ಕಾರ್ಮಿಕಶ್ರೇಷ್ಠ ಪುರಸ್ಕಾರ ಜಿಲ್ಲೆಯ 3 ಮಂದಿಗೆ 27ರಂದು ಪ್ರದಾನ

ಕಾಸರಗೋಡು: ರಾಜ್ಯದ 20 ವಿಭಿನ್ನ ಉದ್ಯೋಗ ವಲಯಗಳ ಉತ್ತಮ ಕಾರ್ಮಿಕರಿಗಿರುವ ೨೦೨೪ನೇ ವರ್ಷದ ಉದ್ಯೋಗ ಶ್ರೇಷ್ಠ ಪುರಸ್ಕಾರಗಳಲ್ಲಿ ಮೂರು ಪುರಸ್ಕಾರಗಳು ಕಾಸರಗೋಡಿಗೆ ಲಭಿಸಿದೆ. ಮೇರಿಮೆಲ್ಡ (ಅಡುಗೆ), ಶಿಬು ಎ. (ಶೇಂದಿ ಕಾರ್ಮಿಕ), ಬಬಿತ ಬೇಬಿ (ಬಾರ್ಬರ್, ಬ್ಯೂಟೀಷ್ಯನ್) ಎಂಬಿವರಿಗೆ ಈ ಪುರಸ್ಕಾರ ಲಭಿಸಿದೆ. 1 ಲಕ್ಷ ರೂ. ಹಾಗೂ ಪ್ರಶಸ್ತಿ ಪತ್ರ ಅಡಕವಾಗಿರುವ ಪುರಸ್ಕಾರವನ್ನು ಈ ತಿಂಗಳ 27ರಂದು ತಿರುವನಂತಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ವಿ. ಶಿವನ್ ಕುಟ್ಟಿ ಪ್ರದಾನ ಮಾಡುವರು. ಚೆರುವತ್ತೂರು ಮಡಕ್ಕರದ ರೆಸ್ಟೋರೆಂಟ್ ನಲ್ಲಿ ಮೇರಿ ಮೆಲ್ಡ ಅಡುಗೆ ಕಾರ್ಮಿಕೆ ಯಾಗಿದ್ದಾರೆ. ಬಿಕಾಂ ಪದವೀಧರೆ ಯಾದ ಈಕೆ ನೆಲ್ಲಿಕ್ಕಾಲ್‌ನಲ್ಲಿ ವಾಸವಾಗಿದ್ದಾರೆ.

9ನೇ ತರಗತಿ ವಿದ್ಯಾರ್ಥಿಯಾದ ಅಮಲ್‌ದಯಾಲ್ ಪುತ್ರನಾಗಿದ್ದಾನೆ. ಉತ್ತಮ ಶೇಂದಿ ಕಾರ್ಮಿಕನಿಗಿರುವ ಪುರಸ್ಕಾರಕ್ಕೆ ಅರ್ಹನಾದ ಎ. ಶಿಬು 17 ವರ್ಷದಿಂದ ಈ ವಲಯದಲ್ಲಿ ದುಡಿಯುತ್ತಿದ್ದಾರೆ. ಪೊಯಿನಾಚಿಯಲ್ಲಿ ವಾಸವಾಗಿದ್ದಾರೆ. ಕಾಞಂಗಾಡ್‌ನ ಬ್ಯೂಟಿ ಪಾರ್ಲರ್ ನೌಕರೆಯಾಗಿದ್ದಾರೆ ಬಬಿತ ಬೇಬಿ.

You cannot copy contents of this page