ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾನವ ಹಕ್ಕು ಕಾರ್ಯಕರ್ತನಿಂದ ದೂರು
ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್ಗಳನ್ನು ಸ್ಥಾಪಿಸಿಲ್ಲ. ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. …