ಬಾಯಾರು- ಕನಿಯಾಲ ರಸ್ತೆ ಬದಿ ತುಂಬಿಕೊಂಡ ಪೊದೆ: ವಾಹನ ಸಂಚಾರಕ್ಕೆ ಸಮಸ್ಯೆ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರು ಸರ್ಕುತ್ತಿ- ಕನಿಯಾಲ ರಸ್ತೆಯ ಇಕ್ಕಡೆಗಳಲ್ಲಿ ಕಾಡು ಪೊದೆ ಆವರಿಸಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾ ಗುತ್ತಿರುವುದಾಗಿ ದೂರಲಾಗಿದೆ. ಬದಿಯಲ್ಲಿನ ಪೊದೆಗಳು ರಸ್ತೆಗೆ ಬಾಗಿಕೊಂಡಿದ್ದು, ಇದರಿಂದಾಗಿ ಮುಂದಿನಿಂದ ಆಗಮಿಸುವ ವಾಹನಗಳು ಕಣ್ಣಿಗೆ ಮರೆಯಾಗುತ್ತಿವೆ.  ವಾಹನಗಳಿಗೆ ಸೈಡ್ ನೀಡಲು ಕೂಡಾ ಇಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ದೂರಿದ್ದು, ಇದು ಅಪಘಾತ ಭೀತಿ ಹೆಚ್ಚಿಸಿದೆ. ರಸ್ತೆಯುದ್ದಕ್ಕೂ ಚಾಚಿಕೊಂಡಿರುವ ಕಾಡುಪೊದೆಗಳನ್ನು ಕಡಿದು ಶುಚಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page