ಮುಖ್ಯೋಪಾಧ್ಯಾಯ ವಿದ್ಯಾರ್ಥಿ ಕೆನ್ನೆಗೆ ಹೊಡೆದು ಕರ್ಣ ತಮ್ಮಟೆಗೆ ಹಾನಿವುಂಟಾದ ಪ್ರಕರಣ: ಸಮಗ್ರ ತನಿಖೆಗೆ ಶಿಕ್ಷಣ ಸಚಿವ ನಿರ್ದೇಶ
ಕಾಸರಗೋಡು: ಮುಖ್ಯೋ ಪಾಧ್ಯಾಯರು ವಿದ್ಯಾರ್ಥಿಯ ಕೆನ್ನೆಗೆ ಹೊಡೆದ ಪರಿಣಾಮ ಆತನ ಕರ್ಣ ತಮಟೆಗೆ ಹಾನಿಯುಂಟಾದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಇಂದು ಬೆಳಿಗ್ಗೆ ನಿರ್ದೇಶ ನೀಡಿದ್ದಾರೆ. ಇದೇ ವೇಳೆ ಈ ಘಟನೆಗೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯರು ಕೆನ್ನೆಗೆ ಹೊಡೆದಿರು ವುದಾಗಿ ಆರೋಪಿಸ ಲಾಗಿದೆ. ಆ ವಿಷಯ ತಿಳಿದ ಅದೇ …