ಆಟೋ ರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ: ಆಟೋ ರಿಕ್ಷಾ ಚಾಲಕ ರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದರು. ಮೀಯ ಪದವು ಕುಳಬಯಲು ಪಾಲಡಿ ನಿವಾಸಿ ಅಬ್ದುಲ್ ಜಬ್ಬಾರ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಹೊಸಂಗಡಿಯಲ್ಲಿ ಆಟೋ ಚಾಲಕ ರಾಗಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆಗೆ ಇವರಿಗೆ ಮನೆಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಕುಂಬಳೆ ಆಸ್ಪತ್ರೆಗೆ ತಲುಪಿಸಿದ್ದು. ಅಷ್ಟರಲ್ಲಿ ನಿಧನ ಸಂಭವಿಸಿತ್ತು. ಮೃತರು ಪತ್ನಿ ಫಾತಿಮತ್ ಸುಹರಾ, ಮಕ್ಕಳಾದ ಇಮ್ರಾನ್ ಸಾಲಿ, ಫಾತಿಮಾ, ರಝ ಹಾಗೂ ನಾಲ್ವರು ಸಹೋದರರು, ಏಳು ಮಂದಿ ಸಹೋದರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page