ಕುಂಬಳೆ: ಕುಂಬಳೆಯಲ್ಲಿ ನಿಲ್ಲಿಸಿದ್ದ ಬಸ್‌ನಿಂದ ಬ್ಯಾಟರಿ ಕಳವುಗೈಯ್ಯ ಲಾಗಿದೆ. ಕುಂಬಳೆ-ಬದಿಯಡ್ಕ ರಸ್ತೆಬದಿ ನಿಲ್ಲಿಸಿದ್ದ ಮಹಾಲಕ್ಷ್ಮಿ ಬಸ್‌ನ ಬ್ಯಾಟರಿ ಕಳವು ನಡೆಸಲಾಗಿದೆ. ನಿನ್ನೆ ರಾತ್ರಿ ಸರ್ವೀಸ್ ಕೊನೆಗೊಳಿಸಿದ ಬಳಿಕ ಬಸ್ಸನ್ನು ಕುಂಬಳೆ-ಬದಿಯಡ್ಕ ರಸ್ತೆಬದಿ ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಚಾಲ ಕ ದಿನೇಶ್ ತಲುಪಿ ಬಸ್ ಚಲಾಯಿಸಲು ನೋಡಿದಾಗ ಬಸ್ ಸ್ಟಾರ್ಟ್ ಆಗಲಿಲ್ಲ. ಇದರಿಂದ ಪರಿಶೀಲನೆ ನಡೆಸಿದಾಗ ಬ್ಯಾಟರಿ ಕಾಣೆಯಾಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಬಸ್ ಚಾಲಕ ದಿನೇಶ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವಿಗೀಡಾದ ಘಟನೆ ಇತ್ತೀಚೆಗೆ ನಡೆದಿತ್ತು. ೧೦ ಲಾರಿಗಳ ಬ್ಯಾಟರಿಗಳು ಕಳವಿಗೀಡಾಗಿದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂ ಭಿಸಿದ್ದರು. ತನಿಖೆ ವೇಳೆ ಆಲಂಪಾಡಿ ತೈವಳಪ್ಪಿನ ಶಮೀರ್(50) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ನಾಯ್ಕಾಪು, ಸೀತಾಂಗೋಳಿ, ನಾರಾಯಣ ಮಂಗಲ, ಭಾಸ್ಕರನಗರ, ಪೆರ್ವಾಡ್ ಎಂಬಿಡೆಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಶಮೀರ್ ಒಳಗೊಂಡ ತಂಡ ಬ್ಯಾಟರಿ ಕಳವು ನಡೆಸಿತ್ತೆನ್ನಲಾಗಿದೆ. ಅನಂತರ ಶಮೀರ್‌ನ ಸಹಚರನಾದ ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ಮಜೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದರು. ಕರ್ನಾಟಕದ ವಿಟ್ಲ, ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು ನಡೆಸಿದ ಆರೋಪದಂತೆ ಅಬ್ದುಲ್ ಮಜೀದ್‌ನನ್ನು ಬಂಧಿಸ ಲಾಗಿದೆ.
ಅನಂತರ ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸುವಂಗವಾಗಿ ತೈವಳಪ್ಪಿನ ಶಮೀರ್‌ನನ್ನುಕೂಡಾ ಕರ್ನಾಟಕ ಪೊಲೀಸರು ಕಸ್ಟಡಿಗೆ ತೆಗೆದಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪವಾಸ್ ಹಾಗೂ ಫಾರೂಕ್ ಎಂಬಿಬ್ಬರು ಸೆರೆಗೀಡಾ ಗಲು ಬಾಕಿಯಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.






