್.ಎಂ. ವಿಶ್ವೇಶ್ವರಯ್ಯನವರ 165 ನೆಯ ಜನ್ಮದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಸಿರಿಗನ್ನಡ ವೇದಿಕೆಯ ಅಧ್ಯಕ್ಷ , ಸಾಹಿತಿ ವಿ. ಬಿ. ಕುಳಮರ್ವ ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ಥೋಮಸ್ ಡಿ’ಸೋಜ, ಸಾಹಿತಿ ಬಾಲಮಧುರಕಾನನ, ಪತ್ರಕರ್ತ ಪುರುಷೋತ್ತಮ ಭಟ್ ಶುಭಾಶಂಸನೆ ಮಾಡಿದರು. …

ಕೆ.ಪಿ.ಎಸ್.ಟಿ.ಎ ಸಾರ್ವತ್ರಿಕ ಶಿಕ್ಷಣ ಪರಿವರ್ತನ ಸಂದೇಶಯಾತ್ರೆ ಆರಂಭ

ಕಾಸರಗೋಡು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್‌ಟಿಎ) ನೇತೃತ್ವದ ಸಾರ್ವತ್ರಿಕ ಶಿಕ್ಷಣ ಪರಿವರ್ತನೆ ಸಂದೇಶ ಯಾತ್ರೆ ನಿನ್ನೆ ಚೆರ್ಕಳದಿಂದ ಪ್ರಯಾಣ ಆರಂಭಿಸಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಲಿರುವ ಈ ಯಾತ್ರೆ ಸೆಪ್ಟಂಬರ್ 27ರಂದು ತಿರುವನಂತಪುರದಲ್ಲಿ ಸಮಾಪ್ತಿ ಹೊಂದಲಿದೆ. ಚೆರ್ಕಳದಿಂದ ನಿನ್ನೆ ಆರಂಭಗೊಂಡ ಯಾತ್ರೆಯನ್ನು ಕಾಂಗ್ರೆಸ್‌ನ ರಾಜ್ಯ ಕಾರ್ಯನಿರ್ವಹಣಾಧ್ಯಕ್ಷ ಸಂಸದ  ಶಾಫಿ ಪರಂಬಿಲ್ ಸಂದೇಶಯಾತ್ರೆಯ ನಾಯಕ ಕೆ.ಪಿ.ಎಸ್.ಟಿ.ಎ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಮಜೀದ್‌ರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯದ ಕೆಲವು ಪೊಲೀಸರು ಸಿಪಿಎಂನ ಗೂಂಡಾಗಳಾಗಿ …

ವಿದೇಶ ಉದ್ಯೋಗದ ವಿಸಾ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿದ ಪ್ರಕರಣ: ಆರೋಪಿ ಬೆಂಗಳೂರಿನಿಂದ ಸೆರೆ; ಜಿಲ್ಲೆಯಲ್ಲಿ ಮಾತ್ರವಾಗಿ 28 ದೂರುಗಳು, ಮಡಿಕೇರಿ ನಿವಾಸಿಗಾಗಿ ಶೋಧ

ಕಾಸರಗೋಡು: ಜರ್ಮನಿ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಭಾರೀ ವೇತನದ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧೆಡೆ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದ ಆರೋಪಿಯನ್ನು ಬೆಂಗಳೂರಿನಿಂದ ಪೊಲೀಸರು ಬಂಧಿಸಿದ್ದಾರೆ. ತೃಶರು ಅಷ್ಟಮಿಚಿರೆ ನಿವಾಸಿ ಪಿ.ಬಿ. ಗೌತಮ್‌ಕೃಷ್ಣ (೨೫)ಬಂಧಿತ ಆರೋಪಿ. ವಿದೇಶ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಕೇರಳದ ವಿವಿಧ ಜಿಲ್ಲೆಗಳ ೩೦ರಷ್ಟು ಮಂದಿಯಿಂದ ಸುಮಾರು ೬೦ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಹಣ ನೀಡಿದರೂ  …

ವಿ.ಡಿ. ಸತೀಶನ್‌ರ ನಿರ್ದೇಶ ಕಡೆಗಣಿಸಿ ವಿಧಾನಸಭೆಗೆ ಹಾಜರಾದ ರಾಹುಲ್

ತಿರುವನಂತಪುರ: ಲೈಂಗಿಕ ಷೋಷಣೆ ಆರೋಪಗಳನ್ನು ಎದುರಿಸಿ ಅದರ ಹೆಸರಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲ್ಪಟ್ಟ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷ, ಪಾಲ ಕ್ಕಾಡ್ ಶಾಸಕ ವಿವಾದಗಳ ಮಧ್ಯೆಯೇ ಇಂದು ಬೆಳಿಗ್ಗೆ ಆರಂಭಗೊಂಡ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹಾಜ ರಾಗಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಅಮಾನತುಗೊಳಿ ಸಲ್ಪಟ್ಟ ಹಿನ್ನೆಲೆಯಲ್ಲಿ ವಿರೋಧಪಕ್ಷಗಳ ಆಸನಗಳ ಸಾಲಿನ   ಕೊನೆಯ ಭಾಗದಲ್ಲಿ  ರಾಹುಲ್‌ಗೆ  ಪ್ರತ್ಯೇಕ ಆಸನ ಸೌಕರ್ಯ ಏರ್ಪಡಿಸಲಾಗಿದೆ. ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿರುವ ಹಾಗೂ ಪಕ್ಷದಿಂದ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳದಿರುವಂತೆ …

ಜನವಾಸ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉಪೇಕ್ಷಿಸಲು ಯತ್ನ : ನಾಗರಿಕರನ್ನು ಕಂಡು ವಾಹನ ಉಪೇಕ್ಷಿಸಿ ಪರಾರಿಯಾದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸ್ ಶೋಧ

ಕುಂಬಳೆ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಿನಿ ಟೆಂಪೋದಲ್ಲಿ ತಂದು ಜನವಾಸ ಪ್ರದೇಶದಲ್ಲಿ ಉಪೇಕ್ಷಿಸಲೆತ್ನಿಸಿದ ವೇಳೆ ನಾಗರಿಕರನ್ನು ಕಂಡು ವಾಹನ ಉಪೇಕ್ಷಿಸಿ ಪರಾರಿಯಾದ ಇಬ್ಬರಿಗಾಗಿ ಕುಂಬಳೆ ಪೊಲೀಸರು ಶೋಧ ನಡೆಸಿದ್ದಾರೆ. ಪುತ್ತಿಗೆ ಪಂಚಾಯತ್‌ನ ಜನವಾಸ ಪ್ರದೇಶವಾದ ಪೇರಾಲ್ ಕಣ್ಣೂರು ಸಿದ್ದಿಬಯಲಿನಲ್ಲಿ ಕೆಂಪು ಕಲ್ಲು ಕಡಿದು ತೆಗೆದು ಸೃಷ್ಟಿಯಾದ ಹೊಂಡದಲ್ಲಿ  ಉಪೇಕ್ಷಿಸಲೆಂದು ನಿನ್ನೆ ಮುಂಜಾನೆ ಮಿನಿ ಟೆಂಪೋದಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತರಲಾಗಿತ್ತು. ಇದನ್ನರಿತ ನಾಗರಿಕರು ಒಗ್ಗೂಡಿ ಅಲ್ಲಿಗೆ ತಲುಪಿದಾಗ ವಾಹನದಲ್ಲಿದ್ದ ಇಬ್ಬರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ನಾಗರಿಕರು …

ಪೊಲೀಸ್ ದೌರ್ಜನ್ಯ ನೀತಿ ಪ್ರತಿಭಟಿಸಿ ಬಿಜೆಪಿಯಿಂದ ಎಸ್‌ಪಿ ಕಚೇರಿಗೆ ಮಾರ್ಚ್

ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ಪೊಲೀಸರ ದೌರ್ಜನ್ಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಹಾಗೂ ಅಂತಹ ನೀತಿಯನ್ನು ಪ್ರತಿಭಟಿಸಿ ಹಾಗೂ ಅಭಿವೃದ್ಧಿಯುತ ಕೇರಳಕ್ಕಾಗಿ ಪೊಲೀಸ್ ಪಡೆಯಲ್ಲಿ ಸಮಗ್ರ ಬದಲಾವಣೆ ತರಬೇಕೆಂದು ಆಗ್ರಹಿಸಿ ಬಿಜೆಪಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ  ಇಂದು ಬೆಳಿಗ್ಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕಚೇರಿಗೆ ಮಾರ್ಚ್ ನಡೆಸಲಾಯಿತು. ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಪರಿಸರದಿಂದ ಆರಂಭ ಗೊಂಡ ಮಾರ್ಚ್‌ನಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ದರು. ಪಕ್ಷದ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪಿ.ಆರ್. ಸುನಿಲ್, …

ಎಂಡಿಎಂಎ ಸಹಿತ ಯುವಕ ಸೆರೆ

ಕುಂಬಳೆ: 9.810 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಬಂಬ್ರಾಣ ದಿಡುಮೆ ನಿವಾಸಿ ಮುಹಮ್ಮದ್ ನೌಫಲ್ (27) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ರಾತ್ರಿ 7.25ರ ವೇಳೆ ನಯಾಬ ಜಾರ್‌ನಲ್ಲಿ ಎಸ್‌ಐ ಹಾಗೂ ತಂಡ ಗಸ್ತು ನಡೆಸುತ್ತಿದ್ದಾಗ ಮೊಹಮ್ಮದ್ ನೌಫಲ್ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದನು. ಪೊಲೀಸರ ವಾಹನವನ್ನು ಕಂಡು ಅಡಗಿ ನಿಲ್ಲಲು ಈತ ಪ್ರಯತ್ನಿಸಿದ್ದು, ಇದರಿಂದ  ಪೊಲೀ ಸರು ಈತನನ್ನು ತಪಾಸಣೆಗೈದಾಗ ಮಾದಕವಸ್ತು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ಸೀನಿಯರ್ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕದಲ್ಲಿ ಮಾತ್ರ ಮಾರಾಟಗೈಯ್ಯಬಹುದಾದ ಆರು ಲೀಟರ್ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ದ್ದಾರೆ. ಪಚ್ಚಂಬಳದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕಿರಣ್ ಕುಮಾರ್ ಎಚ್ (28) ಎಂಬಾತನನ್ನು ನಿನ್ನೆ ಸಂಜೆ ಹೇರೂರು ಚೋಕೆ ಎಂಬಲ್ಲಿಂದ ಮದ್ಯ ಸಹಿತ ಸೆರೆಹಿಡಿದಿರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ಕುಂಬಳೆ ರೇಂಜ್ ಅಬಕಾರಿ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮಾನಸ್ ಕೆ,  ಸಿಇಒಗಳಾ ದ ಅಖಿಲೇಖ್ ಎಂ, ರಾಹುಲ್ ಇ, ಸೂರ್ಜಿತ್ ಕೆ, ಚಾಲಕ ಪ್ರವೀಣ್ ಕುಮಾರ್ ಎಂಬಿವರು  ಕಾರ್ಯಾ ಚರಣೆ ನಡೆಸಿದ …

ಸ್ಕೂಟರ್‌ಗೆ ಪಿಕಪ್ ವ್ಯಾನ್ ಢಿಕ್ಕಿ: ಯುವಕ ಮೃತ್ಯು

ಹೊಸದುರ್ಗ:  ಸ್ಕೂಟರ್‌ಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಪಯ್ಯನ್ನೂರಿನಲ್ಲಿ ಸಂಭವಿಸಿದೆ. ತೃಕರಿಪುರ ಸೌತ್ ಕಕ್ಕುನ್ನಂ ನಿವಾಸಿ ಕೆ. ಕುಂಞಿಕಣ್ಣನ್ ಎಂಬವರ ಪುತ್ರ ಸುಕೇಶ್ (38)ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 11.45ರ ವೇಳೆ ಪಯ್ಯನ್ನೂರು ಮೀನಾ ಬಜಾರ್‌ನಲ್ಲಿ ಅಪಘಾತ ಸಂಭವಿಸಿದೆ. ಸ್ನೇಹಿತ ನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ  ಅಪಘಾತ ಸಂಭವಿಸಿದೆ. ಗಂಭೀರ ಗಾಯ ಗೊಂಡ ಸುಕೇಶ್‌ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಾಯಿ ದೇವಕಿ, ಸಹೋದರ ರತೀಶ್ …