ಕುಂಬಳೆ: ಸರಕಾರದ ಶುಚಿತ್ವ-ಮಹತ್ವ ಎಂಬ ಗುರಿಯೊಂದಿಗೆ ಕುಂಬಳೆ ಪಂಚಾಯತ್‌ನ ವಿವಿಧೆಡೆಗ ಳಲ್ಲಿ ಸ್ಥಾಪಿಸಿದ ಮಿನಿ ಎಂಸಿಎಫ್‌ಗ ಳಿಂದಾಗಿ ಸಾರ್ವಜನಿಕರಿಗೆ ದಾರಿಯ ಲ್ಲಿ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಈ ಭೂಮಿಯಿಂದ ಇಲ್ಲದಾಗಿಸುವ ಗುರಿಯೊಂದಿಗೆ ಪಂಚಾಯತ್‌ಗಳ ಪ್ರಧಾನ ಸ್ಥಳಗಳಲ್ಲಿ ಮಿನಿ ಎಂಸಿಎಫ್‌ಗಳನ್ನು ಸ್ಥಾಪಿಸಲಾಗಿದೆ. ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಈ ಮಿನಿ ಎಂಸಿಎಫ್‌ನೊಳಗೆ ಇರಿಸಲಾಗುತ್ತಿದೆ. ಇದೇ ವೇಳೆ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಮನೆಗಳ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಈ ಎಂಸಿಎಫ್‌ಗಳ ಸಮೀಪದಲ್ಲೇ ಎಸೆಯಲಾಗುತ್ತಿದೆ. ಇವುಗಳಲ್ಲಿ ಆಹಾರದ ಅವಶಿಷ್ಟಗಳೂ ಇರುವುದರಿಂದ ಬೀದಿ ನಾಯಿಗಳು ಅವುಗಳನ್ನು ತಿನ್ನಲು ಅಲ್ಲಿಗೆ ತಲುಪುತ್ತಿವೆ. ಕುಂಬಳೆಯಲ್ಲಿ ಸರಕಾರಿ ಆಸ್ಪತ್ರೆಗೆ ಹಾಗೂ ಶಾಲೆಗೆ ತೆರಳುವ ರಸ್ತೆ ಬದಿಯಲ್ಲೇ ಎಂಸಿಎಫ್ ಸ್ಥಾಪಿಸಲಾಗಿದ್ದು, ಅದರ ಸಮೀಪದಲ್ಲೇ ಆಹಾರ ಅವಶಿಷ್ಟಗಳನ್ನು ಎಸೆಯಲಾಗಿದೆ. ಅವುಗಳನ್ನು ತಿನ್ನಲು ಅಲ್ಲಿಗೆ ತಲುಪುವ ಬೀದಿ ನಾಯಿಗಳು ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ದಾಳಿ ನಡೆಸುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ತ್ಯಾಜ್ಯಗಳ ದುರ್ನಾತದಿಂದ ಜನರಿಗೆ ಮತ್ತಷ್ಟು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಮಿನಿ ಎಂಸಿಎಫ್‌ಗಳನ್ನು ಇಲ್ಲಿಂದ ತೆರವುಗೊಳಿಸಿ ಜನಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಸ್ಥಾಪಿಸಬೇ ಕೆಂದು ನಾಗರಿಕರು ಆಗ್ರಹಪಡುತ್ತಿ ದ್ದಾರೆ. ಇಲ್ಲದಿದ್ದಲ್ಲಿ ಇಲ್ಲಿಂದ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಯಥಾ ಸಮಯ ತೆರವುಗೊಳಿಸಿ ಶುಚಿಗೊಳಿಸಬೇ ಕಾಗಿದೆ. ಈ ಕೆಲಸ ನಿರ್ವಹಿಸಲು ವೇತನ ನೀಡಿ ನೇಮಕಗೊಳಿಸಿದವರಿಗೆ ಸಾಧ್ಯವಾಗದಿದ್ದಲ್ಲಿ ಆ ಕೆಲಸಗಳನ್ನು ಸಂಬಂಧಪಟ್ಟವರು ತ್ಯಜಿಸಬೇಕೆಂದೂ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಜನರಿಗೆ ಪ್ರಯೋಜನವಾಗದಿದ್ದರೂ ಪರವಾಗಿಲ್ಲ, ಜನರ ಹಣದಿಂದ ವೇತನ ಪಡೆದು ಜನರಿಗೆ ಸಮಸ್ಯೆ ಉಂಟಾಗುವ ಕೆಲಸಗಳನ್ನು ಯಾಕಾಗಿ ಮಾಡಲಾಗುತ್ತಿದೆಯೆಂದು ಜನರು ಪ್ರಶ್ನಿಸುತ್ತಿದ್ದಾರೆ.







