ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ತಿರಂಗ ಯಾತ್ರೆ
ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಆಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯಾರು ನಾರಾಯಣ ಶೆಟ್ಟಿ ಹೇಳಿದರು. ಬಾಯಿಕಟ್ಟೆಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯನ್ನು ನಿವೃತ್ತ ಸೈನಿಕ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ.ರಿಗೆ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿದರು.ಮಂಡಲ ಅಧ್ಯಕ್ಷ …